Maha Shivratri: ಶಿವರಾತ್ರಿಗೆ ಸಿಹಿ ಸಿಹಿಯಾದ ತಂಬಿಟ್ಟು ಮಾಡುವ ವಿಧಾನ ಇಲ್ಲಿದೆ
ಶಿವರಾತ್ರಿ ಎಂದರೆ ಮಹಾದೇವನನ್ನು ಸ್ಮರಿಸುತ್ತಾ ಆತನ ಅಂತಃ ಶಕ್ತಿಯನ್ನು ನಮ್ಮೊಳಗೆ ತುಂಬಿಕೊಳ್ಳಲಿರುವ ಅಮೂಲ್ಯ ಘಳಿಗೆಯೂ ಹೌದು. ಈ ಪುಣ್ಯದಿನದಂದು ಉಪವಾಸವಿದ್ದು, ಜಾಗರಣೆ ಮಾಡುತ್ತಾ ಶಿವ ನಾಮಸ್ಮರಣೆಯನ್ನು ಜಪಿಸುತ್ತಾ ಮಹಾದೇವನ ಸಂಪ್ರೀತಿಗೆ ಪಾತ್ರರಾಗಲು ಭಕ್ತ ಗಡಣ ಹಾತೊರೆಯುತ್ತಿರುತ್ತಾರೆ. ಇನ್ನು ಶಿವನಿಗ ತಂಬಿಟ್ಟು ಬಹಳ ಪ್ರಿಯ, ಶಿವರಾತ್ರಿಗೆ ಈ ಸಿಹಿಯಾದ ತಂಬಿಟ್ಟು ಮಾಡುವುದು ಹೇಗೆ? ತಂಬಿಟ್ಟು ಮಾಡಲು ಬೇಕಾಗುವ ಪದಾರ್ಥವೇನು? ತಂಬಿಟ್ಟು ಮಾಡುವ ಪಾಕವಿಧಾನ ಏನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಬೇಕಾಗುವ ಪದಾರ್ಥಗಳು: ಹುರಿಗಡಲೆ-100 ಗ್ರಾಂ ಅಕ್ಕಿ-ಅರ್ಧ ಕೆ.ಜಿ ಎಳ್ಳು-5 ಚಮಚ ಕಡಲೆಬೀಜ-50 ಗ್ರಾಂ ಬೆಲ್ಲ-ಅಚ್ಚು ಒಂದು ಕೊಬ್ಬರಿ-ತುರಿ ಅರ್ಧ ಕಪ್ ಏಲಕ್ಕಿ-3 ತುಪ್ಪ-5 ಚಮಚ ಶುಂಠಿ-ಸ್ವಲ್ಪ ಮೊದಲು ಅಕ್ಕಿಯನ್ನು ಒಂದು ಪ್ಯಾನ್‌ನಲ್ಲಿ ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಿ ಬಳಿಕ ಮಿಕ್ಸರ್ ಜಾರ್ ಗೆ ಹಾಕಿ ಚೆನ್ನಾಗಿ ಹುಡಿ ಮಾಡಿಕೊಳ್ಳಿ.
ಇದನ್ನೂ ಓದಿ: Maha Shivaratri: ಲಯಕರ್ತ ಮಹಾದೇವನ ಜನನದ ಬಗ್ಗೆ ಪುರಾಣಗಳು ಏನು ಹೇಳುತ್ತವೆ?
ಅಕ್ಕಿಯ ಕಾಳು ಚೆನ್ನಾಗಿ ಹಿಟ್ಟಾಗಿರಬೇಕು. ನಂತರ ಪ್ಯಾನ್‌ಗೆ ಕಡಲೆ ಬೀಜ, ಎಳ್ಳು, ಹಾಕಿ ಬಿಸಿ ಮಾಡಿಟ್ಟುಕೊಳ್ಳಿ. ಬಳಿ ಕಡಲೆ ಬೀಜ, ಹುರಿಗಡಲೆ, ಏಲಕ್ಕಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಯನ್ನು ಒಲೆ ಮೇಲೆ ಇಟ್ಟು ಬೆಲ್ಲ, ಹಾಗೂ ಸ್ವಲ್ಪ ನೀರು ಹಾಕಿ ಸಾಧಾರಣ ಪಾಕ ರೆಡಿ ಮಾಡಿಕೊಳ್ಳಿ. ಇನ್ನೊಂದು ಕಡೆ ಪುಡಿ ಮಾಡಿರುವ ಅಕ್ಕಿಯ ಹಿಟ್ಟು, ಹುರಿದ ಎಳ್ಳು, ರುಬ್ಬಿಕೊಂಡಿರುವ ಎಲ್ಲಾ ಪದಾರ್ಥಗಳನ್ನು ಹಾಕಿ.
ಇದನ್ನು ಪಾಕಕ್ಕೆ ಹಾಕಿ ತಿರುಗಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪಾಕ ಬಿಸಿ ಇರುವಾಗಲೇ ಉಂಡೆ ಕಟ್ಟಲು ಪ್ರಾರಂಭಿಸಿ. ಬಳಿಕ ತಂಬಿಟ್ಟು ಉಂಡೆಗಳು ರೆಡಿಯಾಗುತ್ತವೆ.