ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CWKL: ನವರಸನ್ ನೇತೃತ್ವದ ʼಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್ʼ ಗೆ ಚಂದನ್ ಶೆಟ್ಟಿ ಬರೆದರು ಚಂದದ ಥೀಮ್ ಸಾಂಗ್

CWKL: ನವರಸನ್ ನೇತೃತ್ವದ ʼಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್ʼ ಗೆ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು ʼCWKLʼ ಗಾಗಿ ʼಕಬ್ಬಡಿ ಕಬ್ಬಡಿʼ ಎಂಬ ಚಂದದ ಥೀಮ್ ಸಾಂಗ್ ಬರೆದು ಸಂಗೀತ ಸಂಯೋಜಿಸಿದ್ದಾರೆ. ಏಪ್ರಿಲ್ 5 ಹಾಗೂ 6 ʼCWKLʼ ನ ಪಂದ್ಯಗಳು ನಡೆಯಲಿದೆ. ಈ ಕುರಿತ ವಿವರ ಇಲ್ಲಿದೆ.

ʼCWKLʼ ಗೆ ಚಂದನ್ ಶೆಟ್ಟಿ ಬರೆದರು ಚಂದದ ಥೀಮ್ ಸಾಂಗ್

Profile Siddalinga Swamy Mar 27, 2025 5:03 PM

ಬೆಂಗಳೂರು: ನಿರ್ಮಾಪಕ, ನಿರ್ದೇಶಕ, ನಟನಾಗಿ ಹಾಗೂ ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಇವೆಂಟ್‌ಗಳನ್ನು ಆಯೋಜಿಸುವ ಮೂಲಕ ಜನಪ್ರಿಯರಾಗಿರುವ ನವರಸನ್ ʼಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್ʼ ಆಯೋಜಿಸುವ ಮೂಲಕ ಕ್ರೀಡಾಲೋಕಕ್ಕೂ‌ ಪಾದಾರ್ಪಣೆ ಮಾಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಕಳೆದ ಕೆಲವು ದಿನಗಳ ಹಿಂದೆ ʼCWKLʼ ಲೋಗೊ ಅನಾವರಣವನ್ನು ನವರಸನ್ ಅದ್ದೂರಿಯಾಗಿ ಬಿಡುಗಡೆ ಮಾಡಿದ್ದರು. ಪ್ರಸ್ತುತ ಖ್ಯಾತ ಗಾಯಕ, ನಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು ʼCWKLʼ ಗಾಗಿ ʼಕಬ್ಬಡಿ ಕಬ್ಬಡಿʼ ಎಂಬ ಚಂದದ ಥೀಮ್ ಸಾಂಗ್ ಬರೆದು ಸಂಗೀತ ಸಂಯೋಜಿಸಿದ್ದಾರೆ. ಇದೇ ಸಂದರ್ಭದಲ್ಲಿ ʼCWKLʼ ಪಂದ್ಯಗಳು ನಡೆಯುವ ದಿನಾಂಕಗಳನ್ನು ಸಹ ತಿಳಿಸಲಾಯಿತು. ವಿಧಾನ ಪರಿಷತ್ ಸದಸ್ಯರು ಹಾಗೂ‌ ಸಾಯಿಗೋಲ್ಡ್ ಸಂಸ್ಥೆಯ ಮಾಲೀಕ ಶರವಣ ಅವರು ಪಂದ್ಯಗಳು ನಡೆಯುವ ದಿನಾಂಕಗಳ ಬಗ್ಗೆ ತಿಳಿಸಿ, ʼCWKLʼ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಏಪ್ರಿಲ್ 5 ಹಾಗೂ 6 ʼCWKLʼ ನ ಪಂದ್ಯಗಳು ನಡೆಯಲಿದೆ.

ಥೀಮ್ ಸಾಂಗ್ ಅನ್ನು ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಬಿಡುಗಡೆ ಮಾಡಿದರು. ʼCWKLʼ ತಂಡಗಳ ಮಾಲೀಕ ಸಾಯಿಗೋಲ್ಡ್ ಪ್ಯಾಲೆಸ್‌ನ ಶರವಣ,‌ ʼವಾಮನʼ ಚಿತ್ರದ ನಿರ್ಮಾಪಕ ಚೇತನ್ ಗೌಡ,‌ ನಿರ್ಮಾಪಕರಾದ ಸುರೇಶ್ ಗೌಡ, ರಾಜೇಶ್ ಗೌಡ, ಗೋವಿಂದರಾಜು ಹಾಗೂ ಗಜೇಂದ್ರ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಲೀಗ್‌ನಲ್ಲಿ ಏಳು ತಂಡಗಳಿದ್ದು, ಏಳೂ ತಂಡಗಳ ನಾಯಕಿಯರು ಹಾಗೂ ಆಟಗಾರರು ಸಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಹಾಡು ಬಿಡುಗಡೆ ನಂತರ ಆಯೋಜಕ ನವರಸನ್ ಮಾತನಾಡಿದರು.

