Viral Video: ಎಣ್ಣೆ ಏಟಲ್ಲಿ ರೈಲನ್ನೇ ತಡೆದು ನಿಲ್ಲಿಸಿದ ಭೂಪ! ವಿಡಿಯೋ ನೋಡಿ
ಕುಡಿದ ಮತ್ತಲ್ಲಿ ವ್ಯಕ್ತಿಯೊಬ್ಬ ರೈಲನ್ನೇ ತಡೆದು ನಿಲ್ಲಿಸಿದ್ದಾನೆ. ಬುಧವಾರ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಘಟನೆ ಮುಂಬೈನ ಮಾಹಿಮ್‌ನಲ್ಲಿ ಈ ಘಟನೆ ನಡೆದಿದೆ. ರೈಲು ಹಳಿಗಳ ಮೇಲೆ ಕುಡಿದ ಅಮಲಿನಲ್ಲಿ ವ್ಯಕ್ತಿ ಅರೆಬೆತ್ತಲೆಯಾಗಿ ನಿಂತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ವೈರಲ್ ವಿಡಿಯೋ

ಮುಂಬೈ: ಕಂಠಪೂರ್ತಿ ಕುಡಿದು ಕುಡುಕರು ಮಾಡುವ ಅವಾಂತರಗಳು ಒಂದಿಷ್ಟಲ್ಲ, ಕುಡಿದಾಗ ಅವರು ಏನು ಮಾಡ್ತಾರೆ ಎಂಬ ಅರಿವೇ ಅವರಿಗೆ ಇರೋದಿಲ್ಲ. ಆಗಾಗ ಇವರು ಮಾಡುವ ಅವಾಂತರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಅಂತಹುದೇ ವಿಡಿಯೋ ವೈರಲ್ ಆಗಿದ್ದು, ಕುಡಿದ ಮತ್ತಲ್ಲಿ ವ್ಯಕ್ತಿಯೊಬ್ಬ ರೈಲನ್ನೇ (Train) ತಡೆದು ನಿಲ್ಲಿಸಿದ್ದಾನೆ. ಬುಧವಾರ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಘಟನೆ ಮುಂಬೈನ ಮಾಹಿಮ್‌ನಲ್ಲಿ ಈ ಘಟನೆ ನಡೆದಿದೆ. ರೈಲು ಹಳಿಗಳ ಮೇಲೆ ಕುಡಿದ ಅಮಲಿನಲ್ಲಿ ವ್ಯಕ್ತಿ ಅರೆಬೆತ್ತಲೆಯಾಗಿ ನಿಂತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಮಾಹಿಮ್‌ನಲ್ಲಿ ಸಂಪೂರ್ಣವಾಗಿ ಕುಡಿದಿದ್ದ ವ್ಯಕ್ತಿ ಹಳಿಗಳ ಮೇಲೆ ಕುಳಿತಿರುತ್ತಾನೆ. ಅತ್ತ ರೈಲು ಬರುವುದು ಕಾಣಿಸುತ್ತಲೇ ಹಳಿಯ ಮಧ್ಯದಲ್ಲಿಯೇ ಹೋಗಿ ನಿಲ್ಲುತ್ತಾನೆ. ರೈಲು ಮುಂದೆ ಚಲಿಸದಂತೆ ತಡೆದು ನಿಲ್ಲಿಸಿದ್ದಾನೆ. ಕುಡುಕನ ಈ ಅವಾಂತರದಿಂದ ಮಾಹಿಮ್ ರೈಲು ನಿಲ್ದಾಣದಲ್ಲಿ ರೈಲು ಸೇವೆಗಳಲ್ಲಿ ವಿಳಂಬವಾಯಿತಲ್ಲದೆ, ಇದರಿಂದ ಪ್ರಯಾಣಿಕರು ಕೂಡಾ ತೊಂದರೆಯನ್ನು ಅನುಭವಿಸಿದ್ದಾರೆ. ನಂತರ ರೈಲು ಚಾಲಕ, ಕುಡುಕನನ್ನು ಕೋಲಿನಿಂದ ಹೊಡೆದಿದ್ದಾನೆ. ಆಗ ಕುಡುಕ ಅಲ್ಲಿಂದ ಓಡಿ ಹೋಗಿದ್ದಾನೆ. ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೆಲ್ಲಾ ಎಣ್ಣೆ ಪವರ್ʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆರ್‌ಪಿಎಫ್ ಸಿಬ್ಬಂದಿಗಳು, ಸೆಕ್ಯುರಿಟಿ ಗಾರ್ಡ್ಸ್ ಎಲ್ಲಿ ಹೋಗಿದ್ದಾರೆʼ ಎಂದು ಕೇಳಿದ್ದಾರೆ.
ಮುಂಬೈ ಲೋಕಲ್ ರೈಲು ನಗರದಾದ್ಯಂತ ಪ್ರಯಾಣಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದಾಗ್ಯೂ, ಕೆಲವು ಘಟನೆಗಳು ದೈನಂದಿನ ಕಾರ್ಯಾಚರಣೆಗಳಿಂದಾಗಿ ವ್ಯವಸ್ಥೆಯಲ್ಲಿ ವಿಳಂಬಕ್ಕೆ ಕಾರಣವಾಗಿದೆ. ಮುಂಬೈ ಲೋಕಲ್ ರೈಲಿನ ಪೀಕ್ ಅವರ್‌ನಲ್ಲಿ ಕುಡುಕನ ವರ್ತನೆಯ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಕಳೆದ ಹೋಗಿದ್ದ ಶ್ವಾನವನ್ನು ಮತ್ತೆ ಭೇಟಿಯಾದ ಮಾಲೀಕ; ಭಾವುಕ ಕ್ಷಣದ ವಿಡಿಯೋ ವೈರಲ್
ಇತ್ತೀಚೆಗೆ ಉತ್ತರ ಪ್ರದೇಶದ ಮೀರತ್‌ನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕುಡುಕನೊಬ್ಬ ಗದ್ದಲ ಸೃಷ್ಟಿಸಿದ್ದಾನೆ. ಕಂಠ ಪೂರ್ತಿ ಮದ್ಯ ಸೇವಿಸಿ ಶಾಲೆಗೆ ನುಗ್ಗಿದ ಆತ ಶರ್ಟ್ ಬಿಚ್ಚಿ, ತರಗತಿಗೆ ನುಗ್ಗಿ ಅಲ್ಲಿದ್ದ ವಿದ್ಯಾರ್ಥಿಗಳನ್ನು ಓಡಿಸಿ ಶಿಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. . ಸೊಂಟದಲ್ಲೊಂದು ಮದ್ಯದ ಬಾಟಲಿ ಹಾಗೂ ಕೈಯಲ್ಲಿ ಶರ್ಟ್ ಹಿಡಿದು ಶಾಲೆಗೆ ನುಗ್ಗಿದ್ದ ಕುಡುಕನೊಬ್ಬ ಗದ್ದಲ ಸೃಷ್ಟಿಸಿದ್ದಾನೆ. ಆತ ಸೀದಾ ತರಗತಿಯೊಳಗೆ ನುಗ್ಗಿದ್ದಾನೆ. ಅಲ್ಲಿದ್ದ ಮಕ್ಕಳು ಬೆದರಿ ತರಗತಿಯಿಂದ ಹೊರಗೆ ಓಡಿದ್ದಾರೆ. ಶಿಕ್ಷಕರು ಆತನನನ್ನು ಹೆದರಿಸಿ ಶಾಲೆಯಿಂದ ಓಡಿಸಿದ್ದಾರೆ.