ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Panchamasali Trust: ಪಂಚಮಸಾಲಿ ಟ್ರಸ್ಟ್ ಅಸಮಾಧಾನ; ಏ.20ಕ್ಕೆ ರಾಜ್ಯ‌ಮಟ್ಟದ ಸಭೆ ಕರೆದ ಜಯ ಮೃತ್ಯುಂಜಯ ಸ್ವಾಮೀಜಿ

ಏ.20ಕ್ಕೆ ರಾಜ್ಯ‌ಮಟ್ಟದ ಪಂಚಮಸಾಲಿ ಸಮಾಜ ಸಭೆ: ಜಯ ಮೃತ್ಯುಂಜಯ ಸ್ವಾಮೀಜಿ

Panchamasali Trust: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರ ಬೆಂಬಲಕ್ಕೆ ನಿಂತ ಕಾರಣ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಪದಾಧಿಕಾರಿಗಳು ಅಸಮಾಧಾನ ಹೊರಹಾಕಿದ್ದರು. ಇದೀಗ ಭಿನ್ನಮತ ಶಮನಗೊಳಿಸಲು, ಜಯ ಮೃತ್ಯುಂಜಯ ಸ್ವಾಮೀಜಿ ಅವರು ಏ. 20ಕ್ಕೆ ಸಭೆ ಕರೆದಿದ್ದಾರೆ.

Pralhad Joshi: ವಾಜಪೇಯಿ, ನರೇಂದ್ರ ಮೋದಿ ಕಾಲಘಟ್ಟದಲ್ಲಿ ಡಾ.ಅಂಬೇಡ್ಕರ್‌ ಅವರಿಗೆ ಅತ್ಯುನ್ನತ ಗೌರವ ಅರ್ಪಿಸಲಾಗಿದೆ: ಜೋಶಿ

ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್ ಅವರಿಗೆ ಎನ್‌ಡಿಎ ಸರ್ಕಾರದಿಂದಲೇ ಗೌರವ: ಜೋಶಿ

Pralhad Joshi: ಸ್ವಾತಂತ್ರ್ಯ ಪೂರ್ವದಿಂದಲೂ ಡಾ.ಅಂಬೇಡ್ಕರ್ ಅವರು ಅಧಿಕಾರಸ್ಥರಿಂದ ಅವಮಾನಕ್ಕೆ ಒಳಗಾಗುತ್ತಲೇ ಬಂದರು. ವಾಜಪೇಯಿ ಮತ್ತು ನರೇಂದ್ರ ಮೋದಿ ಅವರ ಕಾಲಘಟ್ಟದಲ್ಲಿ ಅವರಿಗೆ ಅತ್ಯುನ್ನತ ಗೌರವ ಅರ್ಪಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

Pavana Seetha: ಸೀತಾ ನದಿಯ ಮಡಿಲು ಶುಭ್ರಗೊಳಿಸುವ ʼಪಾವನ ಸೀತಾʼ ಅಭಿಯಾನ

ಸೀತಾ ನದಿಯ ಮಡಿಲು ಶುಭ್ರಗೊಳಿಸುವ ʼಪಾವನ ಸೀತಾʼ ಅಭಿಯಾನ

ಪರಿಸರ ಸ್ವಚ್ಛತೆ, ಸೀತಾ ನದಿಗೆ ಕಸ ಎಸೆಯದಂತೆ ಸ್ಥಳಿಯರು ಹಾಗೂ ಪ್ರವಾಸಿಗರ ಮನ ಒಲಿಸುವುದು, ಇತರ ನದಿಗಳ ಸ್ವಚ್ಛತಾ ಕಾರ್ಯಕ್ಕೂ ಆಯಾಯ ನದಿ ದಡದ ಊರುಗಳ ಜನತೆಗೆ ಈ ಮೂಲಕ ಪ್ರೇರಣೆಯಾಗುವುದು ಈ ಕಾರ್ಯದ ಹಿಂದಿನ ಉದ್ದೇಶವಾಗಿದೆ ಎಂದು ಆಯೋಜಕರಲ್ಲಿ ಒಬ್ಬರಾದ ವಸಂತ ಗಿಳಿಯಾರು ತಿಳಿಸಿದ್ದಾರೆ.

