Legislature House: ಭದ್ರಕೋಟೆ ನಡುವೆಯಿರುವ ಎಲ್‌ಎಚ್ʼಗೇಕೆ ಸ್ಮಾರ್ಟ್ ಲಾಕರ್ ?
ರಾಜಧಾನಿ ಬೆಂಗಳೂರಿನ ಭದ್ರಕೋಟೆಯಂತಿರುವ, ಶಕ್ತಿಸೌಧ ಹಾಗೂ ರಾಜಭವನಕ್ಕೆ ಹೊಂದಿ ಕೊಂಡಿರುವ ಶಾಸಕರ ಭವನದಲ್ಲಿ ಶಾಸಕರ ಕೋಣೆಗಳಿಗೆ ಆಧುನಿಕ ಸ್ಮಾರ್ಟ್ ಲಾಕ್, ಲಾಕರ್ ಅಳವಡಿಸಲು ಮುಂದಾಗಿರುವ ವಿಧಾನಸಭಾ ಸಚಿವಾಲಯದ ನಡೆಗೆ ಹಲವರು ಅಚ್ಚರಿ ಯೊಂದಿಗೆ ಅನುಮಾನ ವ್ಯಕ್ತಪಡಿಸಿದ್ದಾರೆ.


ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಶಾಸಕರ ಭವನದ ಕೋಣೆಗಳಿಗೆ ಏಕೆ ಬೇಕಿತ್ತು ದುಬಾರಿ ಸೆನ್ಸಾರ್ ಲಾಕ್
5 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಲಾಕರ್ ಅಳವಡಿಸಲು ಮುಂದಾದ ವಿಧಾನಸಭಾ ಸಚಿವಾಲಯ
ರಾಜಧಾನಿ ಬೆಂಗಳೂರಿನ ಭದ್ರಕೋಟೆಯಂತಿರುವ, ಶಕ್ತಿಸೌಧ ಹಾಗೂ ರಾಜಭವನಕ್ಕೆ ಹೊಂದಿಕೊಂಡಿರುವ ಶಾಸಕರ ಭವನದಲ್ಲಿ ಶಾಸಕರ ಕೋಣೆಗಳಿಗೆ ಆಧುನಿಕ ಸ್ಮಾರ್ಟ್ ಲಾಕ್, ಲಾಕರ್ ಅಳವಡಿಸಲು ಮುಂದಾಗಿರುವ ವಿಧಾನಸಭಾ ಸಚಿವಾಲಯದ ನಡೆಗೆ ಹಲವರು ಅಚ್ಚರಿಯೊಂದಿಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ದಶಕಗಳ ಹಿಂದೆಯೇ ನಿರ್ಮಾಣವಾಗಿರುವ ಶಾಸಕರ ಭವನದಲ್ಲಿ ಸುರಕ್ಷತೆಗೇನೂ ಕೊರತೆ ಯಿಲ್ಲ. ಇದರೊಂದಿಗೆ ನಿರ್ಮಾಣದ ಸಮಯದಲ್ಲಿ ಅಥವಾ ಅಗತ್ಯ ಎನಿಸಿದಾಗ ಕೋಣೆ ಗಳಿಗೆ ಅಳವಡಿಸಿರುವ ಲಾಕರ್‌ಗಳು ಗಟ್ಟಿಮುಟ್ಟಾಗಿಯೇ ಇವೆ. ಯಾವ ಶಾಸಕರೂ ಶಾಸಕರ ಭವನದ ಕೋಣೆಯ ಲಾಕರ್‌ಗಳು ಸರಿಯಿಲ್ಲ ಎನ್ನುವ ಆರೋಪ ಮಾಡಿಲ್ಲವಾದರೂ, ವಿಧಾನಸಭಾ ಸಚಿವಾಲಯದ ವ್ಯಾಪ್ತಿಯಲ್ಲಿರುವ ಶಾಸಕರ ಭವನ 2,3,4, 5ನೇ ಬ್ಲಾಕ್ ನಲ್ಲಿರುವ 264 ಕೋಣೆ ಗಳಿಗೆ ಐದು ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಲಾಕ್, ಲಾಕರ್ ಗಳನ್ನು ಅಳವಡಿಸುವ ಕಾಮಗಾರಿ ಸಾಗಿದೆ.
