ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
ಬಿ.ಪ್ಯಾಕ್‌ ವತಿಯಿಂದ ವಿಜಯನಗರ ಮತ್ತು ಗೋವಿಂದರಾಜನಗರ ಕ್ಷೇತ್ರಗಳಲ್ಲಿ "ಬಿ.ಸೇಫ್ ಕ್ಷೇತ್ರ" ಶೀರ್ಷಿಕೆಯ ಮಹಿಳಾ ಸುರಕ್ಷತಾ ಸಮೀಕ್ಷಾ ವರದಿ ಬಿಡುಗಡೆ

ಶ್ರೀವಿದ್ಯಾ ನಟರಾಜ್ ಸಮೀಕ್ಷಾ ವರದಿ ಬಿಡುಗಡೆ

ಇಂದು ಮಹಿಳೆ ಸಬಲೀಕರಣಕ್ಕೆ ಆದ್ಯತೆ ಹೆಚ್ಚಾಗಿದ್ದು, ಮಹಿಳಾ ಸುರಕ್ಷತೆಯೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಬಿಪ್ಯಾಕ್‌ ಸಮೀಕ್ಷೆ ನಡೆಸಿ, ಮಹಿಳಾ ಸುರಕ್ಷತೆಯ ಕುರಿತು ಸರ್ಕಾರದ ಗಮನ ಸೆಳೆಯುತ್ತಿರುವುದು ಶ್ಲಾಘನೀಯ ಎಂದರು. ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಡಾ.ಕೆ. ವೈಷ್ಣವಿ ಮಾತನಾಡಿ, ಬಿ.ಪ್ಯಾಕ್‌ ಅವರ ನಿಸ್ವಾರ್ಥ ಕಾರ್ಯವನ್ನು ಶ್ಲಾಘಿಸುವೆ, ಸರ್ಕಾರವನ್ನು ಬೆಂಬಲಿಸುವ ಮತ್ತು ನಮ್ಮ ಕೆಲಸವನ್ನು ಸರಳಗೊಳಿಸುವ ಬಿ.ಪ್ಯಾಕ್‌ ನಂತಹ ಹೆಚ್ಚಿನ ಸಂಸ್ಥೆಗಳು ನಮಗೆ ಅಗತ್ಯವಿದೆ

MLC Rajendra Rajanna: ಕೊಲೆ ಯತ್ನ; ಪೆನ್‌ಡ್ರೈವ್‌ ಸಮೇತ ದೂರು ನೀಡಿದ ರಾಜೇಂದ್ರ, ತನಿಖೆಗೆ ತಂಡ ರಚನೆ

ಪೆನ್‌ಡ್ರೈವ್‌ ಸಮೇತ ದೂರು ನೀಡಿದ ರಾಜೇಂದ್ರ, ತನಿಖೆಗೆ ತಂಡ ರಚನೆ

ತಮ್ಮ ಹತ್ಯೆಗೆ ಯತ್ನ ನಡೆದಿದೆ ಎಂಬ ತುಮಕೂರಿನ ಎಸ್‌ಪಿ ಕಚೇರಿಗೆ ಭೇಟಿ ನೀಡಿ ದೂರು ನೀಡಿದ್ದರು. ಹೀಗಾಗಿ ಐವರು ಆರೋಪಿಗಳ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ತನಿಖೆಗೆ ಮಧುಗಿರಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ.

CM Siddaramaiah: ಕಿತ್ತೂರು ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ: ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಮನವಿ

ಕಿತ್ತೂರು ಚೆನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕವಾಗಲಿ: ಮೋದಿಗೆ ಸಿಎಂ ಮನವಿ

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಶಕ್ತಿಯನ್ನು ಧಿಕ್ಕರಿಸಿದ ಮಹಿಳೆಯ ದೃಢಸಂಕಲ್ಪವನ್ನು ಪ್ರತಿಬಿಂಬಿಸುವ ಧೈರ್ಯ ಮತ್ತು ತ್ಯಾಗದ ಸಂಕೇತವಾಗಿ ನಿಂತಿದೆ. ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಮತ್ತು ಅವಶೇಷಗಳ ಕಾಯ್ದೆ, 1958 ರ ಅಡಿಯಲ್ಲಿ ಈ ಸ್ಥಳವನ್ನು ರಾಷ್ಟ್ರೀಯವಾಗಿ ಮಹತ್ವದ ಸ್ಮಾರಕವೆಂದು ಗುರುತಿಸುವುದು ಅವರ ಪರಂಪರೆಯನ್ನು ಸಂರಕ್ಷಿಸುವಲ್ಲಿ ಮತ್ತು ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಗೌರವಿಸುವಲ್ಲಿ ಒಂದು ಸ್ಮರಣೀಯ ಹೆಜ್ಜೆಯಾಗಿದೆ ಎಂದಿದ್ದಾರೆ ಸಿಎಂ.

