RCB vs MI: ವಾಂಖೇಡೆ ಕದನಕ್ಕೆ ಪಾಂಡ್ಯ, ಪಾಟೀದಾರ್ ಅಣಿ
ವಾಂಖೇಡೆ ಕ್ರೀಡಾಂಗಣದಲ್ಲಿ ತಮ್ಮ ಅಸಾಧಾರಣ ವೇಗದ ಬೌಲಿಂಗ್ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ 23 ವರ್ಷದ ಅಶ್ವನಿ ಕುಮಾರ್, ತಮ್ಮ ತಂಡಕ್ಕೆ ಈ ಆವೃತ್ತಿಯಲ್ಲಿ ಮೊದಲ ಜಯ ತಂದುಕೊಟ್ಟಿದ್ದರು. ಹೀಗಾಗಿ ಆರ್‌ಸಿಬಿ ಪಂದ್ಯದಲ್ಲಿಯೂ ಇವರ ಮೇಲೆ ತಂಡ ಹೆಚ್ಚು ಭರವಸೆ ಇರಿಸಿದೆ.


ಮುಂಬಯಿ: ಸತತ ಸೋಲಿನಿಂದ ಕಂಗ್ಗೆಟ್ಟಿರುವ ಮುಂಬೈ ಇಂಡಿಯನ್ಸ್(RCB vs MI) ಗೆಲುವಿನ ಹಳಿ ಏರಲು ತವರಿನ ಅಂಗಳದಲ್ಲಿ ಸೋಮವಾರ ಆರ್‌ಸಿಬಿ ವಿರುದ್ಧ ಸೆಣಸಾಟ ನಡೆಸಲಿವೆ. ಪ್ರಧಾನ ವೇಗಿ ಜಸ್‌ಪ್ರೀತ್ ಬುಮ್ರಾ(Jasprit Bumrah) ತಂಡಕ್ಕೆ ಮರಳಿದ್ದು ಹಾರ್ದಿಕ್ ಪಡೆಯ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಮೂರು ತಿಂಗಳ ಬಳಿಕ ಬುಮ್ರಾ ಆಡುತ್ತಿರುವ ಮೊದಲ ಕ್ರಿಕೆಟ್ ಪಂದ್ಯ ಇದಾಗಿದೆ.
ಹಾಲಿ ಆವೃತ್ತಿಯಲ್ಲಿ ಮುಂಬೈ ತಂಡ ತವರಿನಾಚೆ ಆಡಿದ ಮೂರು ಪಂದ್ಯದಲ್ಲಿ ಸೋಲು ಕಂಡಿತ್ತು. ಅತ್ತ ಆರ್‌ಸಿಬಿ ತವರಿನಾಚೆ ನಡೆದ ಪಂದ್ಯದಲ್ಲಿ ಗೆದ್ದು ತವರಿನ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ತವರಿನಲ್ಲಿ ಮತ್ತು ತವರಿನಾಚೆ ಬಲಿಷ್ಠವಾಗಿರುವ ಇತ್ತಂಡಗಳ ಈ ಮುಖಾಮುಖಿ ಸಹಜವಾಗಿಯೇ ಅಭಿಮಾನಿಗಳ ಕುತೂಹಲ ಹೆಚ್ಚಿಸುವಂತೆ ಮಾಡಿದೆ.
ಬುಮ್ರಾ ಆಗಮನದಿಂದ ಬೌಲಿಂಗ್ ಬಲಿಷ್ಠ
ಜಸ್‌ಪ್ರೀತ್ ಬುಮ್ರಾ ಆಗಮನದಿಂದ ಮುಂಬೈ ವೇಗದ ಬೌಲಿಂಗ್ ವಿಭಾಗ ಬಲಿಷ್ಠಗೊಂಡಿದೆ. ತಂಡದಲ್ಲಿದ್ದ ಟ್ರೆಂಟ್ ಬೌಲ್ಟ್‌ಗೆ ಸರಿಯಾದ ಬೆಂಬಲ ಸಿಗದೆ ಅವರು ಕೂಡ ಬೌಲಿಂಗ್ ಲಯ ಕಳೆದುಕೊಂಡಿದ್ದರು. ಇದೀಗ ಅನುಭವಿ ಬುಮ್ರಾ ತಂಡ ಸೇರಿದ ಕಾರಣ ಬೌಲಿಂಗ್ ಚಿಂತೆ ದೂರವಾಗಿದೆ.
ಇದನ್ನೂ ಓದಿ MI vs RCB: ಆರ್‌ಸಿಬಿ-ಮುಂಬೈ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ ಹೇಗಿದೆ?
ವಾಂಖೇಡೆ ಕ್ರೀಡಾಂಗಣದಲ್ಲಿ ತಮ್ಮ ಅಸಾಧಾರಣ ವೇಗದ ಬೌಲಿಂಗ್ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ 23 ವರ್ಷದ ಅಶ್ವನಿ ಕುಮಾರ್, ತಮ್ಮ ತಂಡಕ್ಕೆ ಈ ಆವೃತ್ತಿಯಲ್ಲಿ ಮೊದಲ ಜಯ ತಂದುಕೊಟ್ಟಿದ್ದರು. ಹೀಗಾಗಿ ಈ ಪಂದ್ಯದಲ್ಲಿಯೂ ಇವರ ಮೇಲೆ ತಂಡ ಹೆಚ್ಚು ಭರವಸೆ ಇರಿಸಿದೆ. ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮ, ತಿಲಕ್ ವರ್ಮಾ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಮಿಂಚಬೇಕಿದೆ. ಸದ್ಯ ಸೂರ್ಯಕುಮಾರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ.
Game ho ya life, we 𝑷𝑳𝑨𝒀 𝑳𝑰𝑲𝑬 𝑴𝑼𝑴𝑩𝑨𝑰 🔥💙#MumbaiIndians #PlayLikeMumbai pic.twitter.com/UYE3HAJF8N
— Mumbai Indians (@mipaltan) March 20, 2025
ಆರ್‌ಸಿಬಿ ಸಮರ್ಥ ತಂಡ
ಆರ್‌ಸಿಬಿ ಮೇಲ್ನೋಟಕ್ಕೆ ಮುಂಬೈಗಿಂತ ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಬ್ಯಾಟಿಂಗ್‌ನಲ್ಲಿ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್, ಜಿತೇಶ್ ಶರ್ಮ ಹೀಗೆ 8ನೇ ಕ್ರಮಾಂಕದವರೆಗೂ ಪಟ್ಟಿ ಬೆಳೆಯುತ್ತಲೇ ಸಾಗತ್ತದೆ. ಬೌಲಿಂಗ್‌ನಲ್ಲಿ ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್, ಪಾರ್ಟ್ ಟೈ ಬೌಲರ್ ಲಿವಿಂಗ್‌ಸ್ಟೋನ್ ಈ ಹಿಂದೆ ಮುಂಬೈ ಪರವೇ ಆಡಿದ್ದ ಕೃಣಾಲ್ ಪಾಂಡ್ಯ ತಂಡಕ್ಕೆ ಶಕ್ತಿ ತುಂಬಿದ್ದಾರೆ.
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್.