Honey trap case: ಹನಿಟ್ರ್ಯಾಪ್ ವಿಚಾರ ಕಾಂಗ್ರೆಸ್ ವರಿಷ್ಠರಿಗೆ ದೂರು ನೀಡುವೆ: ಎಂಎಲ್‌ಸಿ ರಾಜೇಂದ್ರ
Honey trap case: ಸಚಿವ ಕೆ.ಎನ್. ರಾಜಣ್ಣ ಹಿಂದುಳಿದ, ದಲಿತ ನಾಯಕ. ದಲಿತರ ಮೇಲೆ ಈ ರೀತಿ ಆಗೋದು ಒಳ್ಳೆ ಬೆಳವಣಿಗೆ ಅಲ್ಲ. ರಾಜಣ್ಣರ ನೇರ ನುಡಿಯೇ ಟಾರ್ಗೆಟ್‌ಗೆ ಕಾರಣ. ಯಾರ ಮೇಲೂ ದೂರು ಕೊಟ್ಟಿಲ್ಲ. ಹನಿಟ್ರ್ಯಾಪ್ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ, ದೂರು ನೀಡುವೆ ಎಂದು ಎಂಎಲ್‌ಸಿ ರಾಜೇಂದ್ರ ಹೇಳಿದ್ದಾರೆ.


ತುಮಕೂರು: ಹನಿಟ್ರ್ಯಾಪ್ ವಿಚಾರ (Honey trap case) ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸುರ್ಜೇವಾಲ ಹಾಗೂ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ದೂರು ನೀಡುತ್ತೇನೆ ಎಂದು ಎಂಎಲ್‌ಸಿ ರಾಜೇಂದ್ರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಏನೆಲ್ಲಾ ಆಗಿದೆ ಅನ್ನೋದನ್ನು ಗಮನಕ್ಕೆ ತಂದಿದ್ದೇನೆ. ನ್ಯಾಯಯುತವಾಗಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದೇನೆ ಅವರು ಸಹ ದೂರು ಕೊಡಲು ಹೇಳಿದ್ದು, ತನಿಖೆ ಮಾಡಿಸುತ್ತೇನೆ ಅಂತ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಸಚಿವ ಕೆ.ಎನ್. ರಾಜಣ್ಣ ಹಿಂದುಳಿದ, ದಲಿತ ನಾಯಕ. ದಲಿತರ ಮೇಲೆ ಈ ರೀತಿ ಆಗೋದು ಒಳ್ಳೆ ಬೆಳವಣಿಗೆ ಅಲ್ಲ. ರಾಜಣ್ಣರ ನೇರ ನುಡಿಯೇ ಟಾರ್ಗೆಟ್‌ಗೆ ಕಾರಣ. ಯಾರ ಮೇಲೂ ದೂರು ಕೊಟ್ಟಿಲ್ಲ. ಯಾರು ಮಾಡಿದ್ದಾರೋ ಅದು ನಿಲ್ಲಬೇಕು. ಈ ಸಂಬಂಧ ನಾನು ಹೈಕಮಾಂಡ್ ಭೇಟಿ ಮಾಡುತ್ತೇನೆ ಮಲ್ಲಿಕಾರ್ಜುನ್ ಖರ್ಗೆ, ಸುರ್ಜೇವಾಲ, ಕೆ.ಸಿ ವೇಣುಗೋಪಾಲ ಅವರನ್ನು ಭೇಟಿಯಾಗಿ ದೂರು ಕೊಡುತ್ತೇನೆ ಎಂದಿದ್ದಾರೆ.
ಹನಿಟ್ರ್ಯಾಪ್ ವಿಚಾರವಾಗಿ ಬಹಳ ಜನ ಕೋರ್ಟ್‌ನಲ್ಲಿ ಸ್ಟೇ ತಂದಿದ್ದಾರೆ. ರಮೇಶ್ ಜಾರಕಿಹೊಳಿ ಮೇಲೆ ಆಯ್ತು. ರಾಜಕೀಯವಾಗಿ ಏನು ಮಾಡಲಿಕ್ಕೆ ಆಗದಿದ್ದಾಗ, ಈ ರೀತಿ ಕುಗ್ಗಿಸಬೇಕು ಎಂದು ಹೀಗೆ ಮಾಡುತ್ತಾರೆ. ಕಾಂಗ್ರೆಸ್ ಪಕ್ಷವೊಂದೆ ಅಲ್ಲ ಎಲ್ಲ ಪಕ್ಷದಲ್ಲಿಯೂ ಈ ರೀತಿ ಇದೆ ಎಂದರು.
ಹಲೋ ಅಂದರೆ ಆ ಕಡೆಯಿಂದ ಹಲೋ ಅಂತಾರೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಯಿಸಿ, ನಾನು ಏನು ಹೇಳಿದರೂ ಕಷ್ಟವಾಗುತ್ತೆ. ಅದನ್ನು ಅವರನ್ನೇ ಕೇಳಬೇಕು. ಹಲೋ ಅನ್ನೋದು ಜಾಸ್ತಿ ಗೊತ್ತಿರುವ ಅವರನ್ನೇ ಕೇಳಬೇಕು ಎಂದು ಹೇಳಿದ್ದಾರೆ.
KN Rajanna: ಹನಿಟ್ರ್ಯಾಪ್; ಗೃಹ ಮಂತ್ರಿಗೆ ಲಿಖಿತ ದೂರು ಕೊಡ್ತೀನಿ ಎಂದ ಸಚಿವ ಕೆ. ಎನ್. ರಾಜಣ್ಣ
ಲಿಂಕ್ ಕೆನಾಲ್ ವಿಚಾರದಲ್ಲಿ ಬೆದರಿಕೆ ವಿಚಾರ ಸಂಬಂಧ ಮಾತನಾಡಿ, ಶಾಸಕರಿಂದ ಅಲ್ಲ, ಶಾಸಕರ ಕಡೆಯಿಂದ ಎಂದು ಹೇಳಿ ಬೆದರಿಕೆ ಹಾಕಿದ್ದಾರೆ. ಲಿಂಕ್ ಕೆನಾಲ್ ವಿಚಾರದಲ್ಲಿ ಕಳೆದ 15 ದಿನಗಳ ಹಿಂದೆ ನಿರಂತರವಾಗಿ ಕರೆ ಮಾಡುತ್ತಿದ್ದರು. ನಾನು ಗ್ರಾಮ ಪಂಚಾಯಿತಿ ಸದಸ್ಯ, ನಿಮಗೆ ವೋಟ್ ಹಾಕಿದ್ದೇನೆ. ನೀನು, ನಿಮ್ಮಪ್ಪ ಲಿಂಕ್ ಕೆನಾಲ್ ನಿಲ್ಲಿಸುತ್ತೀರಾ, ತಾಕತ್ ಇದ್ದರೆ ಕುಣಿಗಲ್‌ಗೆ ಬನ್ನಿ ಎಂದು ಎರಡ್ಮೂರು ದಿನ ನನಗೆ ಬೆದರಿಕೆ ಹಾಕಿದ್ದರು. ಡಿಜಿಯವರಿಗೆ ಕಂಪ್ಲೆಂಟ್ ಕೊಡುವಾಗ ಇದನ್ನು ಸೇರಿಸುತ್ತೇನೆ ತಿಳಿಸಿದ್ದಾರೆ.