BJP Karnataka: ಬಿಜೆಪಿಯ ಅತೃಪ್ತರಿಗೆ ಅತಂತ್ರದ ಆತಂಕ
ಸುದೀರ್ಘ ಕಾಲದ ಪಕ್ಷದೊಳಗಿನ ಈಗ ಅತೃಪ್ತಿ ಹೋರಾಟದ ಹಿಂದಿನ ರೂವಾರಿಗಳ ತೆರೆಮರೆ ಯ ಆರ್ಭಟ ಕೂಡ ಸದ್ದಡಗಿದ್ದು, ಅವರಲ್ಲೂ ಆತಂಕ ಶುರುವಾಗಿದೆ. ಅಂದಹಾಗೆ ಯತ್ನಾಳ್‌ಗೆ ಸಂಬಂಧಿಸಿದ ಬೆಳವಣಿಗೆಗೆ ನೈಜ ಕಾರಣವೇನು ಎನ್ನುವ ಚರ್ಚೆ ತೀವ್ರವಾಗಿದೆ. ಉಚ್ಚಾಟನೆಗೆ ನಿಜಕ್ಕೂ ಆರೋಪ, ಪ್ರತ್ಯಾರೋಪಗಳ ಹುಚ್ಚು ಆಟ ಕಾರಣವೋ ಅಥವಾ ಮೆಚ್ಚುವಂತೆ ಕಾಣುತ್ತಿದ್ದ ಬಿಚ್ಚು ಮಾತುಗಳು ಕಾರಣವೋ ಎನ್ನುವುದು ಈಗ ಅತೃಪ್ತರರಿಗೆ ಆರ್ಥವೇ ಆಗು ತ್ತಿಲ್ಲ ಎನ್ನಲಾಗಿದೆ.

ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ್

ಶಿವಕುಮಾರ್ ಬೆಳ್ಳಿತಟ್ಟೆ
ಸಮಸ್ಯೆಗಳ ಸುಳಿಯಲ್ಲಿ ಯತ್ನಾಳ್ ಸಮಾನ ಮನಸ್ಕರು, ಮಾಜಿ ಸಿಎಂಗಳಿಗೆ ತಲೆ ಬಿಸಿ
ಬೆಂಗಳೂರು: ಬಿಜೆಪಿಯ ಹಿರಿಯ ಮುಖಂಡ, ಮಾಜಿ ಸಚಿವ ಬಸನಗೌಡ ಯತ್ನಾಳ್ ಉಚ್ಚಾಟನೆ ನಂತರ ಕಮಲ ಪಕ್ಷದಲ್ಲಿ ಮಳೆ ಬಂದು ನಿಂತಿರುವ ವಾತಾವರಣವಿದೆ. ಅತೃಪ್ತರ ವಲಯದಲ್ಲಿ ಈಗ ಆವೇಶದ ಹವಾ ಮಾಯವಾಗಿ, ಅವಸರ, ಆತಂಕ ಹಾಗೂ ಆತಂತ್ರದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪಕ್ಷದಲ್ಲಿ ಸದ್ಯ ಮಾತಿನ ಬಿರುಗಾಳಿ, ಟೀಕೆಗಳ ಸುರಿಮಳೆ, ಕೌಟುಂಬಿಕ ನಿಂದನೆಗಳ ಸಿಡಿಲು, ಜಾತಿ, ಉಪ ಜಾತಿ ಮಾತುಗಳ ಮಿಂಚಿನ ಮಾತುಗಳು ಸ್ಥಬ್ತವಾಗಿದೆ.
