Maha Shivaratri: ಲಯಕರ್ತ ಮಹಾದೇವನ ಜನನದ ಬಗ್ಗೆ ಪುರಾಣಗಳು ಏನು ಹೇಳುತ್ತವೆ?
ಭಕ್ತರಿಂದ ಭೋಲೇ ನಾಥ, ಮಹಾದೇವ, ಶಂಕರ ಎಂದೆಲ್ಲಾ ಕರೆಯಿಸಿಕೊಳ್ಳುವ ಶಿವ ದೇವರ ಹುಟ್ಟಿನ ಕಥೆ ರೋಚಕತೆಗಳ ಆಗರ. ಉಳಿದ ದೇವರಂತೆ ಶಿವ ಹುಟ್ಟಿಲ್ಲ. ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ ಮಹಾದೇವನ ಜನ್ಮ ರಹಸ್ಯಕ್ಕೆ ಸಂಬಂಧಿಸಿದಂತೆ ವಿಷ್ಣುಪುರಾಣ ಏನು ಹೇಳುತ್ತದೆ ಎಂಬುದನ್ನು ಶಿವರಾತ್ರಿಯ ಈ ಪುಣ್ಯದಿನದಂದು ತಿಳಿದುಕೊಳ್ಳೋಣ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಮಹಾ ಶಿವರಾತ್ರಿಯನ್ನು (Maha Shivaratri) ಹಿಂದೂ ಧರ್ಮದಲ್ಲಿ (Hindu Religion) ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ. ಈ ದಿನವನ್ನು ಶಿವ ಭಕ್ತರು ತಮ್ಮ ಪಾಲಿನ ಪುಣ್ಯ ದಿನವೆಂದು ಭಾವಿಸಿಕೊಂಡಿದ್ದಾರೆ. ಲಯಕರ್ತನಾದ ಶಿವ ಮತ್ತು ಪಾರ್ವತಿ ದೇವಿಯರ ಆರಾಧನೆ ದಿನವಾಗಿರುವ ಶಿವರಾತ್ರಿ ಭಕ್ತರ ಪಾಲಿಗೆ ಮಹಾ ಶಿವರಾತ್ರಿ ಎನಿಸಿಕೊಂಡಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಮಹಾ ಶಿವರಾತ್ರಿಯನ್ನು ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಆಚರಿಸಲಾಗುತ್ತದೆ. ವಿಷಕಂಠ, ಭಕ್ತಪ್ರಿಯ, ಶಿವ, ಭೋಲೆನಾಥ, ಶಿವಶಂಭು, ಮಹಾದೇವ, ಶಂಕರ ಮುಂತಾದ ಹೆಸರುಗಳಿಂದ ಶಿವನನ್ನು ಕರೆಯಲಾಗುತ್ತದೆ. ಹಾಗಿದ್ದರೆ ಮಹಾದೇವನ ಹುಟ್ಟು ಹೇಗಾಯ್ತು? ಇದರ ಪೌರಾಣಿಕ ಹಿನ್ನಲೆಯೇನು? ಎಂಬೆಲ್ಲ ಮಾಹಿತಿ ಇಲ್ಲಿದೆ.
ಶಿವನ ಬಗ್ಗೆ ವಿಷ್ಣು ಪುರಾಣ ಏನು ಹೇಳುತ್ತೆ?
ಶಿವನು ಯಾವುದೇ ತಾಯಿಯ ಗರ್ಭದಿಂದ ಹುಟ್ಟಲಿಲ್ಲ. ಅವನು ಸ್ವಯಂಭೂ ಎಂಬ ಮಾತಿದೆ. ಅದೇನೇ ಇದ್ದರೂ ಆತನ ಮೂಲವನ್ನು ಪುರಾಣಗಳಲ್ಲಿ ವಿವರಿಸಲಾಗಿದೆ. ವಿಷ್ಣು ಪುರಾಣದ ಪ್ರಕಾರ, ಬ್ರಹ್ಮನು ವಿಷ್ಣುವಿನ ನಾಭಿ ಕಮಲದಿಂದ ಹುಟ್ಟಿದರೆ, ಶಿವನು ವಿಷ್ಣುವಿನ ಹಣೆಯ ಪ್ರಕಾಶದಿಂದ ಜಗತ್ತಿಗೆ ಬಂದವನಾಗಿದ್ದಾನೆ. ಅದೊಂದು ದಿನ, ವಿಷ್ಣು ಮತ್ತು ಬ್ರಹ್ಮ ಅಹಂಕಾರಿಗಳಾಗಿ ತಮ್ಮನ್ನು ತಾವು ಶ್ರೇಷ್ಠರೆಂದು ಭಾವಿಸಲು ಪ್ರಾರಂಭಿಸಿದಾಗ, ಶಿವನು ಉರಿಯುತ್ತಿರುವ ಕಂಬದಿಂದ ಕಾಣಿಸಿಕೊಂಡನು ಎಂದು ವಿಷ್ಣು ಪುರಾಣ ಹೇಳುತ್ತದೆ.
