#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Aarushi Nishank: ಹಿರೋಯಿನ್ ಮಾಡುತ್ತೇವೆಂದು ಮಾಜಿ ಸಿಎಂ ಪುತ್ರಿಗೆ ವಂಚನೆ: 4 ಕೋಟಿ‌ ರೂ. ಪಂಗನಾಮ!

ಉತ್ತರಾಖಂಡದ ಮಾಜಿ ಸಿಎಂ ರಮೇಶ್ ಪೋಖ್ರಿಯಾಲ್ ನಿಶಾಂಕ್ ಪುತ್ರಿ ಆರುಷಿ ನಿಶಾಂಕ್‌ಗೆ ಮುಂಬೈ ಮೂಲದ ದಂಪತಿ ಬರೋಬ್ಬರಿ 4 ಕೋಟಿ ರೂ. ಪಂಗನಾಮ ಹಾಕಿದ್ದಾರೆ. ನಟಿ ಆರುಷಿ ನಿಶಾಂಕ್ ಡೆಹ್ರಾಡೂನ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‌ ಹಿರೋಯಿನ್‌ ಮಾಡುತ್ತೇವೆಂದು ನಂಬಿಸಿ ವಂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಮಾಜಿ ಸಿಎಂ ಪುತ್ರಿಗೆ 4 ಕೋಟಿ ರುಪಾಯಿ ವಂಚನೆ!

Aarushi Nishank

Profile Deekshith Nair Feb 9, 2025 7:11 PM

ಮುಂಬೈ: ಉತ್ತರಾಖಂಡದ(Uttarkhand) ಮಾಜಿ ಸಿಎಂ ರಮೇಶ್ ಪೋಖ್ರಿಯಾಲ್ ನಿಶಾಂಕ್(Ramesh Pokhriyal Nishank) ಪುತ್ರಿ ಆರುಷಿ ನಿಶಾಂಕ್‌ಗೆ(Aarushi Nishank) ಮುಂಬೈ(Mumabi) ಮೂಲದ ದಂಪತಿ ಬರೋಬ್ಬರಿ 4 ಕೋಟಿ ರೂ. ಪಂಗನಾಮ ಹಾಕಿದ್ದಾರೆ. ನಟಿ ಆರುಷಿ ನಿಶಾಂಕ್ ಡೆಹ್ರಾಡೂನ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‌ ಹಿರೋಯಿನ್‌ ಮಾಡುತ್ತೇವೆಂದು ನಂಬಿಸಿ ವಂಚಿಸಲಾಗಿದೆ ಎಂದು ತಿಳಿದು ಬಂದಿದೆ. ಮುಂಬೈ ಮೂಲದ ಮಾನ್ಸಿ ಹಾಗೂ ವರುಣ್ ಬಾಂಗ್ಲಾ ದಂಪತಿ 4 ಕೋಟಿ ರೂ. ವಂಚಿಸಿದ್ದಾರೆ ಎಂದು ಆರುಷಿ ನಿಶಾಂಕ್ ಆರೋಪಿಸಿದ್ದಾರೆ.

ಉತ್ತರಖಾಂಡದ ಮಾಜಿ ಮುಖ್ಯಮಂತ್ರಿಯ ಮಗಳನ್ನು ಸಿನಿಮಾದಲ್ಲಿ ನಾಯಕ ನಟಿಯಾಗಿ ಮಾಡುತ್ತೇವೆಂದು ನಂಬಿಸಿ ಖದೀಮರು 4 ಕೋಟಿ ರುಪಾಯಿ ವಂಚಿಸಿದ್ದಾರೆ. ತಮ್ಮ ನಿವಾಸಕ್ಕೆ ವರುಣ್ ದಂಪತಿ ಬಂದು ‘ಅಂಯೋಂ ಕಿ ಗುಸ್ತಾಖಿಯಾನ್’ ಚಿತ್ರದಲ್ಲಿ ಹಿರೋಯಿನ್‌ ಪಾತ್ರ ನೀಡುವುದಾಗಿ ಹೇಳಿದ್ದರು. ಅದಕ್ಕಾಗಿ 5 ಕೋಟಿ ರುಪಾಯಿ ಕೇಳಿದ್ದರು. ಚಿತ್ರ ರಿಲೀಸ್ ಆದ ಮೇಲೆ ಬಂದ ಲಾಭದಲ್ಲಿ 20% ಸೇರಿ 15 ಕೋಟಿ ರೂ. ಕೊಡುವುದಾಗಿ ಭರವಸೆ ನೀಡಿದ್ದರು. ಬಳಿಕ ತನ್ನಿಂದ ಸಿನಿಮಾಗೆ 4 ಕೋಟಿ ರೂ. ಹೂಡಿಕೆ ಮಾಡಿಸಿದ್ದರು. ಅವರನ ಮಾತನ್ನು ನಂಬಿಕೊಂಡು 4 ಕಂತುಗಳಲ್ಲಿ 4 ಕೋಟಿ ರೂ. ನೀಡಿರುವುದಾಗಿ ಆರುಷಿ ದೂರಿನಲ್ಲಿ ತಿಳಿಸಿದ್ದಾರೆ.



ಡೆಹ್ರಾಡೂನ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರುವ ಮಾಜಿ ಸಿಎಂ ಪುತ್ರಿ "ನನ್ನ ಸ್ಕ್ರಿಪ್ಟ್ ಅನ್ನು ತಾವೇ ಫೈನಲ್ ಮಾಡುವುದಕ್ಕೂ ಅವಕಾಶವಿದೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಮೋಟ್ ಮಾಡಲು ಅವಕಾಶ ನೀಡುವುದಾಗಿ ಹೇಳಿದ್ದರು. ಇನ್ನೂ ಈ ವರ್ಷ ಫೆಬ್ರವರಿ 2ರಂದು ಭಾರತದಲ್ಲಿ ಆಗಬೇಕಾದ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಲಾಗಿದ್ದು, ಉಳಿದ ಭಾಗವನ್ನು ಯುರೋಪಿನಲ್ಲಿ ಚಿತ್ರೀಕರಿಸುವ ಪ್ಲ್ಯಾನ್ ಮಾಡಲಾಗಿತ್ತು. ಆದರೆ ನನ್ನನ್ನು ಆಯ್ಕೆ ಮಾಡಿದ್ದ ಸ್ಥಾನದಲ್ಲಿ ಬೇರೆ ನಟಿಯನ್ನು ಆಯ್ಕೆ ಮಾಡಲಾಗಿದೆ ಎಂದು ಆರುಷಿ ಗಂಭೀರವಾಗಿ ಆರೋಪಿಸಿದ್ದಾರೆ. ಪಾತ್ರವು ಇಲ್ಲ, ಇತ್ತ ತನ್ನ ಹಣ ಹಿಂದಿರುಗಿಸಿ ಕೊಡುವಂತೆ ಕೇಳಿದಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Akkineni Family: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಅಕ್ಕಿನೇನಿ ನಾಗಾರ್ಜುನ ಫ್ಯಾಮಿಲಿ

ಸದ್ಯ ಆರುಷಿ ನಿಶಾಂಕ್ ದೂರಿನ ಮೇಲೆ ಮಾನ್ಸಿ ವರುಣ್ ದಂಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಡೆಹ್ರಾಡೂನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.