ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Vishweshwar Bhat Column: ಚಿಕ್ಕ ಮನೆ, ದೊಡ್ಡ ಮನಸ್ಸು

1937ರ ಹೊತ್ತಿಗೆ, ಜಪಾನ್ ಹೆಚ್ಚು ಆಧುನಿಕಗೊಳ್ಳುತ್ತಿದ್ದರೂ, ಬಹುತೇಕ ನಾಗರಿಕರು ತೀರಾ ಸೀಮಿತವಾದ ಜಾಗದಲ್ಲಿ ಜೀವನ ನಡೆಸುತ್ತಿದ್ದರು. ವಿಶೇಷವಾಗಿ ಟೋಕಿಯೊ, ಒಸಾಕಾದಂಥ ದೊಡ್ಡ ನಗರಗಳಲ್ಲಿ, ಜನಸಂಖ್ಯೆ ಹೆಚ್ಚಿದಂತೆ ಮನೆಗಳ ಗಾತ್ರ ಕುಗ್ಗತೊಡ ಗಿತು. ಜಪಾನಿಯರಿಗೆ ದೊಡ್ಡ ಮನೆ ಬೇಡವೇ ಬೇಡ. 10 ಅಡಿ ಅಗಲ-15 ಅಡಿ ಉದ್ದದ ಜಾಗ ಸಿಕ್ಕರೆ ಅವರು ಸಿಂಗಲ್ ಬೆಡ್‌ರೂಮ್ ಮನೆಯನ್ನು ಸೊಗಸಾಗಿ ನಿರ್ಮಿಸ ಬಲ್ಲರು

ಚಿಕ್ಕ ಮನೆ, ದೊಡ್ಡ ಮನಸ್ಸು

ಜುನಿಚಿರೋ ಟಾನಿಜಾಕಿ (1886 -1965) ಎಂಬ ಜಪಾನಿನ ಕಾದಂಬರಿಕಾರ ’The Maids’ ಎಂಬ ಕೃತಿಯಲ್ಲಿ 20ನೇ ಶತಮಾನದ ಜಪಾನಿನ ಜನಜೀವನವನ್ನು ಸ್ವಾರಸ್ಯವಾಗಿ ಚಿತ್ರಿಸಿ ದ್ದಾನೆ. ಆ ದಿನಗಳಲ್ಲಿ ಟೋಕಿಯೋ ನಗರದಲ್ಲಿ 10 ಅಡಿ ಅಗಲ ಮತ್ತು 7 ಅಡಿ ಉದ್ದದ ಅಂದರೆ 70 ಚದರಡಿಯ ಒಂದು ಸಣ್ಣ ಕೋಣೆಯಲ್ಲಿ ಏಳಕ್ಕಿಂತ ಹೆಚ್ಚು ಕೆಲಸ ದಾಳುಗಳು ಅಥವಾ ಸೇವಕಿಯರು ಸಂತೋಷದಿಂದ ಜೀವಿಸುತ್ತಿದ್ದರಂತೆ (ಅದೇ ಆ ದಿನಗಳಲ್ಲಿ ಅಮೆರಿ ಕದ ರಾಜಧಾನಿ ವಾಷಿಂಗ್ಟನ್‌ನಲ್ಲಿ 300 ಚದರಡಿ ವಿಶಾಲ ಕೋಣೆ ಯಲ್ಲಿ ಒಬ್ಬಳೇ ಸೇವಕಿ ವಾಸಿಸುತ್ತಿದ್ದಳಂತೆ). ಜಪಾನಿ ಸೇವಕಿಯರ ಪೈಕಿ ಯಾರೂ ತಾವು ಒತ್ತಡದ ಅಥವಾ ಕಮ್ಮಿ ಜಾಗದ ಕೋಣೆ ಯಲ್ಲಿ ವಾಸಿಸುತ್ತಿದ್ದೇವೆ, ಇದರಿಂದ ತಮ್ಮ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ ಎಂದು ಅಂದು ಕೊಳ್ಳುತ್ತಿರಲಿಲ್ಲವಂತೆ. ಆ ಕಿರುಕೋಣೆ ಅವರ ನೆಮ್ಮದಿಗೆ ಯಾವ ರೀತಿ ಯಲ್ಲೂ ಸಂಚಕಾರ ತಂದಿರಲಿಲ್ಲ.

