Viral Video: ಮೊಬೈಲ್‌ಗೂ ಪುಣ್ಯಸ್ನಾನ! ತ್ರಿವೇಣಿ ಸಂಗಮದಲ್ಲಿ ಕಂಡು ಬಂತು ವಿಚಿತ್ರ ದೃಶ್ಯ- ವಿಡಿಯೊ ವೈರಲ್
ಮಹಾ ಕುಂಭಮೇಳದಲ್ಲಿ ಭಕ್ತಿ ಭಾವದಿಂದ ಕೊಟ್ಯಂತರ ಜನ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಈ ನಡುವೆ ಅದೆಷ್ಟೋ ಚಿತ್ರ ವಿಚಿತ್ರ ಘಟನೆಗಳಿಗೂ ಕುಂಭಮೇಳ ಸಾಕ್ಷಿಯಾಗಿದೆ. ಇದೀ ವ್ಯಕ್ತಿಯೋರ್ವ ತನ್ನ ಮೊಬೈಲ್‌ಗೂ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿಸುವ ಮೂಲಕ ಸುದ್ದಿಯಾಗಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

kumbh mela mobile viral

ಲಖನೌ: ಪ್ರಯಾಗ್‌ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ದೇಶ ವಿದೇಶಗಳಿಂದ ಜನಸಾಗರವೇ ಹರಿದು ಬರುತ್ತಿದ್ದು ತ್ರಿವೇಣಿ ಸಂಗಮದ ಪುಣ್ಯಸ್ನಾನದ ಮೂಲಕ ಪಾಪ ಕರ್ಮಗಳಿಂದ ಭಕ್ತರು ಪುನೀತರಾಗುತ್ತಿದ್ದಾರೆ. ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಕಾರ್ಯಕ್ರಮವೆಂದು ಆರಾಧಿಸಲ್ಪಟ್ಟ ಈ ಉತ್ಸವದಲ್ಲಿ ಭಕ್ತರು ಪವಿತ್ರ ನದಿಯ ಸಂಗಮದಲ್ಲಿ ತೀರ್ಥ ಸ್ನಾನ ಮಾಡುತ್ತಿದ್ದು, ಭಕ್ತಾಧಿಗಳು ತಮ್ಮ ಕುಟುಂಬದ ಜೊತೆ, ಸ್ನೇಹಿತರ ಜೊತೆ, ತಮ್ಮ ಸಾಕು ಪ್ರಾಣಿಗಳ ಜೊತೆ ತೀರ್ಥ ಸ್ನಾನಮಾಡುವ ವಿಡಿಯೊ ಹಂಚಿಕೊಳುತ್ತಿದ್ದಾರೆ. ಇಲ್ಲೊಬ್ಬ ವ್ಯಕ್ತಿ ಸ್ವತಃ ಮಾತ್ರವಲ್ಲದೆ ತನ್ನ ಮೊಬೈಲ್ ಗೂ ತೀರ್ಥ ಸ್ನಾನ ಮಾಡಿಸಿದ್ದಾನೆ. ತ್ರಿವೇಣಿ ಸಂಗಮದ ಈ ಪವಿತ್ರ ನದಿಯಲ್ಲಿ ಮೊಬೈಲ್ ಅನ್ನು ಮುಳುಗಿಸಿ ತೆಗೆದಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್(Viral Video) ಆಗಿದೆ.