Viral Video: ಮೈಕಲ್ ಜಾಕ್ಸನ್‌ನಂತೆ ಸೊಂಟ ಬಳುಕಿಸಿದ ಪ್ರೊಫೆಸರ್; ಶಾಕ್‌ ಆದ ವಿದ್ಯಾರ್ಥಿಗಳು! ವಿಡಿಯೊ ವೈರಲ್

ಮೈಕಲ್‌ ಜಾಕ್ಸನ್‌ ಮೈ ಮೇಲೆ ಬಂದಂತೆ ಕುಣಿದ ಪ್ರೊಫೆಸರ್

Michael Jackson: ಬೆಂಗಳೂರಿನ ನ್ಯೂ ಹೊರೈಜನ್ ಕಾಲೇಜ್ ಆಫ್ ಎಂಜಿನಿಯರಿಂಗ್‍ನ ಪ್ರೊಫೆಸರ್ ರವಿ ಎಂ.ಜೆ. ಮೈಕಲ್ ಜಾಕ್ಸನ್ ಹಾಗೆ ಡ್ಯಾನ್ಸ್ ಮಾಡಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರೊಫೆಸರ್‌ ಡ್ಯಾನ್ಸ್‌ ನೋಡಿ ವಿದ್ಯಾರ್ಥಿಗಳು ಮಾತ್ರವಲ್ಲ ಸೋಶಿಯಲ್ ಮೀಡಿಯಾದ ನೆಟ್ಟಿಗರು ಶಾಕ್‌ ಆಗಿದ್ದಾರೆ.

Basanagouda Patil Yatnal: ಬಿಎಸ್‌ವೈ ಕುಟುಂಬದ ವಿರುದ್ಧ ಹೋರಾಟ ಮುಂದುವರಿಸುವೆ: ಗುಡುಗಿದ ಯತ್ನಾಳ್‌

ಬಿಎಸ್‌ವೈ ಕುಟುಂಬದ ವಿರುದ್ಧ ಹೋರಾಟ ಮುಂದುವರಿಸುವೆ: ಗುಡುಗಿದ ಯತ್ನಾಳ್‌

ಬೇರೆ ಪಕ್ಷ ಕಟ್ಟುವುದಿಲ್ಲ. ಗೌರವಯುತವಾಗಿ ನನ್ನನ್ನು ವಾಪಸ್‌ ಕರೆಸಿಕೊಳ್ಳುತ್ತಾರೆ. ಬಿಎಸ್‌ ಯಡಿಯೂರಪ್ಪ ಕುಟುಂಬದ ವಿರುದ್ಧ ಹೋರಾಟ ನಿಲ್ಲಿಸುವುದಿಲ್ಲ. ನಾಳೆಯಿಂದ ಆ ಕುಟುಂಬದ ಅಂತ್ಯದ ಆರಂಭ ಎಂದು ಉಚ್ಚಾಟಿತ ಬಿಜೆಪಿ ನಾಯಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಇಂದು ಬೆಂಗಳೂರಿನಲ್ಲಿ ಹೇಳಿದ್ದಾರೆ.

Road Accident: ಚಿತ್ರದುರ್ಗದಲ್ಲಿ ಟಿಟಿ ಅಪಘಾತ, ಮೂವರು ದುರ್ಮರಣ

ಚಿತ್ರದುರ್ಗದಲ್ಲಿ ಟಿಟಿ ಅಪಘಾತ, ಮೂವರು ದುರ್ಮರಣ

ಟಿಟಿ ವಾಹನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವು (death) ಕಂಡಿದ್ದು, ಐವರಿಗೆ ಗಂಭೀರವಾದ ಗಾಯಗಳಾಗಿವೆ. ದುರ್ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಶಂಕರಿಬಾಯಿ (65) ಕುಮಾರ್ ನಾಯಕ್ (46) ಮತ್ತು ಶ್ವೇತ (38) ಎಂದು ಗುರುತಿಸಲಾಗಿದೆ.

