Vishwavani Editorial: ಜಾರಿಯಾಗದ ಆಶಯ ಲೊಳಲೊಟೆ !
ಕಳೆದ ಕೆಲ ತಿಂಗಳಿಂದ ಕಮಲ ಪಾಳಯದಲ್ಲಿ ಭಿನ್ನಮತ ಭುಗಿಲೆದ್ದು, ಹಾದಿರಂಪ-ಬೀದಿ ರಂಪದ ಹಂತವನ್ನು ತಲುಪಿದಾಗ ಅಥವಾ ಭಿನ್ನರ ಬಣಗಳು ತಮ್ಮದೇ ಆದ ದೂರಿನ ಮೂಟೆ ಯನ್ನು ಹೊತ್ತು ದೆಹಲಿ ದೊರೆಗಳ ಬಳಿ ಅವನ್ನು ಬಿಚ್ಚಿಡುವಾಗ ಹೀಗೆ ‘ನಾಲ್ಕು ಗೋಡೆಗಳ ಮಧ್ಯೆಯೇ’ ಭಿನ್ನಮತವನ್ನು ಬಗೆಹರಿಸಿಕೊಳ್ಳುವ ಚಿತ್ತಸ್ಥಿತಿಯು ಪಕ್ಷದ ತಥಾಕಥಿತ ರಾಜ್ಯ ನಾಯಕರಲ್ಲಿ ಇರಲಿಲ್ಲವೇಕೆ?


ಬಿಜೆಪಿಯ ಸಂಸ್ಥಾಪನಾ ದಿನದಂದು ಪಕ್ಷದ ರಾಜ್ಯ ಘಟಕದ ನಾಯಕರು ಒಗ್ಗಟ್ಟಿನ ಮಂತ್ರ ವನ್ನು ಜಪಿಸಿರುವುದು ವರದಿಯಾಗಿದೆ. “ಕಾರ್ಯಕರ್ತರೇ ಪಕ್ಷದ ಜೀವಾಳ; ಅವರ ಮಾತು ಹಾಗೂ ಅಹವಾಲನ್ನು ಆಲಿಸಬೇಕೇ ವಿನಾ, ಯಾರ‍್ಯಾರೋ ಮಾತಾಡುತ್ತಾರೆಂದು ಒತ್ತು ಕೊಡೋದು ಬೇಡ. ಭಿನ್ನಾಭಿಪ್ರಾಯ ಬದಿಗಿಟ್ಟು ಎಲ್ಲರೂ ಒಂದಾಗಿ ಹೋರಾಡೋಣ. ಗೊಂದಲಗಳನ್ನು ನಾಲ್ಕು ಗೋಡೆಗಳ ಮಧ್ಯೆಯೇ ಸರಿಪಡಿಸಿಕೊಳ್ಳೋಣ" ಎಂಬ ಮಾತು ಈ ಸಂದರ್ಭದಲ್ಲಿ ಹೊಮ್ಮಿದೆ. ಇಂಥ ಯಾವುದೇ ‘ತನ್ನಿಮಿತ್ತ’ ದಿನಗಳಂದು ಈ ರೀತಿಯ ‘ಆಶಯ ನುಡಿ’ ಹೊಮ್ಮುವುದು ಸಹಜವೇ; ಆದರೆ ಬಿಜೆಪಿಯ ಪ್ರಸಕ್ತ ಸ್ಥಿತಿಗತಿಯನ್ನು ಅವಲೋಕಿಸಿದಾಗ ಇದು ಎಷ್ಟರಮಟ್ಟಿಗೆ ಕಾರ್ಯಸಾಧ್ಯವಾದೀತು ಎಂಬ ಪ್ರಶ್ನೆ ಹೊಮ್ಮಿ ದರೆ ಅಚ್ಚರಿಯೇನಲ್ಲ.
ಇದನ್ನೂ ಓದಿ: Vishwavani Editorial: ನಂಬಿದ ಗುರುವೇ ನೆತ್ತರು ಹೀರಿದರೆ?
