ಭ್ರಷ್ಟರಿಗೆ ಪ್ರಾಮಾಣಿಕ ಅಧಿಕಾರಿಗಳೇ ಟಾರ್ಗೆಟ್, ಮಂಗಳೂರಿನಲ್ಲಿ ಹೆಚ್ಚುತ್ತಿದೆ ಭ್ರಷ್ಟಾಚಾರಿಗಳ ಲಾಬಿ
ಮಂಗಳೂರಿನಲ್ಲಿ ಪ್ರಾಮಾಣಿಕರ ಮೇಲೆ ವಾಮಾಚಾರ ಮಾಡುವ ಭ್ರಷ್ಟಾ ಚಾರಿಗಳು ಹೆಚ್ಚತೊಡಗಿ ದ್ದಾರೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಉರ್ವಾ ಕಚೇರಿಯಲ್ಲಿ ಬ್ರೋಕರುಗಳ ಆಟಾಟೋಪ ಮಿತಿ ಮೀರಿದ್ದು ಮುಡಾ ಕಮಿಷನರ್ ಅವರನ್ನೇ ಬ್ಲಾಕ್ ಮೇಲ್ ಮಾಡುವ ಹಂತಕ್ಕಿಳಿ ದಿದ್ದಾರೆ. ಇದರಿಂದ ನೊಂದ ಮುಡಾ ಕಮಿಷನರ್ ನೂರ್ ಝಹರಾ ಖಾನಂ ಅವರು ಇಬ್ಬರು ಬ್ರೋಕರ್ ವಿರುದ್ಧ ಉರ್ವಾ ಠಾಣೆಗೆ ದೂರು ನೀಡಿದ್ದು ಎಫ್ ಐಆರ್ ದಾಖಲಾಗಿದೆ.


ಜಿಲ್ಲಾ ನೋಟ
ಜಿತೇಂದ್ರ ಕುಂದೇಶ್ವರ
ಮಂಗಳೂರು: ಈಗ ಮಂಗಳೂರಿನಲ್ಲಿ ಪ್ರಾಮಾಣಿಕರ ಮೇಲೆ ವಾಮಾಚಾರ ಮಾಡುವ ಭ್ರಷ್ಟಾ ಚಾರಿಗಳು ಹೆಚ್ಚತೊಡಗಿದ್ದಾರೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಉರ್ವಾ ಕಚೇರಿಯಲ್ಲಿ ಬ್ರೋಕರುಗಳ ಆಟಾಟೋಪ ಮಿತಿ ಮೀರಿದ್ದು ಮುಡಾ ಕಮಿಷನರ್ ಅವರನ್ನೇ ಬ್ಲಾಕ್ ಮೇಲ್ ಮಾಡುವ ಹಂತಕ್ಕಿಳಿದಿದ್ದಾರೆ. ಇದರಿಂದ ನೊಂದ ಮುಡಾ ಕಮಿಷನರ್ ನೂರ್ ಝಹರಾ ಖಾನಂ ಅವರು ಇಬ್ಬರು ಬ್ರೋಕರ್ ವಿರುದ್ಧ ಉರ್ವಾ ಠಾಣೆಗೆ ದೂರು ನೀಡಿದ್ದು ಎಫ್ ಐಆರ್ ದಾಖಲಾಗಿದೆ.
ಕರ್ತವ್ಯಕ್ಕೆ ಅಡ್ಡಿ
ಮುಡಾ ಕಮಿಷನರ್ ನೂರ್ ಝಹರಾ ಖಾನಂ ಅವರು ಇಬ್ಬರು ಬ್ರೋಕರ್ ಗಳ ವಿರುದ್ಧ ಉರ್ವಾ ಠಾಣೆಗೆ ದೂರು ನೀಡಿದ್ದಾರೆ. ಬ್ರೋಕರ್ ವಹಾಬ್ (45) ಮತ್ತು ಅಸಿಸ್ಟೆಂಟ್ ಬ್ರೋಕರ್ ಸಬಿತ್ (೨೫) ಎಂಬ ಇಬ್ಬರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ದೂರು ದಾಖಲಾಗಿದೆ. ವಾಮಾಚಾರ ನಡೆಸುವ ಬೆದರಿಕೆ ಒಡ್ಡಿದ್ದು ಯಾವ ಹೊತ್ತಿಗೆ ಮಾಟ ಮಾಡಿದ್ದಾರೆ, ಹೇಗೆ ಮಾಡಿದ್ದಾರೆ ಎನ್ನುವ ಕುರಿತು ಪೊಲೀಸರು ಇನ್ನಷ್ಟೇ ತನಿಖೆ ನಡೆಸಬೇಕಿದೆ.
