ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Special: ಸಿಎಂ ವಿರುದ್ದ ರಣವ್ಯೂಹಕ್ಕೆ ರಾಜಭವನ ದುರ್ಬಳಕೆ ?

ರಾಜ್ಯದ ಹಿತದೃಷ್ಟಿಯಿಂದ ಉಭಯ ಸದನದಲ್ಲಿ ಜಾರಿಗೊಳಿಸಿರುವ ಹತ್ತಾರು ವಿಧೇಯಕಗಳನ್ನು ಸಹಿ ಮಾಡದೇ ತನ್ನ ಬಳಿ ಇಟ್ಟುಕೊಂಡಿರುವ, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಪಾಸಿಕ್ಯೂಷನ್‌ ಗೆ ಅನುಮತಿ ನೀಡಲು ವರ್ಷಗಳಿಂದ ಮೀನಮೇಷ ಎಣಿಸುತ್ತಿರುವ ರಾಜ್ಯಪಾಲರು, ಮುಖ್ಯಮಂತ್ರಿಗಳ ವಿಷಯದಲ್ಲಿ ಮಾತ್ರ ಮಿಂಚಿನ ವೇಗದಲ್ಲಿ ಕಾರ್ಯತತ್ಪರರಾಗುತ್ತಿರುವುದು ಅನೇಕ ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.

ಸಿಎಂ ವಿರುದ್ದ ರಣವ್ಯೂಹಕ್ಕೆ ರಾಜಭವನ ದುರ್ಬಳಕೆ ?

Profile Ashok Nayak Apr 11, 2025 10:11 AM

ದಾಖಲೆಯಿಲ್ಲದ, ದಶಕದ ಹಿಂದಿನ ಪ್ರಕರಣದ ಮೇಲೆ ಪ್ರಾಸಿಕ್ಯೂಷನ್ ಅನುಮತಿ: ತಜ್ಞರ ಜಿಜ್ಞಾಸೆ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ್ದ ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಆರೋಪದ ಬಳಿಕ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಕ್‌ಬ್ಯಾಕ್ ಆರೋಪ ಕೇಳಿಬಂದಿದೆ. ಈ ರೀತಿ ವ್ಯವಸ್ಥಿತ ಸರಣಿ ಆರೋಪಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈ ಎಲ್ಲ ಆರೋಪಗಳ ಹಿಂದೆ ರಾಜಕೀಯ ಕಮಟು ವಾಸನೆ ಇದೆ ಎನ್ನುವ ಅನುಮಾನ ಮೂಡುವುದು ಸಹಜ. ರಾಜಕೀಯದಲ್ಲಿರುವ ಯಾವುದೇ ವ್ಯಕ್ತಿಯ ವಿರುದ್ಧ ಈ ರೀತಿಯ ಆರೋಪಗಳು ಬರುವುದು ಸಹಜ. ಆದರೆ ಆಧಾರವೇ ನೀಡದ ಎಲ್ಲ ಆರೋಪಗಳಿಗೂ ರಾಜಭವನದ ಕದ ಸದಾ ತೆರೆದಿರುವುದು ಇದೀಗ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಐದಾರು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೊದಲ ಆರೋಪ ಕೇಳಿಬಂದಿದ್ದು ಕಳೆದ ಕೆಲ ತಿಂಗಳ ಹಿಂದೆಯೇ.

ಅದೂ ಸಹ, ಅವರು ಅಧಿಕಾರದಲ್ಲಿರದ ವೇಳೆಯಲ್ಲಿ ಅವರ ಪತ್ನಿ ಪಾರ್ವತಿ ಅವರಿಗೆ ಹಂಚಿಕೆ ಯಾದ ನಿವೇಶನ ವಿಷಯಕೆ. ಸಹೋದರದಿಂದ ಪಡೆದಿರುವ ಜಮೀನನ್ನು ಮುಡಾ ವಶಪಡಿಸಿ ಕೊಂಡಿದ್ದರಿಂದ ಕಾನೂನುಬದ್ಧವಾಗಿ ನಿವೇಶನಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕಾನೂನು ಮೀರಿ ನಿವೇಶನಗಳನ್ನು ಅಧಿಕಾರಿಗಳು ಹಂಚಿದ್ದಾರೆ ಎನ್ನುವುದು ಸ್ಪಷ್ಟವಾಗಿದ್ದರೂ, ಅದನ್ನು ಸಿದ್ದರಾಮಯ್ಯ ತಲೆಗೆ ಕಟ್ಟುವ ಪ್ರಯತ್ನವಾದವು.