Lorry owners Strike: ರಾಜ್ಯದಲ್ಲಿ ಇಂದು ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಲಾರಿ ಮುಷ್ಕರ; 6 ಲಕ್ಷ ಲಾರಿಗಳ ಸಂಚಾರ ಸ್ಥಗಿತ!

ಇಂದು ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಲಾರಿ ಮುಷ್ಕರ

Lorry owners Strike: ಲಾರಿ ಮುಷ್ಕರ ಸಮಯದಲ್ಲಿ ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಲಾರಿಗಳು ಸಂಚಾರವನ್ನು ಸ್ಥಗಿತಗೊಳಿಸಲಿವೆ. ಹೊರರಾಜ್ಯಗಳಿಂದಲೂ ಲಾರಿಗಳು ಬರಲು ಬಿಡುವುದಿಲ್ಲ. ಅಂದು ವಾಣಿಜ್ಯ ಸೇರಿ ಎಲ್ಲ ಮಾದರಿಯ ಸರಕು ಸೇವೆಗಳು ಸ್ತಬ್ಧಗೊಳ್ಳಲಿದೆ ಎಂದು ರಾಜ್ಯ ಲಾರಿ ಮಾಲೀಕರ ಸಂಘ ಹೇಳಿದೆ.

Bengaluru News: ಬೆಂಗಳೂರು ಯುವತಿಗೆ ಲೈಂಗಿಕ ಕಿರುಕುಳ ಕೇಸ್‌; ಆರೋಪಿ ಬಂಧನಕ್ಕಾಗಿ ಪೊಲೀಸರ ರೋಚಕ ಕಾರ್ಯಚರಣೆ

ಯುವತಿಯ ಖಾಸಗಿ ಅಂಗ ಮುಟ್ಟಿ ವಿಕೃತಿ ಮೆರೆದಿದ್ದ ಆರೋಪಿ ಖಾಕಿ ಬಲೆಗೆ

Bengaluru Molestation Case: ಸುದ್ದಗುಂಟೆಪಾಳ್ಯ ಪೊಲೀಸರು ಸಂತೋಷ್ ಡೇನಿಯಲ್ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸಂತೋಷ್ ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಈ ಕೃತ್ಯ ತನ್ನಿಂದಲೇ ನಡೆದಿದೆ ಎಂದು ಹೇಳಿದ್ದಾನೆ. ಬೈಕ್ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಆರೋಪಿ ಮನೆಗೆ ತೆರಳಿದ್ರು, ಪೊಲೀಸರು ಬೆನ್ನುಬಿದ್ದಿರುವ ವಿಷಯ ತಿಳಿದು ಏಪ್ರಿಲ್ 9 ರಂದು ಆರೋಪಿ ಎಸ್ಕೇಪ್ ಆಗಿದ್ದು, ಆರೋಪಿ ಹೊಸೂರು ಮತ್ತು ಸೇಲಂ ಮೂಲಕ ಕೇರಳದ ಕೋಝಿಕೋಡ್​​ಗೆ ತಲುಪಿದ್ದ.

Karnataka Weather: ನಾಳೆ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ

ನಾಳೆ ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ

Karnataka Rain: ರಾಜ್ಯದಾದ್ಯಂತ ಮುಂದಿನ 5 ದಿನಗಳವರೆಗೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಗಾಳಿಯ ವೇಗ ಗಂಟೆಗೆ 30-40 ಕಿಮೀ ತಲುಪುವ ಸಾಧ್ಯತೆ ಇದ್ದು, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

CM Siddaramaiah: ಮನುವಾದಿಗಳು ಇದ್ದಕಿದ್ದಂತೆ ಅಂಬೇಡ್ಕರ್ ಮೇಲೆ ಪ್ರೀತಿ ಬಂದಂತೆ ಆಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ಅಂಬೇಡ್ಕರ್ ಇಲ್ಲದೇ ಹೋಗಿದ್ದರೆ ಎಲ್ಲರಿಗೂ ಶಿಕ್ಷಣ ದೊರೆಯುತ್ತಿರಲಿಲ್ಲ: ಸಿಎಂ

