ನಿನಗೇನು ತಲೆ ಕೆಟ್ಟಿದೆಯಾ?; ರಾಣಾ ವಿರುದ್ಧ ಮೈದಾನದಲ್ಲೇ ರೋಹಿತ್ ಆಕ್ರೋಶ
Rohit Sharma: ಹರ್ಷಿತ್ ರಾಣಾ(Harshit Rana) ಈ ಪಂದ್ಯದಲ್ಲಿ ಅತ್ಯಂತ ದುಬಾರಿಯಾಗಿ ಕಂಡುಬಂದರು. 9 ಓವರ್ ಎಸೆದು 62 ರನ್ ಬಿಟ್ಟುಕೊಟ್ಟರು. ಉರುಳಿಸಿದ್ದು ಕೇವಲ ಒಂದು ವಿಕೆಟ್ ಮಾತ್ರ. ಮೊದಲ ಪಂದ್ಯದಲ್ಲಿ ಮೂರು ವಿಕೆಟ್ ಕಡೆವಿದ್ದರು.
![ನಿನಗೇನು ತಲೆ ಕೆಟ್ಟಿದೆಯಾ?; ರಾಣಾ ವಿರುದ್ಧ ರೋಹಿತ್ ಆಕ್ರೋಶ](https://cdn-vishwavani-prod.hindverse.com/media/original_images/Rohit_Sharma_34.jpg)
![Profile](https://vishwavani.news/static/img/user.png)
ಕಟಕ್: ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ತಂಡದ ಆಟಗಾರರು ಫಿಲ್ಡಿಂಗ್, ಬ್ಯಾಟಿಂಗ್ ಅಥವಾ ಬೌಲಿಂಗ್ನಲ್ಲಿ ಏನಾದರು ತಪ್ಪುಗಳನ್ನು ಮಾಡಿದ ತಕ್ಷಣ ಅವರ ವಿರುದ್ಧ ಮುನಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಈಗಾಗಲೇ ಇಂತಹ ಹಲವು ನಿದರ್ಶನಗಳನ್ನು ನೋಡಿದ್ದೇವೆ. ಇಂತಹದ್ದೇ ಘಟನೆಯೊಂದು ಇಂಗ್ಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿಯೂ ನಡೆದಿದೆ. ಓವರ್ ಥ್ರೋ ಮಾಡಿದ ಹರ್ಷಿತ್ ರಾಣಾ ವಿರುದ್ಧ ಮೈದಾನಲ್ಲೇ ಆಕ್ರೋಶ ಹೊರಹಾಕಿದ ವಿಡಿಯೊ ವೈರಲ್ ಆಗಿದೆ.
32ನೇ ಓವರ್‌ನಲ್ಲಿ ಬೌಲಿಂಗ್ ನಡೆಸುತ್ತಿದ್ದ ಹರ್ಷಿತ್ ರಾಣಾ ಬ್ಯಾಟಿಂಗ್ ನಡೆಸುತ್ತಿದ್ದ ಜಾಸ್ ಬಟ್ಲರ್‌ಗೆ ಸತತ ನಾಲ್ಕು ಎಸೆತಗಳನ್ನು ಡಾಟ್ ಮಾಡಿದರು. ಐದನೇ ಎಸೆತದಲ್ಲಿ ಬಟ್ಲರ್ ಡಿಫೆನ್ಸ್ ಮಾಡಿದಾಗ ಚೆಂಡು ನೇರವಾಗಿ ಬೌಲಿಂಗ್ ಮಾಡುತ್ತಿದ್ದ ರಾಣಾ ಕೈ ಸೇರಿತು. ಬಟ್ಲರ್ ಕ್ರೀಸ್‌ನಿಂದ ಮುಂದಿದ್ದ ಕಾರಣ ರಾಣಾ ಚೆಂಡನ್ನು ವಿಕೆಟ್‌ನತ್ತ ಎಸೆದರು. ಆದರೆ ಚೆಂಡು ಕೀಪರ್ ರಾಹುಲ್ ಅವರಿಗಿಂತಲೂ ದೂರವಾಗಿ ಸಾಗಿ ಬೌಂಡರಿ ಗೆರೆ ದಾಟಿತು. ಅನಗತ್ಯ ಬೌಂಡರಿ ದಾಖಲಾದದನ್ನು ಕಂಡು ಪಿತ್ತ ನೆತ್ತಿಗೇರಿಸಿಕೊಂಡ ರೋಹಿತ್ ನಿನಗೇನು ತಲೆ ಕೆಟ್ಟಿದೆಯಾ?, ಏನು ಮಾಡುತ್ತಿದ್ದಿಯಾ? ಎಂದು ಬೈದರು.