ಮುಡಾ ಕಚೇರಿ ಕತೆ
ಜನವರಿ 7ರಂದು ಮುಡಾ ಕಚೇರಿ ಒಳಕ್ಕೆ ನುಗ್ಗಿದ್ದ ತಲಪಾಡಿಯ ಬ್ರೋಕರ್ ಸಿಬ್ಬಂದಿ ಇಲ್ಲದ ಸಂದರ್ಭದಲ್ಲಿ ಕಚೇರಿ ದಾಖಲೆಗಳನ್ನು ಪರಿಶೀಲಿಸಿ ತಿದ್ದಿದ್ದ. ಈ ವಿಡಿಯೋ ಕ್ಲಿಪ್ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ಬಳಿಕ ಸುದ್ದಿ ಮಾಧ್ಯಮಗಳಲ್ಲಿಯೂ ಪ್ರಸಾರವಾಗಿತ್ತು, ಇದರಿಂದ ಬ್ರೋಕರ್ ಗಳ ಮರ್ಯಾದೆ ಹರಾಜಾಗಿ ಆಡಳಿತದಲ್ಲಿ ಮಧ್ಯವರ್ತಿಗಳ ಪ್ರಭಾವ ಜಗಜ್ಜಾಹೀರಾಗಿತ್ತು. ಇದೆಲ್ಲ ಅವಾಂತರ ನಡೆದ ಬಳಿಕ ಕಮಿಷನರ್ ನೂರ್ ಝಹರಾ ಅವರು, ಸಿಬ್ಬಂದಿಗೆ ಮಾತ್ರ ಪ್ರವೇಶ ಎಂದು ಆದೇಶಿಸಿದ್ದರು.
ಬ್ರೋಕರ್ ವಾಟ್ಸಪ್ ಗ್ರೂಪ್
ಇದು ತಮ್ಮ ಕಮಿಷನ್‌ಗೆ ಅಡ್ಡಗಾಲು ಹಾಕುವ ಮೂಲಕ ಅವರ ಹೊಟ್ಟೆಗೆ ಹೊಡೆಯುವ ತಂತ್ರ ಎಂದು ಭಾವಿಸಿದ ಬ್ರೋಕರ್ ಮುಡಾ ಕಮಿಷನರ್ ವಿರುದ್ಧವೇ ತಿರುಗಿ ಬಿದ್ದಿದ್ದರು. ಬ್ರೋಕರ್ ಗಳದ್ದೇ ವಾಟ್ಸಪ್ ಗ್ರೂಪ್ ರಚಿಸಿ ಇದ್ದುದರಲ್ಲಿ ಪ್ರಾಮಾಣಿಕ ಅಽಕಾರಿಗೆ ಭ್ರಷ್ಟಾಚಾರದ ಆರೋಪ ಮಾಡುತ್ತಾ ಚರ್ಚಿಸುತ್ತಿದ್ದರು.
ವಾಮಾಚಾರ ಬೆದರಿಕೆ
ಎಲ್ಲಿಯವರೆಗೆ ಮುಟ್ಟಿದೆ ಎಂದರೆ ಗ್ಯಾಂಗ್‌ಗಳ ರೀತಿ ಗುಂಪುಗೂಡಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಫೋನ್ ಮೂಲಕ ಜೀವ ಬೆದರಿಕೆ ಒಡ್ಡುವ ಕೆಲಸ ಮಾಡುತ್ತಿದ್ದರು. ಒಂದು ಹಂತ ಮುಂದಕ್ಕೆ ಹೋಗಿ ಜನರ ಮುಂದೆಯೇ ಕಮಿಷನರ್ ಅವರನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದರು. ಕೊನೆಗೆ ದಾರಿ ಗಾಣದೆ ನೂರ್ ಝಹರಾ ಖಾನಮ್ ಉರ್ವ ಪೊಲೀಸರಿಗೆ ದೂರು ನೀಡಿದ್ದರು. ಕಮಿಷ ನರ್ ಕಚೇರಿ ಪ್ರದೇಶದಲ್ಲಿ ಶಾಂತಿ ಕದಡಲು ವಾಮಾಚಾರ ಮಾಡುವುದಾಗಿ ಬೆದರಿಕೆ ಒಡ್ಡಿರುವ ಕುರಿತು ದೂರು ನೀಡಿದ್ದಾರೆ.