Chikkaballapur News: ಯುಗಾದಿ ಹೊಸ್ತಿಲಲ್ಲ ಮತ್ತೆ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮಕ್ಕೆ  ಪ್ರದೀಪ್ ಚಾಲನೆ

ಎಂದಿನಂತೆ ತೆಲುಗನ್ನಡದಲ್ಲಿ ಕಷ್ಟ ವಿಚಾರಿಸಿದ ಶಾಸಕ

ತಾಲೂಕಿನ ಕಮ್ಮಗುಟ್ಟಹಳ್ಳಿ ಪಂಚಾಯತಿಯ ಬೋಡಿ ನಾರಾಯಣಹಳ್ಳಿ, ದಿನ್ನಹಳ್ಳಿ, ಮುದ್ದಲ ಹಳ್ಳಿ, ಮಾದನಾಯಕಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಪ್ರದೀಪ್ ಈಶ್ವರ್ ಗ್ರಾಮದ ನಡುವೆ ಪಂಚಾಯಿತಿ ಕಟ್ಟೆಯಲ್ಲಿ ಕುಳಿತು ಜನರಿಂದಲೇ ಕಷ್ಟಗಳನ್ನು ಆಲಿಸಿ ಪರಿಹಾರ ಕಾಣಿಸಿದರು.

Chikkaballapur News: ಎತ್ತಿನಹೊಳೆ ಯೋಜನೆಗೆ ಬೇಕಾದ ಹಣ ಬಿಡುಗಡೆ ಮಾಡಿದರೆ ನೀರನ್ನು ಪಡೆಯುವ ಅವಕಾಶವಿದೆ: ಗೋವಿಂದರೆಡ್ಡಿ ಒತ್ತಾಯ

5300 ಕೋಟಿ ಅನುದಾನ ಬಿಡುಗಡೆ ಮಾಡಿದರೆ ಜಿಲ್ಲೆಗೆ ನೀರು ಬರಲಿದೆ

ವಾಣಿವಿಲಾಸ ಸಾಗರವನ್ನು ಬ್ಯಾಲೆನ್ಸಿಂಗ್ ರಿಸರ್ವಾಯರ್ ಎಂದು ಘೋಷಿಸಿ, ಎತ್ತಿನ ಹೊಳೆ ನೀರು ಕನಿಷ್ಟ 3 ಜಿಲ್ಲೆಗಳಿಗೆ ಅಂದರೆ ಕೋಲಾರ, ಚಿಕ್ಕಬಳ್ಳಾಪುರ ಹಾಗು ಬೆಂಗಳೂರು ಗ್ರಾಮಾಂ ತರಕ್ಕೆ ಕುಡಿಯುವ ನೀರಿಗಾಗಿ ಉಪಯೋಗಿಸಲು ಪೈಪ್‌ಲೈನ್ ಮೂಲಕ ನಂದಿ ತಪ್ಪಲಿನ 5 ನದಿ ಗಳಾದ ಚಿತ್ರಾವತಿ, ಉತ್ತರಪೆನ್ನಾರ್, ಪಾಪಾಗ್ನಿ, ಅರ್ಕಾವತಿ ಹಾಗು ದಕ್ಷಿಣ ಪೆನ್ನಾರ್ ನದಿಗಳಿಗೆ ಹರಿಸಿ ಪ್ರತ್ಯೇಕ ಜಲಾಶಯದ ಅವಶ್ಯಕತೆ ತಪ್ಪಿಸುವಂತೆ ಸಲಹೆ ನೀಡಿದ್ದಾರೆ.