Ambedkar Jayanthi: ಮನುವಾದಿಗಳು ಇದ್ದಕಿದ್ದಂತೆ ಅಂಬೇಡ್ಕರ್ ಮೇಲೆ ಪ್ರೀತಿ ಬಂದಂತೆ ಆಡುತ್ತಿದ್ದಾರೆ. ಆದರೆ ಸಂವಿಧಾನವನ್ನು ಮೊದಲಿಗೆ ವಿರೋಧಿಸಿದ್ದು ಇವರೇ. ಸಂವಿಧಾನದ ಜಾರಿಯನ್ನು ವಿರೋಧಿಸಿದ್ದವರೇ ಈ ಮನುವಾದಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

CM Siddaramaiah: ಆರ್‌ಎಸ್‌ಎಸ್‌, ಬಿಜೆಪಿ ಪರಿವಾರ ಹೇಳುವ ಸುಳ್ಳುಗಳನ್ನು ಮೆಟ್ಟಿ, ಸತ್ಯ ಹೇಳುವ ಎದೆಗಾರಿಕೆ ಬೆಳೆಸಿಕೊಳ್ಳಿ: ಸಿಎಂ

ಕಾಂಗ್ರೆಸ್ ಕಾರ್ಯಕರ್ತರಿಗೆ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು: ಸಿದ್ದರಾಮಯ್ಯ

CM Siddaramaiah: ಕಾಂಗ್ರೆಸ್ ಕಾರ್ಯಕರ್ತರಿಗೆ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು. ಸೈದ್ದಾಂತಿಕ‌ ಹೋರಾಟವನ್ನು ನಾವು ನೀವೆಲ್ಲಾ ಮುನ್ನಡೆಸಬೇಕು ಎಂದು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮನುವಾದಿಗಳು ನಮ್ಮ ಸಂವಿಧಾನವನ್ನು ವಿರೋಧಿಸಿದ್ದನ್ನು, ಅಂಬೇಡ್ಕರ್ ಅವರು ಮನುಸ್ಮೃತಿಗೆ ಬೆಂಕಿ ಹಾಕಿ ಸುಟ್ಟಿದ್ದು ಏಕೆ ಎನ್ನುವುದನ್ನು ನಮ್ಮ ಕಾರ್ಯಕರ್ತರು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ಜನರಿಗೆ, ಇವತ್ತಿನ ಯುವ ಸಮುದಾಯಕ್ಕೆ ಸತ್ಯವನ್ನು ಅರ್ಥ ಮಾಡಿಸಬೇಕು ಎಂದು ಹೇಳಿದ್ದಾರೆ.

ವರ್ತನಾ ವಿಜ್ಞಾನವನ್ನು ಬಳಸಿಕೊಂಡು ಬೆಂಗಳೂರು ಮೆಟ್ರೋ ಬಳಕೆ ಹೆಚ್ಚಿಸುವ ವಿನೂತನ ಯೋಜನೆ ಪ್ರಾರಂಭ

ಬೆಂಗಳೂರು ಮೆಟ್ರೋ ಬಳಕೆ ಹೆಚ್ಚಿಸುವ ವಿನೂತನ ಯೋಜನೆ ಪ್ರಾರಂಭ

ಸ್ಟೇಷನ್ ಆಕ್ಸೆಸ್ ಆಂಡ್ ಮೊಬಿಲಿಟಿ ಪ್ರೋಗ್ರಾಂ (ಸ್ಟಾಂಪ್) ತಂಡವು ಟಿಎಂಎಫ್ ಮತ್ತು ಡಬ್ಲ್ಯೂ ಆರ್‌ಐ ಇಂಡಿಯಾ ಸಂಸ್ಥೆಗಳ ನೇತೃತ್ವದಲ್ಲಿ ಭಾರತದ ನಗರಗಳಲ್ಲಿ ಸಾರ್ವಜನಿಕ ಸಾರಿಗೆಯ ಸಂಪರ್ಕ ಕೊರತೆಯನ್ನು ತಗ್ಗಿಸಲು ಕೆಲಸ ಮಾಡುತ್ತದೆ. ಇದು ಎಲೆಕ್ಟ್ರಿಕ್ ಆಟೋರಿಕ್ಷಾಗಳಿಂದ ಹಿಡಿದು ಕಾರ್‌ ಪೂಲಿಂಗ್ ಆಪ್‌ ವರೆಗೆ ವಿನೂತನ ಆವಿಷ್ಕಾರಗಳನ್ನು ಒಟ್ಟುಗೂಡಿಸಿ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸು ತ್ತದೆ