ಭ್ರಷ್ಟಾಚಾರ ಮುಕ್ತ ಗುರಿ
ಹಿಂದೊಮ್ಮೆ ಖಡಕ್ ಅಧಿಕಾರಿ ಶ್ರೀಕಾಂತ್ ರಾವ್ ಕೂಡಾ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಹೆಜ್ಜೆ ಇಟ್ಟಿದ್ದರು. ಮಧ್ಯವರ್ತಿಗಳಿಂದ ಮುಕ್ತ ಮುಡಾ ಎಂಬ ಅಭಿಯಾನ ಮಾಡಿದ್ದರು. ನೇರವಾಗಿ ಕಮಿಷನರ್ ಕಚೇರಿಗೆ ಬಂದರೆ ಯಾವುದೇ ಕಮಿಷನ್ ನೀಡದೆಯೇ ಅರ್ಜಿ ವಿಲೇವಾರಿ ಮಾಡುವ ಘೋಷಣೆ ಮಾಡಿದ್ದರು. ಇದರಿಂದ ಸಾರ್ವಜನಿಕರಿಗೆ ಬಹಳ ಉಪಯೋಗವಾಗಿತ್ತು. ಆಗ ಬ್ರೋಕರ್‌ಗಳ ಒಳಗೊಳಗೆ ಹಲ್ಲು ಮಸೆಯು ತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಪ್ರಾಮಾಣಿಕ ಅಧಿಕಾರಿಗಳಿಗೇ ಬೆದರಿಸುವ ಮಟ್ಟಕ್ಕೆ ಮಂಗಳೂರಿನ ಭ್ರಷ್ಟಾಚಾರ ಲಾಬಿ ಬೆಳೆದು ಹೋಗಿದೆ.
ಯಾರಾರು ಶಾಮೀಲು
ಬೆಂಗಳೂರಿನ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಗಂಗರಾಜ್ ಇನ್ನಿತರರ ವಿರುದ್ಧ ಪ್ರಸಾದ್ ಅತ್ತಾವರ ಎಂಬವರು ವಾಮಾಚಾರ ಮಾಡಿದ ವಿಚಾರ ಫೆಬ್ರವರಿಯಲ್ಲಿ ಬಹಿರಂಗ ವಾಗಿತ್ತು. ಮಂಗಳೂರು ಪೊಲೀಸರು ಪ್ರಸಾದ್ ಅತ್ತಾವರನ ಪತ್ನಿ ಪೊಲೀಸ್ ಎಸ್‌ಐ ಸುಮಾ ಕೂಡಾ ಇದರಲ್ಲಿ ಶಾಮೀಲಾಗಿರುವ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಹೇಳಿದರು. ನೋಟಿಸ್ ಕಳುಹಿಸಿದರೂ ಎಸ್‌ಐ ಕಡೆಯಿಂದ ಯಾವ ಉತ್ತರವೂ ಬಂದಿಲ್ಲ. ಪ್ರಸಾದ್ ಅತ್ತಾವರ ಮೇಲ್‌ನಲ್ಲಿ ಸಿಕ್ಕ ವಾಮಾಚಾರ ವಿವರಗಳಲ್ಲೂ ಪೊಲೀಸ್ ಕಿರಿಯ ಅಧಿಕಾರಿಯ ಹೆಸರಿತ್ತು. ಪ್ರಾಣಿ ಬಲಿ ಕೊಡುವ ವೇಳೆ ಚೀಟಿಯಲ್ಲೂ ಪ್ರಸಾದ್ ಅತ್ತಾವರ, ಸ್ನೇಹಮಯಿ ಕೃಷ್ಣ, ಗಂಗರಾಜು, ಶ್ರೀನಿಧಿ ಹೆಸರಿನ ಜತೆ ಸುಮಾ ಹೆಸರು ಉಲ್ಲೇಖಿಸಲಾಗಿತ್ತು.