ಬ್ರಹ್ಮನ ಮಗನಾಗಿ ಶಿವ!
ವಿಷ್ಣು ಪುರಾಣದಲ್ಲಿ ವಿವರಿಸಲಾದ ಶಿವನ ಜನನದ ಕಥೆ ಬಹುಶಃ ಶಿವನ ಬಾಲ್ಯದ ಏಕೈಕ ವರ್ಣನೆಯಾಗಿದೆ. ಇದರ ಪ್ರಕಾರ, ತನಗೊಂದು ಪುತ್ರ ಸಂತಾನ ಬೇಕೆಂದು ಬ್ರಹ್ಮ ಘೋರವಾದ ತಪಸ್ಸಾನಚರಿದ ಸಂದರ್ಭದಲ್ಲಿ, ಇದ್ದಕ್ಕಿದ್ದಂತೆ ಶಿಶು ರೂಪಿ ಶಿವ ಬ್ರಹ್ಮನ ತೊಡೆಯ ಮೇಲೆ ಅಳುತ್ತಿರುವ ಸ್ಥಿತಿಯಲ್ಲಿ ಕಾಣಿಸಿಕೊಳ್ಳುತ್ತಾನೆ.
ಆಗ ಬ್ರಹ್ಮನು ಆ ಮಗುವಿನ ಅಳುವಿನ ಕಾರಣವನ್ನು ಆತನಲ್ಲೇ ಕೇಳಿದಾಗ ಆತ, ʼʼನನಗೆ ಹೆಸರಿಲ್ಲ. ಅದಕ್ಕಾಗಿಯೇ ಅಳುತ್ತಿದ್ದೇನೆʼʼ ಎಂದು ಉತ್ತರಿಸುತ್ತಾನೆ. ಆಗ ಬ್ರಹ್ಮನು ಶಿವನಿಗೆ 'ರುದ್ರ' ಎಂದು ಹೆಸರಿಟ್ಟನು. ಇದರ ಅರ್ಥ 'ಅಳುವವನು' ಎಂದಾಗಿದೆ. ಆದರೆ ಈ ಹೆಸರಿನಲ್ಲೂ ಶಿವ ಮೌನವಾಗಲಿಲ್ಲ. ಆದ್ದರಿಂದ ಬ್ರಹ್ಮನು ಅವನಿಗೆ ಮತ್ತೊಂದು ಹೆಸರನ್ನು ಕೊಟ್ಟನು. ಆದರೆ ಅಳುತ್ತಿದ್ದ ಆ ಶಿಶುವಿಗೆ ಆ ಹೆಸರೂ ಇಷ್ಟವಾಗಲಿಲ್ಲ. ಹೀಗಾಗಿ ಶಿವನನ್ನು ಸಮಾಧಾನಪಡಿಸಲು, ಬ್ರಹ್ಮನು ಅವನಿಗೆ 8 ಹೆಸರುಗಳನ್ನು ನೀಡಿದನು ಮತ್ತು ಆ ಬಳಿಕ ಶಿವ ಮಹಾದೇವ ಲೋಕದಲ್ಲಿ ಈ 8 ಹೆಸರುಗಳಿಂದ ಪ್ರಸಿದ್ಧನಾದನು. ಶಿವನ ಆ ಅಷ್ಟನಾಮಗಳೆಂದರೆ, ರುದ್ರ, ಶರ್ವ, ಭವ, ಉಗ್ರ, ಭೀಮ, ಪಶುಪತಿ, ಇಶಾನ್ ಮತ್ತು ಮಹಾದೇವ.