ಈ ಪ್ರಕರಣದಲ್ಲಿ ಸಿಎಂಗೆ ಕ್ಲೀನ್‌ ಚಿಟ್ ಸಿಕ್ಕರೂ, ಈಗಲೂ ಅದೇ ವಿಷಯ ಮುಂದಿಟ್ಟುಕೊಂಡು ರಾಜಕೀಯ ವಿರೋಧಿಗಳು ಆರೋಪಿಸುತ್ತಿದ್ದಾರೆ. ಇದೀಗ ಸಾಮಾಜಿಕ ಕಾರ್ಯಕರ್ತರೊಬ್ಬರು ಗಣಿ ಲೈಸೆನ್ಸ್ ನವೀಕರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 500 ಕೋಟಿ ಕಿಕ್ ಬ್ಯಾಕ್ ಪಡೆದಿzರೆ ಎಂದು ಆರೋಪಿಸಿ ರಾಜ್ಯಪಾಲರ ಬಳಿ ದೂರು ದಾಖಲಿಸಿದ್ದಾರೆ. ಇದೀಗ ದೂರನ್ನು ದಾಖಲಿಸಿ ಕೊಂಡು ಕಾನೂನು ವಿಭಾಗಕೆ ರಾಜ್ಯಪಾಲರು ರವಾನಿಸಿದ್ದಾರೆ.

ಇದನ್ನೂ ಓದಿ: Shishir Hegde Column: ಕೊಕ್ಕೊಕ್ಕೋ ಕೋಳಿ: ಒಂಚೂರು ಕಥೆ ಕೇಳಿ

ರಾಜ್ಯದ ಹಿತದೃಷ್ಟಿಯಿಂದ ಉಭಯ ಸದನದಲ್ಲಿ ಜಾರಿಗೊಳಿಸಿರುವ ಹತ್ತಾರು ವಿಧೇಯಕಗಳನ್ನು ಸಹಿ ಮಾಡದೇ ತನ್ನ ಬಳಿ ಇಟ್ಟುಕೊಂಡಿರುವ, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಪಾಸಿಕ್ಯೂಷನ್‌ಗೆ ಅನುಮತಿ ನೀಡಲು ವರ್ಷಗಳಿಂದ ಮೀನಮೇಷ ಎಣಿಸುತ್ತಿರುವ ರಾಜ್ಯಪಾಲರು, ಮುಖ್ಯಮಂತ್ರಿಗಳ ವಿಷಯದಲ್ಲಿ ಮಾತ್ರ ಮಿಂಚಿನ ವೇಗದಲ್ಲಿ ಕಾರ್ಯತತ್ಪರರಾಗುತ್ತಿರುವುದು ಅನೇಕ ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.

ಆದರೆ ಸಿದ್ದರಾಮಯ್ಯ ಅವರ ವಿರುದ್ಧ ಯಾರೇ ದೂರು ಕೊಟ್ಟರೂ, ರಾಜ್ಯಪಾಲರು ದಿನ ಕಳೆಯುವುದರೊಳಗೆ ಕಾನೂನು ವಿಭಾಗಕ್ಕೆ ಕಳುಹಿಸಿಕೊಟ್ಟಿದ್ದಾರೆ. ಇತರೆ ಪ್ರಕರಣದ ವಿಲೇವಾರಿ ಮಾಡಲು ಸಮಯದ ಅಭಾವವಿದ್ದರೂ ಸಿದ್ದರಾಮಯ್ಯ ಅವರ ವಿರುದ್ಧದ ಯಾವುದೇ ಪ್ರಕರಣದ ಬಂದರೂ ತ್ವರಿತ ಗತಿಯಲ್ಲಿ ಪರಿಶೀಲಿಸುತ್ತಿರುವುದರ ಹಿಂದೆ ರಾಜಕೀಯ ವಾಸನೆಯ ಘಾಟು ಬಡೆಯುತ್ತಿದೆ.