ರೈತರ ಸಹಭಾಗಿತ್ವ ದೊಂದಿಗೆ ಕೆರೆಗಳಲ್ಲಿನ ಹೂಳು ತೆಗೆದು ಪುನರುಜ್ಜೀವನ ಕಾರ್ಯ

ಮನು ವಿಕಾಸದ ಜನ ಸಾಧನೆ

ಮನುವಿಕಾಸ ಸಂಸ್ಥೆಯು ರಾಜ್ಯದ ವಿವಿಧ ಜಿಲ್ಲೆಗಳ ಆಯ್ದ ತಾಲೂಕುಗಳಲ್ಲಿ 1000 ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದ್ದು, ಕೆರೆಯಲ್ಲಿನ ಹೂಳು ತುಂಬಿದ ಮಣ್ಣನ್ನು ರೈತರ ಜಮೀನಿಗೆ ಹಾಕುವುದರಿಂದ ಫಲವತ್ತತೆ ಹೆಚ್ಚಿ ಸಾವಯವ ಕೃಷಿ ಪದ್ದತಿಗೆ ವಾಲುತ್ತಿದೆ. ಇದರ ಜೊತೆ ಜೊತೆಯಲಿ 10,000ಕ್ಕೂ ಅಧಿಕ ಕೃಷಿ ಹೊಂಡ ಗಳನ್ನು ನಿರ್ಮಾಣ ಮಾಡಿ ನೆರವಾಗುವ ಸಂಕಲ್ಪವನ್ನು ತೊಟ್ಟಿದೆ.

Mass Murder: ಕಾಡಿನ ನಡುವೆ ನಾಲ್ವರ ಹತ್ಯಾಕಾಂಡ: ಆರೋಪಿ ಕೇರಳದಲ್ಲಿ ಸೆರೆ, ಕಗ್ಗೊಲೆಗೆ ಕಾರಣ ಇಲ್ಲಿದೆ

ಕೊಡಗು ಹತ್ಯಾಕಾಂಡ: ಆರೋಪಿ ಕೇರಳದಲ್ಲಿ ಸೆರೆ, ಕಗ್ಗೊಲೆಗೆ ಕಾರಣ ಇಲ್ಲಿದೆ

ಕೊಲೆಯಾದ ಮಹಿಳೆ, ತನ್ನ ಎರಡನೇ ಗಂಡನ ಜೊತೆ ಮತ್ತೆ ಸಂಬಂಧ ಹೊಂದಿದ್ದಳು ಎಂಬ ಅನುಮಾನದಿಂದಲೇ ಆಕೆಯ ಮೂರನೇ ಗಂಡ ಆಕೆಯನ್ನೂ ಇತರ ಸಂಬಂಧಿಕರನ್ನೂ ಕೊಂದು ಕೇರಳಕ್ಕೆ ಪರಾರಿಯಾಗಿರುವುದು ಗೊತ್ತಾಗಿದೆ. ಶುಕ್ರವಾರ ಮಧ್ಯಾಹ್ನ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗೂರು ಗ್ರಾಮದ ಒಂಟಿ ಮನೆಯಲ್ಲಿ ನಾಲ್ಕು ಜನರ ಭೀಕರ ಕೊಲೆಯಾಗಿತ್ತು.

Road Accident: ಎರಡು ಅಪಘಾತ, ಯುಗಾದಿ ಹಬ್ಬಕ್ಕೆ ತೆರಳುತ್ತಿದ್ದ ಯುವಕರು ಸೇರಿ ನಾಲ್ವರ ದುರ್ಮರಣ

ಎರಡು ಅಪಘಾತ, ಯುಗಾದಿಗೆ ತೆರಳುತ್ತಿದ್ದ ಯುವಕರು ಸೇರಿ ನಾಲ್ವರ ದುರ್ಮರಣ

ಉಡುಪಿ ಹಾಗೂ ದಾವಣಗೆರೆಯಲ್ಲಿ ಎರಡು ಪ್ರತ್ಯೇಕ ಅಪಘಾತಗಳು ನಡೆದಿವೆ. ಯುಗಾದಿ ಹಬ್ಬಕ್ಕೆ ಊರಿಗೆ ತೆರಳುತ್ತಿದ್ದ ಇಬ್ಬರು ಯುವಕರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಚನ್ನಗಿರಿ ಬಳಿ ಹಿಟ್‌ ಆಂಡ್‌ ರನ್‌ ಮಾಡಿರುವ ಚಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ.

