Bhagya Lakshmi Serial: ಭಾಗ್ಯಾಳಿಗೆ ಬಾಕಿ ಹಣ ಎಲ್ಲಿಂದ ಬಂತು ಎಂಬ ಸೀಕ್ರೆಟ್ ರಿವೀಲ್
ಮನೆಯ ಲೋನ್ ಕಟ್ಟಲು ಭಾಗ್ಯಾಗೆ ಬೇಕಿದ್ದಿದ್ದು 40,000 ರೂಪಾಯಿ. ಭಾಗ್ಯಾಗೆ ಸಿಕ್ಕಿದ್ದು 32,000 ರೂಪಾಯಿ. ಆದರೆ, ಮನೆಯನ್ನು ಜಪ್ತಿ ಮಾಡಲು ಬಂದ ಅಧಿಕಾರಿಗಳಿಗೆ ಭಾಗ್ಯಾ ಪೂರ್ಣ 40,000 ಹಣ ಕೊಟ್ಟು ಲೆಕ್ಕ ಚುಪ್ತ ಮಾಡಿದ್ದಾಳೆ. ಅಷ್ಟು ಕಡಿಮೆ ಸಮಯದಲ್ಲಿ 8 ಸಾವಿರ ರೂಪಾಯಿಗೆ ಭಾಗ್ಯಾ ಹೇಗೆ ಅಡ್ಜಸ್ಟ್ ಮಾಡಿದಳು ಎಂಬುದು ಸಸ್ಪೆನ್ಸ್ ಆಗಿ ಉಳಿದಿತ್ತು.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಧಾರಾವಾಹಿ ಯಶಸ್ವಿಯಾಗುತ್ತಿದೆ. ಮನೆಯ ಲೋನ್ ಕಟ್ಟಲು ಭಾಗ್ಯಾಗೆ ದೇವಸ್ಥಾನದಲ್ಲಿ 250 ಮಂದಿಗೆ ಅಡುಗೆ ಮಾಡುವ ಜವಾಬ್ದಾರಿ ಸಿಕ್ಕಿತ್ತು. ಇದರಿಂದ ಹಣ ಪಡೆದು ಭಾಗ್ಯ ಮನೆಯ ಲೋನ್ ಕಟ್ಟಿದ್ದಾಳೆ. ಆದರೆ, ಮನೆಯ ಲೋನ್ ಕಟ್ಟಲು ಭಾಗ್ಯಾಗೆ ಬೇಕಿದ್ದಿದ್ದು 40,000 ರೂಪಾಯಿ. ಭಾಗ್ಯಾಗೆ ಸಿಕ್ಕಿದ್ದು 32,000 ರೂಪಾಯಿ. ಆದರೆ, ಮನೆಯನ್ನು ಜಪ್ತಿ ಮಾಡಲು ಬಂದ ಅಧಿಕಾರಿಗಳಿಗೆ ಭಾಗ್ಯಾ ಪೂರ್ಣ 40,000 ಹಣ ಕೊಟ್ಟು ಲೆಕ್ಕ ಚುಪ್ತ ಮಾಡಿದ್ದಾಳೆ.
ಅಷ್ಟು ಕಡಿಮೆ ಸಮಯದಲ್ಲಿ 8 ಸಾವಿರ ರೂಪಾಯಿಗೆ ಭಾಗ್ಯಾ ಹೇಗೆ ಅಡ್ಜಸ್ಟ್ ಮಾಡಿದಳು ಎಂಬುದು ಸಸ್ಪೆನ್ಸ್ ಆಗಿ ಉಳಿದಿತ್ತು. ಆದರೀಗ ಇದಕ್ಕೆ ಉತ್ತರ ಸಿಕ್ಕಿದೆ. ಮನೆಯ ಲೋನ್ ತೀರಿಸಲು ಇಂದು ಕೊನೆಯ ದಿನವಾಗಿತ್ತು. ಭಾಗ್ಯಾ ಹೇಗಾದರು ಮಾಡಿ 40,000 ರೂಪಾಯಿ ಅರೆಂಜ್ ಮಾಡಬೇಕಿತ್ತು. ದೇವಸ್ಥಾನಕ್ಕೆ ತೆರಳಿದಾಗ ಅಲ್ಲಿಯ ಪುರೋಹಿತರ ಸಹಾಯದಿಂದ 250 ಜನರಿಗೆ ಅಡುಗೆ ಮಾಡುವ ಕೆಲಸ ಸಿಗುತ್ತದೆ. ಇದಕ್ಕಾಗಿ ಭಾಗ್ಯಾ ಅತ್ತೆ ಕುಸುಮಾ ಹಾಗೂ ತಂಗಿಯನ್ನು ಕರೆಸಿಕೊಳ್ಳುತ್ತಾಳೆ. ಆದರೆ, ಅಡುಗೆ ಮಾಡುವಾಗ ಕುಸುಮಾ ಕೈಯಿಂದ ಪಾತ್ರೆ ಜಾರಿ ಬಿಸಿ ನೀರು ಎಲ್ಲ ಕಾಲಿಗೆ ಚೆಲ್ಲುತ್ತದೆ. ಭಾಗ್ಯ ಕೂಡಲೇ, ಪೂಜಾ ಜೊತೆ ಕುಸುಮಾಳನ್ನು ಆಸ್ಪತ್ರೆಗೆ ಕಳುಹಿಸಿದ್ದಾಳೆ.
