ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ದಿಬ್ಬೂರು ವಿ.ಎಸ್.ಎಸ್.ಎನ್ ಸೊಸೈಟಿ ವಂಚನೆ

ಸಾರ್ವಜನಿಕರ ಮತ್ತು ಬಡವರ ಪಾಲಿಗೆ ಬ್ಯಾಂಕ್‌ಗಳು ವರದಾನವಾಗಬೇಕು. ಅಲ್ಲಿ ಹಣವಿಟ್ಟರೆ ನೂರ ಕ್ಕೆ ಸಾವಿರಪಟ್ಟು ಭದ್ರತೆ ಇರುತ್ತೆ ಎಂದು ನಂಬಿ ಲಕ್ಷಾಂತರ ರೂಪಾಯಿ ಹಣವನ್ನು ಬ್ಯಾಂಕ್‌ ನಲ್ಲಿ ಇಟ್ಟಿದ್ದರು. ಆದರೆ ಬೇಲಿಯೆ ಎದ್ದು ಹೊಲ ಮೇಯ್ದಂತೆ ಬ್ಯಾಂಕ್ ಅಧಿಕಾರಿಗಳು, ಆಡಳಿತ ಮಂಡಳಿ ನಿರ್ದೇಶಕರು ಹಣ ಗುಳುಂ ಮಾಡಿದರೆ ಗ್ರಾಹಕರು ಯಾರನ್ನು ಕೇಳಬೇಕು ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು

ಡಿಸಿಸಿ ಬ್ಯಾಂಕ್ ಎದುರು ಮಹಿಳೆಯರಿಂದ ಪ್ರತಿಭಟನೆ

ನಗರದ ಡಿಸಿಸಿ ಬ್ಯಾಂಕ್ ಮುಂದೆ ದಿಬ್ಬೂರು ಸೇವಾ ಸಹಕಾರ ಸಂಘದ ಗ್ರಾಹಕರು ಪ್ರತಿಭಟನೆ ನಡೆಸಿದರು.

Profile Ashok Nayak Jan 25, 2025 7:58 PM

ಚಿಕ್ಕಬಳ್ಳಾಪುರ: ದಿಬ್ಬೂರು ಸೇವಾ ಸಹಕಾರ ಸಂಘದಿಂದ (ವಿ ಎಸ್ ಎಸ್ ಎನ್)ವಂಚನೆಯಾಗಿದೆ ಎಂದು ಆರೋಪಿಸಿ ಸ್ತಿçà ಶಕ್ತಿ ಮಹಿಳಾ ಸಂಘದ ಸದಸ್ಯರು ನಗರದ ಡಿಸಿಸಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.

ಸಾರ್ವಜನಿಕರ ಮತ್ತು ಬಡವರ ಪಾಲಿಗೆ ಬ್ಯಾಂಕ್‌ಗಳು ವರದಾನವಾಗಬೇಕು. ಅಲ್ಲಿ ಹಣವಿಟ್ಟರೆ ನೂರಕ್ಕೆ ಸಾವಿರಪಟ್ಟು ಭದ್ರತೆ ಇರುತ್ತೆ ಎಂದು ನಂಬಿ ಲಕ್ಷಾಂತರ ರೂಪಾಯಿ ಹಣವನ್ನು ಬ್ಯಾಂಕ್‌ ನಲ್ಲಿ ಇಟ್ಟಿದ್ದರು. ಆದರೆ ಬೇಲಿಯೆ ಎದ್ದು ಹೊಲ ಮೇಯ್ದಂತೆ ಬ್ಯಾಂಕ್ ಅಧಿಕಾರಿಗಳು, ಆಡಳಿತ ಮಂಡಳಿ ನಿರ್ದೇಶಕರು ಹಣ ಗುಳುಂ ಮಾಡಿದರೆ ಗ್ರಾಹಕರು ಯಾರನ್ನು ಕೇಳಬೇಕು ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Chikkaballapur News: ದೇಹ ಸಿರಿ, ಸಂಪತ್ತು ಅನ್ನೋದು ಕಳೆದು ಹೋಗುತ್ತದೆ, ಜ್ಞಾನ ಕರಗಿ ಹೋಗುವುದಿಲ್ಲ: ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ

ತಾಲೂಕಿನ ದಿಬ್ಬೂರು ಸೇವಾ ಸಹಕಾರ ಸಂಘ ಹಾಗೂ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಎರಡೂ ಕೂಡಿಯೇ ಮಹಿಳಾ ಸಂಘಗಳಿಗೆ ಭಾರೀ ವಂಚನೆ ಮಾಡಿದ್ದಾರೆಂದು ಆರೋಪಿಸಿ ಬ್ಬೂರು ಸ್ತ್ರೀ ಶಕ್ತಿ ಮಹಿಳಾ ಸಂಘದ ಸದಸ್ಯೆಯರು.

