Riyan Parag: ಕಾಲಿಗೆ ಬಿದ್ದ ಅಭಿಮಾನಿ; ಟ್ರೋಲ್ ಆದ ರಿಯಾನ್ ಪರಾಗ್
ರಿಯಾನ್ ಪರಾಗ್ ಅಸ್ಸಾಂನಿಂದ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ ಮೊದಲ ಕ್ರಿಕೆಟಿಗ. ಹೀಗಾಗಿ ಅಸ್ಸಾಂನಲ್ಲಿ ಪರಾಗ್ ಓರ್ವ ಸ್ಟಾರ್ ಆಟಗಾರ. ಆದ್ದರಿಂದ ಅವರ ಪಾದಗಳನ್ನು ಸ್ಪರ್ಶಿಸಿರಬಹುದೆಂದು ಹೇಳಲಾಗುತ್ತಿದೆ. ಐಪಿಎಲ್‌ನಲ್ಲಿ ಪರಾಗ್ ಬಹಳ ಸಮಯದಿಂದ ರಾಜಸ್ಥಾನ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.


ಗುವಾಹಟಿ: ಈ ಬಾರಿಯ ಐಪಿಎಲ್(IPL 2025)ನಲ್ಲಿ ಮತ್ತೊಂದು ಭದ್ರತಾ ಲೋಪದ ಪ್ರಕರಣ ಬೆಳಕಿಗೆ ಬಂದಿದೆ. ಕೆಕೆಆರ್ ಮತ್ತು ಆರ್‌ಸಿಬಿ ನಡುವಣ ಉದ್ಘಾಟನ ಪಂದ್ಯದಲ್ಲಿ ಅಭಿಮಾನಿಯೊಬ್ಬ ಮೈದಾನಕ್ಕೆ ಓಡಿ ಬಂದು ವಿರಾಟ್ ಕೊಹ್ಲಿಯ ಕಾಲಿಗೆ ಬಿದ್ದು ನಮಸ್ಕರಿಸಿದ್ದ. ಇದೀಗ ಬುಧವಾರ ನಡೆದಿದ್ದ ರಾಜಸ್ಥಾನ್ ಮತ್ತು ಕೆಕೆಆರ್(RR vs KKR) ಪಂದ್ಯದಲ್ಲೂ ಪ್ರೇಕ್ಷಕನೊಬ್ಬ ಮೈದಾನಕ್ಕೆ ಓಡಿ ಬಂದು ರಿಯಾನ್ ಪರಾಗ್(Riyan Parag) ಪಾದ ಮುಟ್ಟಿ ನಮಸ್ಕರಿಸಿದ ಘಟನೆ ನಡೆದಿದೆ. ಹೀಗಾಗಿ ಐಪಿಎಲ್ ಆಡಳಿದ ಮಂಡಳಿ ವಿರುದ್ಧ ಭದ್ರತಾ ವೈಫಲ್ಯ ಆರೋಪಗಳು ಕೇಳಿ ಬಂದಿವೆ.
ರಾಜಸ್ಥಾನ್ ತಂಡದ ಬೌಲಿಂಗ್ ಇನಿಂಗ್ಸ್ ವೇಳೆ ಪರಾಗ್ ಬೌಲಿಂಗ್ ನಡೆಸಲು ಸಜ್ಜಾಗಿದ್ದರು. ಈ ವೇಳೆ ಗ್ಯಾಲರಿಯಲ್ಲಿದ್ದ ಅಭಿಮಾನಿಯೊಬ್ಬ ಏಕಾಏಕಿ ಮೈದಾನಕ್ಕೆ ಓಡಿ ಬಂದು ಪರಾಗ್ ಅವರ ಪಾದಗಳನ್ನು ಮುಟ್ಟಿದ್ದಾನೆ. ಅಭಿಮಾನಿಯ ಈ ವರ್ತನೆಯಿಂದ ಪರಾಗ್ ಒಂದು ಕ್ಷಣ ಗಲಿಬಿಲಿಯಾದರು. ಬಳಿಕ ಅಭಿಮಾನಿಯನ್ನು ಭದ್ರತಾ ಸಿಬ್ಬಂದಿ ತಕ್ಷಣ ಬಂಧಿಸಿದರು.
So, Riyan Parag hired a boy and paid him 10,000 Rs to come onto the ground and touch his feet.
— Dr Nimo Yadav 2.0 (@niiravmodi) March 26, 2025
What an attention seeker this guy is!
#RRvsKKR pic.twitter.com/0w7gfW7lAC
ಈ ವಿಡಿಯೊ ಕಂಡ ಕೆಲ ನೆಟ್ಟಿಗರು ರಿಯಾನ್ ಪರಾಗ್ ಅವರು ಈ ಅಭಿಮಾನಿಗೆ ಪಂದ್ಯಕ್ಕೂ ಮುನ್ನ 10 ಸಾವಿರ ನೀಡಿ ಪಂದ್ಯ ನಡೆಯುವ ವೇಳೆ ಓಡಿ ಬಂದು ತಮ್ಮ ಕಾಲಿಗೆ ಬೀಳುವಂತೆ ಹೇಳಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.
ರಿಯಾನ್ ಪರಾಗ್ ಅಸ್ಸಾಂನಿಂದ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ ಮೊದಲ ಕ್ರಿಕೆಟಿಗ. ಹೀಗಾಗಿ ಅಸ್ಸಾಂನಲ್ಲಿ ಪರಾಗ್ ಓರ್ವ ಸ್ಟಾರ್ ಆಟಗಾರ. ಆದ್ದರಿಂದ ಅವರ ಪಾದಗಳನ್ನು ಸ್ಪರ್ಶಿಸಿರಬಹುದೆಂದು ಹೇಳಲಾಗುತ್ತಿದೆ. ಐಪಿಎಲ್‌ನಲ್ಲಿ ಪರಾಗ್ ಬಹಳ ಸಮಯದಿಂದ ರಾಜಸ್ಥಾನ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಇದನ್ನೂ ಓದಿ IPL 2025: ಮಹಿಳಾ ಭದ್ರತಾ ಅಧಿಕಾರಿಯ ತೊಡೆಗೆ ಬಡಿದ ಸಿಕ್ಸರ್ ಚೆಂಡು; ವಿಡಿಯೊ ವೈರಲ್
ಆರ್‌ಸಿಬಿ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಕಾಲಿಗೆ ಬಿದ್ದ ಅಭಿಮಾನಿಗೆ ಇನ್ನು ಮುಂದೆ ಈಡನ್ ಗಾರ್ಡನ್ಸ್ ಕ್ರೀಡಾಂಗಣಕ್ಕೆ ಪ್ರವೇಶಿಸದಂತೆ ನಿಷೇಧಿಸಲಾಗಿದೆ ಎನ್ನಲಾಗಿದೆ. ಜತೆಗೆ 1,000 ರೂ.ಗಳ ಜಾಮೀನು ಬಾಂಡ್ ಪಾವತಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯ ಮುಂದಿನ ಪಂದ್ಯದಲ್ಲಿ ಇದೇ ರೀತಿಯ ಘಟನೆ ಮರುಕಳಿಸದಂತೆ ಭದ್ರತಾ ಸಿಬ್ಬಂದಿಗಳು ಎಚ್ಚರ ವಹಿಸಬೇಕಿದೆ.