ಇದನ್ನೂ ಓದಿ: ‌Vishweshwar Bhat Column: ವೃದ್ಧರು ಮತ್ತು ಡ್ರೈವಿಂಗ್‌ ಲೈಸೆನ್ಸ್

1937ರ ಹೊತ್ತಿಗೆ, ಜಪಾನ್ ಹೆಚ್ಚು ಆಧುನಿಕಗೊಳ್ಳುತ್ತಿದ್ದರೂ, ಬಹುತೇಕ ನಾಗರಿಕರು ತೀರಾ ಸೀಮಿತವಾದ ಜಾಗದಲ್ಲಿ ಜೀವನ ನಡೆಸುತ್ತಿದ್ದರು. ವಿಶೇಷವಾಗಿ ಟೋಕಿಯೊ, ಒಸಾಕಾದಂಥ ದೊಡ್ಡ ನಗರಗಳಲ್ಲಿ, ಜನಸಂಖ್ಯೆ ಹೆಚ್ಚಿದಂತೆ ಮನೆಗಳ ಗಾತ್ರ ಕುಗ್ಗತೊಡ ಗಿತು. ಜಪಾನಿಯರಿಗೆ ದೊಡ್ಡ ಮನೆ ಬೇಡವೇ ಬೇಡ. 10 ಅಡಿ ಅಗಲ-15 ಅಡಿ ಉದ್ದದ ಜಾಗ ಸಿಕ್ಕರೆ ಅವರು ಸಿಂಗಲ್ ಬೆಡ್‌ರೂಮ್ ಮನೆಯನ್ನು ಸೊಗಸಾಗಿ ನಿರ್ಮಿಸ ಬಲ್ಲರು.

ಅಚ್ಚರಿಯೆನಿಸಬಹುದು, ಟೋಕಿಯೋದಲ್ಲಿ ಕೇವಲ 914 ಚದರಡಿ ಜಾಗದಲ್ಲಿ 21 ಮಹಡಿ ಕಟ್ಟಡ ನಿರ್ಮಿಸಿದ್ದಾರೆ! 10 ಅಡಿ ಅಗಲ- 20 ಅಡಿ ಉದ್ದದ ನಿವೇಶನ ಸಿಕ್ಕರೆ ಜಪಾನಿಯರು ಆರಾಮಾಗಿ 2-3 ಬೆಡ್ ರೂಮುಗಳಿರುವ ಮನೆಯನ್ನು ನಿರ್ಮಿಸಬಲ್ಲರು. ಅವರಿಗೆ ಚಿಕ್ಕ ಜಾಗದಲ್ಲಿ ಚೊಕ್ಕ ಸಂಸಾರ ಮಾಡುವುದು ಕರಗತ. ಅಷ್ಟೇ ಅಲ್ಲ, ಅದನ್ನು ಅವರು ಇಷ್ಟ ಪಡುತ್ತಾರೆ ಕೂಡ. ಜಪಾನಿಯರ ಮನೆಗಳಲ್ಲಿ ಅನಗತ್ಯವಾದ ಯಾವ ವಸ್ತುವೂ ಇರುವು ದಿಲ್ಲ. ಅವರು ಒಂದು ವಸ್ತುವನ್ನು ಒಂದು ಉದ್ದೇಶಕ್ಕಾಗಿ ಮಾತ್ರ ಬಳಸುವುದಿಲ್ಲ. ಓದಲು, ಊಟ ಮಾಡಲು, ಮಲಗಲು, ತರಕಾರಿ ಕತ್ತರಿಸಲು... ಹೀಗೆ ಒಂದು ಟೇಬಲ್ ಹತ್ತಾರು ಬೇರೆ ಬೇರೆ ಉದ್ದೇಶ ಗಳಿಗೆ ಬಳಕೆಯಾಗುತ್ತದೆ. ಜಪಾನಿಯರಿಗೆ ಮನೆಯೆಂದರೆ ದೊಡ್ಡ ಸಭಾಂ ಗಣ ಅಲ್ಲ, ಆದರೆ ಚಿಕ್ಕ ಕೊಠಡಿಗಳ ಸಮೂಹ. ಅಲ್ಲಿನ ಜನ ಸಾಮಾನ್ಯವಾಗಿ ಒಂದು ಕೋಣೆಯನ್ನು ವಿವಿಧ ಉದ್ದೇಶಗಳಿಗೆ ಬಳಸುತ್ತಾರೆ.

