ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Gauthami Jadav: ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಗೌತಮಿ ಜಾಧವ್-ಉಗ್ರಂ ಮಂಜು: ಎಲ್ಲಿ ಹೋಗಿದ್ರು?

ಬಿಗ್ ಬಾಸ್ನಿಂದ ಮನೆಯಿಂದ ಆಚೆ ಬಂದು ಇದೀಗ ಮೂರನೇ ಬಾರಿ ಉಗ್ರಂ ಮಂಜು, ಗೌತಮಿ ಜಾಧವ್ ಹಾಗೂ ಅವರ ಪತಿ ಅಭಿಷೇಕ್ ಭೇಟಿಯಾಗಿದ್ದಾರೆ. ಒಂದೇ ಫೋಟೋದಲ್ಲಿ ಮತ್ತೆ ಗೌತಮಿ, ಉಗ್ರಂ ಮಂಜು, ಹಾಗೂ ಅಭಿಷೇಕ್ ಅವರು ಮೈಸೂರಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಗೌತಮಿ ಜಾಧವ್-ಉಗ್ರಂ ಮಂಜು: ಎಲ್ಲಿ ಹೋಗಿದ್ರು?

Gauthami Jadav and Ugramm Manju

Profile Vinay Bhat Feb 26, 2025 6:46 AM

ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯವಾದ ಬಳಿಕ ಸ್ಪರ್ಧಿಗಳು ತಮ್ಮ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೆಲ ಸ್ಪರ್ಧಿಗಳಿಗೆ ಸಿನಿಮಾ, ಸೀರಿಯಲ್​ಗಳಿಂದ ಆಕರ್ಷಕ ಆಫರ್ ಬರುತ್ತಿದ್ದರೆ ಇನ್ನೂ ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿನ್ನರ್ ಹನುಮಂತ, ಧನರಾಜ್, ರಜತ್, ಚೈತ್ರ ಸೇರಿದಂತೆ ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ನಲ್ಲಿ ಭಾಗವಹಿಸುತ್ತಿದ್ದಾರೆ. ರನ್ನರ್-ಅಪ್ ತ್ರಿವಿಕ್ರಮ್ ಸಿಸಿಎಲ್ ಜೊತೆ ಮುದ್ದು ಸೊಸೆ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ಉಗ್ರಂ ಮಂಜು ಕೂಡ ಹೊಸ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಗೌತಮಿ ಜಾಧವ್ ಅವರು ಶೋ ಮುಗಿದ ಬಳಿಕ ಹೆಚ್ಚು ಕರಾವಳಿಯಲ್ಲಿ ಬೀಡುಬಿಟ್ಟಿದ್ದರು. ಅನೇಕ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಟೆಂಪಲ್ ರನ್ ನಡೆಸುಸಿದ್ದರು. ಕೃಷ್ಣ ನಾಡು ಉಡುಪಿಯಲ್ಲೂ ಕಾಣಿಸಿಕೊಂಡಿದ್ದರು. ಗೌತಮಿ ಬಿಗ್ ಬಾಸ್​ನಲ್ಲಿ ಗೆಳೆಯ-ಗೆಳತಿ ಎಂದೇ ಮಂಜು ಜೊತೆ ಆತ್ಮೀಯರಾಗಿದ್ದರು. ಅವರ ನಡುವೆ ಎಷ್ಟೇ ವೈಮನಸ್ಸು ಅಥವಾ ಗೊಂದಲಗಳಾಗಿದ್ದರು ಒಬ್ಬರನ್ನೊಬ್ಬರು ಸಮಾಧಾನ ಮಾಡಿಕೊಳ್ಳುತ್ತಾ ಪರಿಶುದ್ಧ ಸ್ನೇಹಿತರಾಗಿ ದೊಡ್ಮನೆಯಲ್ಲಿದ್ದರು. ಶೋ ಮುಗಿದ ಬಳಿಕ ಕೂಡ ಇವರು ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದರು.

ಇತ್ತೀಚೆಗಷ್ಟೆ ಗೌತಮಿ, ಉಗ್ರಂ ಮಂಜು ಅವರನ್ನು ಶಕ್ತಿ ದೇವತೆ ಬಳಿಗೆ ಕರೆದೊಕೊಂಡು ಹೋಗಿದ್ದರು. ಗೌತಮಿ ಅವರು ಮಂಜು ಹಾಗೂ ಪತಿ ಅಭಿಷೇಕ್ ಜೊತೆ ವನದುರ್ಗಾ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಜೊತೆಗೆ ಈ ಮೂವರು ಡಿನ್ನರ್ ಪಾರ್ಟಿ ಕೂಡ ಮಾಡಿದ್ದರು. ಇದೀಗ ಮತ್ತೊಮ್ಮೆ ಈ ಜೋಡಿ ಕಾಣಿಸಿಕೊಂಡಿದೆ.

ಬಿಗ್ ​ಬಾಸ್​ನಿಂದ​ ಮನೆಯಿಂದ ಆಚೆ ಬಂದು ಇದೀಗ ಮೂರನೇ ಬಾರಿ ಉಗ್ರಂ ಮಂಜು, ಗೌತಮಿ ಜಾಧವ್​ ಹಾಗೂ ಅವರ ಪತಿ ಅಭಿಷೇಕ್​ ಭೇಟಿಯಾಗಿದ್ದಾರೆ. ಒಂದೇ ಫೋಟೋದಲ್ಲಿ ಮತ್ತೆ ಗೌತಮಿ, ಉಗ್ರಂ ಮಂಜು, ಹಾಗೂ ಅಭಿಷೇಕ್ ಅವರು ಮೈಸೂರಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದೇ ಫೋಟೋವನ್ನು ಗೌತಮಿ ಜಾಧವ್ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.



ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮಂಜು ಅವರು ಸದ್ಯ ಸುದೀಪ್ ಅಳಿಯನ ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುದೀಪ್ ಅಳಿಯ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಮೊದಲ ಸಿನಿಮಾ ಜಿಮ್ಮಿ ಕೆಲಸಗಳು ವಿಳಂಬ ಆಗಿದೆ. ಹೀಗಾಗಿ, ಮ್ಯಾಂಗೋ ಪಚ್ಚ ಅವರ ಮೊದಲ ಸಿನಿಮಾ ಆಗಲಿದೆ. ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಆರಂಭ ಆಗಿದೆ. ಉಗ್ರಂ ಮಂಜು ಅವರು ಈ ಸಿನಿಮಾ ಸೆಟ್​ನಲ್ಲಿ ಸೇರಿಕೊಂಡಿದ್ದಾರೆ. ಗೌತಮಿ ಜಾಧವ್ ಬಗ್ಗೆ ಯಾವುದೇ ಹೊಸ ಅಪ್ಡೇಟ್ ಇಲ್ಲ.

Kshethrapathi: ಕಲರ್ಸ್ ಕನ್ನಡದಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್: ಶಿವರಾತ್ರಿಗೆ ಬರುತ್ತಿದೆ ಕ್ಷೇತ್ರಪತಿ ಸಿನಿಮಾ