ಈ ವೇಳೆ ಮಾತನಾಡಿದ ಲಕ್ಷ್ಮಮ್ಮ ದಿಬ್ಬೂರು ಸೇವಾ ಸಹಕಾರ ಸಂಘದ ಅಧ್ಯಕ್ಷ ಮುನೇಗೌಡ ಹಾಗೂ ಕಾರ್ಯದರ್ಶಿ ಕಾರ್ತೀಕ್ ಎಂಬುವವರು ಮಹಿಳಾ ಸಂಘಗಳಿಂದ ಹಣ ಕಟ್ಟಿಸಿಕೊಂಡು ಸಾಲ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದ್ದರು. ಅದಕ್ಕಾಗಿ ಪ್ರತಿ ಸಂಘಗಳಿಂದ ತಲಾ ಒಂದು ಲಕ್ಷ ರೂಪಾಯಿ ಡಿಪಾಸಿಟ್ ಮಾಡಿ ಅಂತ ಹೇಳಿದ್ದರು. ಹಣ ಕಟ್ಟಿ ಎರಡು ಮೂರು ವರ್ಷ ಆದರೂ ಸಾಲವೂ ಕೊಟ್ಟಿಲ್ಲ. ಕಟ್ಟಿರುವ ಹಣವನ್ನಾದರೂ ವಾಪಸ್ಸು ಕೊಡಿ ಅಂದ್ರೆ ಅದೂ ಖಾಲಿ ಆಗಿದೆ ಯಂತೆ. ಪದೇ ಪದೇ ದೂರವಾಣಿ ಮೂಲಕ ಅಧ್ಯಕ್ಷ ಮುನೇಗೌಡ ಹಾಗೂ ಕಾರ್ಯದರ್ಶಿಯನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ದೂರಿದರು.ಇದರಿಂದ ಮನನೊಂದ ಮಹಿಳೆಯರು ಅವರ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ದೂರನ್ನೂ ಸಹ ದಾಖಲಿಸಿದ್ದಾರೆ ಎಂದು ಮಂಜುಳ ಹೇಳಿಕೊಂಡಿದ್ದಾರೆ.

ದಿಬ್ಬೂರಿನ ವಿ ಎಸ್ ಎಸ್ ಎನ್ ಸೊಸೈಟಿಯಲ್ಲಿ ವಂಚನೆ ಮಾಡಿದ ಅಧ್ಯಕ್ಷ, ಕಾರ್ಯದರ್ಶಿ ಇಬ್ಬ ರನ್ನೂ ಬಂಧಿಸಿ ಹಣ ವಾಪಸ್ಸು ಕೊಡಿಸಿ ಎಂದು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಯಾರ ಮೇಲೂ ಕ್ರಮ ಜರುಗಿಸಿಲ್ಲ ಎಂದು ಸಿಟ್ಟಾದ ಮಹಿಳೆಯರು ಸೊಸೈಟಿಗಳಿಗೆ ಫಂಡಿAಗ್ ಮಾಡುತ್ತಿರುವ ತಾಲ್ಲೂಕು ಡಿಸಿಸಿ ಬ್ಯಾಂಕ್ ಕಚೇರಿ ಮುಂಭಾಗ ಬಂದು ತಮಗಾದ ಅನ್ಯಾಯದ ಪ್ರತಿಭಟಿಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕೂಲಿನಾಲಿ ಮಾಡಿ ಗಂಡ ಮಕ್ಕಳಿಗೆ ಗೊತ್ತಾಗದೆ ಮಕ್ಕಳ ಭವಿಷ್ಯಕ್ಕಾಗಿ ಕೂಡಿಟ್ಟ ಹಣ ಕೇವಲ ಬ್ಯಾಂಕ್ ನಿರ್ದೇಶಕರು, ರಾಜಕೀಯ ಪ್ರಭಾವಿಗಳು ಕೈ ಸೇರುತ್ತಿದೆ ಎಂದು ರಾಮಕ್ಕ ಗಂಭೀರ ಆರೋಪ ಮಾಡಿದರು.

ಡಿಸಿಸಿ ಬ್ಯಾಂಕ್ ಅಡಿಯಲ್ಲಿ ಬರುವ ವಿಎಸ್‌ಎಸ್‌ಎನ್ ಸೊಸೈಟಿಗಳು ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದರು ಕೂಡ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಬ್ಯಾಂಕ್ ನಿರ್ದೇಶಕರು ತಮಗೆ ಏನೂ ಗೊತ್ತೇ ಇಲ್ಲ ಎನ್ನುವಂತೆ ವರ್ತಿಸುತ್ತಿರುವುದು ಸರಿಯಲ್ಲಿ. ಕೂಡಲೇ ಸಂಬಂಧಪಟ್ಟ ವರು ಅನ್ಯಾಯ ಮಾಡಿದವರ ಮೇಲೆ ಶಿಸ್ತುಕ್ರಮ ನಡೆಸಿ ನ್ಯಾಯ ಕೊಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.