ಬಿಸಿನೆಸ್ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟ ಫೆಡರಲ್ ಬ್ಯಾಂಕ್!
ಎಮ್ಎಮ್ಇ ಗ್ರಾಹಕರು ಭಾರತದ ಅಭಿವೃದ್ಧಿ ಯಲ್ಲಿ ಬಹುಮುಖ್ಯ ಪಾಥ್ರವನ್ನು ವಹಿಸುತ್ತಾರೆ. ಫೆಡರಲ್ ಬ್ಯಾಂಕ್ ಸದಾ ವಿನೂತನ ಸೌಲಭ್ಯ ಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ. ಈ ಯಾನ ದಲ್ಲಿ ಮುಂದುವರೆಯುತ್ತಾ ಫೆಡರಲ್ ಬ್ಯಾಂಕ್ ‘ಫೆಡ್ ಸ್ಟಾರ್ ಬಿಜ್’ ಬಿಸಿನೆಸ್ ಕ್ರೆಡಿಟ್ ಕಾರ್ಡ್ ನ್ನು ಪರಿಚಯಿಸಿದೆ


ಮುಂಬೈ : ಫೆಡರಲ್ ಬ್ಯಾಂಕ್ ತನ್ನ ಬಿಸಿನೆಸ್ ಗ್ರಾಹಕರಿಗೆ ಹೊಸದೊಂದು ಸೌಲಭ್ಯ ಪರಿಚಯಿ ಸುವ ಮೂಲಕ ಮಹತ್ವದ ಘೋಷಣೆ ಮಾಡಿದೆ. ಗ್ರಾಹಕರಿಗಾಗಿ ‘ಫೆಡ್ ಸ್ಟಾರ್ ಬಿಜ್ ‘ ಎಂಬ ಎಕ್ಸ್ಕ್ಲೂಸಿವ್ ಕ್ರೆಡಿಟ್ ಕಾರ್ಡ್ ನ್ನು ಬಿಡುಗಡೆ ಮಾಡಿದೆ. ನ್ಯಾಷನಲ್ ಪೇಯ್ಮೆಂಟ್ ಕಾರ್ಪೋ ರೇಶನ್ ಆಫ್ ಇಂಡಿಯಾ(ಎನ್ಪಿಸಿಐ) ಸಹಯೋಗದಲ್ಲಿ ಫೆಡರಲ್ ಬ್ಯಾಂಕ್ ಈ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿದೆ.
ಫೆಡ್ ಸ್ಟಾರ್ ಬಿಜ್ ಕಾರ್ಡ್ ಸಣ್ಣ, ಮಧ್ಯಮ ಉದ್ಯಮಿಗಳ ವಿಶಿಷ್ಟ ಅಗತ್ಯತೆಗಳನ್ನು ಪೂರೈಸಲು, ಹಣಕಾಸು ನಿರ್ವಹಣೆ ಮತ್ತು ಅನುಕೂಲತೆಗಳನ್ನುಹೆಚ್ಚಿಸುವ ವಿವಿಧ ಸೌಲಭ್ಯಗಳನ್ನು ನೀಡು ತ್ತದೆ. ಭಾರತದ ವಿವಿಧ ವ್ಯವಹಾರ ವಲಯದ ಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಬಿಸಿನೆಸ್ ಮತ್ತು ಕಮರ್ಷಿಯಲ್ ಕಾರ್ಡ ವಿಭಾಗಕ್ಕೆ ಫೆಡರಲ್ ಬ್ಯಾಂಕ್ನ ಕಾರ್ಯತಂತ್ರದ ಪ್ರವೇಶ ಇದಾಗಿದೆ.
ಇದನ್ನೂ ಓದಿ: Canara Bank: ಕೆನರಾ ಬ್ಯಾಂಕ್; ಕಾರ್ಯನಿರ್ವಾಹಕ ನಿರ್ದೇಶಕರಾಗಿ ಶೇಖರ್ ರಾವ್ ನೇಮಕ
ಪೆಡ್ ಸ್ಟಾರ್ ಬಿಜ್ ಕಾರ್ಡ್ನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಫ್ ಫೆಡರಲ್ ಬ್ಯಾಂಕ್, ಶಾಲಿನಿ ವಾರಿಯರ್ ‘ಎಮ್ಎಮ್ಇ ಗ್ರಾಹಕರು ಭಾರತದ ಅಭಿವೃದ್ಧಿ ಯಲ್ಲಿ ಬಹುಮುಖ್ಯ ಪಾಥ್ರವನ್ನು ವಹಿಸುತ್ತಾರೆ. ಫೆಡರಲ್ ಬ್ಯಾಂಕ್ ಸದಾ ವಿನೂತನ ಸೌಲಭ್ಯ ಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ. ಈ ಯಾನದಲ್ಲಿ ಮುಂದುವರೆಯುತ್ತಾ ಫೆಡರಲ್ ಬ್ಯಾಂಕ್ ‘ಫೆಡ್ ಸ್ಟಾರ್ ಬಿಜ್’ ಬಿಸಿನೆಸ್ ಕ್ರೆಡಿಟ್ ಕಾರ್ಡ್ ನ್ನು ಪರಿಚಯಿಸಿದೆ. ಈ ಕಾರ್ಡ ವೀಸಾ ಹಾಗೂ ರೂಪೇ ಎರಡೂ ರೂಪದಲ್ಲೂ ಲಭ್ಯವಿದ್ದು , ಈ ಕಾರ್ಡ್ನ್ನು ಗ್ರಾಹಕರ ಓವರ್ ಡ್ರಾಫ್ಟ್ ಅಥವಾ ಕ್ಯಾಶ್ ಕ್ರೆಡಿಟ್ ಖಾತೆಗೆ ಜೋಡಿಸಲಾಗಿದೆ. ಈ ಸೌಲಭ್ಯ ನಮ್ಮ ಬಿಸಿನೆಸ್ ಗ್ರಾಹಕರಿಗೆ ಸ್ಪರ್ಧಾತ್ಮಕ ಯುಗದಲ್ಲಿ ಹಣಕಾಸಿನ ಭದ್ರತೆಯನ್ನು ಒದಗಿಸುತ್ತದೆ ಎಂದು ಹೇಳಿದರು.
