ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಗಣೇಶ ಫೋಟೋವನ್ನು ಯಾವ ದಿಕ್ಕಿನಲ್ಲಿ ಇಡಬೇಕು?

Vastu Tips : ಗಣೇಶ ಎಲ್ಲ ವಿಘ್ನಗಳನ್ನು ಕಳೆದು ಶುಭಫಲ ನೀಡುವಾತ. ನಾವು ಮನೆಯಲ್ಲಿ ಪೂಜಿಸೋ ಗಣೇಶನ ವಿಗ್ರಹ ಅಥವಾ ಫೋಟೋಗಳಿಗೂ ವಾಸ್ತು ನಿಯಮಗಳಿದ್ದು, ಅವುಗಳನ್ನು ಅರಿತು ಅನುಸರಿಸಿದ್ರೆ ಶುಭಫಲಗಳು ಸಿದ್ಧಿಸೋದು ಖಚಿತ ಎನ್ನುತ್ತಾರೆ ವಾಸ್ತು ತಜ್ಞರು.

ಗಣೇಶ ವಿಗ್ರಹಕ್ಕೆ ಸಂಬಂಧಿಸಿರುವ ವಾಸ್ತು ನಿಯಮಗಳೇನು?

Profile Sushmitha Jain Apr 2, 2025 8:24 AM

ಗಣೇಶನಿಗೆ ನಮಿಸಿ ಯಾವುದೇ ಕಾರ್ಯ ಕೈಗೊಂಡರೂ ಅದು ನಿರ್ವಿಘ್ನವಾಗಿ ನೆರವೇರುತ್ತದೆ ಎಂಬ ನಂಬಿಕೆ ಹಿಂದು ಧರ್ಮಿಯರದ್ದು. ಇದೇ ಕಾರಣಕ್ಕೆ ಗಣೇಶನಿಗೆ ಪ್ರಥಮ ಪೂಜೆ,ಮೊದಲ ನಮಸ್ಕಾರ. ಗಣೇಶ ಖುಷಿ, ಸಮೃದ್ಧಿ ಹಾಗೂ ನೆಮ್ಮದಿಯ ಸಂಕೇತ ಕೂಡ. ಇದೇ ಕಾರಣಕ್ಕೆ ಪ್ರತಿ ಮನೆಯಲ್ಲಿ ಗಣೇಶನ ಫೋಟೋವಂತೂ ಇದ್ದೇಇರುತ್ತೆ. ಕೆಲವು ಮನೆಗಳಲ್ಲಿ ಪ್ರತಿವರ್ಷ ಗಣೇಶ ಚತುರ್ಥಿಯಂದು ಗಣಪನ ಮೂರ್ತಿಯನ್ನು ಮನೆಗೆ ತಂದು ಪ್ರತಿಷ್ಠಾಪಿಸಿ, ಪೂಜಿಸಿ ಆ ಬಳಿಕ ನೀರಿನಲ್ಲಿ ವಿಸರ್ಜನೆ ಮಾಡೋ ಸಂಪ್ರದಾಯವಿದೆ.ಆದ್ರೆ ಬಹುತೇಕರಿಗೆ ಗಣೇಶ ವಿಗ್ರಹ ಅಥವಾ ಫೋಟೋವನ್ನು ಮನೆಯಲ್ಲಿ ಯಾವ ಭಾಗದಲ್ಲಿ, ಯಾವ ದಿಕ್ಕಿನಲ್ಲಿಡಬೇಕು ಎಂಬುದು ತಿಳಿದಿರೋದಿಲ್ಲ. ವಾಸ್ತುಶಾಸ್ತ್ರದ ಪ್ರಕಾರ ಗಣೇಶನನ್ನು ಮನೆಯ ಕೆಲವು ಭಾಗಗಳಲ್ಲಿಟ್ಟರೆ ಮಾತ್ರ ಶುಭ ಫಲಗಳು ದೊರೆಯಲು ಸಾಧ್ಯ. ಹಾಗಾದ್ರೆ ಗಣೇಶ ವಿಗ್ರಹಕ್ಕೆ ಸಂಬಂಧಿಸಿರುವ ವಾಸ್ತು ನಿಯಮಗಳೇನು? ಇಲ್ಲಿದೆ ಮಾಹಿತಿ.

ಈ ದಿಕ್ಕು ಉತ್ತಮ

ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪೂರ್ವ, ಪಶ್ಚಿಮ ಅಥವಾ ಈಶಾನ್ಯ ದಿಕ್ಕಿನಲ್ಲಿಡಬೇಕು. ಅದ್ರಲ್ಲೂ ಗಣೇಶ ವಿಗ್ರಹವನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಇಡೋದು ಅತ್ಯಂತ ಶುಭದಾಯಕ. ಪುರಾಣಗಳ ಪ್ರಕಾರ ಶಿವ ಉತ್ತರ ದಿಕ್ಕಿನಲ್ಲಿ ನೆಲೆಸಿರೋ ಕಾರಣ ಗಣೇಶನ ವಿಗ್ರಹವನ್ನು ಈ ದಿಕ್ಕಿಗೆ ಮುಖ ಮಾಡಿಟ್ಟರೆ ಶುಭ ಫಲಗಳು ಸಿಗುತ್ತವೆ.

