Ambati Rayudu: ಚೆನ್ನೈ ಪಂದ್ಯಕ್ಕೂ ಮುನ್ನ ಆರ್‌ಸಿಬಿಯನ್ನು ಅಪಹಾಸ್ಯ ಮಾಡಿದ ರಾಯುಡು
RCB vs CSK: ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಎಮಿಲಿನೇಟರ್ ಪಂದ್ಯದಲ್ಲಿ ಸೋತಾಗಲೂ ಸರಣಿ ಟ್ವೀಟ್ ಮೂಲಕ ರಾಯುಡು ಆರ್‌ಸಿಬಿಯನ್ನು ಗೇಲಿ ಮಾಡಿದ್ದರು. ಅಲ್ಲದೆ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಬಗ್ಗೆಯೂ ಟೀಕೆ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ಕಾಮೆಂಟ್ರಿ ವೇಳೆಯೂ ಲೈವ್‌ನಲ್ಲೇ ಆರ್‌ಸಿಬಿಯನ್ನು ಗೇಲಿ ಮಾಡಿದ್ದರು.


ಚೆನ್ನೈ: ಆರ್‌ಸಿಬಿ(RCB) ತಂಡವನ್ನು ಸದಾ ಅಪಹಾಸ್ಯ ಮಾಡುವ ಭಾರತ ಕ್ರಿಕೆಟ್ ತಂಡದ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ನ(CSK) ಮಾಜಿ ಆಟಗಾರ ಅಂಬಾಟಿ ರಾಯುಡು(Ambati Rayudu) ಅವರು ಚೆನ್ನೈ ಸೂಪರ್ ಕಿಂಗ್ಸ್(RCB vs CSK) ವಿರುದ್ಧದ ಪಂದ್ಯಕ್ಕೂ ಮುನ್ನ ಮತ್ತೆ ಗೇಲಿ ಮಾಡಿದ್ದಾರೆ. ಈ ವಿಡಿಯೊ ವೈರಲ್ ಆಗಿದ್ದು ಆರ್‌ಸಿಬಿ ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ.
ಮಾಜಿ ಆಟಗಾರ ಬದ್ರಿನಾಥ್(S.Badrinath) ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ರಾಯುಡು ಜತೆ ಇಂದಿನ ಪಂದ್ಯದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ಬದ್ರಿನಾಥ್ ಅವರು ಆರ್‌ಸಿಬಿ ಈ ಬಾರಿ ಬಲಿಷ್ಠವಾಗಿದೆ ಕಪ್ ಗೆಲ್ಲುವ ಅವಕಾಶ ಇದೆಯೇ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಜೋರಾಗಿ ನಕ್ಕ ರಾಯುಡು, ಪ್ರತಿ ಬಾರಿ ಐಪಿಎಲ್ ವೇಳೆ ನಾವು ನಗುತ್ತಿದ್ದೇವೆ ಎಂದರೆ ಅದು ಆರ್‌ಸಿಬಿಯಿಂದ ಇನ್ನಷ್ಟು ವರ್ಷ ನಗಬೇಕಿದೆ. ಸಿಎಸ್‌ಕೆ ಇರುವಾಗ ಈ ಬಾರಿಯಂತು ಕಪ್ ಗೆಲ್ಲಲ್ಲ ಎಂದು ಮತ್ತೆ ಮತ್ತೆ ನಗುತ್ತಾ ಆರ್‌ಸಿಬಿ ಕಪ್ ಗೆಲ್ಲುವುದಿಲ್ಲ ಎಂದು ಅಪಹಾಸ್ಯ ಮಾಡಿದ್ದಾರೆ.
ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಎಮಿಲಿನೇಟರ್ ಪಂದ್ಯದಲ್ಲಿ ಸೋತಾಗಲೂ ಸರಣಿ ಟ್ವೀಟ್ ಮೂಲಕ ರಾಯುಡು ಆರ್‌ಸಿಬಿಯನ್ನು ಗೇಲಿ ಮಾಡಿದ್ದರು. ಅಲ್ಲದೆ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಬಗ್ಗೆಯೂ ಟೀಕೆ ವ್ಯಕ್ತಪಡಿಸಿದ್ದರು. ರಾಯುಡು ಒಟ್ಟು ಆರು ಐಪಿಎಲ್ ಟ್ರೋಫಿ ವಿಜೇತ ಸದಸ್ಯನಾಗಿದ್ದಾರೆ.
ಚೆನ್ನೈ ಪಂದ್ಯಕ್ಕೂ ಮುನ್ನ ರಾಯುಡು ಆರ್‌ಸಿಬಿ ಬಗ್ಗೆ ಮಾತನಾಡಿದ ಕಾರಣ ಇಂದಿನ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರ್‌ಸಿಬಿ ಗೆದ್ದರೆ ರಾಯುಡು ಟ್ರೋಲ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.
These ex-CSK clowns are now groveling for clout and crumbs of relevance through a "trophyless" RCB 😭😭😭😭😭😭 😭
— Thalaiban (@Thalaiban) March 27, 2025
These two washed-up jokers strut around like they’ve smashed 100 Tests for India and bagged a cabinet full of ICC trophies pic.twitter.com/qtkPjPVCAm
ಆರ್‌ಸಿಬಿ 17 ವರ್ಷಗಳ ಬಳಿಕ ಚೆಪಾಕ್ ಮೈದಾನದಲ್ಲಿ ಗೆಲುವು ಸಾಧಿಸಬಹುದೇ ಎಂಬ ಕುತೂಹಲವೂ ಈ ಪಂದ್ಯದ್ದಾಗಿದೆ. ಹೌದು ಆರ್‌ಸಿಬಿ ತಂಡ ಚೆನ್ನೈನಲ್ಲಿ ಕೊನೆ ಬಾರಿ ಗೆದ್ದಿದ್ದು 2008ರ ಚೊಚ್ಚಲ ಆವೃತ್ತಿಯಲ್ಲಿ. ಆ ಬಳಿಕ ತಂಡ 8 ಬಾರಿ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಆಡಿದ್ದರೂ ಒಂದರಲ್ಲೂ ಗೆಲುವು ಸಾಧಿಸಿಲ್ಲ. ಈ ಬಾರಿಯ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವಿರುದ್ಧ ಆರ್‌ಸಿಬಿ ಸಂಘಟಿತ ಪ್ರದರ್ಶನದ ಮೂಲಕ ಗೆಲುವು ಸಾಧಿಸಿತ್ತು. ಇದೇ ಹುಮ್ಮಸ್ಸಿನಲ್ಲಿ ತಂಡ ಶುಕ್ರವಾರ ಕಣಕ್ಕಿಳಿಯಲಿದೆ.
ಇದನ್ನೂ ಓದಿ RCB vs CSK: ಹೆಚ್ಚುವರಿ ಸ್ಪಿನ್ನರ್ ಮೂಲಕ ಚೆನ್ನೈ ಕಟ್ಟಿಹಾಕಲು ಆರ್‌ಸಿಬಿ ತಂತ್ರ
ಸಂಭಾವ್ಯ ತಂಡಗಳು
ಚೆನ್ನೈ: ರಚಿನ್ ರವೀಂದ್ರ, ಋತುರಾಜ್ ಗಾಯಕ್ವಾಡ್(ನಾಯಕ), ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ಶಿವಂ ದುಬೆ, ಸ್ಯಾಮ್ ಕರ್ರನ್, ರವೀಂದ್ರ ಜಡೇಜಾ, ಎಂಸ್.ಎಸ್ ಧೋನಿ, ಆರ್.ಅಶ್ವಿನ್, ನೇಥನ್ ಎಲ್ಲಿಸ್, ನೂರ್ ಅಹ್ಮದ್, ಖಲೀಲ್ ಅಹ್ಮದ್.
ಆರ್‌ಸಿಬಿ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್ (ನಾಯಕ), ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್, ಸುಯಶ್.