ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MS Dhoni: ನಿವೃತ್ತಿ ಬಗ್ಗೆ ಮೌನ ಮುರಿದ ಧೋನಿ

MS Dhoni breaks silence on IPL retirement: ಡೆಲ್ಲಿ ಪಂದ್ಯದ ಬಳಿಕ ಧೋನಿ ನಿವೃತ್ತಿ ಪ್ರಶ್ನೆಗೆ ಉತ್ತರಿಸಿ ಕೋಚ್‌ ಸ್ಟೀಫನ್ ಫ್ಲೆಮಿಂಗ್, 'ನನಗೆ ಯಾವುದೇ ಕಲ್ಪನೆ ಇಲ್ಲ. ನಾನು ಅವರೊಂದಿಗೆ ಕೆಲಸ ಮಾಡುವುದನ್ನು ಇನ್ನೂ ಆನಂದಿಸುತ್ತಿದ್ದೇನೆ. ಅವರು ಇನ್ನೂ ಬಲಿಷ್ಠರಾಗಿದ್ದಾರೆ. ನಾನು ಧೋನಿಯ ಮುಂದಿನ ಭವಿಷ್ಯದ ಬಗ್ಗೆ ಕೇಳುವುದಿಲ್ಲ' ಎಂದು ಹೇಳಿದ್ದರು.

ನಿವೃತ್ತಿ ಬಗ್ಗೆ ಮೌನ ಮುರಿದ ಧೋನಿ

Profile Abhilash BC Apr 6, 2025 8:39 PM

ಚೆನ್ನೈ: ಶನಿವಾರ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ(MS Dhoni) ಪೋಷಕರು ಚೆನ್ನೈ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ಬಳಿಕ ಧೋನಿ ನಿವೃತ್ತಿ(MS Dhoni IPL retirement) ಕುರಿತ ಚರ್ಚೆಗಳು ಮತ್ತೆ ಶುರುವಾಗಿದೆ. ಧೋನಿ ಭಾರತ ಪರ ಹಾಗೂ ಐಪಿಎಲ್‌ನಲ್ಲಿ ಇದುವರೆಗೆ ಆಡಿದ್ದರೂ ಕೂಡ ಧೋನಿ ಪೋಷಕರು ಒಮ್ಮೆಯೂ ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ. ಮೊದಲ ಬಾರಿಗೆ ಅವರು ಮಗನ ಪಂದ್ಯವನ್ನು ಕಣ್ತುಂಬಿಕೊಂಡ ಕಾರಣ ಧೋನಿ ಈ ಬಾರಿ ನಿವೃತ್ತಿ ಪ್ರಕಟಿಸಲಿದ್ದಾರೆ ಎನ್ನಲಾಗಿದೆ. ಆದರೆ ಧೋನಿ ತಮ್ಮ ನಿವೃತ್ತಿ ವದಂತಿಗಳನ್ನು(Dhoni breaks silence on IPL retirement) ತಳ್ಳಿ ಹಾಕಿದ್ದಾರೆ.

ರಾಜ್ ಶಮಾನಿ ಅವರೊಂದಿಗಿನ ಹೊಸ ಪಾಡ್‌ಕ್ಯಾಸ್ಟ್‌ನಲ್ಲಿ ತಮ್ಮ ನಿವೃತ್ತಿ ವದಂತಿಗಳನ್ನು ಉಲ್ಲೇಖಿಸಿ ಮಾತನಾಡಿದ ಧೋನಿ, "ಇಲ್ಲ, ಈಗ ಅಲ್ಲ. ನಾನು ಇನ್ನೂ ಐಪಿಎಲ್ ಆಡುತ್ತಿದ್ದೇನೆ. ನಾನು ಅದನ್ನು ತುಂಬಾ ಸರಳವಾಗಿ ಇಟ್ಟುಕೊಂಡಿದ್ದೇನೆ. ನನಗೆ 43 ವರ್ಷ, ಐಪಿಎಲ್ 2025 ಮುಗಿಯುವ ಹೊತ್ತಿಗೆ, ನನಗೆ 44 ವರ್ಷ ವಯಸ್ಸಾಗುತ್ತದೆ, ಆದ್ದರಿಂದ ಅದರ ನಂತರ ನಾನು ಆಡಬೇಕೆ ಅಥವಾ ಬೇಡವೇ ಎಂದು ನಿರ್ಧರಿಸಲು ನನಗೆ 10 ತಿಂಗಳುಗಳಿವೆ. ಆದರೆ ನಿರ್ಧರಿಸುವುದು ನಾನಲ್ಲ, ನನ್ನ ದೇಹ ನಿರ್ಧರಿಸುತ್ತದೆ. ಹೀಗಾಗಿ ಈಗಲೇ ನಿವೃತ್ತಿ ಬಗ್ಗೆ ಯೋಚನೆ ಮಾಡಿಲ್ಲ' ಎಂದು ಹೇಳುವ ನಿವೃತ್ತಿ ವರದಿಯನ್ನು ತಳ್ಳಿ ಹಾಕಿದರು.

ಇದನ್ನೂ ಓದಿ IPL 2025: ಎಂಎಸ್‌ ಧೋನಿ ಐಪಿಎಲ್‌ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಸಮಯ ಬಂದಾಯ್ತು!

ಡೆಲ್ಲಿ ಪಂದ್ಯದ ಬಳಿಕ ಧೋನಿ ನಿವೃತ್ತಿ ಪ್ರಶ್ನೆಗೆ ಉತ್ತರಿಸಿ ಕೋಚ್‌ ಸ್ಟೀಫನ್ ಫ್ಲೆಮಿಂಗ್, 'ನನಗೆ ಯಾವುದೇ ಕಲ್ಪನೆ ಇಲ್ಲ. ನಾನು ಅವರೊಂದಿಗೆ ಕೆಲಸ ಮಾಡುವುದನ್ನು ಇನ್ನೂ ಆನಂದಿಸುತ್ತಿದ್ದೇನೆ. ಅವರು ಇನ್ನೂ ಬಲಿಷ್ಠರಾಗಿದ್ದಾರೆ. ನಾನು ಧೋನಿಯ ಮುಂದಿನ ಭವಿಷ್ಯದ ಬಗ್ಗೆ ಕೇಳುವುದಿಲ್ಲ' ಎಂದು ಹೇಳಿದ್ದರು.

ಅತ್ಯುತ್ತಮ ಫಿನಿಷರ್ ಎಂಬ ಬಿರುದು ಹೊಂದಿರುವ ಧೋನಿ, ಈ ಬಾರಿಯ ಟೂರ್ನಿಯಲ್ಲಿ ಅತ್ಯಂತ ನಿಧಾನಗತಿಯ ಬ್ಯಾಟಿಂಗ್‌ ಮೂಲಕ ಸ್ವತಃ ಅಭಿಮಾನಿಗಳಿಂದಲೇ ಟೀಕೆ ಎದುರಿಸುತ್ತಿದ್ದಾರೆ. ಜತೆಗೆ ನಿವೃತ್ತಿ ಘೋಷಿಸಿ ಎಂದು ಹಲವರು ಸಲಹೆಯನ್ನು ಕೂಡ ನೀಡಿದ್ದಾರೆ.