Bidar News: ಹುಬ್ಬಳ್ಳಿ ಪ್ರಕರಣ ಬೆನ್ನಲ್ಲೇ ಬೀದರ್‌ನಲ್ಲಿ ಬಾಲಕಿ ಕಿಡ್ನ್ಯಾಪ್‌ಗೆ ಯತ್ನ

ಹುಬ್ಬಳ್ಳಿ ಪ್ರಕರಣ ಬೆನ್ನಲ್ಲೇ ಬೀದರ್‌ನಲ್ಲಿ ಬಾಲಕಿ ಕಿಡ್ನ್ಯಾಪ್‌ಗೆ ಯತ್ನ

Bidar News: ಬೀದರ್‌ನ ವಿದ್ಯಾನಗರ ಬಡಾವಣೆಯ 11ನೇ ಕ್ರಾಸ್‌ನಲ್ಲಿರುವ ಸತೀಶ್ ಬಕ್ಕಾಚೌಡೇಕರ ಎಂಬುವವರ ಮನೆ ಬಳಿ ಘಟನೆ ನಡೆದಿದೆ. ಬಾಲಕಿ ಮನೆ ಮುಂದೆ ಆಟವಾಡುತ್ತಿದ್ದಾಗ, ಯುವಕನೊಬ್ಬ ಬಾಲಕಿಯ ಅಪಹರಣಕ್ಕೆ ಯತ್ನಿಸಿದ್ದಾನೆ. ಈ ವೇಳೆ ಪೋಷಕರು ಹೊರಬರುತ್ತಿದ್ದಂತೆ ಬೈಕ್ ಸಮೇತ ಯುವಕ ಪರಾರಿಯಾಗಿದ್ದಾನೆ.

Chikkaballapur News: ಕಸಾಪ ಕಾರಣವಾಗಿ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಕೈಂಕರ್ಯ ನಡೆಯುವಂತಾಗಿದೆ : ಕಸಾಪ ಅಧ್ಯಕ್ಷ ಡಾ.ಚಿನ್ನಕೈವಾರಮಯ್ಯ

ಕಸಾಪ ಕಾರಣವಾಗಿ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಕೈಂಕರ್ಯ

ವಿಶೇಷವಾಗಿ ಯುವ ಜನತೆ ಕನ್ನಡ ಭಾಷೆ,ಕಲೆ, ಸಾಹಿತ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸ ಬೇಕಾಗುತ್ತದೆ. ಇದೇ ದಿನ ವರನಟ ಡಾ.ರಾಜ್ ಪುಣ್ಯಸ್ಮರಣೆ ಮಾಡುವ ಅವಕಾಶ ಸಿಕ್ಕಿರುವುದು ಸಂತೋಷದಾಯಕ. ತಮ್ಮ ನಟನೆಯ ಮೂಲಕ ವಿಶೇಷ ವ್ಯಕ್ತಿತ್ವ ರೂಪಿಸಿಕೊಂಡಿದ್ದಲ್ಲದೆ ಗೋಕಾಕ್ ಚಳುವಳಿ ಮೂಲಕ ಕನ್ನಡದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. ಪ್ರತಿ ಹುಣ್ಣುಮೆ ಕಾರ್ಯಕ್ರಮ ದಲ್ಲಿ ಕನ್ನಡ ಗೀತೆಗಳ ಗಾಯನ, ಕವಿತೆಗಳ ವಾಚನ ವಿಶೇಷ ಅನುಭವ ತಂದು ಕೊಡುತ್ತದೆ