ಇದನ್ನೂ ಓದಿ: Ranjith H Ashwath Column: ಕೆಟ್ಟ ಪರಂಪರೆಗೆ ನಾಂದಿ ಹಾಡದಿರಲಿ ಸದನ
ಆದರೆ ಶಾಸಕರೇ ಬಾರದ ಶಾಸಕರ ಭವನದ ಕೋಣೆಗಳಿಗೆ 1.81 ಲಕ್ಷ ವೆಚ್ಚದಲ್ಲಿ ಲಾಕರ್ ಗಳ ಅಗತ್ಯವಿತ್ತೇ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈವರೆಗೆ ಶಾಸಕರ ಭವನ ದಲ್ಲಿ ಶಾಸಕರಿಗೆ ಅಳವಡಿಸಿರುವ ಕೋಣೆಗಳಿಗೆ ಸಾಮಾನ್ಯ ಲಾಕರ್‌ಗಳ ವ್ಯವಸ್ಥೆಯಿತ್ತು. ಆದರೆ ಇದೀಗ ಪ್ರತಿ ಕೋಣೆಗೆ 1.81 ಲಕ್ಷ ರು. ವೆಚ್ಚದಲ್ಲಿ ಸ್ಮಾರ್ಟ್ ಲಾಕಿಂಗ್ ವ್ಯವಸ್ಥೆ ಯನ್ನು ಅಳವಡಿಸಲು ವಿಧಾನಸಭಾ ಸಚಿವಾಲಯ ಮುಂದಾಗಿದೆ. ಇದಕ್ಕೆ ಸರಕಾರ ದಿಂದಲೂ ಅನುಮತಿ ಸಿಕ್ಕಿದೆ. ಸುಸ್ಥಿತಿಯಲ್ಲಿದ್ದ ಲಾಕರ್‌ಗಳನ್ನು ಬದಲಾಯಿಸಿ, ಹೊಸ ಲಾಕರ್‌ಗಳನ್ನು ಅಳವಡಿಸುವ ಅಗತ್ಯವಿರಲಿಲ್ಲ ಎನ್ನುವುದು ಶಾಸಕರ ಭವನದಲ್ಲಿ ಶಾಸ ಕರ ಹೆಸರಿನಲ್ಲಿ ವಾಸಿಸುತ್ತಿರುವ ಬಹುತೇಕರ ಅಭಿಪ್ರಾಯವಾಗಿದೆ.
ಭದ್ರತೆಗೆ ಸಮಸ್ಯೆಯಿಲ್ಲ: ಸಾಮಾನ್ಯವಾಗಿ ಶಾಸಕರ ಭವನಕ್ಕೆ ಪ್ರವೇಶಿಸುವ ಮೊದಲು ಎರಡು ಹಂತದ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಶಾಸಕರ ಅನುಮತಿಯಿಲ್ಲದೇ ಹಾಗೂ ಅಗತ್ಯ ದಾಖಲೆಗಳಿಲ್ಲದೇ ಸಾರ್ವಜನಿಕರನ್ನು ಶಾಸಕರ ಭವನಕ್ಕೆ ಪ್ರವೇಶಿಸಲು ಪೊಲೀಸರು ಅವಕಾಶ ನೀಡುವುದಿಲ್ಲ. ಇದರೊಂದಿಗೆ ಸಂಜೆಯ ಬಳಿಕ ಶಾಸಕರ ಆಪ್ತ ಸಹಾಯಕರು, ಗನ್‌ಮ್ಯಾನ್ ಗಳನ್ನು ಹೊರತುಪಡಿಸಿ ಶಾಸಕರ‍್ಯಾರು ಶಾಸಕರ ಭವನದಲ್ಲಿ ಉಳಿಯುವು ದಿಲ್ಲ. ಹೀಗಿರುವಾಗ, ಅನಗತ್ಯವಾಗಿ ತೆರಿಗೆದಾರರ ಹಣವನ್ನು ಇದಕ್ಕೆ ವ್ಯಯಿಸುವ ತೀರ್ಮಾನ ಸರಿಯಲ್ಲ ಎಂಬ ಮಾತು ಕೇಳಿಬಂದಿದೆ.
ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ನಿರೀಕ್ಷೆಯಲ್ಲಿರುವ ಬಹುತೇಕ ಶಾಸಕರು, ತಮಗೆ ಈ ಆಧುನಿಕ ತಂತ್ರಜ್ಞಾನ ಲಾಕರ್‌ಗಳನ್ನು ಅಳವಡಿಸಲು ಅನುದಾನ ಖರ್ಚು ಮಾಡುವ ಬದಲು, ಅದನ್ನು ಯಾವುದಾದರೂ ಕ್ಷೇತ್ರದ ಅಭಿವೃದ್ಧಿಗೆ ಬಳಬಹುದಾಗಿತ್ತು. ಒಟ್ಟಾರೆ ಯಾಗಿ ನೋಡಿದರೆ, ಐದು ಕೋಟಿ ಸರಕಾರಕ್ಕೆ ದೊಡ್ಡ ಮೊತ್ತ ಎನಿಸುವುದಿಲ್ಲ. ಆದರೆ ಈ ರೀತಿಯ ಹತ್ತು ಯೋಜನೆಗಳನ್ನು ವಿಧಾನಸಭಾ ಸಚಿವಾಲಯದಿಂದ ಮಾಡಿದರೆ 50 ಕೋಟಿ ರು. ಆಗುತ್ತದೆ. ಆದ್ದರಿಂದ ಅನಗತ್ಯವಾಗಿ ತೆರಿಗೆ ಹಣ ಪೋಲಾಗುವುದನ್ನು ತಪ್ಪಿ ಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಂಬಂಧಿಸಿದವರು ಯೋಚಿಸಬೇಕು. ಏಳು ಸುತ್ತಿನ ಕೋಟೆಯಂತಿರುವ ಶಾಸಕರ ಭವನಕ್ಕೆ ನುಗ್ಗಿ ‘ಕಳ್ಳತನ’ ಮಾಡುವಷ್ಟು ಕರ್ನಾಟಕ ದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿಲ್ಲ ಎನ್ನುವುದು ಕೆಲ ಶಾಸಕರ ಅಭಿಪ್ರಾಯವಾಗಿದೆ.
