ಇಂದು ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಭಾರತ-ಶ್ರೀಲಂಕಾ ದಿಗ್ಗಜ ಆಟಗಾರರ ನಡುವೆ ಕ್ರಿಕೆಟ್
ಶನಿವಾರ ನಡೆಯುವ ಈ ಪಂದ್ಯವನ್ನು ಸದ್ದುರು ಶ್ರೀ ಮಧುಸೂದನ ಸಾಯಿ ಅವರ ಮಾನವೀಯ ತೆಯ ಅಭಿಯಾನದ ಏಕತೆಗೆ ಸಮರ್ಪಿಸಲಾಗಿದೆ ಎಂದು ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕುಲಾಧಿಪತಿ ನರಸಿಂಹಮೂರ್ತಿ ತಿಳಿಸಿದ್ದಾರೆ
![muddenahalli](https://cdn-vishwavani-prod.hindverse.com/media/images/muddenahalli.max-1280x720.jpg)
![Profile](https://vishwavani.news/static/img/user.png)
ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಶ್ರೀ ಕೃಷ್ಣನ್ ಅಂತರಾ ಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೆಬ್ರವರಿ ಬೆಳಿಗ್ಗೆ 8ಕ್ಕೆ ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್‌ನ ಜನಪ್ರಿಯ ಆಟಗಾರರ ನಡುವೆ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ 2025 ಕ್ರಿಕೆಟ್ ನಡೆಯಲಿದ್ದು ಇದು ಸದ್ಗುರು ಮಧುಸೂಧನ್ ಸಾಯಿ ಅವರ ಮಾನವೀಯತೆಯ ಅಭಿಯಾನದ ಪ್ರೇರಣೆಗಾಗಿ ನಡೆಯುತ್ತಿದೆ ಎಂದು ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕುಲಾಧಿಪತಿ ನರಸಿಂಹಮೂರ್ತಿ ತಿಳಿಸಿದ್ದಾರೆ.
ಶನಿವಾರ ನಡೆಯುವ ಈ ಪಂದ್ಯವನ್ನು ಸದ್ದುರು ಶ್ರೀ ಮಧುಸೂದನ ಸಾಯಿ ಅವರ ಮಾನವೀಯ ತೆಯ ಅಭಿಯಾನದ ಏಕತೆಗೆ ಸಮರ್ಪಿಸಲಾಗಿದೆ ಎಂದು ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕುಲಾಧಿಪತಿ ನರಸಿಂಹಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ: Chikkabalalpur News: ದುರಸ್ತಿಯಾಗದ ಕುಡಿಯುವ ನೀರಿನ ಶುದ್ಧೀಕರಣ ಘಟಕ
ಯುವ ಮಾನವತಾವಾದಿ, ದಾರ್ಶನಿಕಗುರು ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವತಾ ಅಭಿಯಾನದ ರೂವಾರಿಯಾಗಿ ವಿಶ್ವದಾದ್ಯಂತ 80 ರಾಷ್ಟ್ರಗಳಲ್ಲಿ ಶಿಕ್ಷಣ, ಪೌಷ್ಠಿಕತೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿಸುತ್ತಿದ್ದಾರೆ.ಆಧ್ಯಾತ್ಮಿಕತೆಯ ಮೂಲಕ ಬೃಹತ್ ಅಭಿಯಾನವನ್ನು ಮುನ್ನಡೆಸುತ್ತಿರುವ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಆಯೋಜಿಸು ತ್ತಿರುವ “ಒನ್ ವರ್ಲ್ಡ್ ಒನ್ ಫ್ಯಾಮಿಲಿ" ಕ್ರಿಕೆಟ್ ಪಂದ್ಯವನ್ನು ಭಾರತೀಯ ಕ್ರಿಕೆಟ್ ದಂತಕತೆ ಡಾ.ಸುನಿಲ್ ಮನೋಹರ್ ಗವಾಸ್ಕರ್ ಅವರ ನೇತೃತ್ವದಲ್ಲಿ ಸಂಘಟಿಸುತ್ತಿದ್ದಾರೆ ಎಂದರು.