ಮಿಂಚುವ ಹೊಳಪು: ಜೋಯಾಲುಕ್ಕಾಸ್‌ನ ಅಪೂರ್ವವಾದ ನೂತನ ಶೋರೂಮ್ ಅನಾವರಣ

ಜೋಯಾಲುಕ್ಕಾಸ್‌ನ ಅಪೂರ್ವವಾದ ನೂತನ ಶೋರೂಮ್ ಅನಾವರಣ

ಅತ್ಯಾಧುನಿಕ ಸೌಲಭ್ಯ, ಅಂತರರಾಷ್ಟ್ರೀಯ ಗುಣಮಟ್ಟದ ಒಳಾಂಗಣ ವಿನ್ಯಾಸ, ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಮತ್ತು ಸಾಂಪ್ರದಾಯಿಕ ಹಾಗೂ ಸಮಕಾಲೀನ ವಿನ್ಯಾಸಗಳನ್ನು ಒಳಗೊಂಡ ವಿಸ್ತಾರವಾದ ಸಂಗ್ರಹಗಳನ್ನು ಒಳಗೊಂಡಿದೆ. ಸೀಮಿತ ಅವಧಿಗೆ, ಗ್ರಾಹಕರು ಪ್ರತಿ ಖರೀದಿಯೊಂದಿಗೆ ಖಚಿತವಾದ ಉಚಿತ ಉಡುಗೊರೆಯನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದು ಸಂತಸದಾಯಕವಲ್ಲದೆ, ಸಂದರ್ಭದ ಮಾಂತ್ರಿಕತೆ ಯನ್ನು ಹೆಚ್ಚಿಸುತ್ತದೆ

Chikkaballapur News: ಯುವಜನತೆ ಸಮಾಜ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು: ವಾಲ್ಮೀಕಿ ನಾಯಕ ಸಮುದಾಯದ ಮುಖಂಡ ಅರ್ ಅಶೋಕ್ ಕುಮಾರ್ ಕರೆ

ಯುವಜನತೆ ಸಮಾಜಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು

ಕಾದಲವೇಣಿ ಗ್ರಾಮದ ಅಂಬೇಡ್ಕರ್ ಭವನದ ಅವರಣದಲ್ಲಿ ಲಯನ್ ಸಂಸ್ಥೆ, ಲಯನ್ ಸೇವಾ ಟ್ರಸ್ಟ್, ಜೈ ಭೀಮ್ ಜೇನುಗೂಡು ಗೆಳೆಯರ ಬಳಗ, ಲಯನ್ ರಕ್ತ ನಿಧಿ ಯಲಹಂಕ ಇವರ ಸಂಯಕ್ತ ಆಶ್ರಯ ದಲ್ಲಿ ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಮೌಲ್ಯಮಾಪನ ಕುಲಸಚಿವರಾಗಿ ಲೋಕನಾಥ್ ಅಧಿಕಾರ ಸ್ವೀಕಾರ

ಮೌಲ್ಯಮಾಪನ ಕುಲಸಚಿವರಾಗಿ ಲೋಕನಾಥ್ ಅಧಿಕಾರ ಸ್ವೀಕಾರ

ಉನ್ನತ ಶಿಕ್ಷಣ ಇಲಾಖೆ ಇವರ ನೇಮಕಮಾಡಿ ಆದೇಶ ಹೊರಡಿಸಿದ್ದು ಕುಲಪತಿ ನಿರಂಜನವಾನಳ್ಳಿ ಅವರ ಸಮ್ಮುಖದಲ್ಲಿ ಅವರು ಅಧಿಕಾರ ವಹಿಸಿಕೊಂಡಿದ್ದು ಪರೀಕ್ಷಾಂಗ, ಮೌಲ್ಯಮಾಪನ ಎರಡೂ ಕೂಡ ಮಹತ್ವದ ವಿಭಾಗಳು. ಇದರ ಮುಖವಾಣಿಯಾಗಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ವಿದ್ಯಾರ್ಥಿಗಳ ಭವಿಷ್ಯ ಕಾಪಾಡುವ ಮೂಲಕ ವಿಶ್ವವಿದ್ಯಾಲಯದ ಘನತೆ ಕಾಪಾಡಿ ಎಂದು ಕುಪತಿಗಳು ಹಾರೈಸಿದ್ದಾರೆ

Tumkur (Sira) news: ಡಾ.ಅಂಬೇಡ್ಕರ್ ಜಯಂತಿ : ಚಿಂತನೆಗಳು ಮತ್ತು ಆಶಯ: ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿ ವಿಶೇಷ

ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿ ವಿಶೇಷ

ಅಂಬೇಡ್ಕರ್ ಅವರ ಜೀವನ ಚಿಂತನೆ ಆಕಾಶದಷ್ಟು ಎತ್ತರ, ಸಮುದ್ರದಷ್ಟು ಆಳ, ಭಾರತದ ಸಾಮಾಜಿಕ, ರಾಜಕೀಯ, ಧಾರ್ಮಿಕ ಜೀವನದ ಮೇಲೆ ಅಂಬೇಡ್ಕರ್ ಅವರ ವ್ಯಕ್ತಿತ್ವ ಚಿಂತನೆಗಳ ಪ್ರಸ್ತುತತೆಯನ್ನು ಇಂದಿಗೂ ನಾವು ಕಾಣಬಹುದು. ಅಂಬೇಡ್ಕರ್ ಅವರ ಜೀವನ ಹೋರಾಟ ಜಗತ್ತಿನ ಇತಿಹಾಸದಲ್ಲಿಯೇ ಒಂದು ಅಪೂರ್ವವಾದ ಚಳುವಳಿ ಇವರ ಪ್ರಭಾವ ಭಾರತೀಯ ಜನ ಜೀವನದಲ್ಲಿ ಶತಮಾನಗಳಿಂದ ಬೇರು ಬಿಟ್ಟಿದ್ದ ವ್ಯವಸ್ಥೆ, ಸಂಪ್ರದಾಯ, ಜಡತ್ವಗಳು, ಕೊಚ್ಚಿ ಹೋಗಿ ಹೊಸತನದ ಹೊಸ ಆವಿಷ್ಕಾರಕ್ಕೆ ಹೊಸ ಆಯಾಮಕ್ಕೆ ದಾರಿ ಮಾಡಿ ಕೊಟ್ಟಿತು

ಸಕಲ ನರಸಿಂಹುಲು ಚೆಟ್ಟಿ ಒಂದು ನೆನಪು ಸ್ಮರಣಿಕೆ ಬಿಡುಗಡೆ

ಸಕಲ ನರಸಿಂಹುಲು ಚೆಟ್ಟಿ ಒಂದು ನೆನಪು ಸ್ಮರಣಿಕೆ ಬಿಡುಗಡೆ

ಆಕರ್ಷಕ ವ್ಯಕ್ತಿತ್ವದ ಸಕಲ ನರಸಿಂಹಲು ಚೆಟ್ಟಿ ಅವರು 97 ವರ್ಷದ ಸಾರ್ಥಕ ಜೀವನವನ್ನು ಪೂರೈಸಿದ್ದು, ಅವರ ಬದುಕಿನ ಕುರಿತು ಪ್ರಕಟಿಸಲಾದ ಸ್ಮರಣಿಕೆಯನ್ನು ಚಿನ್ಮಯ ಮಿಷನ್‌ ಪೂಜ್ಯ ಸ್ವಾಮಿ ಬ್ರಹ್ಮಾನಂದಜೀ ಅವರು ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಬಿಡುಗಡೆ ಮಾಡಿದರು.

ಇಂದಿನಿಂದ ಮೂರು ದಿನಗಳ ಕಾಲ ಅದ್ಧೂರಿ ಕುಂಭಾಭಿಷೇಕ ಮಹೋತ್ಸವ ಮತ್ತು ಲೋಕಾರ್ಪಣಾ ಸಮಾರಂಭ

ಕುಂಭಾಭಿಷೇಕ ಮಹೋತ್ಸವ ಮತ್ತು ಲೋಕಾರ್ಪಣಾ ಸಮಾರಂಭ

ಶ್ರೀ ಆದಿಚುಂಚನಗಿರಿ ವಿಜಯನಗರ ಶಾಖಾಮಠದ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ ಅವರು ಮಾತ ನಾಡಿ, ಏಪ್ರಿಲ್ 14ನೇ ಸೋಮವಾರ ವಿಜಯನಗರ ಮಠದಿಂದ ಆಂಜನೇಯ ಸ್ವಾಮಿ ವಿಗ್ರಹವನ್ನು ಮೆರವಣಿಗೆಯಲ್ಲಿ ಮಂಜುನಾಥ ನಗರದಿಂದ ಮೋದಿ ವೃತ್ತ ಶಂಕರ ಮಠ ವೃತ್ತಕ್ಕೆ ಆಗಮಿಸಲಿದ್ದು, ಶಂಕರಮಠ ವೃತ್ತದಿಂದ ಸುಮಾರು 500 ಮಹಿಳೆಯರು ಕಳಸ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳ ಲಿದ್ದಾರೆ

Siddaganga Mutt: ಸಿದ್ಧಗಂಗಾ ಮಠದಲ್ಲಿ ಬೃಹತ್ ಹೆಬ್ಬಾವು ಪತ್ತೆ!

