Virat Kohli: ಟಿ20ಯಲ್ಲಿ ವಿಶೇಷ ದಾಖಲೆ ನಿರ್ಮಿಸುವ ಸನಿಹದಲ್ಲಿ ಕೊಹ್ಲಿ
IPL 2025: ಕೊಹ್ಲಿಯ ನೆಚ್ಚಿನ ಮೈದಾನ ಎನಿಸಿಕೊಂಡಿರುವ ವಾಖೇಂಡೆ ಸ್ಟೇಡಿಯಂನಲ್ಲಿ ಈಗಾಗಲೇ ಕೊಹ್ಲಿ ಹಲವು ದಾಖಲೆ ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್‌ನ 50ನೇ ಶತಕ ಪೂರೈಸಿದ್ದು ಕೂಡ ಇದೇ ಮೈದಾನದಲ್ಲಿ. ಹೀಗಾಗಿ ಕೊಹ್ಲಿಗೆ ವಾಖೇಂಡೆ ಲಕ್ಕಿ ಎನಿಸಿಕೊಂಡಿದೆ.


ಮುಂಬಯಿ: ಸೋಮವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ(RCB) ತಂಡ ಮುಂಬೈ ಇಂಡಿಯನ್ಸ್(MI vs RCB) ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli)ಗೆ ನೂತನ ಮೈಲುಗಲ್ಲೊಂದನ್ನು ನಿರ್ಮಿಸುವ ಅವಕಾಶವಿದೆ. ಕೊಹ್ಲಿ ಪಂದ್ಯದಲ್ಲಿ 17 ರನ್ ಬಾರಿಸಿದರೆ ಟಿ20 ಕ್ರಿಕೆಟ್‌ನಲ್ಲಿ13 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಮತ್ತು ವಿಶ್ವದ ಐದನೇ ಬ್ಯಾಟರ್ ಆಗಲಿದ್ದಾರೆ. ಕೊಹ್ಲಿಗೆ ಕಳೆದ ಗುಜರಾತ್ ವಿರುದ್ಧದ ಪಂದ್ಯದಲ್ಲೇ ಈ ದಾಖಲೆ ನಿರ್ಮಿಸುವ ಅವಕಾಶವಿತ್ತು. ಆದರೆ ಕೊಹ್ಲಿ 7 ರನ್‌ಗೆ ಔಟ್ ಆಗಿದ್ದರು.
ಕೊಹ್ಲಿಯ ನೆಚ್ಚಿನ ಮೈದಾನ ಎನಿಸಿಕೊಂಡಿರುವ ವಾಖೇಂಡೆ ಸ್ಟೇಡಿಯಂನಲ್ಲಿ ಈಗಾಗಲೇ ಕೊಹ್ಲಿ ಹಲವು ದಾಖಲೆ ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್‌ನ 50ನೇ ಶತಕ ಪೂರೈಸಿದ್ದು ಕೂಡ ಇದೇ ಮೈದಾನದಲ್ಲಿ. ಹೀಗಾಗಿ ಕೊಹ್ಲಿಗೆ ವಾಖೇಂಡೆ ಲಕ್ಕಿ ಎನಿಸಿಕೊಂಡಿದೆ. ಸೋಮವಾರ ಮುಂಬೈ ವಿರುದ್ಧವೂ ಕೊಹ್ಲಿ ಉತ್ತಮ ಬ್ಯಾಟ್ ಬೀಸಿ 13 ಸಾವಿರ ರನ್ ಪೂರೈಸಲಿದ್ದಾರೆ ಎನ್ನುವುದು ಅಭಿಮಾನಿಗಳ ನಂಬಿಕೆ.
ಟಿ20ಯಲ್ಲಿ 13 ಸಾವಿರ ರನ್ ಗಳಿಸಿದ ಆಟಗಾರರು
ಕ್ರಿಸ್ ಗೇಲ್- 14,562 ರನ್
ಅಲೆಕ್ಸ್ ಹೇಲ್ಸ್- 13,610 ರನ್
ಶೋಯಿಬ್ ಮಲಿಕ್- 13,557 ರನ್
ಕೈರಾನ್ ಪೊಲಾರ್ಡ್- 13,537 ರನ್
ವಿರಾಟ್ ಕೊಹ್ಲಿ- 12,983* ರನ್
“His Time is N̶o̶w̶ Forever” 😎🖐
— Royal Challengers Bengaluru (@RCBTweets) April 6, 2025
Virat Kohli is THE vibe! 😆❤️
🎧: John Cena (My Time is Now) pic.twitter.com/69uXWrPtcE
ರೋಹಿತ್ ಜತೆಗಿನ ಒಡನಾಟ ಬಿಚ್ಚಿಟ್ಟ ಕೊಹ್ಲಿ
ಮುಂಬೈ-ಆರ್‌ಸಿಬಿ ಪಂದ್ಯಕ್ಕೂ ಮುನ್ನ ಮುನ್ನ ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮ ಜತೆಗಿನ ತಮ್ಮ ಒಡನಾಟದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕೊಹ್ಲಿ ಮಾತನಾಡಿರುವ ಒಂದೂವರೆ ನಿಮಿಷದ ವಿಡಿಯೊವನ್ನುಆರ್‌ಸಿಬಿ ತನ್ನ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
'ತಂಡದ ನಾಯಕತ್ವದ ವಿಚಾರದಲ್ಲಿ ನಾವಿಬ್ಬರೂ ಬಹಳ ನಿಕಟವಾಗಿ ಕೆಲಸ ಮಾಡಿದ್ದೇವೆ. ಹಾಗಾಗಿ, ಸಾಕಷ್ಟು ವಿಚಾರಗಳನ್ನು ಚರ್ಚಿಸಿದ್ದೇವೆ. ಯಾವುದೇ ನಿರ್ದಿಷ್ಠ ಪರಿಸ್ಥಿತಿ ಅಥವಾ ಪಂದ್ಯದ ಸಂದರ್ಭದಲ್ಲಿ ನಮ್ಮಿಬ್ಬರ ನಿಲುವುಗಳು ಹೆಚ್ಚೂ ಕಡಿಮೆ ಒಂದೇ ಆಗಿರುತ್ತವೆ' ಎಂದು ಕೊಹ್ಲಿ ಹೇಳಿದರು.
'ನಾವಿಬ್ಬರು ಒಟ್ಟಿಗೆ ಆಡಿದ ಸಮಯವನ್ನು ಖಂಡಿತಾ ಸಂಭ್ರಮಿಸಿದ್ದೇವೆ. ಹಾಗಾಗಿಯೇ ದೀರ್ಘಕಾಲ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು. ನಾವು ಯುವಕರಾಗಿದ್ದಾಗ, ಭಾರತ ಪರ 15 ವರ್ಷ ಆಡುತ್ತೇವೆಯೇ ಎಂಬುದು ಖಾತ್ರಿ ಇರಲಿಲ್ಲ. ಇಷ್ಟು ದೀರ್ಘ ಮತ್ತು ನಿರಂತರ ಪ್ರಯಾಣ, ನಾವು ಹಂಚಿಕೊಂಡ ಎಲ್ಲಾ ನೆನಪುಗಳು, ಪ್ರತಿ ಕ್ಷಣಗಳಿಗೆ ಕೃತಜ್ಞರಾಗಿದ್ದೇವೆ' ಎಂದು ರೋಹಿತ್ ಜತೆಗಿನ ಒಡನಾಟವನ್ನು ಕೊಹ್ಲಿ ತೆರೆದಿಟ್ಟರು.