ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pushpa 2: ಕಿರುತೆರೆಗೆ ಎಂಟ್ರಿ ಕೊಡಲು ಸಜ್ಜಾದ ಪುಷ್ಪ-2: ಏಕಕಾಲಕ್ಕೆ ವಿವಿಧ ಚಾನೆಲ್​ಗಳಲ್ಲಿ ಪ್ರದರ್ಶನ

ಇದೇ ಏಪ್ರಿಲ್ 13 ರಂದು ಪುಷ್ಪ 2 ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಿದೆ. ಇದೇ ಮೊದಲ ಬಾರಿಗೆ ಪುಷ್ಪ 2 ಸಿನಿಮಾ ಟಿವಿಯಲ್ಲಿ ಪ್ರಸಾರ ಆಗಲಿದ್ದು, ಏಕಕಾಲದಲ್ಲಿ ಒಂದೇ ದಿನ ಹಲವು ಭಾಷೆಗಳಲ್ಲಿ ಪ್ರಸಾರ ಕಾಣಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ ಏಳು ಗಂಟೆಗೆ ಪುಷ್ಪ 2 ಪ್ರಸಾರವಾಗಲಿದೆ.

Profile Vinay Bhat Apr 7, 2025 7:26 AM

ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಬ್ಲಾಕ್‌ಬಸ್ಟರ್ ಆಕ್ಷನ್-ಪ್ಯಾಕ್ಡ್ ಡ್ರಾಮಾ, ಪುಷ್ಪ 2: ದಿ ರೂಲ್ ಕಿರುತೆರೆಗೆ ಬರಲು ಸಜ್ಜಾಗಿದೆ. ಅನೇಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಟಗಟಿದ ಪುಷ್ಪ-2 ಸದ್ಯದಲ್ಲೇ ಟಿವಿ ಯಲ್ಲಿ ವೀಕ್ಷಿಸಬಹುದು. ಈ ಸಿನಿಮಾ ಈಗಾಗಲೇ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಓಟಿಟಿಯಲ್ಲೂ ಪುಷ್ಪ ದಾಖಲೆ ನಿರ್ಮಿಸಿತ್ತು. ಪುಷ್ಪ 2: ದಿ ರೂಲ್ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

ಇದೇ ಏಪ್ರಿಲ್ 13 ರಂದು ಪುಷ್ಪ 2 ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಿದೆ. ಇದೇ ಮೊದಲ ಬಾರಿಗೆ ಪುಷ್ಪ 2 ಸಿನಿಮಾ ಟಿವಿಯಲ್ಲಿ ಪ್ರಸಾರ ಆಗಲಿದ್ದು, ದಾಖಲೆ ಮೊತ್ತದ ಟಿಆರ್​ಪಿಯನ್ನು ಬಾಚುವ ನಿರೀಕ್ಷೆ ಹುಟ್ಟಿಸಿದೆ. ವಿಶೇಷವೆಂದರೆ, ಪುಷ್ಪ 2 ಕಳೆದ ಡಿಸೆಂಬರ್​ನಲ್ಲಿ ಏಕಕಾಲದಲ್ಲಿ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಅಂತೆಯೇ ಟಿವಿಗೂ ಸಹ ಏಕಕಾಲದಲ್ಲಿ ಒಂದೇ ದಿನ ಹಲವು ಭಾಷೆಗಳಲ್ಲಿ ಪ್ರಸಾರ ಕಾಣಲಿದೆ.

ಏಪ್ರಿಲ್ 13 ರಂದು ಪುಷ್ಪ 2 ಸಿನಿಮಾ ತೆಲುಗು, ಕನ್ನಡ, ತಮಿಳು ಇನ್ನೂ ಕೆಲ ಭಾಷೆಗಳಲ್ಲಿ ವಿವಿಧ ಚಾನೆಲ್​ಗಳಲ್ಲಿ ಪ್ರದರ್ಶನವಾಗಲಿದೆ. ತೆಲುಗಿನಲ್ಲಿ ಪುಷ್ಪ 2 ಸ್ಟಾರ್ ಮಾನಲ್ಲಿ ಪ್ರದರ್ಶನಗೊಳ್ಳಲಿದೆ. ಕನ್ನಡದಲ್ಲಿಯೂ ಸಹ ಏಪ್ರಿಲ್ 13 ರಂದೇ ಪ್ರದರ್ಶನಗೊಳ್ಳಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ ಏಳು ಗಂಟೆಗೆ ಪುಷ್ಪ 2 ಪ್ರಸಾರವಾಗಲಿದೆ. ಅದೇ ದಿನವೇ ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿಯೂ ಸಹ ಈ ಸಿನಿಮಾ ಟಿವಿಯಲ್ಲಿ ಪ್ರಸಾರವಾಗಲಿದೆ.

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪರಾಜ್ ಆಗಿ ದೊಡ್ಡ ಸ್ಕ್ರೀನ್ ನಲ್ಲಿ ಅಬ್ಬರಿಸಿದ ಪುಷ್ಪ-2 ಬಾಕ್ಸಾಫೀಸ್ ನಲ್ಲಿ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ 2024ರ ಅತೀ ಹೆಚ್ಚು ಗಳಿಕ ಕಂಡ ಚಿತ್ರವಾಗಿ ಹೊರಹೊಮ್ಮಿತು. ಸುಕುಮಾರ್ ನಿರ್ದೇಶನದ ಪುಷ್ಪ-2 ನಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ, ಫಾಸಿಲ್, ಜಗಪತಿ ಬಾಬು, ಸುನಿಲ್, ಅನುಪಮಾ ಮುಂತಾದವರು ನಟಿಸಿದ್ದಾರೆ.

Niveditha Gowda: ಬಾಯ್ಸ್‌ v/s ಗರ್ಲ್ಸ್ ಶೋನಲ್ಲಿ ಆ ವಿಚಾರ ನೆನೆದು ಕಣ್ಣೀರಿಟ್ಟ ನಿವೇದಿತಾ ಗೌಡ