ಸಿದ್ಧಗಂಗಾ ಮಠದಲ್ಲಿ ಬೃಹತ್ ಹೆಬ್ಬಾವು ಪತ್ತೆ!

Siddaganga Mutt: ತುಮಕೂರು ನಗರದ ಸಿದ್ಧಗಂಗಾ ಮಠದಲ್ಲಿ ಬೃಹತ್ ಹೆಬ್ಬಾವು ಕಾಣಿಸಿಕೊಂಡು ಆತಂಕ ಮೂಡಿಸಿದೆ. ಮಠದ ಸಿಬ್ಬಂದಿ ಉರಗ ತಜ್ಞರಿಗೆ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಬಂದು ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

G Parameshwara: ವಲಸೆ ಕಾರ್ಮಿಕರಿಂದ ಅಪರಾಧ: ಕ್ರಮದ ಬಗ್ಗೆ ಚರ್ಚೆಗೆ ಗೃಹ ಸಚಿವರ ಇಂಗಿತ

ವಲಸೆ ಕಾರ್ಮಿಕರಿಂದ ಅಪರಾಧ: ಕ್ರಮದ ಬಗ್ಗೆ ಚರ್ಚೆಗೆ ಗೃಹ ಸಚಿವರ ಇಂಗಿತ

ಬಿಹಾರದ ಪಾಟ್ನಾ ಮೂಲದ 35 ವರ್ಷದ ರಿತೇಶ್ ಕುಮಾರ್ ಎಂಬಾತ ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿರುವ ಹಿನ್ನೆಲೆಯಲ್ಲಿ ಗೃಹ ಸಚಿವರು ಈ ಬಗ್ಗೆ ಕಾರ್ಮಿಕರ ಸಚಿವರ ಜೊತೆಗೂ ಚರ್ಚೆಗೆ ಮುಂದಾಗಿದ್ದಾರೆ. ರಿತೇಶ್‌ ಕುಮಾರ್‌ನನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ.

PM Narendra Modi: ಕರ್ನಾಟಕದಲ್ಲಿ ಮುಸ್ಲಿಮರಿಗೆ ಗುತ್ತಿಗೆ ಮೀಸಲು: ಪ್ರಧಾನಿ ಮೋದಿ ವಾಗ್ದಾಳಿ

ಕರ್ನಾಟಕದಲ್ಲಿ ಮುಸ್ಲಿಮರಿಗೆ ಗುತ್ತಿಗೆ ಮೀಸಲು: ಪ್ರಧಾನಿ ಮೋದಿ ವಾಗ್ದಾಳಿ

PM Narendra Modi: ಹರಿಯಾಣದ ಹಿಸಾರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಹಾಳು ಮಾಡುವ ರೀತಿಯಲ್ಲಿ ಕಾಂಗ್ರೆಸ್ ವಕ್ಫ್ ಕಾನೂನನ್ನು ಮಾಡಿದೆ ಎಂದು ಅವರು ಹೇಳಿದರು.

Physical Abuse: ಬೆಂಗಳೂರಿನ ಬೀದಿಯಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ ಕೇರಳದಲ್ಲಿ ಆರೆಸ್ಟ್

ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ ಕೇರಳದಲ್ಲಿ ಆರೆಸ್ಟ್

ಪೊಲೀಸರು ಸುಮಾರು 700 ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿ ಕೊನೆಗೂ ಆರೋಪಿಯನ್ನು ಕೇರಳದ ದೂರದ ಹಳ್ಳಿಯಲ್ಲಿ ಬಂಧಿಸಿದ್ದಾರೆ. ಸಂತೋಷ ಎಂಬ ಹೆಸರಿನ ಈತ ನಗರದ ಜಾಗ್ವಾರ್ ಶೋ ರೂಂನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪೊಲೀಸರು ಮೂರು ರಾಜ್ಯಗಳಲ್ಲಿ ಸುಮಾರು ಒಂದು ವಾರದವರೆಗೆ ಈತನಿಗಾಗಿ ಹುಡುಕಾಟ ನಡೆಸಿದ್ದರು.

