ಪಾಕಿಸ್ತಾನ ತಂಡಕ್ಕೆ ಕೋಚ್ ಆಗಲು ಸಿದ್ದ ಎಂದ ಯುವರಾಜ್ ಸಿಂಗ್ ತಂದೆ ಯೋಗರಾಜ್!
Yograj SIngh on Coaching Pakistan team: ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸತತ ಎರಡು ಪಂದ್ಯಗಳನನ್ನು ಸೋತು, ಟೂರ್ನಿಯಿಂದ ಅಧಿಕೃತವಾಗಿ ಹೊರ ಬಿದ್ದಿರುವ ಪಾಕಿಸ್ತಾನ ತಂಡಕ್ಕೆ ಕೋಚ್ ಆಗುವ ಬಯಕೆಯನ್ನು ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ತಂಡಕ್ಕೆ ಕೋಚ್ ಆಗಲು ಸಿದ್ದ ಎಂದ ಯೋಗರಾಜ್ ಸಿಂಗ್.

ನವದೆಹಲಿ: ತನ್ನದೇ ಆತಿಥ್ಯದಲ್ಲಿ ನಡೆಯುತ್ತಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಪಾಕಿಸ್ತಾನ ತಂಡವನ್ನು ಭಾರತ ತಂಡದ ಮಾಜಿ ವೇಗದ ಬೌಲರ್ ಯೋಗರಾಜ್ ಸಿಂಗ್ ಟೀಕಿಸಿದ್ದಾರೆ. ಅವಕಾಶ ಸಿಕ್ಕರೆ ಪಾಕಿಸ್ತಾನ ತಂಡಕ್ಕೆ ಕೋಚಿಂಗ್ ಕೊಡಲು ಸಿದ್ದ ಅವರು ಹೇಳಿಕೊಂಡಿದ್ದಾರೆ. ಮೊಹಮ್ಮದ್ ರಿಝ್ವಾನ್ ನಾಯಕತ್ವದ ಪಾಕಿಸ್ತಾನ ತಂಡ, ತನ್ನ ಆರಂಭಿಕ ಎರಡು ಪಂದ್ಯಗಳಲ್ಲಿ ಕ್ರಮವಾಗಿ ನ್ಯೂಜಿಲೆಂಡ್ ಹಾಗೂ ಭಾರತದ ವಿರುದ್ದ ಸೋಲು ಅನುಭವಿಸಿತು. ಆ ಮೂಲಕ ಟೂರ್ನಿಯ ಸೆಮಿಫೈನಲ್ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿದೆ.
ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್ ತಂಡ ಗೆಲುವು ಪಡೆದ ತಕ್ಷಣ ಪಾಕಿಸ್ತಾನ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರ ಬಿದ್ದಿದೆ. ಅಂದಹಾಗೆ ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದ ಪಾಕಿಸ್ತಾನ ತಂಡ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಪಾಕ್ ಗೆದ್ದರೂ ಯಾವುದೇ ಪ್ರಯೋಜನವಾಗುವುದಿಲ್ಲ. ನಾಕ್‌ಔಟ್ ರೇಸ್‌ನಿಂದ ಹೊರ ಬಿದ್ದ ಪಾಕಿಸ್ತಾನ ತಂಡ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಆದರೆ, ಭಾರತ ತಂಡದ ಮಾಜಿ ವೇಗಿ ಹಾಗೂ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್, ಪಾಕ್ ಮಾಜಿ ಕ್ರಿಕೆಟಿಗರನ್ನು ಟೀಕಿಸಿದ್ದಾರೆ.
ಪಾಕಿಸ್ತಾನ ತಂಡಕ್ಕೆ ಶಾಹೀನ್ ಶಾ ಅಫ್ರಿದಿ ನಾಯಕನಾಗಲು 5 ಕಾರಣಗಳು ಇಲ್ಲಿವೆ!
ಪಾಕಿಸ್ತಾನ ತಂಡವನ್ನು ಟೀಕಿಸುವ ಬದಲು ಪಾಕ್ ಮಾಜಿ ಕ್ರಿಕೆಟಿಗರು ತಮ್ಮ ತಂಡಕ್ಕೆ ಪಾರ್ಮ್ ಕಂಡುಕೊಳ್ಳುವ ಸಲುವಾಗಿ ನೆರವು ನೀಡಬೇಕು ಎಂದು ಯೋಗರಾಜ್ ಸಿಂಗ್
ಆಗ್ರಹಿಸಿದ್ದಾರೆ.