ಹಾಗೇ ನೋಡಿದರೆ, ಥಾವರ್ ಚಂದ್ ಗೆಹ್ಲೋಥ್ ಅವರ ಬಳಿ ಸಿದ್ದರಾಮಯ್ಯ ವಿರುದ್ಧ ಬಂದಿರು ವುದು ಎರಡು ಕೇಸ್‌ಗಳು. ಈ ಎರಡೂ ಪ್ರಕರಣಗಳು ನಡೆದೇ ಸುಮಾರು ಎಂಟತ್ತು ವರ್ಷಗಳು ಕಳೆದಿವೆ. ಹೀಗಿರುವಾಗ ದಶಕದ ಹಿಂದಿನ ಪ್ರಕರಣಗಳ ಇಷ್ಟೇಕೆ ಆಸಕ್ತಿ ಎನ್ನುವುದು ಹಲವರ ಪ್ರಶೆಯಾಗಿದೆ. ಇದರೊಂದಿಗೆ ಸಿದ್ದರಾಮಯ್ಯ ವಿರುದ್ಧ ಯಾರೇ ದೂರು ನೀಡಬೇಕೆಂದ ರೂ ತಕ್ಷಣ ಸಮಯ ಸಿಗುವುದಷ್ಟೇ ಅಲ್ಲದೇ, ಗಂಟೆಗಟ್ಟಲೇ ಅವರೊಂದಿಗೆ ರಾಜ್ಯಪಾಲರು ಸಮಾಲೋಚನೆ ಮಾಡುತ್ತಿದ್ದಾರೆ. ಗೆಹ್ಲೋಥ್ ಅವರ ಈ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಂವಿಧಾನ ಹುದ್ದೆಯಾಗಿರುವ ರಾಜ್ಯಪಾಲರ ಹುದ್ದೆಯನ್ನು ರಾಜಕೀಯ ಕಾರಣಕ್ಕೆ

ಬಳಸಿಕೊಳ್ಳಲಾಗುತ್ತಿದೆ ಎನ್ನುವ ಅನುಮಾನ ಬರುವುದು ಸಾಮಾನ್ಯ. ಈ ಹಿಂದೆ, ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ ದಿನವೇ, ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟೀಸ್ ನೀಡಿದ್ದರು.

500 ಕೋಟಿ ಆರೋಪಕೆ ದಾಖಲೆ ಎಲ್ಲಿದೆ?: ಮುಡಾ ಪ್ರಕರಣದಲ್ಲಿ ಆರಂಭದಲ್ಲಿ ಸ್ನೇಹಮಯಿ ಕೃಷ್ಣ, ರಾಜ್ಯಪಾಲರು, ಇ.ಡಿ. ಸೇರಿದಂತೆ ಬಿಜೆಪಿಗರು ತೋರಿದ ಆಸಕ್ತಿ ರಾಜಕೀಯ ಕೆಸರೆರಚಾಟ ಮುಗಿಯುತ್ತಿದ್ದಂತೆ ಈಗ ಮರೆಯಾಗಿದೆ. ಇದೀಗ ಹೊಸದಾಗಿ 10 ವರ್ಷದ ಹಿಂದೆ ನಡೆದಿದೆ ಎನ್ನಲಾದ ಕಿಕ್ ಬ್ಯಾಕ್ ಆರೋಪ ಮುನ್ನಲೆಗೆ ಬಂದಿದೆ. ಈ ಪ್ರಕರಣವನ್ನು ಪ್ರಾಸಿಕ್ಯೂಷನ್ ಕೊಡಿ ಎಂದು ದೂರುದಾರ ಮನವಿ ಮಾಡಿ ಮುಗಿಸುವ ಮೊದಲೇ ರಾಜಭವನದ ಕಾನೂನು ವಿಭಾಗ ಸಕ್ರಿಯವಾಗಿದೆ ಎನ್ನಲಾಗುತ್ತಿದೆ.