ಕ್ರಿಕೆಟ್ ಕೇವಲ ಆಟ ಮಾತ್ರವಾಗಿರದೆ, ರಾಷ್ಟç ಸಮುದಾಯ ಮತ್ತು ಹೃದಯಗಳನ್ನು ಒಂದುಗೂ ಡಿಸುವ ಅದ್ಭುತ ಶಕ್ತಿಯುಳ್ಳ ಕ್ರೀಡೆಯಾಗಿದೆ. ಶ್ರೀಲಂಕಾದ ಕ್ರಿಕೆಟ್ ಆಟಗಾರರೊಂದಿಗೆ ಭಾರತದ ಕ್ರಿಕೆಟ್ ದಿಗ್ಗಜರಾದ ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ವೆಂಕಟೇಶ್ ಪ್ರಸಾದ್ ಮುಂತಾದ ಖ್ಯಾತನಾಮರು ಹಾಗೂ ಶ್ರೀಲಂಕಾದ ಕ್ರಿಕೆಟ್ ದಿಗ್ಗಜರಾದ ಅರವಿಂದ ಡಿ ಸಿಲ್ವಾ, ಮುತ್ತಯ್ಯ ಮುರಳೀಧರನ್, ಮತ್ತು ಟಿ.ಎಂ.ದಿಲ್ಶಾನ್ ಅವರೊಂದಿಗೆ ಮತ್ತೊಮ್ಮೆ ಕ್ರಿಕೆಟ್ ಮೈದಾನದಲ್ಲಿ ಮೇಳೈಸಲಿದ್ದಾರೆ.
"ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ ೨೦೨೫" ಸೀಮಾತೀತವಾದ ಚಾಂಪಿಯನ್‌ಗಳ ಆಟಕ್ಕಾಗಿ ಒಂದಾಗುತ್ತಿದೆ. ಈ ಟಿ-೨೦ ಕಪ್ ಸೌಹಾರ್ದಯುತ ಪಂದ್ಯಾಟವಾಗಿದೆ. ಶಿಕ್ಷಣ, ಪೌಷ್ಠಿಕತೆ ಮತ್ತು ಆರೋಗ್ಯ ಸೇವೆಯನ್ನು ಎಲ್ಲರಿಗೂ ಸಂಪೂರ್ಣವಾಗಿ ಉಚಿತವಾಗಿ ಒದಗಿಸುವ ಕಾರಣ “ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ ೨೦೨೫” ಸೌಹಾರ್ದ ಟಿ-೨೦ ಕ್ರಿಕೆಟ್ ಪಂದ್ಯವು ಸೇವಾ ಕಾರ್ಯಗಳ ಮೌಲ್ಯಗಳನ್ನು ಸಂಕೇತಿಸುತ್ತದೆ. ಕ್ರೀಡೆ ಜೀವನಕ್ಕೆ ಅತ್ಯಗತ್ಯವಾಗಿದೆ. ಗೌರವದೊಂದಿಗೆ ಗೆಲುವು ಮತ್ತು ಸಮಗ್ರತೆಯೊಂದಿಗೆ ಸ್ಪರ್ಧೆ ಎಂಬ ಬದ್ಧತೆ ವೈಯಕ್ತಿಕ ಸಾಧನೆಯನ್ನು ಮೀರಿದ ಕಾರಣ 'ಮಾನವೀಯತೆ ಇನ್ನೂ ಅಸ್ತಿತ್ವದಲ್ಲಿದೆ' ಎನ್ನುವ ಸಂದೇಶವನ್ನು ಈ ಪಂದ್ಯಾಟವು ಸಾರಲಿದೆ. 2025 ರ ಒಂದು ವಿಶ್ವ ಒಂದು ಕುಟುಂಬ ಕಪ್ ನಲ್ಲಿ 'ಜಗತ್ತೇ ಒಂದು ಕುಟುಂಬ' (ವಸುದೈವ ಕುಟುಂಬ ಕಂ) ಎಂದು ಕೆತ್ತಲಾಗಿದೆ ಎಂದರು.
ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಬಾಲಕರಿಗಾಗಿ ಗವಾಸ್ಕರ್ - ವಿಶ್ವನಾಥ್ ಹೆಸರಿನಲ್ಲಿ ಕ್ರಿಕೆಟ್ ಅಕಾಡೆಮಿಯನ್ನು ಸ್ಥಾಪಿಸಲಾಗುವುದು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಈಗಾಗಲೇ ಘೋಷಿಸಿದ್ದಾರೆ. ಹೆಸರಾಂತ ಕ್ರಿಕೆಟ್ ಆಟಗಾರರು ಕ್ಯಾಂಪಸ್‌ನಲ್ಲಿ ಇದ್ದು ತರಬೇತಿ ನೀಡಲಿದ್ದಾರೆ. ಬಾಲಕರನ್ನು ಅರ್ಹತೆಗೆ ಅನುಗುಣವಾಗಿ ಆರಿಸಿ ತರಬೇತಿಗೊಳಿಸ ಲಾಗುವುದು. ಯಾವುದೇ ಶುಲ್ಕ ಪಡೆಯದೆ ಸಂಪೂರ್ಣ ಉಚಿತವಾಗಿ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಅಕಾಡೆಮಿಯ ಹೆಸರಿನಲ್ಲಿ ಆಟಗಾರರನ್ನು ಗೌರವಿಸ ಲಾಗುವುದು. ಅರ್ಹತೆಯ ಆಧಾರದ ಮೇಲೆ ಮಾತ್ರ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು.
ಕ್ರಿಕೆಟ್‌ನಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳನ್ನು 6ನೇ ತರಗತಿಯಿಂದಲೇ ಸೇರಿಸಿಕೊಂಡು ತರಬೇತಿ ನೀಡಲಾಗುತ್ತದೆ. ಒಂದು ವೇಳೆ ದೇಶಿಯ ಮಟ್ಟದ ಆಟಗಳಲ್ಲಿ ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ವಿಫಲವಾದಲ್ಲಿ , ಅಂತಹವರಿಗೆ ಸಂಸ್ಥೆಯೇ ಉದ್ಯೋಗ ನೀಡಿ ಕ್ರಿಕೆಟ್ ತರಬೇತುದಾರರನ್ನಾಗಿ ನೇಮಕ ಮಾಡಿಕೊಳ್ಳುತ್ತದೆ ಎಂದು ಹೇಳಿದರು.
ಸತ್ಯಸಾಯಿ ಗ್ರಾಮದಲ್ಲಿ ಸತತ ಎರಡನೇ ಬಾರಿಗೆ ಇಂತಹ ಸೌಹಾರ್ದ ಪಂದ್ಯಾಟವನ್ನು ಆಯೋಜಿ ಸಲಾಗುತ್ತಿದೆ. ಸತ್ಯಸಾಯಿ ಗ್ರಾಮವು ಮುದ್ದೇನಹಳ್ಳಿ ಎಂಬ ಸಣ್ಣ ಹಳ್ಳಿಯೊಳಗಿನ ಜಾಗತಿಕ ಗ್ರಾಮವಾಗಿದೆ. ಇದು ವಿಶ್ವವಿಖ್ಯಾತ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮಸ್ಥಳವಾದ ಈ ಪ್ರದೇಶವು ಕಳೆದ ೧೨ ವರ್ಷಗಳಲ್ಲಿ ಅನೇಕ ದಾಖಲೆಗಳಿಗೆ ಸಾಕ್ಷಿಯಾಗಿದೆ. ಭಾರತದ ಗೌರವಾನ್ವಿತ ರಾಷ್ಟ್ರಾಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಸ್ವಾಗತಿಸಿದೆ. ಅವರು ವಿಶ್ವವಿದ್ಯಾನಿಲಯದ ಎರಡನೇ ಘಟಿಕೋತ್ಸವದ ಅತಿಥಿಗಳಾಗಿ ಆಗಮಿಸಿದ್ದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಪೂರ್ಣ ಉಚಿತ ವೈದ್ಯಕೀಯ ಕಾಲೇಜಿನ ಉದ್ಘಾ ಟಿಸಿ ಲೋಕಾರ್ಪಣೆ ಮಾಡಿದ್ದರು."ಒಂದು ವಿಶ್ವ ಒಂದು ಕುಟುಂಬ" ಕೇವಲ ಏಕತೆಯ ಕರೆಯಲ್ಲ, ಎಲ್ಲರನ್ನೂ ಕಲ್ಯಾಣದ ಕಡೆಗೆ ಸಾಮೂಹಿಕವಾಗಿ ಕರೆದೊಯ್ಯುವ ಮನವಿಯಾ ಗಿರುತ್ತದೆ. "ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ ೨೦೨೫" ಸರ್ವರನ್ನೂ ಹುರಿದುಂಬಿಸಿ ಗೆಲುವಿಗಾಗಿ ಸಹಕರಿಸಿ ಸ್ಪರ್ಧಿ ಸುವ ನ್ಯಾಯೋಚಿತ ಆಟವಾಗಿದೆ.ಈ ನ್ಯಾಯೋಚಿತ ಆಟವು ಮಾನವೀಯ ಬದ್ಧತೆಯ ಕಾರಣಕ್ಕಾಗಿ ಮಾನವೀಯತೆಯ ಭಾವನೆಯಲ್ಲಿ ಐಕ್ಯತೆಯನ್ನು ಸಾಧಿಸುವುದು ಎಂದರು.
