Crime News: ನಗ್ನ ವಿಡಿಯೋ ಕಾಲ್ ಮಾಡುವಂತೆ ಒತ್ತಾಯಿಸಿದ ಅನ್ಯಕೋಮಿನ ಯುವಕನಿಗೆ ಧರ್ಮದೇಟು
ಯುವತಿ ತನ್ನ ಕಚೇರಿಯ ಸಹೋದ್ಯೋಗಿಯ ನಂಬರ್ ನೀಡಿ ಆತನನ್ನು ಸಾಗ ಹಾಕಿದ್ದರು. ಆದರೆ, ಅದು ಆ ಯುವತಿಯದ್ದೇ ಫೋನ್ ನಂಬರ್ ಎಂದು ಭಾವಿಸಿದ್ದ ಸವಾದ್ ನಿರಂತರ ಅಶ್ಲೀಲ ಮೆಸೇಜ್ ಮಾಡಲು ಆರಂಭಿಸಿದ್ದ. ಆತನ ಎಲ್ಲ ಮೆಸೇಜ್ಗಳಿಗೂ ಆ ಯುವತಿಯ ಸಹೋದ್ಯೋಗಿ ಯುವಕ ಉತ್ತರಿಸಿ ಆಟವಾಡಿಸಿದ್ದ.

ಏಟು ತಿಂದ ಸವಾದ್

ಮಂಗಳೂರು: ನಗ್ನ ವಿಡಿಯೋ ಕಾಲ್ ಮಾಡುವಂತೆ ಹಿಂದೂ ಯುವತಿಗೆ (hindu girl) ಒತ್ತಾಯಿಸಿದ ಅನ್ಯ ಕೋಮಿನ (muslim youth) ಲಂಪಟ ಯುವಕನೊಬ್ಬನಿಗೆ ಚೆನ್ನಾಗಿ ಗೂಸಾ ಬಿದ್ದಿದೆ. ಈ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ವಿಟ್ಲ ಬಳಿಯ ಕನ್ಯಾನದಲ್ಲಿ ನಡೆದಿದೆ. ಕನ್ಯಾನ ನಿವಾಸಿ ಸವಾದ್ (26) ಎಂಬಾತನೇ ಹೀಗೆ ಧರ್ಮದೇಟು ತಿಂದ ಯುವಕ. ಈತ ಅನ್ಯಕೋಮಿನ ಯುವತಿಯನ್ನು ಪಟಾಯಿಸಲು ಯತ್ನಿಸಿದ್ದಲ್ಲದೆ, ನಡುರಾತ್ರಿ ನಗ್ನ ಕಾಲ್ ಮಾಡುವಂತೆ ಒತ್ತಾಯಿಸಿದ್ದಾನೆ. ಆದರೆ ದುರದೃಷ್ಟವಶಾತ್, ತಾನು ಬೇರೊಬ್ಬ ಯುವಕನಿಗೇ ಕರೆ ಮಾಡುತ್ತಿದ್ದೇನೆ ಎಂಬ ಅರಿವೇ ಆತನಿಗಿರಲಿಲ್ಲ!
ಕನ್ಯಾನದ ಸವಾದ್ ಬೆಂಗಳೂರಿನ ಬಟ್ಟೆ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ರಂಜಾನ್ ಹಬ್ಬಕ್ಕೆಂದು ಊರಿಗೆ ಬಂದಿದ್ದ. ಈ ಸಂದರ್ಭ ವಿಟ್ಲದ ಕಚೇರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿಯನ್ನು ನೋಡಿ ಮರುಳಾಗಿ ಆಕೆಯನ್ನು ಪಟಾಯಿಸಲು ಹೊಂಚು ಹಾಕಿದ್ದಾನೆ. ಗೂಗಲ್ ಪೇ ಮೂಲಕ ಉಪಾಯದಿಂದ ಯುವತಿಯ ನಂಬರ್ ಪಡೆಯಲು ಯತ್ನಿಸಿದ್ದಾನೆ. ಆ ಸಂದರ್ಭದಲ್ಲಿ ಯುವತಿ ತನ್ನ ಕಚೇರಿಯ ಸಹೋದ್ಯೋಗಿಯ ನಂಬರ್ ನೀಡಿ ಆತನನ್ನು ಸಾಗ ಹಾಕಿದ್ದರು. ಆದರೆ, ಅದು ಆ ಯುವತಿಯದ್ದೇ ಫೋನ್ ನಂಬರ್ ಎಂದು ಭಾವಿಸಿದ್ದ ಸವಾದ್ ನಿರಂತರ ಮೆಸೇಜ್ ಮಾಡಲು ಆರಂಭಿಸಿದ್ದ. ಆತನ ಎಲ್ಲ ಮೆಸೇಜ್ಗಳಿಗೂ ಆ ಯುವತಿಯ ಸಹೋದ್ಯೋಗಿ ಯುವಕ ಉತ್ತರಿಸಿ ಆಟವಾಡಿಸಿದ್ದ.
ಇದಾದ ನಂತರ ಸವಾದ್ ತಡರಾತ್ರಿ ಅಶ್ಲೀಲ ವಿಡಿಯೋಗಳನ್ನು ಕಳುಹಿಸಲು ಆರಂಭಿಸಿದ್ದ. ಅಂಗಾಂಗ ತೋರಿಸು ಎಂದು ವಾಯ್ಸ್ ಮೆಸೇಜ್ ಕಳುಹಿಸಿದ್ದ. ನಂತರ ಭೇಟಿಯಾಗುವಂತೆ ಮಸೇಜ್ ಮೂಲಕ ಒತ್ತಾಯಿಸಿದ್ದ. ಇದಕ್ಕೆ ಯುವತಿ ಹೆಸರಿನಲ್ಲಿ ಚಾಟ್ ಮಾಡುತ್ತಿದ್ದ ಯುವಕ ಒಪ್ಪಿದ್ದ. ಹೀಗಾಗಿ ಸವಾದ್, ಯುವತಿಗೆಂದು ಐಸ್ ಕ್ರೀಂ, ಚಾಕೊಲೇಟ್ ತೆಗೆದುಕೊಂಡು ನಡುರಾತ್ರಿ ತೆರಳಿದ್ದ. ಆತನಿಗಾಗಿ ಕಾದು ಕುಳಿತಿದ್ದ ಸ್ಥಳೀಯ ಯುವಕರು, ಸರಿಯಾಗಿ ತದುಕಿದ್ದಾರೆ. ನಂತರ ಆತನನ್ನು ಹಿಡಿದು ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: Vinay Somaiah death: ಆತ್ಮಹತ್ಯೆಗೆ ಮುನ್ನ ಪತ್ನಿಗೆ ಪತ್ರ ಬರೆದಿದ್ದ ವಿನಯ್, ಲೆಟರ್ನಲ್ಲಿ ಏನಿದೆ?