ಆದರೆ 2013ರಲ್ಲಿ ನಡೆದಿದೆ ಎನ್ನಲಾದ ಈ ಪ್ರಕರಣಕ್ಕೆ ಯಾವುದಾದರೂ ದಾಖಲೆಗಳನ್ನು ನೀಡಲಾ ಗಿದೆ ಎಂದರೆ, ‘ಇಲ್ಲ’ ಎನ್ನುವ ಉತ್ತರ ಬರುತ್ತಿದೆ. ಹೀಗಿರುವಾಗ ಮುಖ್ಯಮಂತ್ರಿಯಂತಹ ಜವಾಬಾರಿ ಸ್ಥಾನದಲ್ಲಿರುವ ವ್ಯಕ್ತಿಯ ವಿರುದ್ಧ ಯಾರೋ ಆಧಾರರಹಿತ ಆರೋಪವನ್ನು ಮಾಡಿದರೆ, ಅದನ್ನು ಸಂವಿಧಾನ ಹುದ್ದೆಯಲ್ಲಿರುವವರು ಪರಾಮರ್ಶೆ ಮಾಡದೇ ಕ್ರಮ ವಹಿಸಲು ಮುಂದಾಗುತ್ತಾರೆ ಎಂದರೆ, ಇದರ ಹಿಂದೆ ರಾಜಕೀಯ ದುರುದ್ದೇಶವಲ್ಲದೇ ಇನ್ನೇನಿದೆ ಎಂದು ಕಾನೂನು ತಜ್ಞರು ಅಭಿಪ್ರಾಯ ಪಡುತ್ತಾರೆ. ಜೆಡಿಎಸ್ ನಾಯಕರ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿ ಕೋರಿದ ಅರ್ಜಿ ಮೇಲೆ ಯಾವ ಕ್ರಮವನ್ನೂ ಜರುಗಿಸದ ರಾಜ್ಯಪಾಲರು, ಆ ಅರ್ಜಿ ಯಲ್ಲಿ ದಾಖಲೆಗಳು ಕನ್ನಡದಲ್ಲಿದೆ ಎಂಬ ನೆಪ ಮುಂದೆ ಮಾಡಿ, ಅನುವಾದ ಮಾಡಿ ಕೊಡುವಂತೆ ಆದೇಶಿಸಿದ್ದರು. ಆ ನೆಪದಲ್ಲಿ ಕಾಲಕ್ಷೇಪ ಮಾಡುವುದು ಉದ್ದೇಶ ಎಂಬುದು ಎಂಥವರಿಗಾದರೂ ಅರ್ಥವಾಗುತ್ತದೆ. ಆದರೆ ಮುಖ್ಯಮಂತ್ರಿಗಳ ವಿರುದ್ಧ ದೂರು ಬಂದರೆ ಇವ್ಯಾದೂ ಗಣನೆಗೆ ಬರುವುದೇ ಇಲ್ಲ.

ದೂರುದಾರರ ಪೂರ್ವಾಪರವೇ ಶಂಕಾಸ್ಪದ!

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಲು ರಾಜಭವನದ ಮುಂದೆ ನಿಂತಿರುವ ಬಹುತೇಕ ದೂರುದಾರರ ವೈಖರಿಯೇ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಸಿಎಂ ವಿರುದ್ಧ ಮಾಡುತ್ತಿರುವ ಬಹುತೇಕ ಆರೋಪಗಳು ಹಳೆಯ ಘಟನೆಗಳಾಗಿವೆ. ಅದರಲ್ಲಿಯೂ ರಾಮಮೂರ್ತಿ ಅವರು ದೂರಿತ್ತಿರುವ ಕಿಕ್‌ಬ್ಯಾಕ್ ಆರೋಪ ಬರೋಬ್ಬರಿ ಒಂದು ದಶಕದ ಹಳೆಯ ಕಥೆಯಾಗಿದೆ. ಕಿಕ್‌ಬ್ಯಾಕ್ ಆರೋಪ ಮಾಡಿರುವ ವ್ಯಕ್ತಿಯ ಬಗೆ ಯೇ ಹಲವು ಅನುಮಾನಗಳು ಮೂಡಲು ಅವರಿಗೆ ಇರುವ ಹಿನ್ನೆಲೆಯೇ ಕಾರಣ ಎನ್ನುವುದು ಸ್ಪಷ್ಟ.

ಪ್ರಮುಖ ವಿಧೇಯಕಗಳಿಗೆ ಸಹಿ ಹಾಕದ ರಾಜ್ಯಪಾಲರಿಗೆ, ದೂರುಗಳಲ್ಲಿ ಮಾತ್ರ ಆಸಕ್ತಿ ಏಕೆ?

ದಶಕದ ಹಿಂದಿನ ಘಟನೆಗಳ ಆಧಾರರಹಿತ ಆರೋಪಕ್ಕೆ ಅಷ್ಟೊಂದು ಪಾಮುಖ್ಯತೆ ಏಕೆ?

ಸಿಎಂ ಮತ್ತವರ ಸಂಪುಟ ಸದಸ್ಯರ ಪ್ರಾಸಿಕ್ಯೂಷನ್ ತರಾತುರಿ ಇತರೆ ನಾಯಕರ ಬಗ್ಗೆ ಏಕಿಲ್ಲ?

ಈವರೆಗೆ ಮಾಡಿರುವ ಯಾವ ಆರೋಪಗಳಿಗೂ ತಾರ್ಕಿಕ ಅಂತ್ಯವೇ ಸಿಕ್ಕಿಲ್ಲ