ಈ ಸುದ್ದಿಯನ್ನೂ ಓದಿ | Miss Universe Karnataka Audition: ಉದ್ಯಾನನಗರಿಯಲ್ಲಿ ಯಶಸ್ವಿಯಾಗಿ ನಡೆದ ಮಿಸ್ ಯೂನಿವರ್ಸ್ ಕರ್ನಾಟಕ ಅಡಿಷನ್‌

ಕಳೆದ ಕೆಲವು ದಿನಗಳ ಹಿಂದಷ್ಟೇ ʼCWKLʼ ಲೋಗೊ ಅನಾವರಣ ಮಾಡುವ ಮೂಲಕ ಅದ್ದೂರಿ ಚಾಲನೆ ನೀಡಲಾಗಿತ್ತು. ಈಗಂತೂ ಎಲ್ಲೆಲ್ಲೂ ನಮ್ಮ ʼCWKLʼ ದೇ ಮಾತು. ನಾನು ಇತ್ತೀಚೆಗೆ ಬೇರೆ ಭಾಷೆಗಳ ಸಿನಿಮಾ ಇವೆಂಟ್‌ಗಳಿಗೆ ಹೋದಾಗಲೂ ಅಲ್ಲಿನ ಸೆಲೆಬ್ರಿಟಿಗಳು ಹಾಗೂ ನಮ್ಮ ಕನ್ನಡದ ಸೆಲೆಬ್ರಿಟಿಗಳು ʼCWKLʼ ಬಗ್ಗೆ ಮೆಚ್ಚುಗೆ ಮಾತುಗಳಾಡಿದ್ದು ನನಗೆ ಬಹಳ ಖುಷಿಯಾಗಿದೆ. ಈ ಲೀಗ್‌ಗಾಗಿ ಒಂದು ಹಾಡನ್ನು ಬರೆದು ಸಂಗೀತ ಸಂಯೋಜಿಸಿ ಕೊಡಿ ಎಂದು ಚಂದನ್ ಶೆಟ್ಟಿ ಅವರನ್ನು ಕೇಳಿದಾಗ ಅದ್ಭುತವಾದ ಥೀಮ್ ಸಾಂಗ್ ಬರೆದುಕೊಟ್ಟಿದ್ದಾರೆ. ಚಂದನ್ ಶೆಟ್ಟಿ ಅವರ ತಮ್ಮ ಪುನೀತ್ ಈಗಿನ AI ತಂತ್ರಜ್ಞಾನದ ಮೂಲಕ ಈ ಹಾಡನ್ನು ಸಿದ್ದ ಮಾಡಿಕೊಟ್ಟಿದ್ದಾರೆ.

ನಮ್ಮ ʼCWKLʼ ನ ಮುಂದಿನ ಎಲ್ಲಾ ಕಾರ್ಯಕ್ರಮಗಳಲ್ಲೂ ಈ ಥೀಮ್ ಸಾಂಗ್ ಅನ್ನು ಬಳಸಿಕೊಳ್ಳಲಾಗುವುದು. ನಮ್ಮ ತಂಡಗಳ ಮಾಲೀಕ ಸಾಯಿ ಗೋಲ್ಡ್ ಪ್ಯಾಲೆಸ್‌ನ ಶರವಣ,‌ ʼವಾಮನʼ ಚಿತ್ರದ ನಿರ್ಮಾಪಕ ಚೇತನ್ ಗೌಡ, ಸುರೇಶ್ ಗೌಡ, ರಾಜೇಶ್ ಗೌಡ, ಎ.ವಿ.ಅರ್ ಫಿಲಂಸ್ ನ ವೆಂಕಟೇಶ್ ರೆಡ್ಡಿ, ಗಜೇಂದ್ರ ಹಾಗೂ ಗೋವಿಂದರಾಜು ಅವರಿಗೆ, ನನಗೆ ಬೆನ್ನೆಲುಬಾಗಿ ನಿಂತಿರುವ ನನ್ನ ತಂಡಕ್ಕೆ ಹಾಗೂ ಈ ಲೀಗ್‌ನಲ್ಲಿ ಭಾಗವಹಿಸುತ್ತಿರುವ ಎಲ್ಲಾ ಸೆಲೆಬ್ರಿಟಿ ನಟಿಯರಿಗೆ ನನ್ನ ಧನ್ಯವಾದ ಎಂದು ತಿಳಿಸಿದ ನವರಸನ್, ಏಪ್ರಿಲ್ 5 ಹಾಗೂ 6 ನಮ್ಮ ʼCWKLʼ ನ ಪಂದ್ಯಗಳು ಅದ್ದೂರಿಯಾಗಿ ನಡೆಯಲಿದೆ ಎಂದು ತಿಳಿಸಿದರು.‌ ಎಲ್ಲಾ ತಂಡಗಳ ಮಾಲೀಕರು ಹಾಗೂ ನಾಯಕಿಯರು ʼCWKLʼ ಕುರಿತು ಮಾತನಾಡಿದರು.