ಸುದೀರ್ಘ ಕಾಲದ ಪಕ್ಷದೊಳಗಿನ ಈಗ ಅತೃಪ್ತಿ ಹೋರಾಟದ ಹಿಂದಿನ ರೂವಾರಿಗಳ ತೆರೆಮರೆಯ ಆರ್ಭಟ ಕೂಡ ಸದ್ದಡಗಿದ್ದು, ಅವರಲ್ಲೂ ಆತಂಕ ಶುರುವಾಗಿದೆ. ಅಂದಹಾಗೆ ಯತ್ನಾಳ್‌ಗೆ ಸಂಬಂಧಿಸಿದ ಬೆಳವಣಿಗೆಗೆ ನೈಜ ಕಾರಣವೇನು ಎನ್ನುವ ಚರ್ಚೆ ತೀವ್ರವಾಗಿದೆ. ಉಚ್ಚಾಟನೆಗೆ ನಿಜಕ್ಕೂ ಆರೋಪ, ಪ್ರತ್ಯಾರೋಪಗಳ ಹುಚ್ಚು ಆಟ ಕಾರಣವೋ ಅಥವಾ ಮೆಚ್ಚುವಂತೆ ಕಾಣುತ್ತಿದ್ದ ಬಿಚ್ಚು ಮಾತುಗಳು ಕಾರಣವೋ ಎನ್ನುವುದು ಈಗ ಅತೃಪ್ತರರಿಗೆ ಆರ್ಥವೇ ಆಗುತ್ತಿಲ್ಲ ಎನ್ನಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧದ ಸಮರ ಸಾರಿದ್ದ ಅತೃಪ್ತರು ಈಗ ಸಂಪೂರ್ಣ ಸೋತಿದ್ದಾರೆಯಾದರೂ, ಜಯ ಸಾಧಿಸಿದ ವಿಜಯೇಂದ್ರಗೆ ಶರಣಾಗತಿ ಸಿದ್ಧರಿಲ್ಲ. ಹೀಗಾಗಿ ಯತ್ನಾಳ್ ಬಣ ಈಗ ಬಿಜೆಪಿಯಲ್ಲೂ ಉಳಿಯುಂತಿಲ್ಲ. ಕಾಂಗ್ರೆಸ್ ಸೇರುವಂತೆಯೂ ಇಲ್ಲದ ಆತಂತ್ರದ ಸ್ಥಿತಿಯಲ್ಲಿದ್ದಾರೆ.
ಹಾಗಂತ ಅತಂತ್ರ ತಪ್ಪಿಸಿಕೊಳ್ಳಲು ಅವಸರದಲ್ಲಿ ರಾಜೀನಾಮೆಯನ್ನೂ ನೀಡಲಾಗದ ಅನಿಶ್ಚಿತತೆಯೂ ಅವರಲ್ಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಈ ಮಧ್ಯೆ, ವಿಜಯೇಂದ್ರ ವಿರುದ್ಧ ಗುಟುರು ಹಾಕುತ್ತಲೇ ಇರುವ ಯತ್ನಾಳ್, ಪಕ್ಷದ ಹೈಕಮಾಂಡ್ ಬಳಿ ಉಚ್ಚಾಟನೆ ಪುನರ್ ಪರಿಶೀಲನೆಗೆ ಒತ್ತಡ ಹಾಕುತ್ತಿದ್ದಾರೆ. ಜತೆಗೆ ಈತನಕ ಈ ಸಮರಕ್ಕೆ ಹಿಂಬದಿಯಿಂದ ನೀರೆರೆದರು ಎನ್ನಲಾದ ನಾಯಕರು ಕೂಡ ಉಚ್ಚಾಟನೆ ಹಿಂತೆಗೆತಕ್ಕೆ ಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹಾಗೆಯೇ ಪಕ್ಷ ಹಿರಿಯ ನಾಯಕರಾದ ಬಸವರಾಜ ಬೊಮ್ಮಾಯಿ, ಸದಾನಂದ ಗೌಡ, ಸಿ.ಟಿ.ರವಿ, ಜಗದೀಶ್ ಶೆಟ್ಟರ್, ಮುರುಗೇಶ್ ನಿರಾಣಿ ಸೇರಿದಂತೆ ಅನೇಕರಿಗೆ ಇದರ ಬಿಸಿ ತಟ್ಟಿದ್ದು, ಅವರೂ ಉಚ್ಚಾಟನೆ ರದ್ದುಗೊಳಿಸುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ.
ಆದರೆ ಈ ಬೆಳವಣಿಗೆಯಿಂದ ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ತೀರಾ ಬೇಸರ ಉಂಟಾಗಿದೆ ಎನ್ನಲಾಗಿದ್ದು, ಇದನ್ನು ಹೇಗಾದರೂ ಸರಿಪಡಿಸಬೇಕೆನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿ ದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಅತೃಪ್ತರಿಗೆ ಕಾಂಗ್ರೆಸ್ ಬಾಗಿಲು ಬಂದ್?