‘ಫೆಡ್ ಸ್ಟಾರ್ ಬಿಜ್ ‘ ಕಾರ್ಡ್ ನ ಸೌಲಭ್ಯಗಳೇನು?
50 ಲಕ್ಷ ರೂ ಮಿತಿಯೊಂದಿಗೆ ಅಸ್ಥಿತ್ವದಲ್ಲಿರುವ ಓವರ್ ಡ್ರಾಫ್ಟ್ ಅಥವಾ ಕ್ಯಾಶ್ ಕ್ರೆಡಿಟ್ ಖಾತೆಗಳಿಗೆ ನೇರವಾಗಿ ಜೋಡಿಸಲಾಗಿದೆ. ಇದು ವ್ಯವಹಾರಗಳಿಗೆ ಏಕೀಕೃತ ಹಣಕಾಸಿನ ವ್ಯವಸ್ಥೆಯನ್ನು ಕಲ್ಪಿಸ ಲಿದೆ. ನಿತ್ಯ 3 ಲಕ್ಷ ರೂ ವರೆಗಿನ ವಹಿವಾಟಿಕೆಗೆ ಅವಕಾಶ ಕಲ್ಪಿಸುತ್ತದೆ.
ಪ್ರತಿ ವಹಿವಾಟಿಗೂ ಸುಧಾರಿತ ಟೋಕನೈಸೇಶನ್ ಮತ್ತು ಎನ್ಕ್ರಿಪ್ಶನ್ ತಂತ್ರಜ್ಞಾನದ ರಕ್ಷಣೆ ಇದೆ.
ಎಲ್ಲಾ ವಹಿವಾಟುಗಳು ಓಡಿ/ ಸಿಸಿ ಖಾತೆಯಲ್ಲಿ ಗೋಚರವಾಗುವುದು. ಪ್ರತ್ಯೇಕ ಸ್ಟೇಟ್ ಮೆಂಟ್ ಗಳನ್ನು ತಡೆದು ಸಮನ್ವಯವನ್ನು ಸರಳಗೊಳಿಸುತ್ತದೆ.
ರೂಪೇ ಮತ್ತು ವೀಸಾ ಪಾಲುದಾರಿಕೆಗಳ ಮೂಲಕ ವ್ಯಾಪಕ ವ್ಯಾಪಾರಿ ಜಾಲದ ಸೌಲಭ್ಯವನ್ನು ನೀಡುತ್ತದೆ.
ಈ ಬಗ್ಗೆ ಮಾತನಾಡಿದ ಎನ್ಪಿಸಿಐನ ಮುಖ್ಯ ರಿಲೇಶನ್ಶಿಪ್ ಮ್ಯಾನೇಜರ್ ರಜೀತ್ ಪಿಳ್ಳೈ “ ಫೆಡ್ ಸ್ಟಾರ್ ಬಿಜ್ ಬಿಡುಗಡೆಯಲ್ಲಿ ಫೆಡರಲ್ ಬ್ಯಾಂಕ್ ಜೊತೆ ಪಾಲುದಾರರಾಗಿದ್ದು ಸಂತಸ ತಂದಿದೆ. ಬಿಿಸಿನೆಸ್ ಗ್ರಾಹಕರಿಗೆ ತ್ವರಿತ ಹಾಗೂ ಸುಭದ್ರ ವಹಿವಾಟು ಕಲ್ಪಿಸುವಲ್ಲಿ ಈ ಕಾರ್ಡ್ ಮಹತ್ವದ ಹೆಜ್ಜೆಯಾಗಿದೆ. ಭಾರತದಾದ್ಯಂತ ವ್ಯವಹಾರಗಳಿಗೆ ಫೆಡ್ ಸ್ಟಾರ್ ಬಿಜ್ ಬಲ ನೀಡಲಿದೆ. ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವೀಸಾ ಇಂಡಿಯಾ ಕಂಟ್ರೀ ಮ್ಯಾನೇಜರ್ ರಿಷಿ ಛಬ್ರಾ “ ಫೆಡರಲ್ ಬ್ಯಾಂಕ್ ಜತೆಗಿನ ತಮ್ಮ ಪಾಲುದಾರಿಕೆ ಫೆಡ್ ಸ್ಟಾರ್ ಬಿಜ್ ಮೂಲಕ ಮತ್ತಷ್ಟು ಬಲಗೊಂಡಿದೆ. ಇದು ಫೆಡರಲ್ ಬ್ಯಾಂಕ್ನ ಮೊದಲ ಬಿಸಿನೆಸ್ ಕೇಂದ್ರೀಕೃತ ಕ್ರೆಡಿಟ್ ಕಾರ್ಡ್ ವ್ಯವಸ್ಥೆಯಾಗಿದೆ. ಇದು ಬಿಸಿನೆಸ್ಗಳಿಗೆ ಅಧಿಕ ಸೌಲಭ್ಯ ಮತ್ತು ಹಣಕಾಸು ನಿಯಂತ್ರಣವನ್ನುಕಲ್ಪಿಸುತ್ತದೆ ಎಂದರು.