BBMP Budget: ಇಂದು 20 ಸಾವಿರ ಕೋಟಿ ರೂ. ಮೊತ್ತದ ʼಬ್ರ್ಯಾಂಡ್‌ ಬೆಂಗಳೂರುʼ ಬಜೆಟ್‌ ಮಂಡನೆ

ಇಂದು 20 ಸಾವಿರ ಕೋಟಿ ರೂ. ಮೊತ್ತದ ʼಬ್ರ್ಯಾಂಡ್‌ ಬೆಂಗಳೂರುʼ ಬಜೆಟ್‌ ಮಂಡನೆ

ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆಯಂತೆ ಸುಗಮ ಸಂಚಾರಿ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಆರೋಗ್ಯಕರ ಬೆಂಗಳೂರು, ಶಿಕ್ಷಣ ಬೆಂಗಳೂರು ಹೀಗೆ ಎಂಟು ಪರಿಕಲ್ಪನೆಯಲ್ಲಿ ಬಜೆಟ್‌ ಸಿದ್ಧಪಡಿಸಲಾಗಿದ್ದು, ಇಂದು ಪುರಭವನದಲ್ಲಿ ಮಂಡನೆಯಾಗಲಿದೆ. ಆನ್‌ಲೈನ್‌ ವೀಕ್ಷಣೆಗೂ ವ್ಯವಸ್ಥೆಯಿದೆ.

Cyber Fraud: ಸೈಬರ್‌ ವಂಚಕರಿಂದ 50 ಲಕ್ಷ ಕಳೆದುಕೊಂಡ ವೃದ್ಧ ದಂಪತಿ ಆತ್ಮಹತ್ಯೆ

ಸೈಬರ್‌ ವಂಚಕರಿಂದ 50 ಲಕ್ಷ ಕಳೆದುಕೊಂಡ ವೃದ್ಧ ದಂಪತಿ ಆತ್ಮಹತ್ಯೆ

ಸೈಬರ್ ವಂಚಕರು ಕೆಲ ದಿನಗಳ ಹಿಂದೆ ವೃದ್ಧ ಡಿಯಾಂಗೋಗೆ ವಿಡಿಯೋ ಕಾಲ್ ಮಾಡಿದ್ದು, ನಿಮ್ಮ ಫೋಟೊಗಳನ್ನು ಬಳಸಿಕೊಂಡು ಯಾರೋ ಸೈಬರ್ ವಂಚನೆ ಮಾಡಿದ್ದು ನಿಮ್ಮ ಮೇಲೆ ಕೇಸ್ ಆಗಿದೆ ಎಂದು ಹೇಳಿ ಹೆದರಿಸಿದ್ದಾರೆ. ಆ ಮೂಲಕ ದಂಪತಿ ಉಳಿತಾಯದ ಅಷ್ಟೂ ಹಣವನ್ನೂ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.

HSRP number plates: ಮಾರ್ಚ್‌ 31 ಡೆಡ್‌ಲೈನ್‌, ಎಚ್‌ಎಸ್‌ಆರ್‌ಪಿ ಅಳವಡಿಕೆ ಗಡುವು ಮತ್ತೆ ಮುಂದಕ್ಕೆ?

ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಮಾ.31 ಡೆಡ್‌ಲೈನ್‌, ಗಡುವು ಮತ್ತೆ ಮುಂದಕ್ಕೆ?

ಸರ್ಕಾರ 7 ಬಾರಿ ಅವಧಿ ವಿಸ್ತರಣೆ ಮಾಡಿದರೂ ವಾಹನ ಸವಾರರು ಮಾತ್ರ ಡೋಂಟ್ ಕೇರ್ ಮಾಡಿದ್ದಾರೆ. ಏಪ್ರಿಲ್ 1, 2019ರ ಮೊದಲು ನೋಂದಾಯಿಸಲಾದ ವಾಹನಗಳಿಗೆ ನವೆಂಬರ್ 2023 ರ ಮೊದಲು HSRP ಅಳವಡಿಸಲು ರಾಜ್ಯ ಸರ್ಕಾರ ಆಗಸ್ಟ್ 2023 ರಲ್ಲಿ ಅಧಿಸೂಚನೆ ಹೊರಡಿಸಿತು.

Love Jihad: ಉಡುಪಿಯಲ್ಲಿ ಯುವಕನಿಂದ ಯುವತಿಯ ಅಪಹರಣ, ಲವ್‌ ಜಿಹಾದ್‌ ದೂರು

ಉಡುಪಿಯಲ್ಲಿ ಯುವಕನಿಂದ ಯುವತಿಯ ಅಪಹರಣ, ಲವ್‌ ಜಿಹಾದ್‌ ದೂರು

ಅಪಹರಣಕ್ಕೆ ಒಳಗಾದ ಯುವತಿಯ ತಂದೆ ಗಾಡ್ವಿನ್ ದೇವದಾಸ್ ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉಡುಪಿಯ ಕರಂಬಳ್ಳಿ ನಿವಾಸಿ ಮೊಹಮ್ಮದ್ ಅಕ್ರಮ್ ಎಂಬವನು ನನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಗಾಡ್ವಿನ್ ದೇವದಾಸ್ ದೂರು ನೀಡಿದ್ದಾರೆ.