ಕೊಠಡಿಗಳನ್ನು ಬೇರ್ಪಡಿಸಲು ತಾತಾಮಿ ಚಾಪೆಗಳು ಮತ್ತು ಫ್ಯೂಸೂಮಾ ಎಂಬ ಮಡಚ ಬಹುದಾದ ಬಾಗಿಲು ಅಥವಾ ಪೀಠೋಪಕರಣಗಳನ್ನು ಬಳಸುತ್ತಾರೆ. ಗಂಡ-ಹೆಂಡತಿ ಮತ್ತು ಇಬ್ಬರು ಮಕ್ಕಳಿರುವ ಪೂರ್ತಿ ಕುಟುಂಬಕ್ಕೆ, 25 ಚದರಡಿ ಅಥವಾ ಅದಕ್ಕಿಂತ ಸ್ವಲ್ಪ ದೊಡ್ಡ ಸ್ಥಳ ಸಾಕು. ಹಗಲು ಹೊತ್ತಿನಲ್ಲಿ ಹಾಸಿಗೆಗಳನ್ನು ಮಡಚಿಟ್ಟು, ಅದೇ ಸ್ಥಳವನ್ನು ಊಟ ಮಾಡಲು, ಮಲಗಲು ಅಥವಾ ಇತರ ಚಟುವಟಿಕೆಗಳಿಗೆ ಬಳಸಬಲ್ಲರು.

ಐವತ್ತು ವರ್ಷಗಳ ಹಿಂದಿನವರೆಗೂ ಒಂದೇ ಬಾತ್‌ರೂಮನ್ನು 10 ಮನೆಯವರು ಹಂಚಿ ಕೊಳ್ಳುವ ಪದ್ಧತಿಯಿತ್ತು. ಜಪಾನಿಯರು ಯಾವುದೇ ವಸ್ತುವನ್ನು ಮರುಬಳಕೆ ಮಾಡುವು ದರಲ್ಲೂ ನಿಸ್ಸೀಮರು. ಕಡಿಮೆ ಜಾಗದಲ್ಲಿ ಹೆಚ್ಚು ಪ್ರಯೋಜನ ಪಡೆಯುವುದು ಹೇಗೆಂ ಬುದು ಅವರಿಗೆ ಗೊತ್ತು. ಜಪಾನಿನ ಮನೆಗಳಲ್ಲಿ ರೂಮುಗಳು ಖಾಲಿ ಖಾಲಿಯಾಗಿದ್ದರೆ ಅದು ಲಕ್ಸುರಿಯ ಅಥವಾ ಅಲಂಕಾರಿಕೆಯ ಸಂಕೇತ. ಅತಿ ಕಡಿಮೆ ಸಾಮಾನುಗಳಿರುವ ಮನೆ ಕಲಾತ್ಮಕವಾಗಿ ಸುಂದರ. ಅಲ್ಲಿನ ಸಾಮಾನ್ಯ ಕಿರಾಣಿ ಅಂಗಡಿಗಳು ಹೆಚ್ಚೆಂದರೆ ಒಂದು ನೂರು ಚದರಡಿ ವಿಸ್ತೀರ್ಣವುಳ್ಳದ್ದಿರಬಹುದು.

ಆ ಜಾಗದಲ್ಲಿ ಎರಡೂವರೆ-ಮೂರು ಸಾವಿರ ಐಟಮ್ಮುಗಳನ್ನು ಇಡಬಲ್ಲರು. ಖ್ಯಾತ ವ್ಯಂಗ್ಯಚಿತ್ರಕಾರನೊಬ್ಬ ಜಪಾನಿನ ಮನೆಗಳನ್ನು ಒಂದೇ ವಾಕ್ಯದಲ್ಲಿ ಹೀಗೆ ಬಣ್ಣಿಸಿದ್ದ- When I have guests over, we play a fun game called Find the Chair’. ‘ನಮ್ಮ ಮನೆ ಯಲ್ಲಿರುವ ಯಾವುದೇ ವಸ್ತುಗಳಿಗೆ ಕೈ-ಕಾಲುಗಳನ್ನು ತಾಕಿಸದೇ, ಯಾವ ವಸ್ತುಗಳನ್ನೂ ಬೀಳಿಸದೇ ಅಥವಾ ಅವನ್ನು ಒಡೆಯದೇ ಮಾಡುವ ಕ್ರಿಯೆಗೆ ಯೋಗ ಅಂತಾರೆ’ ಎಂದು ಜಪಾನಿ ಲೇಖಕನೊಬ್ಬ ಬರೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳ ಬಹುದು. ಅಂದ ಹಾಗೆ ಅವರ ಮನೆ ಚಿಕ್ಕದಿರಬಹುದು, ಮನಸ್ಸು ಅಥವಾ ಯೋಚನೆ ಮಾತ್ರ ದೊಡ್ಡದು.