ಈ ತಪ್ಪು ಮಾಡಬೇಡಿ

ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ಗಣೇಶನ ಮೂರ್ತಿಯನ್ನಿಡಬಾರದು. ಜೊತೆಗೆ ಟಾಯ್ಲೆಟ್ ಅಥವಾ ಬಾತ್‍ರೂಮ್‍ಗೆ ಅಟ್ಯಾಚ್ ಆಗಿರೋ ಗೋಡೆಯಲ್ಲಿ ಗಣೇಶನ ಫೋಟೋ ತೂಗು ಹಾಕೋದು ಅಥವಾ ಗಣೇಶನ ವಿಗ್ರಹವನ್ನು ಗೋಡೆಗೆ ತಾಗಿಸಿಡೋದು ಮಾಡಬಾರದು. ಮೆಟ್ಟಿಲುಗಳ ಕೆಳಭಾಗದಲ್ಲಿ ಕೂಡ ಗಣೇಶನ ಮೂರ್ತಿಯನ್ನಿಡೋದು ವಾಸ್ತು ಪ್ರಕಾರ ನಿಷಿದ್ಧ. ಗಣೇಶ ಮೂರ್ತಿ ಅಥವಾ ಫೋಟೋದ ಹಿಂಭಾಗ ಮನೆಯ ಮುಖ್ಯ ದ್ವಾರಕ್ಕೆ ಮುಖ ಮಾಡಿರುವಂತೆ ಇರಿಸೋದು ಮುಖ್ಯ.

ಈ ಸುದ್ದಿಯನ್ನು ಓದಿ: Vastu Tips: ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿಟ್ಟರೆ ಶುಭ? ಇಲ್ಲಿದೆ ಮಾಹಿತಿ

ವಿಗ್ರಹದ ಆಯ್ಕೆ ಹೀಗಿರಲಿ

ಗಣೇಶನ ಸರಿಯಾದ ವಿಗ್ರಹವನ್ನು ಆಯ್ಕೆ ಮಾಡುವುದು ಕೂಡ ಅದನ್ನು ಇಡುವುದರಷ್ಟೇ ಅಷ್ಟೇ ಮುಖ್ಯ. ವಾಸ್ತು ತಜ್ಞರ ಪ್ರಕಾರ ಕುಳಿತ ಭಂಗಿಯಲ್ಲಿರುವ ಗಣೇಶನ ವಿಗ್ರಹ ಸೂಕ್ತವಾಗಿದೆ. ಏಕೆಂದರೆ ಇದು ಶಾಂತತೆ, ಶಾಂತಿಯನ್ನು ಆಹ್ವಾನಿಸುತ್ತದೆ ಮತ್ತು ಮನೆಯಲ್ಲಿ ಸಾಮರಸ್ಯದ ವಾತಾವರಣವನ್ನು ಸೃಷ್ಟಿಸುತ್ತದೆ. ಇದನ್ನು ಲಲಿತಾಸನ ಎಂದೂ ಕರೆಯುತ್ತಾರೆ. ಮತ್ತೊಂದೆಡೆ, ನೀವು ಐಷಾರಾಮಿ, ಆರಾಮದಾಯಕ ಮತ್ತು ಶ್ರೀಮಂತ ಜೀವನವನ್ನು ಬಯಸಿದರೆ ನೀವು ಒರಗಿರುವ ಗಣೇಶನ ವಿಗ್ರಹವನ್ನು ಸಹ ಇರಿಸಬಹುದು.
ಇನ್ನೂ ವಾಸ್ತು ತಜ್ಞರು ಮನೆಯಲ್ಲಿ ಕೇವಲ ಒಂದು ಗಣೇಶನ ವಿಗ್ರಹವನ್ನು ಇರಿಸಲು ಶಿಫಾರಸು ಮಾಡುತ್ತಾರೆ. ಒಂದಕ್ಕಿಂತ ಹೆಚ್ಚು ವಿಗ್ರಹಗಳು ಧನಾತ್ಮಕ ಶಕ್ತಿಯ ಹರಿವನ್ನು ನಿರಾಕರಿಸುತ್ತವೆ ಮತ್ತು ವೃದ್ಧಿ ಸಿದ್ಧಿಯನ್ನು ಮೀರಿಸುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಗಣೇಶನ ವಿಗ್ರಹಗಳನ್ನು ಇಡುವುದನ್ನು ತಪ್ಪಿಸಿ.