ಭ್ರಷ್ಟರ ಲಾಬಿ
ವಿಶೇಷ ಅಂದರೆ ಉರ್ವ ಪೊಲೀಸ್ ಠಾಣೆಗೂ ಭ್ರಷ್ಟರ ಕಣ್ಣು ಬಿದ್ದಿದೆ. ಇದ್ದುದರಲ್ಲಿ ಪ್ರಾಮಾಣಿಕ ಅಧಿಕಾರಿ, ಲೋಕಾಯುಕ್ತದಲ್ಲೂ ಈ ಹಿಂದೆ ಕೆಲಸ ಮಾಡಿದ್ದ ಭಾರತಿ ಅವರನ್ನೂ ಭ್ರಷ್ಟರ ಲಾಬಿ ಟಾರ್ಗೆಟ್ ಮಾಡಿತ್ತು. ಪೊಲೀಸ್ ಒಬ್ಬರು ಆರೋಪಿ ಜತೆ ಸೆಲಿ ತೆಗೆದುಕೊಂಡ ಫೋಟೊ ಸುದ್ದಿಯಾಗಿ ಇದಕ್ಕೆ ಇನ್‌ಸ್ಪೆಕ್ಟರ್ ಭಾರತಿ ಅವರನ್ನು ಸಿಲುಕಿಸಿ ಅವರನ್ನು ವರ್ಗಾವಣೆ ಮಾಡಲಾ ಗಿತ್ತು. ಸಸ್ಪೆಂಡ್ ಆಗುತ್ತಾರೆ ಅನ್ನುವಷ್ಟರಲ್ಲಿ ಅವರು ಲೋಕಾಯುಕ್ತಕ್ಕೆ ಸೇರ್ಪಡೆಗೊಂಡು ಬಚಾವ್ ಆಗಿದ್ದರು. ಅವರು ಹಿಂದೆ ಮಾಡಿದ್ದ ಒಳ್ಳೆಯ ಕೆಲಸ ಅವರನ್ನು ರಕ್ಷಣೆ ಮಾಡಿತ್ತು. ಇನ್ನೊಬ್ಬ ಪ್ರಾಮಾಣಿಕ ಅಧಿಕಾರಿ ಇದೀಗ ಕದ್ರಿ ಇನ್ಸ್‌ಪೆಕ್ಟರ್ ಸೋಮಶೇಖರ್ ಮೇಲೂ ಅಮಾನತು ತೂಗು ಗತ್ತಿ ನೇತಾಡುತ್ತಿದೆ.
ಬೆಟ್ಟಿಂಗ್ ದಂಧೆ
ಐಪಿಎಲ್ ನಡೆಯುತ್ತಿದೆ. ಎಲ್ಲೆಡೆ ಬೆಟ್ಟಿಂಗ್ ಬೆಟ್ಟಿಂಗ್ ಮಂಗಳೂರಲ್ಲಿ ಇದುವರೆಗೂ ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ. ಪ್ರಾಮಾಣಿಕರನ್ನು ಪತ್ತೆ ಮಾಡಲು ಹೋದರೆ ಭ್ರಷ್ಟ ಬ್ರೋಕರ್‌ಗಳು ನೂರ್ ಜಹರಾ ಕಾನಮ್ ಅವರಿಗೆ ಕಿರುಕುಳ ನೀಡಿದಂತೆ ಪ್ರಾಮಾಣಿಕ ಅಧಿಕಾರಿಗಳು ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ. ಪ್ರಾಮಾಣಿಕ ಕರ್ತವ್ಯ ನಿರತ ಪತ್ರಕರ್ತರೂ ಇಂಥ ಪರಿಸ್ಥಿತಿಯಲ್ಲಿದ್ದಾರೆ.
*
ದಕ್ಷಿಣ ಕನ್ನಡ ಜಿಲ್ಲೆಗೆ ಸಮಯ ಮೀಸಲಿಡಿ
ಯು.ಟಿ. ಖಾದರ್ ಸಚಿವರಾಗಿದ್ದಾಗ ಯಾವುದೇ ದೋಖ ನಂಬರ್ ದಂಧೆ ನಡೆಯಲು ಬಿಡುತ್ತಿರ ಲಿಲ್ಲ ಎಂಬ ಹೆಗ್ಗಳಿಕೆ ಇತ್ತು. ಇದೀಗ ವಿಧಾನಸಭಾಧ್ಯಕ್ಷರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ವಾಮಾ ಚಾರ ಮಾಡುವ ಭ್ರಷ್ಟಾಚಾರಿಗಳಿಂದ ಮುಕ್ತಗೊಳಿಸಲು ಶಕ್ತರಾಗಿದ್ದಾರೆ. ಬ್ಯುಸಿ ಶೆಡ್ಯೂಲ್‌ನಲ್ಲಿ ಅವರು ಇದಕ್ಕೆ ಸಮಯ ಮೀಸಲಿಡಬೇಕು ಅಷ್ಟೇ.