Weather Forecast: ಇಂದು ಬೆಂಗಳೂರಲ್ಲಿ ಮೋಡ ಕವಿದ ಆಕಾಶ, ರಾಜ್ಯದ ಉಳಿದೆಡೆ ಒಣ ಹವೆ

ಇಂದು ಬೆಂಗಳೂರಲ್ಲಿ ಮೋಡ ಕವಿದ ಆಕಾಶ, ರಾಜ್ಯದ ಉಳಿದೆಡೆ ಒಣ ಹವೆ

Weather Forecast: ಮುಂದಿನ 3 ದಿನಗಳಲ್ಲಿ ರಾಜ್ಯದ ಉತ್ತರ ಒಳನಾಡಿನಲ್ಲಿ 2-4 ಡಿಗ್ರಿ ಸೆಲ್ಸಿಯಸ್ ಮತ್ತು ದಕ್ಷಿಣ ಒಳನಾಡಿನಲ್ಲಿ 23 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನದಲ್ಲಿ ಏರಿಕೆಯಾಗಲಿದೆ. ಕರಾವಳಿ ಕರ್ನಾಟಕದಲ್ಲಿ ಮುಂದಿನ 3 ದಿನಗಳವರೆಗೆ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆಯಿಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

MLC Rajendra Rajanna: ಎಂಎಲ್‌ಸಿ ರಾಜೇಂದ್ರ ಕೊಲೆಗೆ ಸಂಚು; ಐವರ ವಿರುದ್ಧ ಎಫ್‌ಐಆ‌ರ್ ದಾಖಲು

ಎಂಎಲ್‌ಸಿ ರಾಜೇಂದ್ರ ಕೊಲೆಗೆ ಸಂಚು; ಐವರ ವಿರುದ್ಧ ಎಫ್‌ಐಆ‌ರ್

2024 ನವೆಂಬರ್ ತಿಂಗಳಿನಲ್ಲಿ ನನ್ನ ಕೊಲೆಗೆ ಸುಪಾರಿ ನೀಡಲಾಗಿತ್ತು. 5 ಲಕ್ಷಕ್ಕೆ ಸುಪಾರಿ ಪಡೆದು ಕೊಲೆಗೆ ದುಷ್ಕರ್ಮಿಗಳು ಯತ್ನಿಸಿದ್ದರು. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಎಂಎಲ್‌ಸಿ ರಾಜೇಂದ್ರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

Thane Movie: ‘ಠಾಣೆ’ ಚಿತ್ರದ ಹಾಡಿಗೆ ಕರವೇ ನಾರಾಯಣ ಗೌಡ ಶ್ಲಾಘನೆ

‘ಠಾಣೆ’ ಚಿತ್ರದ ಹಾಡಿಗೆ ಕರವೇ ನಾರಾಯಣ ಗೌಡ ಶ್ಲಾಘನೆ

Thane Movie: ʼಠಾಣೆʼ ಚಿತ್ರಕ್ಕಾಗಿ ಖ್ಯಾತ ಗಾಯಕಿ ಮಜಾ ಟಾಕೀಸ್ ಖ್ಯಾತಿಯ ರೆಮೊ ಅವರು ಬರೆದಿರುವ, ಮಾನಸ ಹೊಳ್ಳ ಸಂಗೀತ ಸಂಯೋಜಿಸಿ, ಜ್ಞಾನ, ಅನುಷ್ಕ, ಜನ್ಯ ಆದರ್ಶ್ ಹಾಗೂ ಮೌಲ್ಯ ಅಚಿಂತ್ಯ ಎಂಬ ಬಾಲ ಪ್ರತಿಭೆಗಳು ಹಾಡಿರುವ ʼಬಾಳಿನಲ್ಲಿ ಭರವಸೆಯ ಬೆಳಕುʼ ಎಂಬ ಹಾಡಿಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರತಂಡದವರನ್ನು ಅಭಿನಂದಿಸಿದ್ದಾರೆ.

