ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hubli Accident: ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ; ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಮೂವರು ಮಹಿಳೆಯರ ದುರ್ಮರಣ

Hubli Accident: ಹುಬ್ಬಳ್ಳಿ ನಗರದ ಹೊರವಲಯದ ನೂಲ್ವಿ ಕ್ರಾಸ್‌ನಲ್ಲಿ ದುರ್ಘಟನೆ ನಡೆದಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸುತ್ತಿದ್ದಾರೆ.

ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಮೂವರು ಮಹಿಳೆಯರ ದುರ್ಮರಣ

Profile Prabhakara R Apr 6, 2025 6:29 PM

ಹುಬ್ಬಳ್ಳಿ: ನಗರದ ಹೊರವಲಯದ ನೂಲ್ವಿ ಕ್ರಾಸ್‌ನಲ್ಲಿ ರಸ್ತೆ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಮಹಿಳೆಯರು ದುರ್ಮರಣ ಹೊಂದಿರುವ ಘಟನೆ ಭಾನುವಾರ ನಡೆದಿದೆ. ಕಾರು ವರೂರ ಗ್ರಾಮದಿಂದ ಹುಬ್ಬಳ್ಳಿಯತ್ತ ಬರುತ್ತಿತ್ತು. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮೂವರು ಮಹಿಳೆಯರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಮೃತರು ಹುಬ್ಬಳ್ಳಿಯ ಲಿಂಗರಾಜ ನಗರದ ನಿವಾಸಿಗಳು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | ತಲೆಗೆ ಗುಂಡು ಹಾರಿಸಿಕೊಂಡು ಮುನ್ಸಿಪಲ್ ಕಮಿಷನರ್ ಆತ್ಮಹತ್ಯೆ ಯತ್ನ; ಕಾರಣ ನಿಗೂಢ

ಗ್ರಾನೈಟ್ ಗಣಿಯಲ್ಲಿ ಸಿಡಿಮದ್ದು ಸ್ಫೋಟವಾಗಿ ಕಾರ್ಮಿಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ರಾಯಚೂರು: ಗ್ರಾನೈಟ್ ಗಣಿಯಲ್ಲಿ ಸಿಡಿಮದ್ದು ಸ್ಫೋಟಗೊಂಡು ಒಬ್ಬ ಕಾರ್ಮಿಕ ಮೃತಪಟ್ಟು, ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮಾಕಾಪುರದಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ವೆಂಕಟೇಶ್ ಮೃತ ಕಾರ್ಮಿಕ. ಗಾಯಾಳು ಕಾರ್ಮಿನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಇಲ್ಲದೇ ಅಕ್ರಮವಾಗಿ ಗ್ರ್ಯಾನೈಟ್ ಗಣಿ ಉದ್ಯಮ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಗಂಡನ ಹತ್ಯೆಯನ್ನು ವಿಡಿಯೊ ಕಾಲ್‌ನಲ್ಲಿ ನೋಡಿ ಖುಷಿಪಟ್ಟ ಹೆಂಡತಿ!

belagavi News

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದ ಬಳಿ ಏ. 2ರಂದು ನಡೆದಿದ್ದ ವ್ಯಕ್ತಿ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಬೇರೊಬ್ಬನ ಜತೆ ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯೇ ಸುಪಾರಿ ಕೊಟ್ಟು ಗಂಡನ ಕೊಲೆ (Belagavi Murder) ಮಾಡಿಸಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಶೈಲಾ ಎಂಬ ಮಹಿಳೆ ಪ್ರಿಯಕರ ರುದ್ರಪ್ಪ ಹೊಸೆಟ್ಟಿ ಎಂಬಾತನಿಗೆ ಸುಪಾರಿ ನೀಡಿ ಗಂಡ ಬಲೋಗಿ ಗ್ರಾಮದ ಶಿವನಗೌಡ ಪಾಟೀಲ್​ನನ್ನು (43) ಕೊಲೆ ಮಾಡಿಸಿದ್ದಾಳೆ. ಅಷ್ಟೇ ಅಲ್ಲದೇ ಗಂಡನನ್ನು ಕೊಲೆ ಮಾಡುತ್ತಿರುವ ದೃಶ್ಯವನ್ನು ವಿಡಿಯೊ ಕಾಲ್​ನಲ್ಲಿ ನೋಡಿದ್ದಾಳೆ. ಬಳಿಕ ತನಗೆ ಏನು ತಿಳಿಯದು ಎಂಬಂತೆ ಗಂಡನ ಮೃತದೇಹದ ಮೇಲೆ ಬಿದ್ದು ಗೋಳಾಡಿ ಅತ್ತು ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದಳು. ಆದರೆ, ಇದೀಗ ಹೆಂಡತಿಯ ಕಳ್ಳಾಟ ಬಹಿರಂಗವಾಗಿದೆ.