ಕಳೆದ ಕೆಲ ತಿಂಗಳಿಂದ ಕಮಲ ಪಾಳಯದಲ್ಲಿ ಭಿನ್ನಮತ ಭುಗಿಲೆದ್ದು, ಹಾದಿರಂಪ-ಬೀದಿ ರಂಪದ ಹಂತವನ್ನು ತಲುಪಿದಾಗ ಅಥವಾ ಭಿನ್ನರ ಬಣಗಳು ತಮ್ಮದೇ ಆದ ದೂರಿನ ಮೂಟೆಯನ್ನು ಹೊತ್ತು ದೆಹಲಿ ದೊರೆಗಳ ಬಳಿ ಅವನ್ನು ಬಿಚ್ಚಿಡುವಾಗ ಹೀಗೆ ‘ನಾಲ್ಕು ಗೋಡೆಗಳ ಮಧ್ಯೆಯೇ’ ಭಿನ್ನಮತವನ್ನು ಬಗೆಹರಿಸಿಕೊಳ್ಳುವ ಚಿತ್ತಸ್ಥಿತಿಯು ಪಕ್ಷದ ತಥಾಕಥಿತ ರಾಜ್ಯ ನಾಯಕರಲ್ಲಿ ಇರಲಿಲ್ಲವೇಕೆ? ಊರನ್ನು ಸೂರೆಗೊಂಡ ಮೇಲೆ ಕೋಟೆಯ ದಿಡ್ಡಿಬಾಗಿಲು ಹಾಕಲು ಹರಸಾಹಸ ಪಡುವುದರಲ್ಲಿ ಏನಾದರೂ ಅರ್ಥವಿದೆ ಯೇ? ಪಕ್ಷದ ಸಂಸ್ಥಾಪನಾ ದಿನದಂದು ರಾಜ್ಯ ನಾಯಕರು ಹೀಗೊಂದು ‘ಆಶಯನುಡಿ’ ಯನ್ನು ಆಡುತ್ತಿರುವಾಗಲೇ, ಮತ್ತೊಂದೆಡೆ ಇತ್ತೀಚೆಗಷ್ಟೇ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ನಾಯಕರೊಬ್ಬರು, “ಕುಟುಂಬವೊಂದರ ಹಿಡಿತದಿಂದ ಬಿಜೆಪಿ ಮುಕ್ತವಾಗುವವರೆಗೂ ಅಲ್ಲಿಗೆ ಮರಳುವ ಪ್ರಶ್ನೆಯೇ ಇಲ್ಲ" ಎಂದಿದ್ದಾರೆ.
ಒಡಲಲ್ಲಿ ಇಂಥದೇ ನೋವನ್ನು ಇಟ್ಟುಕೊಂಡ ಕಾರ್ಯಕರ್ತರು ಪಕ್ಷದ ರಾಜ್ಯ ಘಟಕ ದಲ್ಲಿ ಸಾಕಷ್ಟು ಇದ್ದಿರಲಿಕ್ಕೂ ಸಾಕು ಮತ್ತು ಅವರು ಸದರಿ ಉಚ್ಚಾಟಿತ ನಾಯಕರಂತೆ ಬಹಿರಂಗವಾಗಿ ಅದನ್ನು ಹೇಳಿಕೊಳ್ಳಲು ಅಸಮರ್ಥರಾಗಿದ್ದಿರಲಿಕ್ಕೂ ಸಾಕು. ಕಾರ್ಯ ಕರ್ತರೇ ಪಕ್ಷದ ಜೀವಾಳ, ಅವರ ಅಹವಾಲನ್ನು ಆಲಿಸಬೇಕು’ ಎನ್ನುವವರು ಈ ನಿಟ್ಟಿ ನಲ್ಲೊಮ್ಮೆ ಗಮನಹರಿಸಿದರೆ ಒಗ್ಗಟ್ಟು ತಾನೇ ತಾನಾಗಿ ಮೂಡುತ್ತದೆ. ಅಲ್ಲಿಯವರೆಗೂ ಕಮಲ ಪಾಳಯ ‘ಮನೆಯೊಂದು ಮೂರು ಬಾಗಿಲೇ’!