Viral Video: ವಿಡಿಯೊ ಕಾಲ್‌ನಲ್ಲೇ ಗಂಡನಿಗೆ ಕುಂಭಮೇಳದಲಿ ಪುಣ್ಯಸ್ನಾನ! ವಿಚಿತ್ರ ವಿಡಿಯೊ ವೈರಲ್
ಪ್ರಯಾಗ್‍ರಾಜ್‍ನಲ್ಲಿ ಮಹಿಳೆಯೊಬ್ಬಳು ತನ್ನ ಮೊಬೈಲ್ ಫೋನ್ ಅನ್ನು ಪವಿತ್ರ ನೀರಿನಲ್ಲಿ ಮುಳುಗಿಸಿದ್ದು, ಆ ವೇಳೆ ಆಕೆಯ ಪತಿ ಆ ಮೊಬೈಲ್‍ನಲ್ಲಿ ವಿಡಿಯೊ ಕಾಲ್‍ನಲ್ಲಿದ್ದ ಎನ್ನಲಾಗಿದೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿದೆ.


ಲಖನೌ: ಮಹಾಕುಂಭಮೇಳ(Mahakumbh 2025)ದಲ್ಲಿ ಕೆಲವರು ತಮ್ಮ ಮುದ್ದಿನ ಸಾಕು ಪ್ರಾಣಿಗಳನ್ನು ಹಾಗೂ ತಮ್ಮ ಪ್ರೀತಿಪಾತ್ರರ ಪೋಟೊಗಳನ್ನು ತಂದು ಪವಿತ್ರ ನದಿಯಲ್ಲಿ ಪುಣ್ಯಸ್ನಾನ ಮಾಡಿಸಿದ ಘಟನೆ ಸಾಕಷ್ಟು ವೈರಲ್ ಆಗಿತ್ತು. ಇದೀಗ ಪ್ರಯಾಗ್‍ರಾಜ್‍ನಲ್ಲಿ ಮಹಿಳೆಯೊಬ್ಬಳು ತನ್ನ ಮೊಬೈಲ್ ಫೋನ್ ಅನ್ನು ಪವಿತ್ರ ನೀರಿನಲ್ಲಿ ಮುಳುಗಿಸಿದ್ದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಆಕೆ ತ್ರಿವೇಣಿ ಸಂಗಮದಲ್ಲಿ ಮೊಬೈಲ್ ಅನ್ನು ಮುಳುಗಿಸಿದಾಗ ಅವಳ ಪತಿ ವಿಡಿಯೊ ಕಾಲ್‍ನಲ್ಲಿದ್ದ ಎಂದು ಹೇಳಲಾಗಿದೆ. ವಿಡಿಯೊ ನೋಡಿದ ನೆಟ್ಟಿಗರು ಮೊಬೈಲ್‌ನ ಪಾಪ ಕಳೆಯಿತೇ ಅಥವಾ ಪತಿಯ ಪಾಪ ತೊಳೆದು ಹೋಯಿತೇ ಎಂದು ಕಿಚಾಯಿಸಿದ್ದಾರೆ.
ಈ ಮಹಿಳೆ ತನ್ನ ಪತಿಗೆ ವಿಡಿಯೊ ಕಾಲ್ ಮಾಡಿ ನಂತರ ನದಿಯಲ್ಲಿ ಫೋನ್ ಅನ್ನು ಮುಳುಗಿಸಿದ್ದಾಳೆ ಎನ್ನಲಾಗಿದೆ. ಆ ಮೂಲಕ ಮೊಬೈಲ್‌ನಲ್ಲಿ ವಿಡಿಯೋ ಕಾಲ್ ಮೂಲಕವೇ ಅವಳು ತನ್ನ ಗಂಡನಿಗೆ ಈ ರೀತಿಯಲ್ಲಿ ಪವಿತ್ರ ಸ್ನಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾಳಂತೆ! ಸ್ವಾತಿ ಚೌಹಾಣ್ ಎಂಬ ಇನ್‌ಸ್ಟಾಗ್ರಾಮರ್ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾಳೆ. ಈ ವಿಡಿಯೊದಲ್ಲಿ ಮಹಿಳೆ ಫೋನ್ ಅನ್ನು ನೀರಿನಲ್ಲಿ ಮುಳುಗಿಸಿದ್ದನ್ನು ಕಂಡು ನೆಟ್ಟಿಗರು ಇದನ್ನು ಮಹಿಳೆಯ ಮೂರ್ಖತನ ಎಂದು ಹೇಳಿದ್ದಾರೆ
ಸದ್ಯ ಈ ವಿಡಿಯೊ ವೈರಲ್ ಆಗಿದ್ದು 24,000 ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮುಖದಲ್ಲಿ ನಗುವನ್ನು ಮೂಡಿಸಿದೆ. ಈ ವಿಡಿಯೊಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು,ಈ ಮಹಿಳೆ ತನ್ನ ಫೋನ್ ಅನ್ನು ನೀರಿನಲ್ಲಿ ಮುಳುಗಿಸಲು ಹೇಗೆ ಧೈರ್ಯ ಮಾಡಿದ್ದಾಳೆ ಎಂದು ಆಶ್ಚರ್ಯಪಟ್ಟಿದ್ದಾರೆ.