ಕೂಗಳತೆ ದೂರದಲ್ಲಿಯೇ ಆಯುಕ್ತರ ಕಚೇರಿ
ವಿಧಾನಸೌಧ ಹಾಗೂ ರಾಜಭವನಕ್ಕೆ ಹೊಂದಿಕೊಂಡಿರುವ ಶಾಸಕರ ಭವನಕ್ಕೆ ಭಾರಿ ಭದ್ರತೆಯಿದೆ. ಪ್ರಮುಖವಾಗಿ ಶಾಸಕರ ಭವನದ ಪ್ರವೇಶ ದ್ವಾರದಲ್ಲಿಯೇ ಪೊಲೀಸ್ ಪಡೆ ಯಿಂದ ತಪಾಸಣೆಯಾಗುತ್ತದೆ. ಶಾಸಕರ ಭವನದ ಹೆಜ್ಜೆ ಹೆಜ್ಜೆಗೂ ಸಿಸಿ ಕ್ಯಾಮೆರಾ ಇವೆ. ಅಲ್ಲದೇ, ಕೂಗಳತೇ ದೂರದಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಿದೆ. ಹೈಕೋರ್ಟ್‌ನಲ್ಲಿ 24/7 ಪೊಲೀಸ್ ಪಡೆ ಕಾವಲಿಗೆ ಇರುತ್ತದೆ. ಇನ್ನು ರಾಜಭವನದ ಕಾವಲಿಗೆ ನೂರಾರು ಪೊಲೀಸರು ದಿನ ವಿಡೀ ಕಾರ್ಯನಿರ್ವಹಿಸುತ್ತಾರೆ. ಇದರೊಂದಿಗೆ ಶಾಸಕರ ಭವನದಿಂದ ಒಂದೂವರೆ ಕಿ.ಮೀ ದೂರದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ, 500 ಮೀಟರ್ ಅಂತರದಲ್ಲಿ ಸಿಐಡಿ ಮುಖ್ಯ ಕಚೇರಿ, ಎರಡು ಕಿ.ಮೀ ಅಂತರದಲ್ಲಿ ಡಿಜಿ ಮುಖ್ಯ ಕಚೇರಿಯಿದೆ. ಈ ಎಲ್ಲ ಕಡೆ ಭಾರಿ ಪೊಲೀಸ್ ಪಡೆಯಿರುವಾಗ, ಶಾಸಕರ ಭವನಕ್ಕೆ ‘ಆಗುಂ ತಕ’ರು ಪ್ರವೇಶಿಸುವುದು ಸುಲಭವೇ? ಹೀಗಿರುವಾಗ ಐದು ಕೋಟಿ ರು. ವೆಚ್ಚದಲ್ಲಿ ಸ್ಮಾರ್ಟ್ ಸೇಫ್ಟಿ ಲಾಕರ್‌ಗಳ ಅಗತ್ಯ ಶಾಸಕ ಭವನದಲ್ಲಿರುವ ಕೋಣೆಗಳಿಗೆ ಇತ್ತೇ? ಎನ್ನುವುದು ಹಲವರ ಪ್ರಶ್ನೆಯಾಗಿದೆ.
*
ವಿಧಾನಸಭಾ ಸಚಿವಾಲಯದ ವ್ಯಾಪ್ತಿಯಲ್ಲಿರುವುದು 264 ಕೊಠಡಿ
ಈ ಕೊಠಡಿಗಳಿಗೆ ಸ್ಮಾರ್ಟ್ ಡೋರ್ ಲಾಕ್, ಸ್ಮಾರ್ಟ್ ಸೇಫ್ ಲಾಕರ್, ವಾಟರ್
ಪ್ಯೂರಿಫೈಯರ್ ಅಳವಡಿಸಲು ತೀರ್ಮಾನ
ಪ್ರತಿ ಕೋಣೆಗೆ 181818 ರು. ವೆಚ್ಚದಲ್ಲಿ ಅಳವಡಿಸುತ್ತಿರುವುದು ವಿವಾದಕ್ಕೆ ಕಾರಣ
ಹೈ ಸೆಕ್ಯೂರಿಟಿ ಪ್ರದೇಶದಲ್ಲಿರುವ ಶಾಸಕರ ಭವನದ ಕೋಣೆಗಳಿಗೆ ಈಗ ಲಾಕರ್ ಬದಲಿ ಸುವ ಅಗತ್ಯವೇನಿತ್ತು?