Viral Video: ಬರಿಗೈಯಲ್ಲಿ ಗೊರಿಲ್ಲಾಗೆ ನೀರು ಕುಡಿಸಿದ ವ್ಯಕ್ತಿ; ನೆಟ್ಟಿಗರ ಕಣ್ಣಂಚು ಒದ್ದೆ ಮಾಡಿದ ಈ ವಿಡಿಯೊ ನೀವೂ ನೋಡಿ
ಬಾಯಾರಿಕೆಯಿಂದ ಬಳಲುತ್ತಿದ್ದ ಗೊರಿಲ್ಲಾಗೆ ವ್ಯಕ್ತಿಯೊಬ್ಬರು ಬರಿಗೈಯಲ್ಲಿ ನೀರನ್ನು ಕುಡಿಸಿದ್ದಾನೆ. ಗೊರಿಲ್ಲಾ ಕೂಡ ಆ ವ್ಯಕ್ತಿ ನೀಡಿದ ನೀರನ್ನು ಸಂತೋಷದಿಂದ ಕುಡಿದಿದೆ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದನ್ನು ಕಂಡು ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ.


ನವದೆಹಲಿ: ವ್ಯಕ್ತಿಯೊಬ್ಬ ಬಾಯಾರಿಕೆಯಿಂದ ಬಳಲುತ್ತಿದ್ದ ಗೊರಿಲ್ಲಾಗೆ ತನ್ನ ಬರಿಗೈಯಲ್ಲಿ ನೀರನ್ನು ಕುಡಿಸಿದ್ದಾನೆ. ಈ ಮನಮಿಡಿಯುವ ವಿಡಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಇಲ್ಲಿ ಸಂಕಟದಲ್ಲಿರುವ ಪ್ರಾಣಿಗೆ ಈ ವ್ಯಕ್ತಿ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾನೆ. ಇದನ್ನು ಕಂಡು ನೆಟ್ಟಿಗರು ಆ ವ್ಯಕ್ತಿಯನ್ನು ಹೊಗಳಿದ್ದಾರೆ. ಆಗಾಗ್ಗೆ ವನ್ಯಜೀವಿ ರೀಲ್‍ಗಳನ್ನು ಹಂಚಿಕೊಳ್ಳುವ 'ಅಮೇಜಿಂಗ್ ನೇಚರ್' ಎಂಬ ಸೋಶಿಯಲ್ ಮೀಡಿಯಾ ಪುಟದಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ವೈರಲ್ ಆದ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ನದಿಯಿಂದ ಸ್ವಲ್ಪ ನೀರನ್ನು ತನ್ನ ಕೈಗಳಿಂದ ತೆಗೆದುಕೊಂಡು ಗೊರಿಲ್ಲಾಗೆ ಕುಡಿಸಿದ್ದಾನೆ. ಗೊರಿಲ್ಲಾ ಕೂಡ ಆ ವ್ಯಕ್ತಿ ನೀಡಿದ ನೀರನ್ನು ಸಂತೋಷದಿಂದ ಕುಡಿದಿದೆ. ಹಾಗೇ ಆ ವ್ಯಕ್ತಿ ಪ್ರೀತಿಯಿಂದ ಗೊರಿಲ್ಲಾ ಹಣೆಗೆ ಮುತ್ತನ್ನು ನೀಡಿದ್ದಾನೆ. ವ್ಯಕ್ತಿ ಹಾಗೂ ಗೊರಿಲ್ಲಾ ನಡುವಿನ ವಿಶ್ವಾಸ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.
ವ್ಯಕ್ತಿ ಗೊರಿಲ್ಲಾಗೆ ನೀರು ಕುಡಿಸಿದ ವಿಡಿಯೊ ಇಲ್ಲಿದೆ ನೋಡಿ...
I wish the whole world was like this ♥️ pic.twitter.com/YjWcxM5XlX
— Nature is Amazing ☘️ (@AMAZlNGNATURE) March 26, 2025
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ವ್ಯಕ್ತಿ, "ಆಹಾ, ಎಂತಹ ಸುಂದರ ಕ್ಷಣ! ಇದು ನನ್ನ ಹೃದಯವನ್ನು ಕರಗಿಸಿದೆ ಮತ್ತು ನನ್ನ ಕಣ್ಣುಗಳಲ್ಲಿ ಕಣ್ಣೀರನ್ನು ತರಿಸಿದೆ" ಎಂದಿದ್ದಾರೆ. ಇನ್ನೊಬ್ಬರು, "ಓಹ್, ಮಾನವರು ಮತ್ತು ಪ್ರಾಣಿಗಳ ನಡುವಿನ ಬೆಚ್ಚಗಿನ ಬಂಧವು ತುಂಬಾ ಸುಂದರವಾಗಿದೆ." ಎಂದು ಬರೆದಿದ್ದಾರೆ. "ಇದಕ್ಕಾಗಿಯೇ ನಾನು ಯಾವಾಗಲೂ ಇಂಟರ್‌ನೆಟ್‌ಗಾಗಿ ರಿಚಾರ್ಜ್ ಮಾಡುತ್ತೇನೆ" ಎಂದು ಒಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ, ಇನ್ನೊಬ್ಬರು "ಈ ರೀತಿಯ ವಿಷಯಗಳು ಮತ್ತು ಈ ರೀತಿಯ ಜನರು ಕೆಲವೊಮ್ಮೆ ಜಗತ್ತು ತುಂಬಾ ಅದ್ಭುತವಾಗಿದೆ ಎಂಬ ಮನೋಭಾವವನ್ನು ತುಂಬುತ್ತಾರೆ" ಎಂದು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ನೆಚ್ಚಿನ ಶಿಕ್ಷಕನಿಗೆ ವಿದಾಯ ಹೇಳಲು ಈ ವಿದ್ಯಾರ್ಥಿಗಳು ಮಾಡಿದ್ದೇನು? ಹೃದಯಸ್ಪರ್ಶಿ ವಿಡಿಯೊ ವೈರಲ್
ಪ್ರಾಣಿಪ್ರಿಯರು ಈ ರೀತಿ ಕೈಗಳಿಂದ ಪ್ರಾಣಿಗಳಿಗೆ ಆಹಾರ ನೀಡುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ 'ನೇಚರ್ ಈಸ್ ಅಮೇಜಿಂಗ್' ಖಾತೆಯಿಂದ ಪೋಸ್ಟ್ ಮಾಡಲಾದ ವಿಡಿಯೊವೊಂದರಲ್ಲಿ, ವ್ಯಕ್ತಿಯು ತನ್ನ ಕೈಗಳಿಂದ ಮೊಸಳೆಗೆ ಆಹಾರವನ್ನು ನೀಡಿದ್ದಾನೆ. ಇದನ್ನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಮೊಸಳೆ ಕೂಡ ಯಾವುದೇ ಅಂಜಿಕೆ ಇಲ್ಲದೇ ಅವನ ಕೈಯಲ್ಲಿದ್ದ ಆಹಾರವನ್ನು ತಿನ್ನಲು ನದಿಯ ದಡಕ್ಕೆ ಬಂದಿದೆ. ಆಹಾರ ತಿಂದ ಮೊಸಳೆ ಅವನ ಮೇಲೆ ಆಕ್ರಮಣ ಮಾಡದೆ ಹೋಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಅವನ ಧೈರ್ಯ ನೋಡಿ ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.