ನಗರದ ಅಬ್ದಲ್ ಕಲಾಂ ಭವನದಲ್ಲಿ ನಡೆದ ಪ್ರತಿಭಾಪುರಸ್ಕಾರಕ್ಕೆ ಚಾಲನೆ ನೀಡಿ ಹೇಳಿಕೆ
ಮುತ್ತೂಟ್ ಸಂಸ್ಥೆ ಸರ್ಕಾರವೇ ಮಾಡದ ಉತ್ತಮ ಸೇವಾ ಕಾರ್ಯಕ್ರಮಗಳನ್ನು ಮಾಡಿರುವುದು ಶ್ಲಾಘನೀಯ. ಸಮಸ್ಯೆ ಗಳಿರುವ ಶಾಲೆಗಳನ್ನು ಆಯ್ಕೆ ಮಾಡಿಕೊಂಡು, ಅಗತ್ಯ ಕಟ್ಟಡ ಸೇರಿದಂತೆ ಮೂಲ ಸೌಕರ್ಯ ಗಳನ್ನು ನಿರ್ಮಿಸಿಕೊಡುವಲ್ಲಿ ಸಂಸ್ಥೆ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದರು
ಚಿಕ್ಕಬಳ್ಳಾಪುರ: ಮಕ್ಕಳಿಗೆ ಶಿಕ್ಷಣದೊಂದಿಗೆ, ಸೇವಾ ಮನೋಭವನೆ ಹಾಗೂ ಸಾಮಾಜಿಕ ಮೌಲ್ಯ ಗಳನ್ನು ಬೆಳೆಸುವ ಜವಾಬ್ದಾರಿಯನ್ನು ಶಿಕ್ಷಕರು ಮತ್ತು ಪೋಷಕರು ನಿರ್ವಹಿಸಬೇಕೆಂದು ಸಾರ್ವ ಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮುನಿಕೆಂಪೇಗೌಡ ಅಭಿಪ್ರಾಯಪಟ್ಟರು. ನಗರದ ಅಬ್ದಲ್ ಕಲಾಂ ಭವನದಲ್ಲಿ ಮುತ್ತೂಟ್ ಗ್ರೂಪ್ಸ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುತ್ತೂಟ್ ಸಂಸ್ಥೆಯು ಶೈಕ್ಷಣಿಕ ಅಭಿವೃದ್ದಿಗೆ ಅನೇಕ ಕಾರ್ಯಕ್ರಮಗಳನ್ನು ೂಪಿಸಿದ್ದು, ಇತಿಹಾಸದಲ್ಲಿ ಹೆಗ್ಗಳಿಕೆ ಪಾತ್ರವಾಗಿದೆ ಎಂದರು. ಸಮಾಜದಲ್ಲಿ ಬದಲಾವಣೆ ಶಿಕ್ಷಣದಿಂದ ಮಾತ್ರ ಸಾದ್ಯ ಎಂಬ ಸತ್ಯವನ್ನು ಅರಿತು ಶೈಕ್ಷಣಿಗೆ ಅಭಿ ವೃದ್ದಿಗೆ ಶ್ರಮಿಸುತ್ತಿರುವ ಮುತ್ತೂಟ್ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇದನ್ನೂ ಓದಿ: Chikkaballapur News: ಚಿಂತಾಮಣಿಯ ಅತಿಥಿ ಉಪನ್ಯಾಸಕ ಎಂ.ನರಸಿಂಹಪ್ಪ ಸಾವು: ಜಿಲ್ಲಾ ಸಂಘ ತೀವ್ರ ಸಂತಾಪ
ಕ್ಷೇತ್ರ ಶಿಕ್ಷಣಾಧಿಕಾರಿ ಮುನಿವೆಂಕಟರಾಮಚಾರಿ ಮಾತನಾಡಿ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಹಾಯಧನ ನೀಡುತ್ತಿರುವುದು ಉತ್ತಮ ಕೆಲಸವಾಗಿದೆ. ವಿದ್ಯಾರ್ಥಿಗಳು ಈ ಪ್ರೋತ್ಸಾಹಧನವನ್ನು ವಿಧ್ಯಾಭ್ಯಾಸಕ್ಕೆ ಮತ್ತು ಒಂದು ದಿನಪತ್ರಿಕೆ ಖರೀದಿಸಿ ಓದುವ ಅಭ್ಯಾಸ ಮಾಡಿಕೊಳ್ಳುವ ಮೂಲಕ ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಮುತ್ತೂಟ್ ಸಂಸ್ಥೆ ಸರ್ಕಾರವೇ ಮಾಡದ ಉತ್ತಮ ಸೇವಾ ಕಾರ್ಯಕ್ರಮಗಳನ್ನು ಮಾಡಿರುವುದು ಶ್ಲಾಘನೀಯ. ಸಮಸ್ಯೆ ಗಳಿರುವ ಶಾಲೆಗಳನ್ನು ಆಯ್ಕೆ ಮಾಡಿಕೊಂಡು, ಅಗತ್ಯ ಕಟ್ಟಡ ಸೇರಿದಂತೆ ಮೂಲ ಸೌಕರ್ಯ ಗಳನ್ನು ನಿರ್ಮಿಸಿಕೊಡುವಲ್ಲಿ ಸಂಸ್ಥೆ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದರು. 