ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jasmin Walia: ಹಾರ್ದಿಕ್‌ ಪಾಂಡ್ಯ ಜತೆ ಸುತ್ತಾಟ ನಡೆಸುವ ಜಾಸ್ಮಿನ್ ಯಾರು?

ಇತ್ತೀಚೆಗೆ ಮುಕ್ತಾಯ ಕಂಡಿದ್ದ ಚಾಂಪಿಯನ್ಸ್‌ ಟ್ರೋಫಿ ವೇಳೆಯೂ ಜಾಸ್ಮಿನ್ ಭಾರತದ ಪಂದ್ಯದ ವೇಳೆ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಐಪಿಎಲ್‌ನಲ್ಲಿ ಪಾಂಡ್ಯ ಆಡುವ ಮುಂಬೈ ಪಂದ್ಯದ ವೇಳೆ ಜಾಸ್ಮಿನ್ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಹೀಗಾಗಿ ಈ ಜೋಡಿ ಡೇಟಿಂಗ್‌ ನಡೆಸುತ್ತಿರುವುದು ಖಚಿತ ಎನ್ನುವಂತಿದೆ.

ಹಾರ್ದಿಕ್‌ ಪಾಂಡ್ಯ ಜತೆ ಸುತ್ತಾಟ ನಡೆಸುವ ಜಾಸ್ಮಿನ್ ಯಾರು?

Profile Abhilash BC Mar 31, 2025 4:58 PM

ಮುಂಬಯಿ: ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಅವರು ಕಳೆದ ವರ್ಷ ನತಾಸಾ ಸ್ಟಾಂಕೋವಿಕ್‌ಗೆ ವಿಚ್ಛೇದನ ನೀಡಿದ್ದರು. ಆ ಬಳಿಕ ಪಾಂಡ್ಯ, ಬ್ರಿಟಿಷ್ ಗಾಯಕಿ ಮತ್ತು ಟೆಲಿವಿಷನ್ ತಾರೆ ಜಾಸ್ಮಿನ್ ವಾಲಿಯಾ ಜತೆ ಡೇಟಿಂಗ್‌ ನಡೆಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇತ್ತೀಚೆಗೆ ಮುಕ್ತಾಯ ಕಂಡಿದ್ದ ಚಾಂಪಿಯನ್ಸ್‌ ಟ್ರೋಫಿ ವೇಳೆಯೂ ಜಾಸ್ಮಿನ್ ಭಾರತದ ಪಂದ್ಯದ ವೇಳೆ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಐಪಿಎಲ್‌ನಲ್ಲಿ ಪಾಂಡ್ಯ ಆಡುವ ಮುಂಬೈ ಪಂದ್ಯದ ವೇಳೆ ಜಾಸ್ಮಿನ್ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಹೀಗಾಗಿ ಈ ಜೋಡಿ ಡೇಟಿಂಗ್‌ ನಡೆಸುತ್ತಿರುವುದು ಖಚಿತ ಎನ್ನುವಂತಿದೆ.

ಈ ಹಿಂದೆ ಗ್ರೀಸ್‌ನಲ್ಲಿ ಪಾಂಡ್ಯ ಮತ್ತು ಜಾಸ್ಮಿನ್ ಜತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ಈ ಜೋಡಿ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನುವುದಕ್ಕೆ ಪುಷ್ಠಿ ನೀಡುವಂತೆ ಐಪಿಎಲ್‌ನ ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಆಟಗಾರರ ಕುಟುಂಬ ಸದಸ್ಯರ ಜತೆ ಕುಳಿತು ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸಿದ ವಿಡಿಯೊ ಮತ್ತು ಫೋಟೊಗಳು ವೈಲ್‌ ಆಗಿದೆ. ಜತೆಗೆ ಪಾಂಡ್ಯ ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಮಾಡುತ್ತಿದ್ದ ವೇಳೆ ಹಲವಾರು ಬಾರಿ ಸ್ಟ್ಯಾಂಡ್‌ಗಳಲ್ಲಿ ಹಾರ್ದಿಕ್‌ರನ್ನು ಹುರಿದುಂಬಿಸುತ್ತಿರುವುದು ಕೂಡ ಕಂಡುಬಂದಿದೆ.



ಯಾರು ಈ ಜಾಸ್ಮಿನ್‌?

ಜಾಸ್ಮಿನ್ ವಾಲಿಯಾ ಇಂಗ್ಲೆಂಡ್‌ನ ಎಸೆಕ್ಸ್‌ನಲ್ಲಿ ಜನಿಸಿದರು. ಇವರ ಕುಟುಂಬಸ್ಥರು ಭಾರತೀಯ ಮೂಲದವರು. ಬ್ರಿಟಿಷ್ ರಿಯಾಲಿಟಿ ಟೆಲಿವಿಷನ್ ಶೋ ‘ದಿ ಓನ್ಲಿ ವೇ ಈಸ್ ಎಸೆಕ್ಸ್’ ಮೂಲಕ ಪ್ರಸಿದ್ಧರಾದರು. ಝಾಕ್ ನೈಟ್ ಜತೆಗಿನ ಅವರ ‘ಬಾಂಬ್ ಡಿಗ್ಗಿ’ ಹಾಡು ಭಾರತದಲ್ಲಿ ಅಪಾರ ಜನಪ್ರಿಯತೆ ಗಳಿಸಿತ್ತು. ಬ್ರಿಟನ್ ಮತ್ತು ಭಾರತ ಎರಡೂ ಕಡೆಗಳಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಓವರ್ ರೇಟ್‌ ತಪ್ಪಿಗಾಗಿ ಹಾರ್ದಿಕ್‌ ಪಾಂಡ್ಯ 12 ಲಕ್ಷ ರೂ. ದಂಡದ ಶಿಕ್ಷೆಗೆ ಗುರಿಯಾಗಿದ್ದರು. ಅಚ್ಚರಿ ಎಂದರೆ ಅವರು ಇದೇ ತಪ್ಪಿಗಾಗಿ ಒಂದು ಪಂದ್ಯದ ನಿಷೇಧ ಶಿಕ್ಷೆ ಅನುಭವಿಸಿ ಮರಳಿದ ಪಂದ್ಯಲ್ಲೇ ಮತ್ತೆ ಈ ಶಿಕ್ಷೆಗೆ ಗುರಿಯಾದದ್ದು. ಕಳೆದ ಆವೃತ್ತಿಯಲ್ಲಿ ಮೂರು ಸಲ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಪೂರ್ಣಗೊಳಿಸಲು ವಿಫಲರಾದ ಕಾರಣಕ್ಕೆ ಹಾರ್ದಿಕ್ ಮೇಲೆ ಒಂದು ಪಂದ್ಯದ ನಿಷೇಧ ಹೇರಲಾಗಿತ್ತು. ಹೀಗಾಗಿ ಅವರು ಈ ಬಾರಿಯ ಮೊದಲ ಪಂದ್ಯದಿಂದ ಹೊರಗುಳಿದಿದ್ದರು.