MS Dhoni's stumping: ಫಿಟ್ನೆಸ್ ಮಹಿಮೆ; 0.12 ಸೆಕೆಂಡ್‌ಗಳಲ್ಲಿ ಸ್ಟಂಪಿಂಗ್ ಮಾಡಿದ ಧೋನಿ
CSK vs MI: ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಸರಿ ಸುಮಾರು 6 ವರ್ಷ ಕಳೆದಿದ್ದರೂ ಕೂಡ ವಿಕೆಟ್ ಕೀಪಿಂಗ್‌ನಂತಹ ಅತಿ ಕ್ಲಿಷ್ಟಕರವಾದ ಜವಾಬ್ದಾರಿಯನ್ನು ಈಗಲೂ ಕೂಡ ಅವರು ಐಪಿಎಲ್‌ನಲ್ಲಿ ತಣ್ಣನೆಯ ಮುಗುಳ್ನಗೆಯೊಂದಿಗೆ ನಿರ್ವಹಿಸುತ್ತಿದ್ದಾರೆ.


ಚೆನ್ನೈ: 'ಧೋನಿಗೆ 43 ವರ್ಷ ವಯಸ್ಸಾಯ್ತು. ಕ್ರಿಕೆಟ್‌ನಿಂದ ನಿವೃತ್ತಿಯಾಗುವುದು ಒಳಿತು’ ಎಂಬ ಸಲಹೆಗಳು ಹಲವಾರು ಬಾರಿ ವ್ಯಕ್ತವಾಗುತ್ತಿವೆ. ಆದರೆ, ಅಂತಹ ಟೀಕೆಗಳಿಗೆ ಅವರು ತಮ್ಮ ಆಟದ ಮೂಲಕವೇ ಉತ್ತರಿಸಿದ್ದಾರೆ. ಭಾನುವಾರ ಐಪಿಎಲ್‌ನ ರಾತ್ರಿ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(CSK vs MI) ತಂಡದ ಉಸ್ತುವಾರಿ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav ) ಅವರನ್ನು ಕೇಲವ 0.12ಸೆಕೆಂಡ್ ಗಳಲ್ಲಿ ಕಣ್ಣು ಮಿಟುಕಿಸುವಷ್ಟರಲ್ಲಿ ಸ್ಟಂಪಿಂಗ್(MS Dhoni's stumping) ಮಾಡಿ ತಮ್ಮ ಫಿಟ್ನೆಸ್ ಮುಂದೆ ಯುವ ಆಟಗಾರರೇ ನಾಚುವಂತೆ ಮಾಡಿದ್ದಾರೆ.
ತಮ್ಮ ನಿವೃತ್ತಿ ಬಗ್ಗೆ ಚಿಂತಿಸುತ್ತಿದ್ದವರಿಗೂ ಧೋನಿ ತನ್ನಲ್ಲಿ ಇನ್ನೂ ಆಡುವ ಶಕ್ತಿ ಇದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಸದ್ಯ ಧೋನಿಯ ಈ ಸ್ಟಂಪಿಂಗ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಮುಂಬೈ ತಂಡದ ಬ್ಯಾಟಿಂಗ್ ಇನಿಂಗ್ಸ್‌ನ 11ನೇ ಓವರ್‌ನಲ್ಲಿ ಸೂರ್ಯಕುಮಾರ್ ಅವರು ನೂರ್ ಅಹ್ಮದ್ ಎಸೆದ ಈ ಓವರ್‌ನ ಮೂರನೇ ಎಸೆತವನ್ನು ಮುನ್ನುಗ್ಗಿ ಬಾರಿಸುವ ಯತ್ನದಲ್ಲಿ ವಿಫಲರಾದರು. ಕೀಪಿಂಗ್ ನಡೆಸುತ್ತಿದ್ದ ಧೋನಿ ಚೆಂಡು ಗ್ಲೌಸ್ ಸೇರಿದ್ದೇ ತಡ ಕ್ಷಣ ಮಾತ್ರದಲ್ಲಿ ವಿಕೆಟ್ ಬೇಲ್ಸ್ ಹಾರಿಸಿ ಔಟ್ ಮಾಡಿದರು. ಧೋನಿಯ ಈ ಸ್ಟಂಪಿಂಗ್ ಕಂಡು ಹಿರಿ–ಕಿರಿಯ ಆಟಗಾರರನ್ನು ದಂಗುಬಡಿಸಿದೆ.
ಇದನ್ನೂ ಓದಿ MI vs CSK: ಮುಂಬೈ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್
ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಸರಿ ಸುಮಾರು 6 ವರ್ಷ ಕಳೆದಿದ್ದರೂ ಕೂಡ ವಿಕೆಟ್ ಕೀಪಿಂಗ್‌ನಂತಹ ಅತಿ ಕ್ಲಿಷ್ಟಕರವಾದ ಜವಾಬ್ದಾರಿಯನ್ನು ಐಪಿಎಲ್‌ನಲ್ಲಿ ಈಗಲೂ ಕೂಡ ತಣ್ಣನೆಯ ಮುಗುಳ್ನಗೆಯೊಂದಿಗೆ ನಿರ್ವಹಿಸುತ್ತಿದ್ದಾರೆ. ವಯಸ್ಸು ಹೆಚ್ಚಿದಂತೆ ಅವರ ಕಾಲುಗಳು ಸೋತಿಲ್ಲ. ಬದಲಿಗೆ ಮತ್ತಷ್ಟು ಚುರುಕಾಗಿವೆ. ಅವರ ಕೈಚಳಕ ಮತ್ತು ಹದ್ದಿನ ಕಣ್ಣಿನ ನೋಟಕ್ಕೆ ಹಲವು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರುತ್ತಲೇ ಇದ್ದಾರೆ.
𝙁𝙖𝙨𝙩. 𝙁𝙖𝙨𝙩𝙚𝙧. 𝙈𝙎 𝘿𝙝𝙤𝙣𝙞 🫡
— IndianPremierLeague (@IPL) March 23, 2025
📹 Watch #CSK legend's jaw-dropping reflexes behind the stumps 🔥
Updates ▶ https://t.co/QlMj4G7kV0#TATAIPL | #CSKvMI | @ChennaiIPL | @msdhoni pic.twitter.com/S26cUYzRd8
ಗೆಲುವಿನ ಶುಭಾರಂಭ ಮಾಡಿದ ಚೆನ್ನೈ
ಭಾನುವಾರ ಚೆನ್ನೈಯ ಚೆಪಾಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ 9 ವಿಕೆಟ್‌ಗೆ 155 ರನ್ ಬಾರಿಸಿದರೆ, ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 19.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಗೆಲುವು ಸಾಧಿಸಿತು.
ಆರಂಭಿಕನಾಗಿ ಕಣಕ್ಕಿಳಿದ ರಚಿನ್ ರವೀಂದ್ರ ಅಜೇಯ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರು 4 ಸಿಕ್ಸರ್ ಮತ್ತು 2 ಬೌಂಡರಿ ಬಾರಿಸಿ 65*ಗಳಿಸಿದರು. ಕೊನೆಯ ಹಂತದಲ್ಲಿ ಧೋನಿ ಬ್ಯಾಟಿಂಗ್ ಬಂದರೂ ರನ್ ಗಳಿಸದೆ ಅಜೇಯರಾಗಿ ಉಳಿದರು.