ಪತ್ನಿ ಶೈಲಾ ಫೋನ್ ಪರಿಶೀಲನೆ ಮಾಡಿದಾಗ ಆಕೆ ಸಿಕ್ಕಿಬಿದ್ದಿದ್ದಾಳೆ. ಪರಪುರುಷನ ಸಹವಾಸ ಬಿಡುವಂತೆ ಹೇಳಿದ್ದಕ್ಕೆ ಗಂಡನ ಕಥೆಯನ್ನೇ ಮುಗಿಸಿದ್ದಾಳೆ ಎಂದು ತಿಳಿದುಬಂದಿದೆ. ಕಳೆದ ಎರಡು ವರ್ಷದಿಂದ ರುದ್ರಪ್ಪ ಹೊಸೆಟ್ಟಿ ಹಾಗೂ ಶೈಲಾ ನಡುವೆ ಅನೈತಿಕ ಸಂಬಂಧ ಇತ್ತು. ಆದರೆ ಈ ಬಗ್ಗೆ ಗಂಡ ಶಿವನಗೌಡನಿಗೆ ಗೊತ್ತಾಗಿ, ಪರಪುರುಷನ ಸಹವಾಸ ಬಿಡು ಎಂದು ತಿಳಿಸಿ ಹೇಳಿದ್ದಾನೆ. ಆದರೆ ಶೈಲಾ ತಾಳಿಕಟ್ಟಿದ ಗಂಡನನ್ನೇ ಬಿಡುತ್ತೇನೆ ಹೊರತು ರುದ್ರಪ್ಪನನ್ನು ಬಿಡಲಾಗಲ್ಲ ಎನ್ನುವ ನಿರ್ಧಾರ ಮಾಡಿ ಶಿವನಗೌಡನನ್ನೇ ಮುಗಿಸಲು ತೀರ್ಮಾನಿಸಿದ್ದಳು.

ಗಂಡನನನ್ನೇ ಕೊಲ್ಲಲು ತೀರ್ಮಾನಿಸಿದ್ದ ಶೈಲಾ, ಪ್ರಿಯಕರ ರುದ್ರಪ್ಪನಿಗೆ ವಿಚಾರ ತಿಳಿಸಿದ್ದಳು. ನಂತರ ಶೈಲಾ ತನ್ನನ್ನು ತವರು ಮನೆಗೆ ಬಿಟ್ಟು ಬರುವಂತೆ ಗಂಡನಿಗೆ ಹೇಳಿದ್ದಳು. ಅದರಂತೆ ಶಿವನಗೌಡ ಹೆಂಡತಿಯನ್ನು ತವರು ಮನೆಗೆ ಬಿಟ್ಟು ಏಪ್ರಿಲ್ ‌2ರಂದು ಅಲ್ಲಿಂದ ವಾಪಸ್ ಆಗುತ್ತಿದ್ದಾಗ ಶಿವನಗೌಡನ ತಲೆ ಮೇಲೆ ರುದ್ರಪ್ಪ ಹೊಸೆಟ್ಟಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಈ ವೇಳೆ ಹೆಂಡತಿ ಶೈಲಾ ವಿಡಿಯೊ ಕಾಲ್‌ನಲ್ಲಿ ಗಂಡ ಸಾಯುವುದನ್ನು ಕಣ್ಣಾರೆ ನೋಡಿ ಖುಷಿಪಟ್ಟಿದ್ದಾಳೆ.

ಈ ಸುದ್ದಿಯನ್ನೂ ಓದಿ | Road Accident: ಕಲಬುರಗಿಯಲ್ಲಿ ಘೋರ ಅಪಘಾತ, ಲಾರಿಗೆ ಮ್ಯಾಕ್ಸಿಕ್ಯಾಬ್‌ ಡಿಕ್ಕಿಯಾಗಿ ಐವರು ಸಾವು