ಅತ್ತ ಭಾಗ್ಯ ಒಬ್ಬಳೇ ಅಡುಗೆ ಮಾಡಲು ಕಷ್ಟ ಪಡುತ್ತಿರುತ್ತಾಳೆ. ಆಗ ಕಲರ್ಸ್ ಕನ್ನಡದ ಇತರೆ ಧಾರಾವಾಹಿಯ ನಾಯಕಿಯರೆಲ್ಲ ಇಲ್ಲಿ ಭಾಗ್ಯಾಗೆ ಸಹಾಯ ಮಾಡಲು ಬಂದು ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ಕೊಡುತ್ತಾರೆ. ಅತಿಥಿಗಳಿಗೆ ತಾವೇ ಮುಂದೆ ನಿಂತು ರುಚಿಯಾದ ಊಟ ಬಡಿಸುತ್ತಾರೆ. ಎಲ್ಲರೂ ಭಾಗ್ಯ ಅಡುಗೆಯನ್ನು ಹೊಗಳಿ, ಭರ್ಜರಿಯಾಗಿ ಊಟ ಮಾಡುತ್ತಾರೆ.
ಭಾಗ್ಯಾ ತನ್ನ ತಂಗಿಗೆ ಕಾಲ್ ಮಾಡಿ.. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿದೆ.. 50 ಸಾವಿರ ಅಂತ ಹೇಳಿದ್ದರು.. ಆದರೆ ಬರೀ 32 ಸಾವಿರ ಕೊಟ್ಟಿದ್ದಾರೆ ಅಷ್ಟೆ ಎಂದು ಹೇಳುತ್ತಾಳೆ.. ಸರಿಯಾದ ಸಮಯಕ್ಕೆ ದುಡ್ಡುಕೊಟ್ಟಿಲ್ಲ ಅಂದ್ರೆ ಎಲ್ಲರೂ ಬೀದಿಗೆ ಬೀಳುತ್ತಾರೆ ಎಂದು ಭಾಗ್ಯ ಅಂದುಕೊಳ್ಳುತ್ತಾಳೆ. ಅತ್ತ ನಮ್ಮ ಸಮಯ ಮುಗಿಯಿತು ಮನೆಯನ್ನು ಸೀಝ್ ಮಾಡೋಣ ಎಂದು ಅಧಿಕಾರಿಗಳು ಹೇಳುವಾಗ ಅಲ್ಲಿಗೆ ಭಾಗ್ಯಾ ಬರುತ್ತಾಳೆ. ದುಡ್ಡು ಬ್ಯಾಂಕಿನವರಿಗೆ ಕೊಟ್ಟಿದ್ದಾಳೆ. ಅವರು ಎಣಿಸಿ, ಹಣ ಸರಿ ಇದೆ, ಮನೆ ಜಪ್ತಿ ಮಾಡುವುದಿಲ್ಲ ಎನ್ನುತ್ತಾರೆ.