8ನೇ ಮತ್ತು ೯ನೇ ತರಗತಿಗಳಲ್ಲಿ ಹೆಚ್ಚು ಅಂಕ ಗಳಿಸಿರುವ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಸ್ಥೆ ಪ್ರೋತ್ಸಾಹದನವನ್ನು ನೀಡುತ್ತಿದು. ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ವಾಗುತ್ತದೆ ಎಂದರು.
ಮುತ್ತೂಟ್ ಸಂಸ್ಥೆಯ ಆರ್ ಎ ಎಂ ಅರುಣ್ ಕುಮಾರ್ ಮಾತನಾಡಿ, ಮುತ್ತೂಟ್ ಸಂಸ್ಥೆಯು ಶಿಕ್ಷಣ, ಆರೋಗ್ಯ, ಸಾಮಾಜಿಕ ಅಭಿವೃದ್ದಿಗೆ ಅಗತ್ಯವಿರುವ ಅನೇಕ ಸೇವಾ ಕಾರ್ಯಗಳನ್ನು ಮಾಡಿ ಕೊಂಡು ಬಂದಿದೆ. ಇದರ ಭಾಗವಾಗಿ ವಿಧ್ಯಾರ್ಥಿಗಳಿಗೆ ಎಕ್ಸಿಲೆನ್ಸ್ ಅವಾರ್ಡ್ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದೇವೆ. ಆರೋಗ್ಯ ಶಿಬಿರಗಳು, ಆಸ್ಪತ್ರೆಗಳು ಉಪಕರಣಗಳು, ಶಾಲಾ ಕಟ್ಟಡ ಗಳು, ಬೀದಿ ಬದಿ ವ್ಯಾಪಾರಸ್ಥರಿಗೆ ಪ್ರೋತ್ಸಾಹ ಸೆರಿದಂತೆ ದೇಶದಾದ್ಯಂತ ಸುಮಾರು ೧೦೦ ಕೋಟಿ ವೆಚ್ಚದಲ್ಲಿ ಸೇವಾ ಕಾರ್ಯಗಳು ನಡೆಸುತ್ತಿದ್ದೇವೆ ಎಂದರು.
ಚಿಕ್ಕಬಳ್ಳಾಪುರ ಮತ್ತು ದೇವನಹಳ್ಳಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಅಂಕ ಗಳಿಸಿರುವ ಸುಮಾರು ೮೬ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮಸಲ್ಲಿ ಮುತ್ತೂಟ್ ಸಿಎಸ್ ಆರ್ ಮ್ಯಾನೇಜರ್ ಜಿ.ಆರ್.ಮಹೇಶ್, ಜಿಲ್ಲಾ ಶಿಕ್ಷಣ ಅಧಿ ಕಾರಿ ಅಧಿಕಾರಿ ಸುಕನ್ಯಾ, ಜಿಲ್ಲಾ ಪ್ರೌಡಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಶಿಧರ್, ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ್ ರೆಡ್ಡಿ, ಕ.ರಾ.ನೌ.ಸಂಘದ ನಿರ್ದೇಶಕ ಸುನೀಲ್, ಜಿಪಿಟಿ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಇಸಿಒ ಸತೀಶ್ ಕುಮಾರ್, ಶಿಕ್ಷಕರಾದ ಶ್ರೀರಾಮ್, ಚಿಕ್ಕರೆಡ್ಡಪ್ಪ ಸೇರಿದಂತೆ ಹಲವರು ಇದ್ದರು.