Bank Janardhan Passes Away: ಹಾಸ್ಯನಟ ಜನಾರ್ದನ್‌ ಹೆಸರಿನ ಹಿಂದೆ ಬ್ಯಾಂಕ್‌ ಸೇರಿಕೊಂಡದ್ದು ಹೇಗೆ?

ಹಾಸ್ಯನಟ ಜನಾರ್ದನ್‌ ಹೆಸರಿನ ಹಿಂದೆ ಬ್ಯಾಂಕ್‌ ಸೇರಿಕೊಂಡದ್ದು ಹೇಗೆ?

ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಜನಾರ್ದನ್ ‘ಗೌಡರ ಗದ್ದಲ’ ನಾಟಕ ಮಾಡಿದರು. ಇದರಲ್ಲಿ ಅವರ ನಟನೆ ನೋಡಿ ಅನೇಕರು ಮೆಚ್ಚಿಕೊಂಡರು. ಒಂದು ದಿನ ಇವರ ನಾಟಕವನ್ನು ಹಿರಿಯ ನಟ ಧೀರೇಂದ್ರ ಗೋಪಾಲ್ ಅವರು ನೋಡಿದರು. ಚಿತ್ರರಂಗಕ್ಕೆ ನೀವು ಬರಬೇಕು ಎಂದು ಆಹ್ವಾನ ಕೊಟ್ಟರು.

DK Shivakumar: 2000 ಕೋಟಿ ವೆಚ್ಚದ ಕಾಮಗಾರಿ ಹಗರಣ: ಡಿಕೆ ಶಿವಕುಮಾರ್‌ ಮೇಲೆ ಮುನಿರತ್ನ ರಾಜ್ಯಪಾಲರಿಗೆ ದೂರು

ಕಾಮಗಾರಿ ಗುತ್ತಿಗೆ ಕಮಿಷನ್:‌ ಡಿಕೆಶಿ‌ ಮೇಲೆ ಮುನಿರತ್ನ ರಾಜ್ಯಪಾಲರಿಗೆ ದೂರು

ಒಟ್ಟು 16 ವರ್ಕ್ ಆರ್ಡರ್‌ಗಳನ್ನು ಈ ಕಂಪನಿಗಳ ಗುತ್ತಿಗೆದಾರರಿಗೆ ಟೆಂಡರ್ ಕೊಟ್ಟಿದ್ದಾರೆ. ಕೆಟಿಟಿಪಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ, ದೊಡ್ಡ ದೊಡ್ಡ ಕಂಪನಿಗಳಿಂದ 400 ಕೋಟಿ ರೂ. ಕಮಿಷನ್ ಪಡೆದು ಟೆಂಡರ್ ಕೊಡಲಾಗಿದೆ ಎಂದು ಮುನಿರತ್ನ ಆರೋಪಿಸಿದ್ದಾರೆ.

Assault Case: ಅನೈತಿಕ ಸಂಬಂಧ ಆರೋಪದಲ್ಲಿ ಮಹಿಳೆ ಮೇಲೆ ಬರ್ಬರ ಹಲ್ಲೆ

ಅನೈತಿಕ ಸಂಬಂಧ ಆರೋಪದಲ್ಲಿ ಮಹಿಳೆ ಮೇಲೆ ಬರ್ಬರ ಹಲ್ಲೆ

ನಸ್ರೀನ್ ಬಾನು, ನಸ್ರಿನ್ ಮತ್ತು ಫಯಾಜ್ ಎನ್ನುವವರ ಮೇಲೆ ಹಲ್ಲೆ ನಡೆಸಲಾಗಿದೆ. ಮಹಿಳೆ ಮೇಲೆ ಹಗ್ಗ ಮತ್ತು ದೊಣ್ಣೆ ಕಬ್ಬಿಣದ ಪೈಪ್‌ಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಗೊತ್ತಾಗಿದೆ. ಮೊಹಮ್ಮದ್ ಫಯಾಜ್ ಎನ್ನುವ ವ್ಯಕ್ತಿಯಿಂದ ಮಹಿಳೆಯ ಮೇಲೆ ಹಲ್ಲೆ ನಡೆದಿದೆ.