ಇದುವರೆಗೆ 3 ಮಿಲಿಯನ್‌ಗಿಂತಲೂ ಹೆಚ್ಚು ಹೊರರೋಗಿಗಳ ಸಮಾಲೋಚನೆ ಮತ್ತು ತಪಾಷಣೆ ನಡೆದಿದೆ. 100000 ಒಳರೋಗಿಗಳಿಗೆ ಶಸ್ತ್ರ ಚಿಕಿತ್ಸೆಗಳೂ ಸೇರಿದಂತೆ ವೈದ್ಯಕೀಯ ಸೇವೆಗಳನ್ನು ನೀಡಲಾಗಿದೆ. ಇದು ಸಂಪೂರ್ಣ ಉಚಿತವಾಗಿರುವ ವಿಶ್ವದ ಅತಿದೊಡ್ಡ ಆರೋಗ್ಯ ಸರಪಳಿ ಯಾಗಿದೆ.
ಇದೇ ಧ್ಯೇಯವಾಕ್ಯದೊಂದಿಗೆ ಭಾರತ, ಫಿಜಿ ಮತ್ತು ಶ್ರೀಲಂಕಾದಲ್ಲಿ ಉಚಿತ ಮಕ್ಕಳ ಹೃದಯ ಆಸ್ಪತ್ರೆಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. "ಇಲ್ಲಿ ದಿಲ್ ಮಾತ್ರ, ಬಿಲ್ ಇಲ್ಲ" ಎಂಬ ಮಾನವೀ ಯತೆಯ ನೆಲೆಯಲ್ಲಿ 34000ಕ್ಕೂ ಹೆಚ್ಚು ಪುಟಾಣಿ ಹೃದಯಗಳ ರೋಗಗಳನ್ನು ಗುಣಪಡಿಸಲಾಗಿದೆ.
ಅಭಿಯಾನದ ಗಮನೀಯ ಸಾಧನೆಗಳು
೧. ಭಾರತದ ಅತಿದೊಡ್ಡ ಬೆಳಗಿನ ಪೌಷ್ಟಿಕಾಂಶ ಪೂರಣ ಕಾರ್ಯಕ್ರಮ
೨. ಭಾರತದ ಏಕ ರೀತಿಯ ಸಂಪೂರ್ಣ ಉಚಿತ ಸರಣಿ ವಸತಿ ಶಾಲೆಗಳು
೩. ಸ್ವಯಂ-ಸಮರ್ಥನೀಯ ಮಾದರಿಯ ಭಾರತದ ಮೊದಲ ಸಂಪೂರ್ಣ ಉಚಿತ ವಿಶ್ವವಿದ್ಯಾಲಯ
೪. ವಿಶ್ವದ ಮೊಟ್ಟ ಮೊದಲ ಸಂಪೂರ್ಣ ಉಚಿತ ವೈದ್ಯಕೀಯ ಕಾಲೇಜು
೫. ವಿಶ್ವದ ಅತಿ ದೊಡ್ಡ ಸಂಪೂರ್ಣ ಉಚಿತ ಮಕ್ಕಳ ಹೃದ್ರೋಗ ಚಿಕಿತ್ಸಾ ಸರಣಿ ಆಸ್ಪತ್ರೆಗಳು
ಹೀಗೆ ತ್ಯಾಗದ ಮೂಲಕ ಸಮಾಜದಲ್ಲಿ ಕೃತಜ್ಞತಾ ಪೂರ್ವಕವಾಗಿ ಸಹಾನುಭೂತಿಯಿಂದ ಏನನ್ನೂ ಪಡೆಯದೆ ಎಲ್ಲವನ್ನೂ ನೀಡುವ ಕಾರ್ಯವು ನಡೆಯುತ್ತಿದೆ. ಇದರಿಂದಾಗಿ ಸುಧಾರಣೆ ಮತ್ತು ರೂಪಾಂತರದ ಅಲೆಯು ನಿರಂತರವಾಗಿ ಹೊರ ಹೊಮ್ಮುವಂತಾಗಿದೆ.