ಸಮುದ್ರದ ಅಲೆಗೆ ಸಿಲುಕಿ ಮುಂಬೈ ಮೂಲದ ವಿದ್ಯಾರ್ಥಿ ಸಾವು, ಮತ್ತೋರ್ವ ನಾಪತ್ತೆ
ಸಮುದ್ರದ ಅಲೆಗೆ ಸಿಲುಕಿದ ಮುಂಬೈ ಮೂಲದ ಇಬ್ಬರು ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮತ್ತೋರ್ವ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ಎನ್ಐಟಿಕೆ ಬಳಿಯ ಕಡಲ ತೀರದಲ್ಲಿ ಜರುಗಿದೆ. ಮುಂಬೈನಲ್ಲಿ ದ್ವಿತೀಯ ಪಿಯುಸಿ ಮುಗಿಸಿರುವ ಧ್ಯಾನ್ ಬಂಜನ್ (18) ಮೃತ ವಿದ್ಯಾರ್ಥಿ. ಎಸ್ಎಸ್ಎಲ್‌ಸಿ ವಿದ್ಯಾರ್ಥಿ ಹನೀಶ್ ಕುಲಾಲ್ (15) ನಾಪತ್ತೆಯಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.