IPL 2025 Points Table: ಗೆಲುವಿನೊಂದಿಗೆ ದ್ವಿತೀಯ ಸ್ಥಾನಕ್ಕೇರಿದ ಗುಜರಾತ್
ಗುಜರಾತ್ ಗೆಲುವಿನಿಂದ ಈ ಹಿಂದೆ ದ್ವಿತೀಯ ಸ್ಥಾನದಲ್ಲಿದ್ದ ಆರ್‌ಸಿಬಿ ಒಂದು ಸ್ಥಾನ ಕುಸಿತ ಕಂಡು ಮೂರನೇ ಸ್ಥಾನಕ್ಕೆ ಬಂದು ನಿಂತಿದೆ. ಪಂಜಾಬ್ ಕಿಂಗ್ಸ್ ನಾಲ್ಕನೇ ಸ್ಥಾನದಲ್ಲಿದೆ. ಇಂದು(ಸೋಮವಾರ) ನಡೆಯುವ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಮುಂಬೈ ಸೆಣಸಾಟ ನಡೆಸಲಿವೆ.


ಹೈದರಾಬಾದ್: ಭಾನುವಾರ ನಡೆದ ಐಪಿಎಲ್(IPL 2025) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್(SRH vs GT) ವಿರುದ್ಧ 7 ವಿಕೆಟ್ ಅಂತರದ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿ(IPL 2025 Points Table)ಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಸೋಲು ಕಂಡ ಹೈದರಾಬಾದ್ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ. ಡೆಲ್ಲಿ ಕ್ಯಾಪಿಟಲ್ಸ್ ಅಗ್ರಸ್ಥಾನದಲ್ಲೇ ಉಳಿದುಕೊಂಡಿದೆ.
ಗುಜರಾತ್ ಗೆಲುವಿನಿಂದ ಈ ಹಿಂದೆ ದ್ವಿತೀಯ ಸ್ಥಾನದಲ್ಲಿದ್ದ ಆರ್‌ಸಿಬಿ ಒಂದು ಸ್ಥಾನ ಕುಸಿತ ಕಂಡು ಮೂರನೇ ಸ್ಥಾನಕ್ಕೆ ಬಂದು ನಿಂತಿದೆ. ಪಂಜಾಬ್ ಕಿಂಗ್ಸ್ ನಾಲ್ಕನೇ ಸ್ಥಾನದಲ್ಲಿದೆ. ಇಂದು(ಸೋಮವಾರ) ನಡೆಯುವ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಮುಂಬೈ ಸೆಣಸಾಟ ನಡೆಸಲಿವೆ. ಉತ್ತಮ ರಮ್‌ರೇಟ್ ಹೊಂದಿರುವ ಆರ್‌ಸಿಬಿ ಇಂದು ಗೆದ್ದರೆ ಅಗ್ರಸ್ಥಾನಕ್ಕೇರಲಿದೆ.
ಇದನ್ನೂ ಓದಿ SRH vs GT: ಸಿರಾಜ್ ದಾಳಿಗೆ ನಲುಗಿದ ಸನ್‌ರೈಸರ್ಸ್; ಗುಜರಾತ್‌ಗೆ 7 ವಿಕೆಟ್ ಗೆಲುವು
ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಈ ಹಿಂದಿನಂತೆ ಆರೆಂಜ್ ಕ್ಯಾಪ್ ನಿಕೋಲಸ್ ಪೂರಣ್ ಬಳಿ, ಪರ್ಪಲ್ ಕ್ಯಾಪ್ ನೂರ್ ಅಹ್ಮದ್ ಬಳಿಯೇ ಉಳಿದುಕೊಂಡಿದೆ.
ನೂತನ ಅಂಕಪಟ್ಟಿ ಹೀಗಿದೆ
IPL 2025 POINTS TABLE. 📈
— Mufaddal Vohra (@mufaddal_vohra) April 6, 2025
- DC continues at the Top. ✅ pic.twitter.com/rxkB7ynUp1
ಗುಜರಾತ್‌ಗೆ 7 ವಿಕೆಟ್ ಗೆಲುವು
ಭಾನುವಾರ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್ ಬ್ಯಾಟಿಂಗ್ ಮರೆತವರಂತೆ ಆಡಿ 8 ವಿಕೆಟ್‌ಗೆ 152 ರನ್ ಬಾರಿಸಿತು. ಜಬಾಬಿತ್ತ ಗುಜರಾತ್ ಆರಂಭಿಕ ಆಘಾತ ಹೊರತಾಗಿಯೂ 16.4 ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 153 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ವೇಗಿ ಮೊಹಮ್ಮದ್ ಸಿರಾಜ್(17 ಕ್ಕೆ 4) ಬಿಗಿ ಬೌಲಿಂಗ್ ದಾಳಿ ಹಾಗೂ ನಾಯಕ ಶುಭಮನ್ ಗಿಲ್(61*) ಬಾರಿಸಿದ ಅಜೇಯ ಅರ್ಧಶತಕ ಗುಜರಾತ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.