ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Road Accident: ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: 'ಆದಿಯೋಗಿ' ದರ್ಶನಕ್ಕೆ ಬಂದಿದ್ದ ಇಬ್ಬರು ಯುವಕರ ದುರ್ಮರಣ!

Road Accident: ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬ್ರಿಡ್ಜ್ ಬಳಿ ದುರಂತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಇಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

'ಆದಿಯೋಗಿ' ದರ್ಶನಕ್ಕೆ ಬಂದಿದ್ದ ಇಬ್ಬರು ಯುವಕರ ದುರ್ಮರಣ!

Profile Prabhakara R Feb 26, 2025 1:40 PM

ಚಿಕ್ಕಬಳ್ಳಾಪುರ: ರಾಜ್ಯದೆಲ್ಲೆಡೆ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದ್ದು, ಶಿವ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಈ ನಡುವೆ ಚಿಕ್ಕಬಳ್ಳಾಪುರ ಬಳಿಯ ಆದಿಯೋಗಿ ಪ್ರತಿಮೆ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಆದರೆ ಆದಿಯೋಗಿ ದರ್ಶನ ಪಡೆದು ಹಿಂದಿರುಗುತ್ತಿದ್ದಾಗ ಲಾರಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲಿ ಇಬ್ಬರು ಯುವಕರು ದುರ್ಮರಣ ಹೊಂದಿರುವ ಘಟನೆ (Road Accident) ನಡೆದಿದೆ. ನೇಪಾಳ ಮೂಲದ ಸುನಿಲ್ ಬಿಸ್ತೂರಿ ಹಾಗೂ ಕುಜಲ್ ಭಂಡಾರಿ ಮೃತ ಯುವಕರು ಎಂದು ತಿಳಿದು ಬಂದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬ್ರಿಡ್ಜ್ ಬಳಿ ದುರಂತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿದೆ. ಇದರಿಂದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ಯುವಕರು ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬೈಕ್‌ನಲ್ಲಿದ್ದ ಸುನಿಲ್ ಬಿಡ್ತೀರಿ ಹಾಗೂ ಕುಜಲ್ ಭಂಡಾರಿ ದುರ್ಮರಣ ಹೊಂದಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನೂ ಓದಿ | Assault Case: ಟಿಕೆಟ್ ಬೆಲೆ ಏರಿಸಿದ್ದಕ್ಕೆ ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಕುಡುಕ!

ಪತ್ನಿಯ ಶೀಲ ಶಂಕಿಸಿ ಕೊಂದು, ಸುಟ್ಟುಹಾಕಲು ಯತ್ನಿಸಿದ ದುರುಳ ಆರೆಸ್ಟ್

husbnd killed wife doddaballapuara

ಬೆಂಗಳೂರು: ಪತಿಯೊಬ್ಬ ತನ್ನ ಪತ್ನಿಯ ಶೀಲವನ್ನು ಶಂಕಿಸಿದ್ದಲ್ಲದೆ, ಕುಡಿದ ನಶೆಯಲ್ಲಿ ಆಕೆಯ ತಲೆಯನ್ನು (husband killed wife) ಗೋಡೆಗೆ ಗುದ್ದಿ ಕೊಲೆ (Murder Case) ಮಾಡಿದ್ದಾನೆ. ಅಷ್ಟಕ್ಕೆ ಸುಮ್ಮನಿರದೇ ಪತ್ನಿಯ ಅಂತ್ಯಕ್ರಿಯೆಗೂ ಯತ್ನಿಸಿದ್ದಾನೆ. ಈ ವೇಳೆ ಸ್ಮಶಾನಕ್ಕೆ ಎಂಟ್ರಿ ಕೊಟ್ಟ ಪೊಲೀಸರು ಪತಿಯನ್ನು ಬಂಧಿಸಿ (Crime News) ಎಳೆದೊಯ್ದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ನೇರಳೆಘಟ್ಟ ಗ್ರಾಮದಲ್ಲಿ ನಡೆದಿದೆ.

