ಮಹಿಳೆಯರು ಸುರಕ್ಷಿತವಾಗಿ ಸಂಚರಿಸಲು ಮಹಿಳಾ ಆಟೋ ಚಾಲಕಿಯರ ಸಂಖ್ಯೆ ಹೆಚ್ಚಲಿ: ಶಾಸಕ ಎಸ್.ಸುರೇಶ್ ಕುಮಾರ್
ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿದ್ದಾರೆ. ಆಟೋ ಚಾಲನೆ ಯಲ್ಲೂ ಯಾರಿಗೇನು ಕಡಿಮೆ ಇಲ್ಲದಂತೆ ಮುಂದಾಗುತ್ತಿರುವುದು ಅಭಿನಂದನಾರ್ಹ. ಆಸಕ್ತ ಮಹಿಳೆಯ ರಿಗೆ ಉಚಿತವಾಗಿ ತರಬೇತಿ ನೀಡುವಂತಹ ಕೆಲಸ ಮಾಡುತ್ತಿರುವ ಬಿ.ಪ್ಯಾಕ್ ಮತ್ತು ಆದರ್ಶ ಆಟೋ ಸಂಸ್ಥೆಯ ಕೆಲಸ ಶ್ಲಾಘಿಸುವೆ


ಬೆಂಗಳೂರು: ಮಹಿಳಾ ಆಟೋ ಚಾಲಕಿಯರ ಸಂಖ್ಯೆ ಹೆಚ್ಚಾದರೆ, ಬೆಂಗಳೂರಿನಲ್ಲಿ ಮಹಿಳೆ ಯರು ಇನ್ನಷ್ಟು ಸುರಕ್ಷಿತವಾಗಿ ಆಟೋ ಸಂಚಾರ ಮಾಡಲು ಮುಂದಾಗುತ್ತಾರೆ ಎಂದು ಶಾಸಕ ಎಸ್.ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು. ಬಿ.ಪ್ಯಾಕ್ ಹಾಗೂ ಆದರ್ಶ ಆಟೋ ಸಹಯೋಗದಲ್ಲಿ”ಮಹಿಳೆಯರಿಗೆ ಉಚಿತ ಆಟೋ ಚಾಲನಾ ತರಬೇತಿ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಗರದಲ್ಲಿ ಆಟೋ ಬಳಸುವವರ ಪೈಕಿ ಮಹಿಳೆಯರೇ ಹೆಚ್ಚು. ಆದರೆ, ಕೆಲವೊಂದು ಸಂದರ್ಭದಲ್ಲಿ ಮಹಿಳೆಯರ ಮೇಲೆ ಕಿರುಕುಳ ದಂತ ಸುದ್ದಿ ಕೇಳಿ ಬರುತ್ತವೆ, ಮಹಿಳೆಯರೇ ಆಟೋ ಚಾಲನೆಗೆ ಇಳಿದರೆ, ಇತರೆ ಮಹಿಳೆ ಯರು ಮತ್ತು ಮಕ್ಕಳು ಹೆಚ್ಚು ಸುರಕ್ಷಿತವಾಗಿ ಹಾಗೂ ಧೈರ್ಯವಾಗಿ ಯಾವ ಸಂದರ್ಭ ದಲ್ಲಾದರೂ ಆಟೋದಲ್ಲಿ ಸಂಚಾರ ಮಾಡಲು ಮುಂದಾಗುತ್ತಾರೆ.
ಹೀಗಾಗಿ ಮಹಿಳೆಯರು ಹೆಚ್ಚು ಹೆಚ್ಚು ಆಟೋ ಚಾಲನಾ ವೃತ್ತಿಗೆ ಆಗಮಿಸಲಿ. ಇದರಿಂದ ಸ್ತ್ರೀ ಆರ್ಥಿಕವಾಗಿಯೂ ಸಬಲೀಕರಣರಾಗಲಿದ್ದಾರೆ ಎಂದು ಹೇಳಿದರು.
Auto Price hike: ಬೆಂಗಳೂರಿಗರಿಗೆ ಇನ್ನೊಂದು ಶಾಕ್, ಆಟೋ ಮೀಟರ್ ದರ ಏರಿಕೆಗೆ ಮುಹೂರ್ತ ಫಿಕ್ಸ್
ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿದ್ದಾರೆ. ಆಟೋ ಚಾಲನೆ ಯಲ್ಲೂ ಯಾರಿಗೇನು ಕಡಿಮೆ ಇಲ್ಲದಂತೆ ಮುಂದಾಗುತ್ತಿರುವುದು ಅಭಿನಂದನಾರ್ಹ. ಆಸಕ್ತ ಮಹಿಳೆಯರಿಗೆ ಉಚಿತವಾಗಿ ತರಬೇತಿ ನೀಡುವಂತಹ ಕೆಲಸ ಮಾಡುತ್ತಿರುವ ಬಿ.ಪ್ಯಾಕ್ ಮತ್ತು ಆದರ್ಶ ಆಟೋ ಸಂಸ್ಥೆಯ ಕೆಲಸ ಶ್ಲಾಘಿಸುವೆ, ಈ ಉಚಿತ ತರಬೇತಿ ಕಾರ್ಯಕ್ರಮ ಇತರೆ ಭಾಗಗಲ್ಲೂ ಪ್ರಾರಂಭಿಸಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿ.ಪ್ಯಾಕ್ ಸದಸ್ಯರಾದ ಮಿಮಿ ಪಾರ್ಥಸಾರಥಿ, ಅನಿಶಾ ಭಂಡಾರಿ, ಡಾ. ಸಂಪತ್ ಸಿ, ರಾಘವೇಂದ್ರ ಪೂಜಾರಿ, ದೇವಿಕಾ ರಾಜ್ ಹಾಗೂ ತರಬೇತಿದಾರರದ ಪ್ರಭಾವತಿ ಮತ್ತಿತರರು ಉಪಸ್ಥಿತರಿದ್ದರು.