ಬಿಜೆಪಿಯ ಬಂಡಾಯ ಗುಂಪಿನ ನಾಯಕ ಯತ್ನಾಳ್ ಹಾಗೂ ಅವರ ಸಮಾನ ಮನಸ್ಕರು ಈ ಬೆಳವಣಿಗೆ ನಂತರ ಕಾಂಗ್ರೆಸ್ ಕದ ತಟ್ಟುತ್ತಾರೆ ಎಂಬ ಗುಮಾನಿ ರಾಜಕೀಯ ವಲಯ ದಲ್ಲಿ ವಿಪರೀತವಾಗಿದೆ. ಇದಕ್ಕೆ ಕಾಂಗ್ರೆಸ್‌ನ ಶಾಸಕ ರಾಜು ಕಾಗೆ ತುಪ್ಪ ಸುರಿದ್ದಾರೆ. ಆದರೆ ಬಿಜೆಪಿಯ ಈ ಅತೃಪ್ತರಿಗೆ ಸದ್ಯಕ್ಕೆ ಕಾಂಗ್ರೆಸ್ ಬಾಗಿಲು ಮುಚ್ಚಿದಂತಾಗಿದೆ. ಅಂದರೆ ಯತ್ನಾಳ್ ಮತ್ತು ಮಾನ ಮನಸ್ಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಕೈ ಪಕ್ಷದ ಮುಖಂ ಡರು ಸಿದ್ಧರಿಲ್ಲ. ಯತ್ನಾಳ್ ಕಾಂಗ್ರೆಸ್ ಸೇರಬೇಕೆಂದರೆ ಬಿಜೆಪಿಯ ಎಲ್ಲ ವೇಷ ಭೂಷಣ ಗಳನ್ನು ಕಳಚಬೇಕು. ಅದನ್ನು ಕಾಂಗ್ರೆಸ್ ಒಪ್ಪಿಕೊಳ್ಳಬೇಕು. ಈವರೆಗಿನ ಅಲ್ಪಸಂಖ್ಯಾತರ, ಕಾಂಗ್ರೆಸ್ ನಾಯಕರ ವಿರುದ್ಧದ ಆರೋಪಗಳು, ಪಕ್ಷದ ವರಿಷ್ಠ ರಾಹುಲ್ ಗಾಂಧಿ ವಿರುದ್ಧ ಟೀಕೆಗಳನ್ನು ಮರೆಯಬೇಕು. ಇದು ಕಷ್ಟ ಸಾಧ್ಯ ಎನ್ನುತ್ತಾರೆ ಪಕ್ಷದ ಹಿರಿಯ ನಾಯಕರು. ಇನ್ನು ಯತ್ನಾಳ್ ಸಮಾನ ಮನಸ್ಕರ ಕಾಂಗ್ರೆಸ್ ಪ್ರವೇಶಕ್ಕೆ ಸ್ಥಳೀಯ ನಾಯಕರದೇ ತೀವ್ರ ವಿರೋಧವಿದೆ. ಹೀಗಾಗಿ ಅತೃಪ್ತರ ಮುಂದಿನ ಹಾದಿ ದುರ್ಗಮ ಎನ್ನುತ್ತಾರೆ ಪಕ್ಷದ ಹಿರಿಯರು.
ಸಮಾನ ಮನಸ್ಕರಿಗೆ ಸಮಸ್ಯೆ ನೂರು
ಯತ್ನಾಳ್ ಮಾತಿಗೆ ಸದಾ ದನಿಗೂಡಿಸುತ್ತಿದ್ದ 10ಕ್ಕೂ ಹೆಚ್ಚು ಸಮಾನ ಮನಸ್ಕರು ಕಾಂಗ್ರೆಸ್ ಸೇರಲು ಅನೇಕ ಅಡ್ಡಿ, ಅತಂಕಗಳಿವೆ. ಕುಮಾರ ಬಂಗಾರಪ್ಪ ಕಾಂಗ್ರೆಸ್ ಸೇರಲು ಸಚಿವ ಮಧು ಬಂಗಾರಪ್ಪ ಅವರದೇ ಅಪಸ್ವರ ಸಾಧ್ಯತೆ ಇದೆ. ಇನ್ನು ರಮೇಶ್ ಜಾರಕಿ ಹೊಳಿಗೆ ಕೆಪಿಸಿಸಿ ಅಧ್ಯಕ್ಷರೇ ಬಾಗಿಲು ಮುಚ್ಚುವ ಸಂಭವ ಇದೆ. ಬಿ.ಪಿ.ಹರೀಶ್‌ಗೆ ದಾವಣ ಗೆರೆಯಲ್ಲಿ ಶ್ಯಾಮನೂರು ಕುಟುಂಬವೇ ಕಿಡಿಕಾರುತ್ತದೆ. ಇನ್ನು ಜಿ.ಎಂ.ಸಿದ್ದೇಶ್ವರ್, ಅಣ್ಣಾ ಸಾಹೇಬ್ ಜೊಲ್ಲೆ, ಪ್ರತಾಪ್ ಸಿಂಹ ಅವರಿಗೂ ಇದೇ ಮಾದರಿಯ ಸಮಸ್ಯೆಗಳು ಎದುರಾಗ ಬಹುದು. ಇವರ ಪೈಕಿ ಅರವಿಂದ ಲಿಂಬಾವಳಿ ಅವರಿಗೆ ಅಡ್ಡಿಗಳು ಕಡಿಮೆಯಾಗದೂ ಅವರು ಹೋಗುವ ಮನಸ್ಥಿತಿಯವರಲ್ಲ ಎಂದು ಗೊತ್ತಾಗಿದೆ.