ಕೊಲೆಗೈದು ಪತ್ನಿಯ ಅಂತ್ಯಕ್ರಿಯೆ ವೇಳೆ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನೇರಳೆಘಟ್ಟ ಗ್ರಾಮದ ಲಕ್ಷ್ಮಯ್ಯ ಎಂಬಾತ ತನ್ನ ಪತ್ನಿ ರಾಧಮ್ಮ (45) ಳನ್ನು ಕೊಲೆ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ಪತ್ನಿಯ ಜೊತೆಗೆ ಗಲಾಟೆ ಮಾಡಿದ್ದ ಲಕ್ಷ್ಮಯ್ಯ ಗಲಾಟೆಯ ವೇಳೆ ಪತ್ನಿಯ ತಲೆಯನ್ನು ಗೋಡೆಗೆ ಗುದ್ದಿ ಕೊಲೆ ಮಾಡಿದ್ದಾನೆ.

ಬಳಿಕ ಕುಟುಂಬಸ್ಥರು ಸೇರಿ ಕೊಲೆ ಕೇಸ್ ಅನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಹತ್ಯೆ ಮಾಡಿ ದೂರು ದಾಖಲಿಸದೆ ಅಂತ್ಯಕ್ರಿಯೆಗೆ ಯತ್ನಿಸಿದ್ದಾರೆ. ಕೊನೆ ಕ್ಷಣದಲ್ಲಿ ಪೊಲೀಸರು ಸ್ಮಶಾನಕ್ಕೆ ಎಂಟ್ರಿ ನೀಡಿ ಆರೋಪಿ ಪತಿ ಲಕ್ಷ್ಮಯ್ಯನನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಮಂಡ್ಯದಲ್ಲಿ ರೌಡಿಶೀಟರ್‌ ಕಾಲಿಗೆ ಗುಂಡು ಹಾರಿಸಿ ಸೆರೆ

ಮಂಡ್ಯ: ಮಂಡ್ಯದಲ್ಲಿ ಹಾವಳಿ ಎಬ್ಬಿಸಿ ಹಲವು ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಸುಭಾಷ್ ಅಲಿಯಾಸ ಸುಬ್ಬು ಎಂಬ ರೌಡಿಶೀಟರ್‌ ಮೇಲೆ ಫೈರಿಂಗ್ ಮಾಡಲಾಗಿದೆ. ಮಂಡ್ಯ ತಾಲೂಕಿನ ಬಿ. ಹೊಸೂರು ಸಮೀಪ ಕಾಲಿಗೆ ಗುಂಡು ಹೊಡೆದು ಆರೋಪಿ ಸುಭಾಷ್‌ನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Kerala Horror: ಯುವಕನಿಂದ ಬರ್ಬರ ಹತ್ಯಾಕಾಂಡ; ಪ್ರೇಯಸಿಯನ್ನೂ ಸೇರಿಸಿ ಕುಟುಂಬದ ಐವರ ಕೊಲೆ

ಐದಕ್ಕೂ ಅಧಿಕ ಪ್ರಕರಣಗಳಲ್ಲಿ ಆರೋಪಿ ಸುಭಾಷ್‌ ಭಾಗಿಯಾಗಿದ್ದ. ಬಿ. ಹೊಸೂರು ಸಮೀಪ ಆತ ತಲೆಮರೆಸಿಕೊಂಡಿರುವ ಮಾಹಿತಿ ಗೊತ್ತಾಗಿ ಬಂಧನಕ್ಕೆ ಪೊಲೀಸರು ತೆರಳಿದ್ದಾರೆ. ಈ ವೇಳೆ ಪೊಲೀಸರ ಮೇಲೆಯೇ ಆರೋಪಿ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಮಂಡ್ಯ ಪೂರ್ವ ಠಾಣೆಯ ಪಿಎಸ್‌ಐ ಶೇಷಾದ್ರಿ ಕುಮಾರ್ ಫೈರಿಂಗ್ ಮಾಡಿದ್ದಾರೆ. ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ. ಗಾಯಾಳು ಆರೋಪಿಯನ್ನು ಬಂಧಿಸಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.