"ಕಾಮೆಂಟರಿ ಮಾಡುವ ಮೂಲಕ ವಸೀಮ್ ಹಣವನ್ನು ಗಳಿಸುತ್ತಿದ್ದಾರೆ. ತಮ್ಮ ದೇಶಕ್ಕೆ ವಾಪಸ್ ಹೋಗಿ ಹಾಗೂ ತಮ್ಮ ಆಟಗಾರರಿಗೆ ಕ್ಯಾಂಪ್‌ಗಳನ್ನು ಆಯೋಜಿಸಿ. ಪಾಕಿಸ್ತಾನ ತಂಡ ವಿಶ್ವಕಪ್ ಗೆಲ್ಲಲು ಯಾವ ಮಾಜಿ ಆಟಗಾರ ನೆರವು ನೀಡಲಿದ್ದಾರೆಂದು ನಾನು ನೋಡಬೇಕು. ಒಂದು ವೇಳೆ ವಿಶ್ವಕಪ್ ಗೆದ್ದಿಲ್ಲವಾದರೆ, ಅವರು ತಮ್ಮ ಹುದ್ದೆಯನ್ನು ತ್ಯಜಿಸಬೇಕು. ಅಗತ್ಯವಿದ್ದರೆ, ನಾನೇ ಪಾಕಿಸ್ತಾನ ತಂಡಕ್ಕೆ ಕೋಚ್ ಆಗುತ್ತೇನೆ. ಒಂದು ವರ್ಷದಲ್ಲಿ ಈ ತಂಡವನ್ನು ಬಲಿಷ್ಠಗೊಳಿಸುತ್ತೇನೆ ಹಾಗೂ ನೀವು ಇದನ್ನು ನೆನಪಿನಲ್ಲಿಟ್ಟುಕೊಳ್ಳಬಹುದು. ಇದು ಉತ್ಸಾಹವನ್ನು ಅವಲಂಬಿಸಿದೆ. ನನ್ನ ಅಕಾಡೆಮಿಯಲ್ಲಿ ನಾನು ಒಟ್ಟು 12 ಗಂಟೆಗಳ ಕಾಲ ಸಮಯವನ್ನು ಕಳೆಯುತ್ತಿದ್ದೇನೆ. ನಿಮ್ಮ ಸ್ವಂತ ದೇಶಕ್ಕೆ ನೀವು ರಕ್ತ ಮತ್ತು ಬೆವರನ್ನು ಹರಿಸಬೇಕಾಗುತ್ತದೆ," ಎಂದು ನ್ಯೂಸ್ 18ಗೆ ಯೋಗರಾಜ್ ಸಿಂಗ್ ತಿಳಿಸಿದ್ದಾರೆ.
IND vs PAK: ʻಬಾಬರ್ ಆಝಮ್ ಒಬ್ಬ ಮೋಸಗಾರʼ-ಮಾಜಿ ನಾಯಕನ ವಿರುದ್ಧ ಶೋಯೆಬ್ ಅಖ್ತರ್ ಕಿಡಿ!
ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್. ಅವರು ಕೋಚ್ ಆಗಿ ಕೆಲಸ ಮಾಡಿದ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಸೇರಿದಂತೆ ಸಾಕಷ್ಟು ಯುವ ಕ್ರಿಕೆಟಿಗರಿಗೆ ಅವರು ಕೋಚಿಂಗ್ ಕೊಟ್ಟಿದ್ದಾರೆ. ರಣಜಿ ಟ್ರೋಫಿ ಪದಾರ್ಪಣೆ ಪಂದ್ಯದಲ್ಲಿಯೇ ಅರ್ಜುನ್ ಶತಕವನ್ನು ಸಿಡಿಸಿದ್ದರು. ಭಾರತ ತಂಡದ ಪರ ಯೋಗರಾಜ್ ಸಿಂಗ್, ಒಂದು ಟೆಸ್ಟ್ ಮತ್ತು ಆರು ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರಿದ ಪಾಕಿಸ್ತಾನ ತಂಡವನ್ನು ಸಾಕಷ್ಟು ಟೀಕಿಸಲಾಗುತ್ತಿದೆ ಹಾಗೂ ಪಾಕಿಸ್ತಾನದಲ್ಲಿನ ದೇಶಿ ಕ್ರಿಕೆಟ್‌ನಲ್ಲಿನ ರಚನೆಯನ್ನು ಪ್ರಶ್ನೆ ಮಾಡಲಾಗುತ್ತಿದೆ. ಭಾರತದ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್, ಪಾಕಿಸ್ತಾನ ತಂಡವನ್ನು ಭಾರತ ಬಿ ತಂಡ ಸುಲಭವಾಗಿ ಸೋಲಿಸುತ್ತದೆ ಎಂದು ವ್ಯಂಗ್ಯವಾಡಿದ್ದರು.