MLC Rajendra Rajanna: ಹನಿ ಟ್ರ್ಯಾಪ್ ಇಲ್ಲ, ಕೊಲೆ ಯತ್ನ ನಡೆದಿದೆ: ಎಂಎಲ್‌ಸಿ ರಾಜೇಂದ್ರ ರಾಜಣ್ಣ

ಹನಿ ಟ್ರ್ಯಾಪ್ ಇಲ್ಲ, ಕೊಲೆ ಯತ್ನ ನಡೆದಿದೆ: ಎಂಎಲ್‌ಸಿ ರಾಜೇಂದ್ರ

MLC Rajendra Rajanna: ನನ್ನ ಮೇಲೆ ಹನಿಟ್ರ್ಯಾಪ್ ನಡೆದಿಲ್ಲ. ಆದರೆ ಕೊಲೆಗೆ ಯತ್ನ ನಡೆದಿದೆ. ಕಳೆದ ನವೆಂಬರ್‌ 16 ರಂದು ಕ್ಯಾತ್ಸಂದ್ರದ ರಜತಾದ್ರಿ ಮನೆಯಲ್ಲಿ ನನ್ನ ಮಗಳ ಹುಟ್ಟುಹಬ್ಬ ಇತ್ತು. ಆ ಕಾರ್ಯಕ್ರಮದ ಹಿಂದಿನ ನ.15 ರಂದು ನಮ್ಮ ಮನೆಗೆ ಶಾಮಿಯಾನ ಹಾಕುವ ನೆಪದಲ್ಲಿ ಬಂದು ನನ್ನ ಕೊಲೆಗೆ ದುಷ್ಕರ್ಮಿಗಳು ಯತ್ನಿಸಿದ್ದರು ಎಂದು ಎಂಎಲ್‌ಸಿ ರಾಜೇಂದ್ರ ರಾಜಣ್ಣ ಆರೋಪಿಸಿದ್ದಾರೆ.

Service Charge: ಹೋಟೆಲ್‌ಗಳಲ್ಲಿ ಸೇವಾ ಶುಲ್ಕ ವಿಧಿಸುವಂತಿಲ್ಲ: ದೆಹಲಿ ಹೈಕೋರ್ಟ್‌ ಆದೇಶ

ಹೋಟೆಲ್‌ಗಳಲ್ಲಿ ಸೇವಾ ಶುಲ್ಕ ವಿಧಿಸುವಂತಿಲ್ಲ: ದೆಹಲಿ ಹೈಕೋರ್ಟ್‌

Service Charge: ದೆಹಲಿ ಹೈಕೋರ್ಟ್‌ ತೀರ್ಪಿನ ಅನ್ವಯ ಇನ್ನು ಮುಂದೆ ದೇಶದ ಯಾವುದೇ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಕಡ್ಡಾಯವಾಗಿ ಅಥವಾ ಒತ್ತಾಯಪೂರ್ವಕವಾಗಿ ಸೇವಾ ಶುಲ್ಕ ವಿಧಿಸುವಂತಿಲ್ಲ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಮಾಹಿತಿ ನೀಡಿದ್ದಾರೆ.

Myanmar, Bangkok Earthquake: ಭೂಕಂಪ; ಮ್ಯಾನ್ಮಾರ್‌, ಬ್ಯಾಂಕಾಕ್‌ನಲ್ಲಿ ಕನ್ನಡಿಗರ ಸ್ಥಿತಿ ಹೇಗಿದೆ?

ಭೂಕಂಪ; ಮ್ಯಾನ್ಮಾರ್‌, ಬ್ಯಾಂಕಾಕ್‌ನಲ್ಲಿ ಕನ್ನಡಿಗರ ಸ್ಥಿತಿ ಹೇಗಿದೆ?

Myanmar, Bangkok Earthquake: ಕರ್ನಾಟಕದಿಂದಲೂ ಅನೇಕ ಮಂದಿ ಕೆಲಸ ಹಾಗೂ ಪ್ರವಾಸದ ನಿಮಿತ್ತ ಮ್ಯಾನ್ಮಾರ್‌ ಹಾಗೂ ಬ್ಯಾಂಕಾಕ್‌ಗೆ ತೆರಳಿದ್ದಾರೆ. ಹೀಗಾಗಿ ಅಲ್ಲಿಗೆ ತೆರಳಿದವರು ಸುರಕ್ಷಿತವಾಗಿದ್ದರೋ ಇಲ್ಲವೋ ಎಂಬ ಬಗ್ಗೆ ಕುಟುಂಬಸ್ಥರಲ್ಲಿ ಆತಂಕ ಮೂಡಿದೆ. ಇನ್ನು ಮ್ಯಾನ್ಮಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿರುವ ಭಾರತೀಯರಿಗಾಗಿ ಸಹಾಯ ಹಸ್ತ ಚಾಚಿದೆ.

