Salary Hike: ಶಾಸಕರಿಗೆ ಯುಗಾದಿ ಸಿಹಿ, ವೇತನ- ಭತ್ಯೆ ದುಪ್ಪಟ್ಟು ಹೆಚ್ಚಳಕ್ಕೆ ರಾಜ್ಯಪಾಲರ ಸಹಿ
ರಾಜ್ಯದ ವಿಧಾನ ಮಂಡಲದ ಉಭಯ ಸದನದಲ್ಲಿ ಮಸೂದೆ ಮಂಡಿಸಿ ಕರ್ನಾಟಕದ ಮಂತ್ರಿಗಳ ಸಂಬಳ ಮತ್ತು ಭತ್ಯೆಗಳ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡಲಾಗಿತ್ತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಅಂಕಿತಕ್ಕೆ ಕಳುಹಿಸಿಕೊಡಲಾಗಿತ್ತು. ಈ ಕಡತಕ್ಕೆ ರಾಜ್ಯಪಾಲರು ಸಹಿ ಹಾಕಿದ್ದಾರೆ.


ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಯುಗಾದಿ ಹಬ್ಬಕ್ಕೂ (ugadi Festival) ಮುನ್ನ ತಮ್ಮ ಸಹೋದ್ಯೋಗಿಗಳು, ಶಾಸಕರು, ಸಭಾಪತಿ, ಸಭಾಧ್ಯಕ್ಷರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಇಂದು ವಿಧಾನಸಭಾ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಇಂದೇ ವೇತನ ಹೆಚ್ಚಿಸುವ (Salary Hike) ಆದೇಶಕ್ಕೆ ಅನುಮೋದನೆ ನೀಡಲಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕ ಜನಪ್ರತಿನಿಧಿಗಳ ವೇತನ ಹೆಚ್ಚಳ ಮಸೂದೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಈ ಸಂಬಂಧ ರಾಜ್ಯದ ವಿಧಾನ ಮಂಡಲದ ಉಭಯ ಸದನದಲ್ಲಿ ಮಸೂದೆ ಮಂಡಿಸಲಾಗಿತ್ತು. ಕರ್ನಾಟಕದ ಮಂತ್ರಿಗಳ ಸಂಬಳ ಮತ್ತು ಭತ್ಯೆಗಳ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡಲಾಗಿತ್ತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಅಂಕಿತಕ್ಕೆ ಕಳುಹಿಸಿಕೊಡಲಾಗಿತ್ತು. ಈ ಕಡತಕ್ಕೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ಹೀಗಾಗಿ ರಾಜ್ಯದ ಜನಪ್ರತಿನಿಧಿಗಳ ವೇತನ, ಭತ್ಯೆ ಹೆಚ್ಚಳವಾಗಲಿದೆ. ಜನಸಾಮಾನ್ಯರಿಗೆ ಮೆಟ್ರೋ, ಬಸ್ ಟಿಕೆಟ್ ದರ ಏರಿಕೆಯ ಬರೆ, ಬೆಲೆ ಏರಿಕೆ ನಡುವೆ ಕರೆಂಟ್ ಬಿಲ್, ನೀರಿನ ಬಿಲ್ ಏರಿಕೆಯ ಶಾಕ್ ದೊರೆಯುತ್ತಿದೆ. ಆದರೆ ಜನಪ್ರತಿನಿಧಿಗಳಿಗೆ ಸಂಬಳ ಏರಿಕೆಯ ಭರ್ಜರಿ ಗಿಫ್ಟ್ ಸಿಕ್ಕಿದೆ.
ಯಾರಿಗೆ ಎಷ್ಟು ಸಂಬಳ ಹೆಚ್ಚಳ?
ಸಿಎಂ ವೇತನ ₹75,000 ಸಾವಿರದಿಂದ ₹1 ಲಕ್ಷದ 50,000
ಸಚಿವರ ವೇತನ – 60,000 ದಿಂದ 1.25ಲಕ್ಷ
ಶಾಸಕರ ವೇತನ – 40,000 ರಿಂದ 80,000
ಶಾಸಕರ ಪಿಂಚಣಿ – 50,000 ದಿಂದ 75,000
ಹೆಚ್ಚುವರಿ ಪಿಂಚಣಿ – 5,000 ರಿಂದ 20, 000
ಮಾಜಿ ಶಾಸಕರ ವೈದ್ಯಕೀಯ ಭತ್ಯೆ – 5,000 ರಿಂದ 20,000
ಕ್ಷೇತ್ರ ಪ್ರವಾಸ ಭತ್ಯೆ – 60,000 ರಿಂದ 80,000
ರೈಲು, ವಿಮಾನ ಟಿಕೆಟ್ ( ವಾರ್ಷಿಕ) – 2.50 ಲಕ್ಷದಿಂದ 3.50ಲಕ್ಷ
ಸಿಎಂ. ಸಚಿವರ ಅತಿಥಿ ಭತ್ಯೆ – 4.50 ಲಕ್ಷದಿಂದ 5 ಲಕ್ಷ
ಸಚಿವರ ಮನೆ ಬಾಡಿಗೆ ಭತ್ಯೆ – 1.20 ಲಕ್ಷದಿಂದ 2.50 ಲಕ್ಷ
ರಾಜ್ಯ ಸಚಿವರ ವೇತನ – 50,000 ದಿಂದ 70 ಸಾವಿರ
ರಾಜ್ಯ ಸಚಿವರ ಮನೆ ಬಾಡಿಗೆ ಭತ್ಯೆ – 1.20 ಲಕ್ಷದಿಂದ 2 ಲಕ್ಷ
ಸಭಾಪತಿ, ಸಭಾಧ್ಯಕ್ಷರ ವೇತನ – 75 ಸಾವಿರದಿಂದ 1 ಲಕ್ಷದ 25 ಸಾವಿರಕ್ಕೆ ಏರಿಕೆ. ಅತಿಥಿ ಭತ್ಯೆ 4 ರಿಂದ 5 ಲಕ್ಷ ರೂಪಾಯಿ.
ಉಪ ಸಭಾಪತಿ ವೇತನ – 60 ರಿಂದ 80 ಸಾವಿರ. ಅತಿಥಿ ಭತ್ಯೆಯು 2.50 ರಿಂದ 3 ಲಕ್ಷ ರೂಪಾಯಿ.
ವಿರೋಧ ಪಕ್ಷ ನಾಯಕರ ವೇತನ – 60 ಸಾವಿರದಿಂದ 80 ಸಾವಿರ
ವಿರೋಧ ಪಕ್ಷ ನಾಯಕರ ಅತಿಥಿ ಭತ್ಯೆ – 2.50 ಲಕ್ಷದಿಂದ 3 ಲಕ್ಷ
ವಿಪಕ್ಷ ಮುಖ್ಯ ಸಚೇತಕರ ಅತಿಥಿ ಭತ್ಯ – 2.50 ಲಕ್ಷದಿಂದ 3 ಲಕ್ಷ
ಇದನ್ನೂ ಓದಿ: Muzrai Department: ಮುಜರಾಯಿ ದೇಗುಲಗಳ ನೌಕರರಿಗೆ ಸಿಹಿಸುದ್ದಿ; ಇನ್ಮುಂದೆ ಸಂಚಿತ ನಿಧಿಯಿಂದಲೇ ವೇತನ ಪಾವತಿ