ವಿಡಿಯೊದಲ್ಲಿ ಭಕ್ತರೊಬ್ಬರು ತಾನು ಪವಿತ್ರ ಸ್ನಾನ ಮಾಡುವ ಜೊತೆಗೆ ತನ್ನ ಮೊಬೈಲ್ ಅನ್ನು ನೀರಿನಲ್ಲಿ ಮುಳುಗಿಸಿ ತೆಗೆಯುವ ದೃಶ್ಯ ಕಾಣಬಹುದು. ಮೊಬೈಲ್ ಅನ್ನು ನಿತ್ಯ ಜೀವನದಲ್ಲಿ ಅತೀ ಹೆಚ್ಚು ಬಳಸುವ ಸಾಧನವಾಗಿದ್ದು ಇದರಲ್ಲಿ ಒಳಿತು ಇದೆ, ಕೆಡುಕು ಇದೆ. ಹಾಗಾಗಿ ಪವಿತ್ರ ನದಿಯಲ್ಲಿ ತೀರ್ಥ ಸ್ನಾನ ಮಾಡಿಸಿದರೆ ಪಾಪ ಕಾರ್ಯಗಳಿಗೆ ಮುಕ್ತಿ ಸಿಗಲಿದೆ ಎನ್ನುವ ಯೋಚನೆಯ ಮೂಲಕ ಮೊಬೈಲ್‌ಗೂ ತೀರ್ಥಸ್ನಾನ ಮಾಡಿಸಿದ್ದಾನೆ. ಯುವಕನ ಈ ನಡೆಯ ಬಗ್ಗೆ ನೆಟ್ಟಿಗರು ಕೂಡ ನಾನಾ ರೀತಿಯ ಕಮೆಂಟ್ ಹಾಕಿದ್ದು ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.
ಇನ್ ಸ್ಟ್ರಾಗ್ರಾಂನ badassbaniya_ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದು 2.8 ಲಕ್ಷಕ್ಕೂ ಅಧಿಕ ವೀವ್ಸ್ ಗಳಿಸಿದೆ. ವೈರಲ್ ವಿಡಿಯೊ ಕಂಡ ನೆಟ್ಟಿಗರು ನಾನಾ ಪ್ರತಿಕ್ರಿಯೆ ನೀಡಿದ್ದು ಬಳಕೆದಾ ರರೊಬ್ಬರು ಪಾಪ ಪುಣ್ಯ ಎಲ್ಲವೂ ನಾವು ಮಾಡುವ ಕಾರ್ಯದಿಂದ ನಿರ್ಧಾರ ವಾಗುವುದು ಎಂದು ಕಮೆಂಟ್ ಮಾಡಿದ್ದಾರೆ. ಮೊತ್ತೊಬ್ಬರು ಯುವಕನ ಈ ಹುಚ್ಚು ವರ್ತನೆ ವೈರಲ್ ಆಗಲು ಏನೂ ಬೇಕಾದರೂ ಮಾಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.ಇನ್ನೊಬ್ಬ ಬಳಕೆದಾರ ಮೊಬೈಲ್ ಸರಿ ಇದೆಯೇ? ಮೊಬೈಲ್ ನ ಪಾಪ ಕಾರ್ಯ ಕಳೆಯಿತು ಎಂದು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ: Viral Video: ಮುದ್ದಾಗಿ ಆಟ ಆಡ್ತಾ ಏಕಾಏಕಿ ಅಟ್ಯಾಕ್ ಮಾಡಿದ ಹಸ್ಕಿ; ಇಲ್ಲಿದೆ ಶಾಕಿಂಗ್ ವಿಡಿಯೊ!
ಇತ್ತೀಚೆಗೆ ಪವಿತ್ರ ಸಂಗಮದಲ್ಲಿ ವ್ಯಕ್ತಿವೈಯೊಬ್ಬ ತನ್ನ ಸಾಕು ನಾಯಿ ಯೊಂದಿಗೆ ಪವಿತ್ರ ಸ್ನಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ಗಂಗಾ, ಯಮುನಾ ಮತ್ತು ಸರಸ್ವತಿ ಎಂಬ ಮೂರು ಪವಿತ್ರ ನದಿಗಳ ಸಂಗಮದಲ್ಲಿ ವ್ಯಕ್ತಿಯೊಬ್ಬ ಮೊಬೈಲ್ ಮುಳುಗಿಸಿ ತಾನು ತೀರ್ಥ ಸ್ನಾನ ಮಾಡುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.