Bengaluru News: ಬೆಂಗಳೂರಿನಲ್ಲಿ ಮಂಗಳಮುಖಿಯರಿಗೆ ಪ್ರತ್ಯೇಕ ಶೌಚಾಲಯ ಲೋಕಾರ್ಪಣೆ

ಬೆಂಗಳೂರಿನಲ್ಲಿ ಮಂಗಳಮುಖಿಯರಿಗೆ ಪ್ರತ್ಯೇಕ ಶೌಚಾಲಯ ಲೋಕಾರ್ಪಣೆ

Bengaluru News: ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 3192 - ಸುಲಭ್ ಇಂಟರ್‌ನ್ಯಾಷನಲ್ ಸಹಯೋಗದಲ್ಲಿ ಬೆಂಗಳೂರು ನಗರದ ಉಪ್ಪಾರ ಪೇಟೆ ಪೊಲೀಸ್‌ ಠಾಣೆಯ ಎದುರು ಮಂಗಳಮುಖಿಯವರಿಗೆ ವಿಶೇಷವಾಗಿ, ಭಾರತ ದೇಶದಲ್ಲಿ ಮೊದಲ ಬಾರಿಗೆ ನಿರ್ಮಿಸಲಾಗಿರುವ ಶೌಚಾಲಯವನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು. ಈ ಕುರಿತ ವಿವರ ಇಲ್ಲಿದೆ.

Vamana Movie: ಧನ್ವೀರ್ ಅಭಿನಯದ ʼವಾಮನʼ ಚಿತ್ರದ ಟ್ರೈಲರ್‌ ಅನಾವರಣ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಧನ್ವೀರ್ ಅಭಿನಯದ ʼವಾಮನʼ ಚಿತ್ರದ ಟ್ರೈಲರ್‌ ಬಿಡುಗಡೆ

Vamana Movie: ಶಂಕರ್ ರಾಮನ್ ನಿರ್ದೇಶನದ ಹಾಗೂ ಧನ್ವೀರ್ ನಾಯಕರಾಗಿ ನಟಿಸಿರುವ ʼವಾಮನʼ ಚಿತ್ರದ ಟ್ರೈಲರ್‌ ಬಿಡುಗಡೆ ಸಮಾರಂಭ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನೆರವೇರಿತು. ರಾಜಸ್ಥಾನದಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿಡಿಯೋ ಮೂಲಕ ʼವಾಮನʼ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಈ ಕುರಿತ ವಿವರ ಇಲ್ಲಿದೆ.

Transport Department: ವಾಕರಸಾ ಸಂಸ್ಥೆಗೆ ಶೀಘ್ರದಲ್ಲೇ 700 ಹೊಸ ಬಸ್‌: ಸಚಿವ ರಾಮಲಿಂಗಾರೆಡ್ಡಿ

ವಾಕರಸಾ ಸಂಸ್ಥೆಗೆ ಶೀಘ್ರದಲ್ಲೇ 700 ಹೊಸ ಬಸ್‌: ಸಚಿವ ರಾಮಲಿಂಗಾರೆಡ್ಡಿ

Transport Department: ಶಿರಸಿ ನಗರದಲ್ಲಿ ನೂತನ ಕೇಂದ್ರ ಬಸ್ ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿದ್ದಾರೆ. ಬಜೆಟ್‌ನಲ್ಲಿ 2000 ಹೊಸ ಬಸ್ ಖರೀದಿಗೆ ಅನುದಾನ ಬಿಡುಗಡೆಯಾಗಿದೆ. ವಾಕರಸಾ ಸಂಸ್ಥೆಗೆ ಒಟ್ಟು 700 ಹೊಸ ಬಸ್‌ಗಳನ್ನು ನೀಡುತ್ತೇವೆ ಎಂದು ಸಚಿವರು ಹೇಳಿದ್ದಾರೆ.