ಆದರೆ, ನಿರ್ದೇಶಕರು ಭಾಗ್ಯಾ ಉಳಿದ 8 ಸಾವಿರ ಹಣವನ್ನು ಇಲ್ಲಿಂದ ಪಡೆದುಕೊಂಡಲೂ ಎಂಬುದನ್ನು ತೋರಿಸಿರಲಿಲ್ಲ. ಆದರೀಗ ಈ ವಿಚಾರ ರಿವೀಲ್ ಆಗಿದೆ. ಹಣ ಕಡಿಮೆಯಿದೆ ಎಂದು ಬೇಸರದಿಂದಲೇ ದೇವಸ್ಥಾನದಿಂದ ಹೊರಟಿದ್ದ ಭಾಗ್ಯಳನ್ನು ಯಜಮಾನರು ಮತ್ತೊಮ್ಮೆ ಕರೆದಿದ್ದಾರೆ. ನಿಮಗೆ ಅಡುಗೆಯ ದುಡ್ಡು ಮಾತ್ರ ಕೊಟ್ಟಿದ್ದೆ, ಊಟ ಕೂಡ ನೀವೆ ಬಡಿಸಿದ್ದೀರಿ, ಅದರ ದುಡ್ಡು ಕೊಟ್ಟಿರಲಿಲ್ಲ. ತಗೊಳ್ಳಿ ಎಂದು ಎಂಟು ಸಾವಿರ ರೂಪಾಯಿ ಕೊಟ್ಟಿದ್ದಾರೆ. ಆಗ ಭಾಗ್ಯಗೆ ಹೋದ ಜೀವ ಮರಳಿ ಬಂದಂತಾಗಿದೆ. ಹೀಗೆ 40 ಸಾವಿರ ರೂಪಾಯಿ ಹೊಂದಿಸಿಕೊಂಡು ಭಾಗ್ಯ ಮನೆಗೆ ಬಂದು, ಬ್ಯಾಂಕ್ ಅಧಿಕಾರಿಗಳಿಗೆ ಕೊಟ್ಟಿದ್ದಾಳೆ.
ಇದನ್ನೆಲ್ಲ ಕಂಡು ತಾಂಡವ್-ಶ್ರೇಷ್ಠಾಗೆ ಮತ್ತೊಮ್ಮೆ ಆಘಾತ ಆಗಿದೆ. ಮನೆ ಸೀಝ್ ಆಗುತ್ತೆ, ನೀವೆಲ್ಲ ಬೀದಿಗೆ ಬರುತ್ತೀರಿ ಎಂದು ಅರಚುತ್ತಿದ್ದ ತಾಂಡವ್ ಮತ್ತೊಮ್ಮೆ ಎಲ್ಲರೆದುರು ಮುಖಭಂಗ ಅನುಭವಿಸುತ್ತಾನೆ. ಮನೆಯಿಂದ ಹೊರಗಡೆ ಇದ್ದ ತಾಂಡವ್‌ಗೆ ಭಾಗ್ಯಾ ಎಚ್ಚರಿಕೆ ಕೂಡ ಕೊಡುತ್ತಾಳೆ. ನೀವು ಏನೇ ಮಾಡಿದರೂ, ನಾನು ಸುಮ್ಮನಿರುವುದಿಲ್ಲ. ಮನೆಯನ್ನು ಮತ್ತು ಈ ಮನೆಯವರನ್ನು ಜೋಪಾನವಾಗಿ ಉಳಿಸಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ.
ಸದ್ಯ ಭಾಗ್ಯಾ ಈ ತಿಂಗಳ ಮನೆಯ ಲೋನ್ ಕಟ್ಟಿ ಮುಗಿಸಿದ್ದಾಳೆ. ಆದರೆ, ಮುಂದಿನ ತಿಂಗಳು ಲೋನ್ ಕಟ್ಟಲು ಏನು ಮಾಡುತ್ತಾಳೆ.. ಹೊಸ ಕೆಲಸ ಏನು ಸಿಗುತ್ತದೆ.. ಭಾಗ್ಯಾಳ ಮುಂದಿನ ನಡೆ ಏನು?, ಅತ್ತ ತಾಂಡವ್-ಶ್ರೇಷ್ಠಾ ಹೊಸದಾಗಿ ಇನ್ನೇನು ಪ್ಲ್ಯಾನ್ ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
Bhavya Gowda: ರಂಜಿತ್ ಎಂಗೇಜ್ಮೆಂಟ್ನಲ್ಲಿ ಅನುಷಾ ರೈ ಬೆರಳಿಗೆ ಉಂಗುರ ತೊಡಿಸಿದ ಭವ್ಯಾ ಗೌಡ