ಶಿವನ ಜನನದ ರಹಸ್ಯ
ಶಿವನು ಬ್ರಹ್ಮನ ಮಗನಾಗಿ ಜನಿಸಿದ ಎಂಬುದಕ್ಕೆ ವಿಷ್ಣು ಪುರಾಣದಲ್ಲಿ ಒಂದು ಕಥೆ ಇದೆ. ಇದರ ಪ್ರಕಾರ, ಭೂಮಿ, ಆಕಾಶ ಸೇರಿದಂತೆ ಇಡೀ ಬ್ರಹ್ಮಾಂಡವು ನೀರಿನಲ್ಲಿ ಮುಳುಗಿದ್ದಾಗ, ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಹೊರತುಪಡಿಸಿ ಯಾವುದೇ ದೇವರು ಅಥವಾ ಜೀವಿ ಇರಲಿಲ್ಲ. ಆಗ ವಿಷ್ಣು ಮಾತ್ರ ತನ್ನ ಶೇಷನ ಮೇಲೆ ನೀರಿನ ಮೇಲ್ಮೈಯಲ್ಲಿ ಮಲಗಿರುವುದು ಕಂಡುಬಂದನು. ಆಗ ಬ್ರಹ್ಮನು ಅವನ ಹೊಕ್ಕುಳಿನ ಕಮಲದ ಕಾಂಡದ ಮೇಲೆ ಕಾಣಿಸಿಕೊಂಡನು. ಬ್ರಹ್ಮ ಮತ್ತು ವಿಷ್ಣು ಸೃಷ್ಟಿಯ ಬಗ್ಗೆ ಮಾತನಾಡುತ್ತಿದ್ದಾಗ, ಶಿವನು ಕಾಣಿಸಿಕೊಂಡನು. ಬ್ರಹ್ಮದೇವನಿಗೆ ಶಿವ ಮತ್ತು ಶಂಕರರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಆಗ ಶಿವನು ಕೋಪಗೊಳ್ಳುತ್ತಾನೆ. ಆಗ ಹೆದರಿದ ವಿಷ್ಣು ಬ್ರಹ್ಮನಿಗೆ ದೈವಿಕ ದರ್ಶನವನ್ನು ನೀಡಿ ಶಿವನ ಸ್ವರೂಪವನ್ನು ನೆನಪಿಸಿಕೊಡುತ್ತಾನೆ.
ಈ ಸುದ್ದಿಯನ್ನೂ ಓದಿ: Shivratri Fasting: ಶಿವರಾತ್ರಿ ಉಪವಾಸ- ಆರೋಗ್ಯಕ್ಕೆ ಏನು ಲಾಭವಿದೆ?
ಬ್ರಹ್ಮನಿಂದ ಬ್ರಹ್ಮಾಂಡ ಸೃಷ್ಟಿ
ಆಗ ಬ್ರಹ್ಮನು ತನ್ನ ತಪ್ಪನ್ನು ಅರಿತುಕೊಂಡು ಶಿವನಲ್ಲಿ ಕ್ಷಮೆಯಾಚಿಸುತ್ತಾನೆ ಮತ್ತು ತನ್ನ ಮಗನಾಗಿ ಜನಿಸಲು ಅವನ ಆಶೀರ್ವಾದವನ್ನು ಕೋರುತ್ತಾನೆ. ಶಿವನು ಬ್ರಹ್ಮನ ಪ್ರಾರ್ಥನೆಯನ್ನು ಸ್ವೀಕರಿಸಿ ಅವನಿಗೆ ಈ ವರವನ್ನು ನೀಡಿದನು. ಬ್ರಹ್ಮನು ಬ್ರಹ್ಮಾಂಡವನ್ನು ಸೃಷ್ಟಿಸಲು ಪ್ರಾರಂಭಿಸಿದಾಗ, ಅವನಿಗೆ ಒಬ್ಬ ಮಗನ ಅಗತ್ಯವಿತ್ತು ಮತ್ತು ನಂತರ ಅವನು ಶಿವನ ಆಶೀರ್ವಾದವನ್ನು ನೆನಪಿಸಿಕೊಂಡನು. ಆದ್ದರಿಂದ ಬ್ರಹ್ಮನು ತಪಸ್ಸು ಮಾಡಿದಾಗ ಶಿವನು ಅವನ ತೊಡೆಯ ಮೇಲೆ ಮಗುವಾಗಿ ಕಾಣಿಸಿಕೊಂಡನು. ಶಿವನ ಈ ನಿಗೂಢ ಕಥೆಯು ಅವನ ಶಕ್ತಿ ಮತ್ತು ವೈಭವದ ಬಗ್ಗೆ ನಮಗೆ ಅರಿವು ಮೂಡಿಸುತ್ತದೆ.