Chikkaballapur News: ಕಲ್ಲೂಡಿ ವಿಎಸ್ಎಸ್ಎನ್ ಸೊಸೈಟಿ ಶಾಸಕರ ಬೆಂಬಲಿಗರ ಪಾಲು
ತೀವ್ರ ಪೈಪೋಟಿಯಿಂದ ಕೂಡಿದ ಕಲ್ಲೂಡಿ ಸೊಸೈಟಿಯ ಚುನಾವಣೆಯಲ್ಲಿ ನಮ್ಮ ಕೆಎಚ್ಪಿ ಬಣದ ಮುಖಂಡರು ಹಾಗೂ ಕಾರ್ಯಕರ್ತರು ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ ಪರಿಣಾಮ ಎಲ್ಲಾ ಹನ್ನೆ ರಡು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.


ಗೌರಿಬಿದನೂರು: ರೈತರಿಗೆ ಜೀವನಾಡಿಯಾಗಿರುವ ವ್ಯವಸಾಯ ಸೇವಾ ಸಹಕಾರ ಸಂಘವನ್ನು ಉಳಿಸಿ ಬೆಳೆಸುವ ಜವಾಬ್ದಾರಿಗಯನ್ನು ಪ್ರಮಾಣಿಕವಾಗಿ ಬದ್ದತೆಯಿಂದ ನೂತನವಾಗಿ ಆಯ್ಕೆಯಾ ಗಿರುವ ನಿರ್ದೇಶಕರು ಕಾರ್ಯ ನಿರ್ವಹಿಸಬೇಕೆಂದು ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಗೌಡರು ಕಿವಿಮಾತು ಹೇಳಿದರು.
ಅವರು ನಗರದ ಸಮೀಪವಿರುವ ಕಲ್ಲೂಡಿ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಹನ್ನೆರಡೂ ಸ್ಥಾನಗಳಲ್ಲಿ ಅಭೂತಪೂರ್ವ ವಿಜಯ ಸಾಧಿಸಿದ ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರ ಬೆಂಬಲಿತ ನಿರ್ದೇಶಕರನ್ನು ಅಭಿನಂದಿಸಿ ಮಾತ ನಾಡುತ್ತಿದ್ದರು.
ಇದನ್ನೂ ಓದಿ: Chitradurga Accident: ಭೀಕರ ಅಪಘಾತ; KSRTC ಬಸ್ ಡಿಕ್ಕಿಯಾಗಿ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಬಲಿ
ತೀವ್ರ ಪೈಪೋಟಿಯಿಂದ ಕೂಡಿದ ಕಲ್ಲೂಡಿ ಸೊಸೈಟಿಯ ಚುನಾವಣೆಯಲ್ಲಿ ನಮ್ಮ ಕೆಎಚ್ಪಿ ಬಣದ ಮುಖಂಡರು ಹಾಗೂ ಕಾರ್ಯಕರ್ತರು ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ ಪರಿಣಾಮ ಎಲ್ಲಾ ಹನ್ನೆರಡು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.
ಮುಖಂಡರಾದ ಸಾಗಾನಹಳ್ಳಿ ಶಿವಕುಮಾರ್ ಮಾತನಾಡುತ್ತಾ ಕಳೆದ ಹತ್ತು ವರ್ಷಗಳಿಂದ ಕಲ್ಲೂಡಿ ಸೊಸೈಟಿಯಲ್ಲಿ ನಡೆದಿರುವ ಪಾರದರ್ಶಕ ಆಡಳಿತ ಹಾಗೂ ಶಾಸಕ ಕೆಎಚ್ ಪುಟ್ಟ ಸ್ವಾಮಿಗೌಡರ ಬೆಂಬಲದಿಂದಾಗಿ ನಾವುಗಳು ಚುನಾವಣೆಯಲ್ಲಿ ಜಯಬೇರಿ ಬಾರಿಸಲು ಸಾಧ್ಯ ವಾಯಿತು ಎಂದರು.
ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ,ಕೃಷಿಕ ಸಮಾಜದ ಅಧ್ಯಕ್ಷ ಪ್ರಭಾಕರರೆಡ್ಡಿ ಮುಖಂಡರಾದ ವೆಂಕಟರಾಮರೆಡ್ಡಿ, ಗಂಗಲಕ್ಷ್ಮಮ್ಮ,ನೂತನ ನಿರ್ದೇಶಕರಾದ ಕೃಷ್ಣಪ್ಪ,ಗಂಗಣ್ಣ,ಬೈಪಾಸ್ ನಾಗರಾಜ್, ವಿಜಯ ರಾಘವ, ಚಿಕ್ಕಪಯ್ಯ, ರಾಮಲಿಂಗಯ್ಯ, ನಾರಾಯಣಪ್ಪ,ಗಂಗಾಧರಯ್ಯ,ವೆಂಕಟಾಚಲಯ್ಯ,ಸುನಂದಮ್ಮ,ಸಾವಿತ್ರಮ್ಮ ಹಾಗೂ ಇನ್ನಿತರರು ಹಾಜರಿದ್ದರು.