ಹರ್ಷಿತ್ ರಾಣಾ ಈ ಪಂದ್ಯದಲ್ಲಿ ಅತ್ಯಂತ ದುಬಾರಿಯಾಗಿ ಕಂಡುಬಂದರು. 9 ಓವರ್ ಎಸೆದು 62 ರನ್ ಬಿಟ್ಟುಕೊಟ್ಟರು. ಉರುಳಿಸಿದ್ದು ಕೇವಲ ಒಂದು ವಿಕೆಟ್ ಮಾತ್ರ. ಮೊದಲ ಪಂದ್ಯದಲ್ಲಿ ಮೂರು ವಿಕೆಟ್ ಕಡೆವಿದ್ದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ 49.5 ಓವರ್‌ಗಳಲ್ಲಿ 304 ರನ್ ಬಾರಿಸಿತು. ಆರಂಭಿಕರಾದ ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ಸೇರಿಕೊಂಡು ಓವರ್‌ಗೆ 10ರ ಸರಾಸರಿಯಲ್ಲಿ ರನ್ ಗಳಿಸುವ ಮೂಲಕ ಭಾರತೀಯ ಬೌಲರ್‌ಗಳನ್ನು ದಂಡಿಸಿದರು.
ಇದನ್ನೂ ಓದಿ IND vs ENG 2nd ODI: ಭಾರತಕ್ಕೆ ಬೃಹತ್ ಗೆಲುವಿನ ಗುರಿ ನೀಡಿದ ಇಂಗ್ಲೆಂಡ್
ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸುತ್ತಿದ್ದ ಈ ಜೋಡಿಯನ್ನು ಪದಾರ್ಪಣ ಪಂದ್ಯವನ್ನಾಡಿದ ವರುಣ್ ಚಕ್ರವರ್ತಿ ಕೊನೆಗೂ ಬೇರ್ಪಡಿಸಿ ಭಾರತಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. 26 ರನ್ ಗಳಿಸಿದ್ದ ಫಿಲ್ ಸಾಲ್ಟ್ ವಿಕೆಟ್ ಕಿತ್ತರು. ಡಕೆಟ್ ಮತ್ತು ಸಾಲ್ಟ್ ಮೊದಲ ವಿಕೆಟ್‌ಗೆ 81 ರನ್ ಒಟ್ಟುಗೂಡಿಸಿದರು. ಈ ವಿಕೆಟ್ ಪತನದ ಬಳಿಕ ರೂಟ್ ಜತೆ ಇನಿಂಗ್ಸ್ ಬೆಳೆಸಿದ ಡಕೆಟ್ ಅರ್ಧಶತಕ ಬಾರಿಸಿದರು. ಒಟ್ಟು 10 ಬೌಂಡರಿ ನೆರವಿನಿಂದ 65 ರನ್ ಬಾರಿಸಿದರು.
72 ಎಸೆತ ಎದುರಿಸಿದ ರೂಟ್ 69 ರನ್ ಗಳಿಸಿ ಈ ಪಂದ್ಯದಲ್ಲಿಯೂ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಉಳಿದಂತೆ ಹ್ಯಾರಿ ಬ್ರೂಕ್(31), ಜಾಸ್ ಬಟ್ಲರ್(34) ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಸಿಡಿದು ನಿಂತ ಲಿಯಾಂಗ್ ಲಿವಿಂಗ್‌ಸ್ಟೋನ್ 41 ಬಾರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.