"ಅವಳ ಫೋನ್ ವಾಟರ್ ಪ್ರೂಫ್ ಆಗಿದೆಯೇ" ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬರು, "ಅವಳಿಗೆ ಹ್ಯಾಟ್ಸ್ ಆಫ್” ಎಂದಿದ್ದಾರೆ. ಮತ್ತೊಬ್ಬರು, “ಇದು ಭಾರತೀಯ ಮಹಿಳೆ ಮತ್ತು ಅವಳಿಗೆ ಗಂಡನ ಮೇಲಿನ ಪ್ರೀತಿಯನ್ನು ತೋರಿಸುತ್ತದೆ" ಎಂದು ಹೇಳಿದ್ದಾರೆ. ಕೆಲವು ನೆಟ್ಟಿಗರು ಕಾಮೆಂಟ್ ವಿಭಾಗಗಳಲ್ಲಿ ಮೀಮ್‍ಗಳನ್ನು ಬಿಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಮೊಬೈಲ್‌ಗೂ ಪುಣ್ಯಸ್ನಾನ! ತ್ರಿವೇಣಿ ಸಂಗಮದಲ್ಲಿ ಕಂಡು ಬಂತು ವಿಚಿತ್ರ ದೃಶ್ಯ- ವಿಡಿಯೊ ವೈರಲ್
ಕುಂಭಮೇಳದಲ್ಲಿ ಇಂತಹ ವಿಲಕ್ಷಣ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ವ್ಯಕ್ತಿಯೊಬ್ಬ ಮಾಡಿದ ಕೃತ್ಯವು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆ ವ್ಯಕ್ತಿಯು ತನ್ನ ಮೊಬೈಲ್ ಫೋನ್ ಅನ್ನು ತ್ರಿವೇಣಿ ಸಂಗಮದ ಪವಿತ್ರ ನೀರಿನಲ್ಲಿ ಮುಳುಗಿಸಿದ್ದಾನೆ ಮತ್ತು ತನ್ನ ಫೋನ್ ಕೂಡ 'ಮೋಕ್ಷ'ಕ್ಕೆ ಅರ್ಹವಾಗಿದೆ ಎಂದು ಹೇಳಿಕೊಂಡಿದ್ದಾನೆ. ಈ ಘಟನೆಯ ವಿಡಿಯೊ ಕೂಡ ವೈರಲ್ ಆಗಿತ್ತು. ತಾನು ಪವಿತ್ರ ಸ್ನಾನ ಮಾಡುವ ಜೊತೆಗೆ ತನ್ನ ಮೊಬೈಲ್ ಅನ್ನು ನೀರಿನಲ್ಲಿ ಮುಳುಗಿಸಿ ತೆಗೆದಿದ್ದಾನೆ. ಮೊಬೈಲ್ ನಿತ್ಯ ಜೀವನದಲ್ಲಿ ಅತೀ ಹೆಚ್ಚು ಬಳಸುವ ಸಾಧನವಾಗಿದ್ದು ಇದರಲ್ಲಿ ಒಳಿತು ಇದೆ, ಕೆಡುಕೂ ಇದೆ. ಹಾಗಾಗಿ ಪವಿತ್ರ ನದಿಯಲ್ಲಿ ತೀರ್ಥ ಸ್ನಾನ ಮಾಡಿಸಿದರೆ ಪಾಪ ಕಾರ್ಯಗಳಿಗೆ ಮುಕ್ತಿ ಸಿಗಲಿದೆ ಎನ್ನುವ ಯೋಚನೆಯ ಮೂಲಕ ಮೊಬೈಲ್‌ಗೂ ತೀರ್ಥಸ್ನಾನ ಮಾಡಿಸಿದ್ದಾನೆ.