ಭರ್ಜರಿ ಸಿದ್ಧತೆ ಪರಿಶೀಲಿಸಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಜಾವೀದ್ ನಸೀಮ್ ಖಾನಂ
ಹಳ್ಳಿ ಸೊಗಡು ಮಾದರಿಯಲ್ಲಿ ಸಾಂಪ್ರದಾಯಿಕ ಹೂವು ಹಾಗು ಸಿರಿಧಾನ್ಯಗಳಿಂದ ಅಲಂಕೃತಗೊಂಡ ನಂದಿ ವಿಗ್ರಹ, ವೀಣೆ, ಜೈ ಕಿಸಾನ್ ಜೈ ಜವಾನ್ ,ಕರ್ನಾಟಕ ನಕ್ಷೆ ಹಾಗೂ ದೇಸಿ ತಳಿ ಬೀಜಗಳ ಪ್ರದ ರ್ಶನ, ದಿಬ್ಬದಿಂದ ಕಣಿವವರೆಗೂ ಜಲಾನಯನ ಪ್ರದೇಶ, ಕೃಷಿಭಾಗ್ಯ, ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳ ಮಾದರಿಗಳ ಪ್ರದರ್ಶನ, ಕೃಷಿ ಮತ್ತು ಸಂಬಂಧಿತ ಇಲಾಖೆಗಳಿಂದ ಮಳಿಗೆಗಳನ್ನು ತೆರೆಯಲಾಗುವುದು
![ಇಂದು ಜಿಲ್ಲಾ ಮಟ್ಟದ ಸಿರಿಧಾನ್ಯ, ಸಾವಯವ ಹಾಗೂ ಫಲಪುಷ್ಪ ಪ್ರದರ್ಶನ](https://cdn-vishwavani-prod.hindverse.com/media/original_images/CHK_333.jpg)
![Profile](https://vishwavani.news/static/img/user.png)
ಚಿಕ್ಕಬಳ್ಳಾಪುರ: ಸಿರಿಧಾನ್ಯಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡಲು ನಾಳೆ ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ಜಂಟಿ ಕೃಷಿ ನಿರ್ದೇಶಕಿ ಜಾವೀದ್ ನಸೀಮಾ ಖಾನಂ ತಿಳಿಸಿದರು. ಮೇಳ ಕುರಿತು ಮಾಹಿತಿ ನೀಡಿದ ಅವರು ಸಿರಿಧಾನ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿ ಸುವ ಸಲುವಾಗಿ ಜಾಗೃತಿ ನಡಿಗೆ, ಸಿರಿಧಾನ್ಯಗಳ ವಿವಿಧ ಬಗೆಯ ತಿಂಡಿ-ತಿನಿಸುಗಳ ಹಾಗೂ ಮರೆತು ಹೋದ ಖಾದ್ಯ ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಇದರಲ್ಲಿ ವಿಜೇತರಾದವರು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗೇಯೆ ಸಿರಿ ಧಾನ್ಯಗಳ ಪ್ರಾಮುಖ್ಯತೆ ಮತ್ತು ಅವನ್ನು ಬೆಳೆಸಲು ರೈತರಿಗೆ ಅರಿವು ಮೂಡಿಸಲು ಈ ಮೇಳ ಆಯೋಜಿಸಲಾಗಿದೆ ಎಂದರು.
ಇದನ್ನೂ ಓದಿ: Viral Video Cricket: ಕ್ರಿಕೆಟ್‌ನಲ್ಲಿ ಇದೇ ಮೊದಲು, ಹೆಲ್ಮೆಟ್‌ಗೆ ಚೆಂಡು ಬಡಿದು ರನೌಟ್
ಈ ಮೇಳದಲ್ಲಿ ಹಳ್ಳಿ ಸೊಗಡು ಮಾದರಿಯಲ್ಲಿ ಸಾಂಪ್ರದಾಯಿಕ ಹೂವು ಹಾಗು ಸಿರಿಧಾನ್ಯಗಳಿಂದ ಅಲಂಕೃತಗೊಂಡ ನಂದಿ ವಿಗ್ರಹ, ವೀಣೆ, ಜೈ ಕಿಸಾನ್ ಜೈ ಜವಾನ್ ,ಕರ್ನಾಟಕ ನಕ್ಷೆ ಹಾಗೂ ದೇಸಿ ತಳಿ ಬೀಜಗಳ ಪ್ರದರ್ಶನ,ದಿಬ್ಬದಿಂದ ಕಣಿವವರೆಗೂ ಜಲಾನಯನ ಪ್ರದೇಶ, ಕೃಷಿಭಾಗ್ಯ, ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳ ಮಾದರಿಗಳ ಪ್ರದರ್ಶನ, ಕೃಷಿ ಮತ್ತು ಸಂಬಂಧಿತ ಇಲಾಖೆಗಳಿಂದ ಮಳಿಗೆಗಳನ್ನು ತೆರೆಯಲಾಗುವುದು. ಕೃಷಿ ಯಂತ್ರೋಪಕರಣ ಹಾಗೂ ಸಿರಿಧಾನ್ಯ ಖಾದ್ಯಗಳ,ಔಷಧೀಯ ಸಸ್ಯಗಳ ಪ್ರದರ್ಶನ ಹಾಗೂ ಪ್ರದರ್ಶನದಲ್ಲಿ 100ಕ್ಕೂ ಹೆಚ್ಚು ಫಲಾನು ಭವಿಗಳಿಗೆ ಕೃಷಿ ಪರಿಕರಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಉದ್ಘಾಟಿಸಲಿದ್ದು, ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಡಾ. ಕೆ ಸುಧಾಕರ್,ಕೋಲಾರ ಸಂಸದ ಮಲ್ಲೇಶ್ ಬಾಬುರವರು ಸೇರಿದಂತೆ ಈ ಭಾಗದ ಶಾಸಕರು ಉಪಸ್ಥಿತಿ ಇರಲಿದ್ದಾರೆ. ಹಾಗೆಯೇ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಗಾಯತ್ರಿ, ಬಾಗೇಪಲ್ಲಿ ತಾಲೂಕು ಸಹಾ ಯಕ ಕೃಷಿ ನಿರ್ದೇಶಕಿ ಲಕ್ಷ್ಮೀ ಸೇರಿದಂತೆ ಹಲವಾರು ಮಂದಿ ಇದ್ದರು.